Times Now ಸಮೀಕ್ಷೆ: ಉತ್ತರಾಖಂಡ್ ಸಿಎಂ ಸ್ಥಾನಕ್ಕೆ ಪುಷ್ಕರ್ ಧಾಮಿಯೇ ಸೂಕ್ತ

ಕೋವಿಡ್19 ಸಾಂಕ್ರಾಮಿಕದ ನಡುವೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗುತ್ತಿದೆ. ಈ ಪೈಕಿ ಉತ್ತರಾಖಂಡ ರಾಜ್ಯದ 70 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತಗಳಲ್ಲಿ ಚುನಾವಣೆ ನಿಗದಿಯಾಗಿದೆ. ವಿವಿಧ ಮಾಧ್ಯಮಗಳು, ಖಾಸಗಿ ಸಂಸ್ಥೆಗಳು ಜನಾಭಿಪ್ರಾಯ ಸಂಗ್ರಹಿಸಿ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳನ್ನು ಪ್ರಕಟಿಸುತ್ತಿವೆ. ಟೈಮ್ಸ್ ನೌ ವಿಟೋ ಸಮೀಕ್ಷೆ ಭಾನುವಾರದಂದು ಹೊರಬಂದಿದ್ದು, ಉತ್ತರಾಖಂಡ ರಾಜ್ಯದಲ್ಲಿ ಬಿಜೆಪಿಗೆ ಭರ್ಜರಿ ಜಯ ಲಭಿಸಲಿದೆ ಎಂದು ಹೇಳಿದೆ.

"ಚುನಾವಣೆ ಸಮೀಪಿಸುತ್ತಿದ್ದಂತೆ ಅಭಿಪ್ರಾಯ ಸಂಗ್ರಹ ಸಂಖ್ಯೆಗಳು ಬದಲಾಗುತ್ತವೆ ಎಂದು ನಾನು ನಂಬುತ್ತೇನೆ. ಮತದಾನದ ದಿನದಲ್ಲಿ ಭಾರಿ ಬದಲಾವಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಉತ್ತರಾಖಂಡವು ಮುಂದುವರಿಯುತ್ತದೆ ಎಂದು ಜನರು ನಂಬುತ್ತಾರೆ. 2017ರಲ್ಲಿ, 2019 ಮತ್ತು 2014ರಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸಿದ್ದರು ಮತ್ತು 2022ರಲ್ಲಿ ಮತ್ತೆ ನಮ್ಮನ್ನು ಬೆಂಬಲಿಸಲಿದ್ದಾರೆ," ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಇತ್ತೀಚೆಗೆ ಹೇಳಿದ್ದರು. ಅದರಂತೆ ಪುಷ್ಕರ್ ಧಾಮಿ ಸಿಎಂ ಆಗಲು ಸೂಕ್ತ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಸ್ಥಾನ ಗಳಿಕೆ

ಸ್ಥಾನ ಗಳಿಕೆ

ಟೈಮ್ಸ್ ನೌ ವಿಟೋ ಸಮೀಕ್ಷೆಯ ಪ್ರಕಾರ, 70 ಸದಸ್ಯರ ಶಾಸಕಾಂಗ ಸಭೆಯಲ್ಲಿ ಬಿಜೆಪಿ 42-46 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯೊಂದಿಗೆ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾನ ಕುಸಿಯುವ ಸಾಧ್ಯತೆಯಿದ್ದು, 12-14 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರತಿಪಕ್ಷವಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಆಮ್ ಆದ್ಮಿ ಪಕ್ಷ ಚೊಚ್ಚಲ ಬಾರಿಗೆ 8-11 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಇತರ ಪಕ್ಷಗಳು ಮತ್ತು ಸ್ವತಂತ್ರರು 2-5 ಸ್ಥಾನಗಳನ್ನು ಪಡೆಯಬಹುದು.

ಶೇಕಡಾವಾರು ಮತಗಳಿಕೆ

ಶೇಕಡಾವಾರು ಮತಗಳಿಕೆ

ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ, 70 ಸದಸ್ಯರ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಶೇ 41.11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶೇ 27.31 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರತಿಪಕ್ಷವಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಆಮ್ ಆದ್ಮಿ ಪಕ್ಷ ಚೊಚ್ಚಲ ಬಾರಿಗೆ ಶೇ 18.67 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಇತರ ಪಕ್ಷಗಳು ಮತ್ತು ಸ್ವತಂತ್ರರು ಶೇ 12.91 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ.

ಸಿಎಂ ಸ್ಥಾನಕ್ಕೆ ಯಾರು ಸೂಕ್ತ?

ಸಿಎಂ ಸ್ಥಾನಕ್ಕೆ ಯಾರು ಸೂಕ್ತ?

ಮೊದಲಿಗೆ ಬಂದ ಒಂದೆರಡು ಸಮೀಕ್ಷೆಗಳಲ್ಲಿ ಉತ್ತಮ ಸ್ಕೋರ್ ಮಾಡಿದ್ದ ಹರೀಶ್ ರಾವತ್ ಅವರ ವಿರುದ್ಧ ಇತ್ತೀಚಿನ ಸಮೀಕ್ಷೆಗಳಲ್ಲಿ ಅಭಿಮತ ಬಂದಿದೆ. ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಕ್ಕೆ ನಿಷ್ಠರಾಗಿ ರಾವತ್ ಕಾರ್ಯ ನಿರ್ವಹಿಸಿಲ್ಲ, ಹರೀಶ್ ರಾವತ್ ಸಿಎಂ ಆಗಲು ಸೂಕ್ತರಲ್ಲ ಎಂದು ಜನಾಭಿಪ್ರಾಯ ಬಂದಿದೆ. ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ಅವರ ಕಾರ್ಯಾವಧಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದಿನ ಸಿಎಂ ಆಗಲು ಸೂಕ್ತ ಎಂದು ಅಭಿಪ್ರಾಯ ಬಂದಿದೆ.
ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಉತ್ತರಾಖಂಡದ 70 ಸ್ಥಾನಗಳಲ್ಲಿ 57 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸಿತ್ತು. ಕಾಂಗ್ರೆಸ್ ಪಕ್ಷ ಕೇವಲ 11 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

2017ರಲ್ಲಿ ಫಲಿತಾಂಶವೇನು?

2017ರಲ್ಲಿ ಫಲಿತಾಂಶವೇನು?

ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಉತ್ತರಾಖಂಡದ 70 ಸ್ಥಾನಗಳಲ್ಲಿ 57 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸಿತ್ತು. ಕಾಂಗ್ರೆಸ್ ಪಕ್ಷ ಕೇವಲ 11 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ಫೆ.14ರಂದು ಮತದಾನ ಉತ್ತರಾಖಂಡದಲ್ಲಿ ಜನವರಿ 21ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 21ರಿಂದ ಜ.28ರವರೆಗೆ ಅವಕಾಶವಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿದೆ. ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

Recommended Video

      ವಿರಾಟ್ ಕರೆತಂದ ಈ 5 ಆಟಗಾರರು ಈಗ ತಂಡದಲ್ಲಿಲ್ಲ,ಯಾಕೆ ಗೊತ್ತಾ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+