ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿನಲ್ಲಿ ನೀರು, ಟೀ-ಕಾಫಿ ಬೆಲೆ ಅಗ್ಗ; ಉಪಾಹಾರ, ಊಟದ ಬೆಲೆ ಎಷ್ಟಿದೆ?

|
Google Oneindia Kannada News

ನವದೆಹಲಿ, ಜುಲೈ 19: ರಾಜಧಾನಿ, ದುರಂತೋ, ಶತಾಬ್ದಿ ಮತ್ತು ವಂದೇ ಭಾರತ್‌ನಂತಹ ರೈಲುಗಳಲ್ಲಿ ಚಹಾ, ಕಾಫಿಗೆ ಸೇವಾ ಶುಲ್ಕವನ್ನು ರೈಲ್ವೆ ತೆಗೆದುಹಾಕಲಾಗಿದೆ ಇದರೊಂದಿಗೆ ಅವುಗಳ ಬೆಲೆಯಲ್ಲಿ ಜಿಎಸ್‌ಟಿಯೂ ಸೇರಿದೆ ಎಂದು ರೈಲ್ವೇ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ಆದರೆ, ಉಪಹಾರ ಮತ್ತು ಊಟಕ್ಕೆ ರೈಲು ಪ್ರಯಾಣಿಕರು ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.

ನೀವು ರೈಲ್ವೇ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರೆ, ನಿಮಗಾಗಿ ಒಳ್ಳೆಯ ಸುದ್ದಿ ಇದೆ. ರಾಜಧಾನಿ, ದುರಂತೋ, ಶತಾಬ್ದಿ ಮತ್ತು ವಂದೇ ಭಾರತ್‌ನಂತಹ ರೈಲುಗಳಲ್ಲಿ ಟೀ, ಕಾಫಿಯ ಸೇವಾ ಶುಲ್ಕವನ್ನು ರೈಲ್ವೆ ತೆಗೆದುಹಾಕಲಾಗಿದೆ. ಈಗ ಈ ರೈಲುಗಳಲ್ಲಿ ಚಹಾ, ಕಾಫಿ ಮತ್ತು ನೀರನ್ನು ಆರ್ಡರ್ ಮಾಡಲು ಯಾವುದೇ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆದರೆ ಉಪಹಾರ ಮತ್ತು ಆಹಾರವನ್ನು ಆರ್ಡರ್ ಮಾಡಲು, ರೈಲ್ವೆ ಪ್ರಯಾಣಿಕರು ಇನ್ನೂ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಆಹಾರಕ್ಕೆ ಹೆಚ್ಚು ಹಣ ಪಡೆಯಲು ತಡೆರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಆಹಾರಕ್ಕೆ ಹೆಚ್ಚು ಹಣ ಪಡೆಯಲು ತಡೆ

ಈ ಹಿಂದೆ ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಪ್ರಯಾಣದ ಸಮಯದಲ್ಲಿ ಆಹಾರವನ್ನು ಆರ್ಡರ್ ಮಾಡಲು ಹೆಚ್ಚುವರಿ 50 ರೂ.ಗಳನ್ನು ಸೇವಾ ಶುಲ್ಕವಾಗಿ ವಿಧಿಸುತ್ತಿತ್ತು. ಟೀ ಮತ್ತು ಕಾಫಿ ತೆಗೆದುಕೊಂಡಿರೆ ಟಿ ಬೆಲೆ 20 ರೂ. ಅಷ್ಟೆ ಇದ್ದರೂ ಸೇವಾ ಶುಲ್ಕ 50 ರೂ. ನೀಡಬೇಕಾಗುತ್ತಿತ್ತು. ಇದರಿಂದ ಪ್ರಯಾಣಿಕರು ಟೀ, ಕಾಫಿಗೆ 70 ರೂ. ಸೇವಾ ಶುಲ್ಕವನ್ನು ಕಟ್ಟುತ್ತಿದ್ದರು ಆದರೆ ಈ ಚಹಾ, ಕಾಫಿ ಬೆಲೆಗಳ ಮೇಲೆ ಯಾವುದೇ ಸೇವಾ ಶುಲ್ಕವು ಪರಿಣಾಮ ಬೀರುವುದುದಿಲ್ಲ.

ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮಕ್ಕೆ (IRCTC) ಅಧಿಸೂಚನೆಯನ್ನು ಹೊರಡಿಸುವ ಮೂಲಕ ಭಾರತೀಯ ರೈಲ್ವೆ ಮಂಡಳಿಯು ರೈಲಿನಲ್ಲಿ ಊಟವನ್ನು ಆರಿಸಿಕೊಳ್ಳುವ ಮತ್ತು ಮುಂಚಿತವಾಗಿ ಕಾಯ್ದಿರಿಸದ ಪ್ರಯಾಣಿಕರಿಂದ ₹50 ಹೆಚ್ಚುವರಿ ಶುಲ್ಕವನ್ನು ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಮತ್ತೊಂದೆಡೆ, ಟಿಕೆಟ್‌ಗಳನ್ನು ಕಾಯ್ದಿರಿಸುವ ಸಮಯದಲ್ಲಿ ಅಡುಗೆ ಸೇವೆಗಳನ್ನು ಆರಿಸಿಕೊಳ್ಳದ ಪ್ರಯಾಣಿಕರು ಆರ್ಡರ್ ಮಾಡುವ ಚಹಾ ಮತ್ತು ಕಾಫಿಗೆ ಸೇವಾ ಶುಲ್ಕ ಅಥವಾ ಅನುಕೂಲಕರ ಶುಲ್ಕವನ್ನು ವಿಧಿಸದಂತೆ ಐಆರ್‍‌ಸಿಟಿಸಿಗೆ ಕೇಳಿದೆ.

 ಸೇವಾ ಶುಲ್ಕವು ಪಾವತಿಸಬೇಕು

ಸೇವಾ ಶುಲ್ಕವು ಪಾವತಿಸಬೇಕು

ಬೆಳಗಿನ ಉಪಾಹಾರ ಆರ್ಡರ್ ಮಾಡುವವರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿಲ್ಲ, ವರದಿಗಳ ಪ್ರಕಾರ ಈ ಹಿಂದೆ ಬೆಳಗಿನ ಉಪಾಹಾರಕ್ಕೆ 105 ರೂ., ಮಧ್ಯಾಹ್ನದ ಊಟಕ್ಕೆ 185 ರೂ. ಹಾಗೆಯೇ ಸಂಜೆಯ ತಿಂಡಿಗೆ 90 ರೂ., ಇದಕ್ಕೆ ಹೆಚ್ಚುವರಿಯಾಗಿ 50 ರೂ.ಇತ್ತು. ಇದೀಗ ರೈಲ್ವೇ ಬೆಲೆಯನ್ನು ಹೆಚ್ಚಿಸಿದ್ದು, ನಂತರ ಪ್ರಯಾಣಿಕರು ಉಪಹಾರಕ್ಕೆ 155 ರೂ., ಆಹಾರಕ್ಕೆ 235 ರೂ., ಸಂಜೆಯ ತಿಂಡಿಗೆ 140 ರೂ., ಈ ಸೇವಾ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.

 50 ರೂ. ಹೆಚ್ಚಿನ ಸೇವಾ ಶುಲ್ಕ

50 ರೂ. ಹೆಚ್ಚಿನ ಸೇವಾ ಶುಲ್ಕ

ರೈಲ್ವೆ ಸಚಿವಾಲಯವು 2018ರಲ್ಲಿಯೇ ಸುತ್ತೋಲೆ ಹೊರಡಿಸಿದ್ದು, ಪ್ರೀಮಿಯಂ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಪ್ರಯಾಣಿಕರು ಆಹಾರವನ್ನು ಕಾಯ್ದಿರಿಸದಿದ್ದರೆ, ಅವರು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು 50 ರೂಪಾಯಿಗಳ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿತ್ತು. ಅಂದಿನಿಂದ, ಪ್ರಯಾಣದ ಸಮಯದಲ್ಲಿ ಆರ್ಡರ್ ಮಾಡಲು ಪ್ರಯಾಣಿಕರು ರೂ 50 ರ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಯಾವುದೇ ಕಾರಣದಿಂದ ರೈಲು ತಡವಾಗಿ ಬಂದರೂ ಆರ್ಡರ್ ಮಾಡಲು ಸೇವಾ ಶುಲ್ಕವನ್ನು ವಿಧಿಸಲಾಗುವುದು ಎಂದು ರೈಲ್ವೇ ಈ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

 ಮಧ್ಯಾಹ್ನ-ರಾತ್ರಿಯ ಊಟದ ಬೆಲೆ

ಮಧ್ಯಾಹ್ನ-ರಾತ್ರಿಯ ಊಟದ ಬೆಲೆ

ಟಿಕೆಟ್ ಬುಕಿಂಗ್ ಸಮಯದಲ್ಲಿ ಊಟವನ್ನು ಆರಿಸಿಕೊಳ್ಳದಿದ್ದರೆ ಪ್ರಯಾಣಿಕರು ಉಪಹಾರ ಮತ್ತು ಸಂಜೆಯ ತಿಂಡಿಗಳಿಗೆ ₹140 ಬದಲಿಗೆ ₹190 ಪಾವತಿಸಬೇಕಾಗುತ್ತದೆ.

ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಪ್ರಯಾಣಿಕರು ₹ 240 ಬದಲಿಗೆ ₹ 290 ಖರ್ಚು ಮಾಡಬೇಕಾಗುತ್ತದೆ.

ರಾಜಧಾನಿ, ದುರಂತೋ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್‌ನ 2ಎಸಿ/3ಎಸಿ/ಸಿಸಿ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬೆಳಗಿನ ಉಪಹಾರಕ್ಕೆ ₹105 ಬದಲಿಗೆ ₹155 ಪಾವತಿಸಬೇಕಾಗುತ್ತದೆ.

 ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ₹185ರ ಬದಲು ₹235.

ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ₹185ರ ಬದಲು ₹235.

ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನೀವು ಪ್ರಯಾಣಿಸುತ್ತಿದ್ದರೆ ಇನ್ನು ಬೆಳಗಿನ ಉಪಾಹಾರ, ಊಟ, ರಾತ್ರಿಯ ದರಗಳು
ಪ್ರಯಾಣಿಕರು ಉಪಹಾರಕ್ಕಾಗಿ ₹ 155 ಬದಲಿಗೆ ₹ 205 ಪಾವತಿಸಬೇಕಾಗುತ್ತದೆ.

ಸಂಜೆಯ ತಿಂಡಿಗೆ ₹105ರ ಬದಲು ₹155 ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ₹244ರ ಬದಲು ₹294 ಹಣ ಪಾವತಿಸಬೇಕಾಗುತ್ತದೆ.

English summary
Railways has waived the service charge for tea and coffee in trains like Rajdhani, Trasho, Shatabdi and Vande Bharat without stating that GST is included in their price, without mentioning in the circular issued by the Railways,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X