ಮಕ್ಕಳಲ್ಲಿ ಟೊಮೆಟೋ ಫ್ಲೂ; ಏನಿದರ ರೋಗಲಕ್ಷಣ? ಮನೆಮದ್ದು?

ಟೊಮೆಟೋ ಫ್ಲೂ ಅಥವಾ ಕೈ ಬಾಯಿ ಕಾಲು ಜ್ವರ ಭಾರತದಲ್ಲಿ ಹೆಚ್ಚುತ್ತಿದೆ. ಮೇ 6ರಂದು ಕೇರಳದಲ್ಲಿ ಮೊದಲು ಪತ್ತೆಯಾದ ಟೊಮೆಟೋ ಫ್ಲೂ ಪ್ರಕರಣಗಳ ಸಂಖ್ಯೆ ಭಾರತದಲ್ಲಿ 100 ದಾಟಿದೆ.

ಹತ್ತು ವರ್ಷದೊಳಗಿನ ಮಕ್ಕಳಿಗೆ ಹೆಚ್ಚಾಗಿ ತಗುಲುವ ರೋಗ ಇದಾಗಿದೆ. ಭಾರತದಲ್ಲಿ ಬೆಳಕಿಗೆ ಬಂದಿರುವ ನೂರು ಪ್ರಕರಣಗಳಲ್ಲಿ 82 ಮಂದಿ ಸೋಂಕಿತರು 5 ವರ್ಷದೊಳಗಿನ ವಯಸ್ಸಿನವರಾಗಿದ್ದಾರೆ.

ಟೊಮೆಟೋ ಜ್ವರಕ್ಕೆ ಕೈ ಬಾಯಿ ಕಾಲು ಜ್ವರ ಎಂದೂ ಹೆಸರು. ಈ ವೈರಸ್ ಕಾಯಿಲೆಯ ಸೋಂಕಿಗೆ ಒಳಗಾದವರಿಗೆ ಮೈತುಂಬ ಟೊಮೆಟೊ ರೀತಿ ಕೆಂಪನೆ ಗುಳ್ಳೆಗಳಾಗುತ್ತವೆ. ಹೀಗಾಗಿ, ಈ ಜ್ವರಕ್ಕೆ ಟೊಮೆಟೋ ಹೆಸರು ಸಿಕ್ಕಿದೆ. ಹಾಗೆಯೇ, ಇದು ಟೊಮಾಟೋದಿಂದ ಬರುವ ಜ್ವರ ಅಲ್ಲ ಎಂಬುದು ಗೊತ್ತಿರಲಿ.

ಮಕ್ಕಳಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಈ ರೋಗ ಬೇರೆ ವಯಸ್ಸಿನವರಿಗೂ ಬರಬಹುದು. ಅಷ್ಟೇನೂ ಪ್ರಾಣಾಪಾಯ ಅಲ್ಲ ಎಂದು ಪರಿಗಣಿಸಲಾಗಿದ್ದರೂ ಕೋವಿಡ್ ನಂತರದ ಕಾಲಘಟ್ಟದಲ್ಲಿ ಯಾವ ಸೋಂಕು ಯಾವ ರೀತಿ ವರ್ತನೆ ಮಾಡಬಹುದು ಎಂದು ಹೇಳುವುದು ಕಷ್ಟ. ಹೀಗಾಗಿ, ಮುನ್ನೆಚ್ಚರಿಕೆ ಅಗತ್ಯ ಇದೆ.

ಏನಿದು ಟೊಮೆಟೋ ಫ್ಲೂ?

ಏನಿದು ಟೊಮೆಟೋ ಫ್ಲೂ?

ಇದೊಂದು ವೈರಲ್ ಕಾಯಿಲೆಯಾಗಿದೆ. ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುವ ಕೈ ಬಾಯಿ ಕಾಲು ರೋಗಕ್ಕೆ ಕಾರಣವಾಗುವ ವೈರಸ್‌ನ ರೂಪಾಂತರ ಇರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಕೆಲವರು ಎರಡೂ ಒಂದೇ ರೋಗ ಎಂದಲೂ ಹೇಳುತ್ತಾರೆ.

ಇದು ಮಂಕಿಪಾಕ್ಸ್, ಕೋವಿಡ್, ಡೆಂಗ್ಯೂ, ಚಿಕೂನ್ ಗುನ್ಯಾ ರೋಗಗಳಿಗೆ ಸಂಬಂಧಿಸಿದ್ದಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದರೆ ಈ ರೋಗಗಳ ಕೆಲ ರೋಗಲಕ್ಷಣಗಳು ಟೊಮೆಟೋ ಫ್ಲೂ ಸೋಂಕಿತರಲ್ಲೂ ಕಾಣಿಸಿಕೊಳ್ಳಬಹುದು. ಡೆಂಗ್ಯೂ ಅಥವಾ ಚಿಕೂನ್ ಗುನ್ಯಾ ಜ್ವರ ಬಂದ ಬಳಿಕ ಕಾಣಿಸಿಕೊಳ್ಳುವ ರೋಗೋತ್ತರ ಅಡ್ಡಪರಿಣಾಮವೂ ಟೊಮೆಟೋ ಫ್ಲೂ ಆಗಿರಬಹುದು ಎನ್ನುವ ಅನಿಸಿಕೆಗಳಿವೆ.

ರೋಗಲಕ್ಷಣಗಳೇನು?

ರೋಗಲಕ್ಷಣಗಳೇನು?

ಮೈತುಂಬ ಟೊಮೆಟೊ ಗಾತ್ರದ ಕೆಂಪು ಗುಳ್ಳೆಗಳು ಕಾಣಿಸುತ್ತವೆ. ಅಧಿಕ ಜ್ವರ, ಮೈಕೈ ನೋವು, ಗಂಟಲು ನೋವು, ಗಂಟು ನೋವು, ಹೊಟ್ಟೆ ನೋವು, ತಲೆಸುತ್ತು, ವಾಂತಿ ಬರಬಹುದು. ಬಾಯಿ ಹುಣ್ಣು ತೋರಬಹುದು.

ಕೈ, ಮಂಡಿ ಮತ್ತು ಕುಂಡಿಯಲ್ಲಿ ಚರ್ಮದ ಬಣ್ಣ ಬದಲಾಗಬಹುದು. ಈ ಯಾವುದೇ ರೋಗಲಕ್ಷಣ ಕಾಣಿಸಿಕೊಂಡರೂ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳದಿರಿ.

ಮೊದಲಿಗೆ ಅದು ಸಣ್ಣ ಜ್ವರದಿಂದ ಆರಂಭವಾಗುತ್ತದೆ. ಒಂದೆರಡು ದಿನಗಳ ಬಳಿಕ ದೇಹದ ವಿವಿಧೆಡೆ ಕೆಂಪಗಿನ ಸಣ್ಣ ಸಣ್ಣ ಗುಳ್ಳೆಗಳು ಆರಂಭವಾಗಿ ನಂತರ ದಪ್ಪ ಗೆಡ್ಡೆಗಳಂತೆ ಬೆಳೆದುಕೊಳ್ಳುತ್ತವೆ. ನಾಲಗೆ, ಹಲ್ಲಿನ ವಸಡು, ಒಳ ಕೆನ್ನೆ, ಹಸ್ತ, ಪಾದದಲ್ಲಿ ಗುಳ್ಳೆಗಳಾಗುತ್ತವೆ.

ಅಪಾಯಕಾರಿಯಲ್ಲ ಟೊಮೆಟೋ ಫ್ಲೂ

ಅಪಾಯಕಾರಿಯಲ್ಲ ಟೊಮೆಟೋ ಫ್ಲೂ

ಟೊಮೆಟೋ ಫ್ಲೂ ಅಪಾಯಕಾರಿ ರೋಗ ಎಂದು ಪರಿಗಣಿತವಾಗಿಲ್ಲ. ಪ್ರಾಣಕ್ಕೆ ಎರವಾಗುವ ಮಟ್ಟಕ್ಕೆ ಪ್ರಕರಣ ಇರುವುದಿಲ್ಲ ಎಂಬುದು ಸದ್ಯಕ್ಕೆ ನೆಮ್ಮದಿ ಕೊಡುವ ಸಂಗತಿ. ಸೋಂಕು ಬಂದು 10 ದಿನದೊಳಗೆ ಇದು ತಾನಾಗೇ ನಶಿಸಿಹೋಗುತ್ತದೆ. ಹೀಗಾಗಿ, ಸೋಂಕು ಬಂದಾಗ ಗಾಬರಿಯಾಗುವ ಅಗತ್ಯ ಬೇಡ. ರೋಗಲಕ್ಷಣಗಳಿಗೆ ಚಿಕಿತ್ಸೆ ಪಡೆದರೆ ಸಾಕಾಗಬಹುದು.

ಟೊಮೆಟೋ ಫ್ಲೂಗೆ ಮದ್ದು

ಟೊಮೆಟೋ ಫ್ಲೂಗೆ ಮದ್ದು

ಟೊಮೆಟೋ ಫ್ಲೂ ರೋಗಕ್ಕೆ ಸದ್ಯಕ್ಕೆ ಯಾವುದೇ ಔಷಧ ಇಲ್ಲ. ರೋಗಲಕ್ಷಣಗಳನ್ನು ಗುರುತಿಸಿ ಅದಕ್ಕೆ ಚಿಕಿತ್ಸೆ ನೀಡಬಹುದು. ಜ್ವರ, ಮೈಕೈ ನೋವು ಮತ್ತಿತರ ಕೆಲ ತೊಂದರೆಗಳಿಗೆ ಪ್ಯಾರಸಿಟಮಾಲ್ ಮಾತ್ರೆಗಳನ್ನು ಕೊಡಬಹುದು.

ಬೇರೆ ವೈರಲ್ ಫಿವರ್ ಅಥವಾ ರೋಗಗಳಿಗೆ ನೀಡುವ ಚಿಕಿತ್ಸೆಯನ್ನೇ ಟೊಮೆಟೋ ಫ್ಲೂಗೂ ನೀಡಬಹುದು. ಮುಂಜಾಗ್ರತಾ ಕ್ರಮಗಳೂ ಅವೇ ಅನ್ವಯ ಆಗುತ್ತವೆ.

ಸೋಂಕಿತರು ಉಳಿದವರ ನೇರ ಸಂಪರ್ಕದಿಂದ ದೂರ ಇರಬೇಕು. ಸಾಕಷ್ಟು ನೀರು ಕುಡಿಯಬೇಕು.

ಮನೆಮದ್ದು

ಮನೆಮದ್ದು

ಟೊಮೆಟೋ ಜ್ವರ ಬಂದರೆ ರೋಗಲಕ್ಷಣಗಳಿಗೆ ನಿರ್ದಿಷ್ಟವಾದ ಚಿಕಿತ್ಸೆಯನ್ನು ಪಡೆಯಬಹುದು. ಬಾಯಿ ಹುಣ್ಣಾದರೆ ಎಳನೀರು ಕುಡಿಯಬಹುದು. ಕಡಲೆಕಾಯಿ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆಯನ್ನು ಬಾಯಿಗೆ ಹಾಕಿ ಐದು ನಿಮಷ ಮುಕ್ಕಳಿಸಿ ಹೊರಗೆ ಉಗಿಯಬೇಕು.

ಹಾಗೆಯೇ, ಉಪ್ಪು ನೀರು ಬಾಯಿಗೆ ಹಾಕಿ ಮುಕ್ಕಳಿಸಿದರೂ ಬಾಯಿ ಹುಣ್ಣು ಕಡಿಮೆ ಆಗುತ್ತದೆ. ಬೆಳ್ಳುಳ್ಳಿಯುಕ್ತ ಆಹಾರ ತಿಂದರೆ ಒಳ್ಳೆಯದು. ನೀರಿಗೆ ತುಳಸಿ ಎಲೆ ಹಾಕಿ ಕುಡಿಯಿರಿ.

ಮೈಕೈ ಹುಣ್ಣಿಗೂ ಮದ್ದುಗಳಿವೆ. ಮೈಗೆ ಲೋಳೆಸರ ಹಚ್ಚಿದರೆ ಹುಣ್ಣಿನ ನೋವು ಶಮನಗೊಳ್ಳುತ್ತದೆ. ಎಪ್ಸಮ್ ಉಪ್ಪು ಹಾಕಿದ ನೀರಿನಿಂದ ಸ್ನಾನ ಮಾಡಿದರೆ ಉತ್ತಮ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+