ಈ ತಿಂಗಳೂ ಮಾರುಕಟ್ಟೆಗೆ ಎಂಟ್ರಿ ನೀಡಲಿವೆ ಸಖತ್ ಫೋನ್ಸ್: ಇಲ್ಲಿದೆ ಲೀಸ್ಟ್
ಮೊಬೈಲ್ ತಯಾರಿಕಾ ಕಂಪನಿಗಳು ಪ್ರತಿ ತಿಂಗಳೂ ಅಪ್‌ಡೇಟ್ ವರ್ಷನ್ ಮೊಬೈಲ್‌ಗಳನ್ನು ಬಿಡುತ್ತಲೆ ಇರುತ್ತವೆ. ಇದರಲ್ಲಿ ಹಲವು ರೀತಿಯ ತಂತ್ರಜ್ಞಾನಗಳು ಇದ್ದು, ಗ್ರಾಹರಕನ್ನು ಆಕರ್ಷಿಸಲಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಕಂಪನಿಯ ಫೋನ್‌ಗಳು ಇದ್ದು, ಇವುಗಳ ಸವಾಲು ಎಸೆಯಲು ಮತ್ತಿಷ್ಟು ಫೋನ್‌ಗಳು ಮೇನಲ್ಲೂ ಲಾಂಚ್ ಆಗಲಿವೆ.
ಏಪ್ರಿಲ್‌ನಲ್ಲೂ ಹಲವು ಕಂಪನಿಯ ಫೋನ್‌ಗಳು ಲಾಂಚ್ ಆಗಿದ್ದವು. ಅದರಂತೆ ಈ ತಿಂಗಳು ಸಹ ಹಲವು ಕಂಪನಿಯ ಫೋನ್ ಲಾಂಚ್ ಆಗಲಿವೆ. ಒಂದು ವೇಳೆ ನೀವು ಒಳ್ಳೆಯ ಬಜೆಟ್ ಫ್ರೆಂಡ್ಲಿ ಫೋನ್‌ಗಳನ್ನು ಪಡೆಯಲು ಪ್ಲ್ಯಾನ್ ಮಾಡಿಕೊಂಡಿದ್ದರೆ, ಕೊಂಚ ತಡಿದು ಈ ಸುದ್ದಿ ಓದಿ. ನಿಮಗೆ ನಿಮ್ಮ ಬಜೆಟ್‌ಗೆ ಸೂಟ್ ಆಗುವ ಫೋನ್‌ಗಳು ಲಭ್ಯ. ಅಲ್ಲದೆ ಕಂಪನಿಗಳು ಈ ಫೋನ್‌ಗಳನ್ನು ಹೊಸ ಫೀಚರ್‌ಗಳಲ್ಲಿ ಬಿಡುಗಡೆ ಮಾಡುತ್ತವೆ.

Vivo V30e ಸ್ಮಾರ್ಟ್‌ಫೋನ್
ಚೀನಾ ಮೂಲದ ಸ್ಮಾರ್ಟ್‌ಫೋನ್ ಈ ತಿಂಗಳು ಮತ್ತೊಂದು ಫೋನ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. Vivo V30e ಅನ್ನು Vivo ಮೊದಲು ಲಾಂಚ್ ಮಾಡಲು ರೆಡಿ ಆಗಿದೆ. ಈ ಫೋನ್ ಭಾರತದಲ್ಲಿ ಮೇ 2 ರಂದು ಮಾರುಕಟ್ಟೆಗೆ ಪ್ರವೇಶಿಸಲಿದೆ. Snapdragon 6 Gen 1 ಪ್ರೊಸೆಸರ್‌ನ್ನು ಹೊಂದಿರುವ ಈ ಫೋನ್, 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನ್‌ನಲ್ಲಿ 50MP ಕ್ಯಾಮೆರಾವನ್ನು ನೀಡಲಾಗಿದೆ.

ಬಿಡುಗಡೆ: ಮೇ 2, 2024
ಅಂದಾಜು ಬೆಲೆ: 29,999 ರೂ.
iQoo 29X
iQoo ಮಾರುಕಟ್ಟೆಗೆ ಮತ್ತೊಂದು ಶಕ್ತಿ ಶಾಲಿ ಫೋನ್ ಲಾಂಚ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಮುಂದಿನ ಕೆಲವು ವಾರಗಳಲ್ಲಿ ಈ ಫೋನ್‌ನ ಬಿಡುಗಡೆ ದಿನಾಂಕವನ್ನು ತಿಳಿಸುವ ಸಾಧ್ಯತೆ ಇದೆ. ಇದು 6,000 mAh ಬ್ಯಾಟರಿಯನ್ನು 44w ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಮೊಬೈಲ್ 12 GB RAM ಜೊತೆಗೆ 256 GB ಸಂಗ್ರಹಣೆಯನ್ನು ಹೊಂದಿರಲಿದೆ.
ಮೊಟೊರೊಲಾ
ಮೊಟೊರೊಲಾ ಕಳೆದ ಕೆಲವು ತಿಂಗಳುಗಳಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈಗ ಕಂಪನಿಯು ಹೊಸ ಫೋನ್ Moto E14 ಅನ್ನು ಮೇ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಕಂಪನಿಯು ಈ ಮೊಬೈಲ್ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಇದರಲ್ಲಿ 6.5 ಇಂಚಿನ ಡಿಸ್ ಪ್ಲೇ, 90Hz ರಿಫ್ರೆಶ್ ರೇಟ್ ದರವನ್ನು ಹೊಂದಿದೆ. Unisoc T606 ಚಿಪ್ಸೆಟ್ ಜೊತೆಗೆ ಈ ಮೊಬೈಲ್ ಗ್ರಾಹಕರ ಕೈ ಸೇರಲಿದೆ. ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಹೊಂದಿರುವ ಸಾಧ್ಯತೆ ಇದೆ. ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲೇ ಕಂಪನಿ ಈ ಫೋನ್ ರಿಲೀಸ್ ಮಾಡುವ ಸಾಧ್ಯತೆ ಇದೆ.












Click it and Unblock the Notifications