• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವದೇಶಿ ಚಳವಳಿಗೆ ಚಾಲನೆ ನೀಡಿದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ

By Mahesh
|

ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ ಸ್ವದೇಶಿ ಚಳವಳಿಯ ನೆನಪಿಗೆ 2015 ಆಗಸ್ಟ್ 7 ನೇಕಾರ ದಿನಾಚರಣೆ ಎಂದು ಘೋಷಣೆ ಮಾಡಿ ಭಾರತ ದೇಶದಲ್ಲಿ ಪ್ರಪ್ರಥಮ ಬಾರಿಗೆ ಚಾಲನೆ ನೀಡಿದ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನಮ್ಮ ಕರ್ನಾಟಕ ರಾಜ್ಯ ನೇಕಾರ ಸಂಘ ಹೃದಯ ಪೂರ್ವಕವಾಗಿ ಸ್ವಾಗತಿಸಿ, ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ.

ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ 2015ರಂದು ಪ್ರಧಾನಿ ನರೇಂದ್ರ ಮೋದಿ ಚೆನ್ನೈ ನಲ್ಲಿ ಚಾಲನೆ ನೀಡಿ, ದೇಶದಲ್ಲಿ ಬಡತನದ ವಿರುದ್ಧ ಹೋರಾಡುವುದಕ್ಕೆ ಕೈಮಗ್ಗ ಅಸ್ತ್ರವಾಗಲಿ ಎಂದು ಘೋಷಿಸಿದರು. ಈ ನಿಮಿತ್ತ ಕರ್ನಾಟಕ ರಾಜ್ಯ ನೇಕಾರ ಸಂಘದ ರಾಜ್ಯಾಧ್ಯಕ್ಷರಾದ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ಅವರು ಬರೆದ ಲೇಖನ ಇಲ್ಲಿದೆ...

ಬಡತನದ ವಿರುದ್ಧ ಹೋರಾಟಕ್ಕೆ ಕೈಮಗ್ಗ ಅಸ್ತ್ರವಾಗಲಿ: ಮೋದಿ

ಸ್ವದೇಶಿ ಚಳುವಳಿ ನೆನಪಿಗೆ

ಸ್ವದೇಶಿ ಚಳುವಳಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದು ಬ್ರಿಟಿಷ್ ಸಾಮ್ರಾಜ್ಯದ ಅಧಿಕಾರವನ್ನು ಮೊಟಕುಗೊಳಿಸುವ ಹಾಗೂ ಭಾರತದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ಯಶಸ್ವೀ ರಣನೀತಿಯಾಗಿತ್ತು. ಈ ಆಂದೋಲನ ಬ್ರಿಟಿಷ್ ಉತ್ಪನ್ನಗಳ ಬಹಿಷ್ಕಾರ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶ ಹೊಂದಿತ್ತು. ಸ್ವದೇಶಿಯ ಕಾರ್ಯನೀತಿಯು ಮಹಾತ್ಮಾ ಗಾಂಧಿಯವರ ಯೋಜನೆಯಾಗಿದ್ದು ಇದನ್ನು ಸ್ವರಾಜ್ ಕಲ್ಪನೆಯ ಹೃದಯ ಎಂದು ಬಣ್ಣಿಸಿದ್ದರು.

ಇದು ಭಾರತದ ಇತಿಹಾಸ: ಸ್ವತಂತ್ರ ಚಳವಳಿಯ ಕೆಲವು ಘಟನೆ

ಇದು ಭಾರತದ ಇತಿಹಾಸ: ಸ್ವತಂತ್ರ ಚಳವಳಿಯ ಕೆಲವು ಘಟನೆ

ಸ್ವದೇಶಿ ಚಳುವಳಿ: 1905ರಲ್ಲಿ ಬನಾರಸ್ ಅಧಿವೇಷಣದಲ್ಲಿ ಮೊದಲಬಾರಿಗೆ ಕರೆನೀಡಲಾಯಿತು. ಈ ಕರೆಯ ಪ್ರಕಾರ ಬ್ರಿಟೀಷರ ವಸ್ತುಗಳನ್ನು ಮತ್ತು ಬಟ್ಟೆಗಳನ್ನು ಉಪಯೋಗಿಸದಂತೆ ಮತ್ತು ಸುಡುವಂತೆ ಪ್ರತಿಜ್ಞೆ ಕೈಗೊಳ್ಳಲಾಯಿತು.

ಮುಸ್ಲಿಂ ಲೀಗ್ ಇದು ಅಗಾಖಾನ್ ರವರ ಅಧ್ಯಕ್ಷತೆಯಲ್ಲಿ 1906ರಲ್ಲಿ ಪ್ರಾರಂಭಿಸಲಾಯಿತು. ಇದರ ಪ್ರಕಾರ ಮುಸ್ಲಿಮರಿಗೆ ಪ್ರತ್ಯೇಕ ಚುನಾವಣೆಗೆ ಆದೇಶಿಸಲಾಯಿತು.

ಗದ್ದಾರ್ ಪಕ್ಷ ಇದು 1913ರಲ್ಲಿ ಲಾಲ ಹರದಯಾಳ್, ತಾರಕನಾಥ್ ದಾಸ್ ಮತ್ತು ಸೋಹನ್ ಸಿಂಗರಿಂದ ಪ್ರಾರಂಭವಾಯಿತು ಇದರ ಮುಖ್ಯಕಛೇರಿಯು ಸ್ಯಾನ್ ಫ್ರಾನ್ಸಿಸ್ಕೋದಲ್ಲಿತ್ತು.

ಹೋಂ ರೂಲ್ ಚಳವಳಿ

ಹೋಂ ರೂಲ್ ಚಳವಳಿ - ತಿಲಕರು ಮಾಂಡಲೆ ಜೈಲಿನಿಂದ ಹಿಂತಿರುಗಿದ ನಂತರ 1916ರಲ್ಲಿ ಆನಿಬೆಸಂಟರೊಡಗೂಡಿ ಹೋಂರೂಲ್ ಚಳವಳಿಯನ್ನು ಸ್ಥಾಪಿಸಿದರು ಇದರ ಮುಖ್ಯ ಉದ್ದೇಶ ಬ್ರಿಟೀಷರಿಂದ ಸಂಪೂರ್ಣ ಆಡಳಿತವನ್ನು ಕಿತ್ತುಕೊಂಡು ದೇಶೀಯವಾಗಿ ಆಡಳಿತ ನೆಡೆಸುವುದಾಗಿತ್ತು. ಈ ಚಳವಳಿಯಲ್ಲಿ ತಿಲಕರು ಸ್ವರಾಜ್ಯ ನನ್ನ ಜನ್ಮಸಿದ್ದಹಕ್ಕು ಇದನ್ನು ಪಡೆದೇ ತೀರುತ್ತೇನೆ ಎಂಬ ಘೋಷಣೆಯನ್ನು ಮಾಡಿದರು.

ಲಕ್ನೋ ಒಪ್ಪಂದ 1916ರಲ್ಲಿ ನೆಡೆದು ಇದು ಟರ್ಕಿಯ ರಾಜನ ಮೇಲೆ ಬ್ರಿಟೀಷರು ಹೂಡಿದ ಯುದ್ಧದ ವಿರುದ್ಧವಾಗಿದ್ದಿತು.

ಜಲಿಯನ್ ವಾಲಾಬಾಗ್ ದುರಂತ

ಆಗಸ್ಟ್ ಘೋಷಣೆ: 1917ರಲ್ಲಿ ಬ್ರಿಟೀಷರಿಂದ ಘೋಷಿಸಲ್ಪಟ್ಟು ಇದರ ಪ್ರಕಾರ ಬ್ರಿಟೀಷ್ ಆಡಳಿತದಲ್ಲಿ ಭಾರತೀಯರನ್ನು ಹೆಚ್ಚಾಗಿ ಸೇರಿಸಿಕೊಳ್ಳುವುದಾಗಿತ್ತು.


ರೌಲತ್ ಕಾಯ್ದೆ ಇದು 18-3-1919 ರಲ್ಲಿ ಜಾರಿಯಾಗಿ ಇದರ ಪ್ರಕಾರ ಬ್ರಿಟೀಷರಿಗೆ ಅನುಮಾನ ಬಂದ ವ್ಯಕ್ತಿಯನ್ನು ದೇಶದ್ರೋಹದ ಆಪಾದನೆಯ ಮೇಲೆ ಯಾವುದೇ ವಿಚಾರಣೆಯಿಲ್ಲದೆ 2 ವರ್ಷಗಳವರೆಗೆ ಜೈಲಿನ ಶಿಕ್ಷೆಯನ್ನು ನೀಡಬಹುದಾಗಿತ್ತು. ಮುಂದೆ ಈ ಕಾಯ್ದೆಯು ಗಾಂಧೀಜಿಯವರಿಗೆ ಅಸಹಕಾರ ಚಳುವಳಿ ನಡೆಸಲು ಕಾರಣವಾಯಿತು.

ಜಲಿಯನ್ ವಾಲಾಬಾಗ್ ದುರಂತ ಇದು 13-4-1919ರಲ್ಲಿ ನಡೆಯಿತು ಇದಕ್ಕೆ ಕಾರಣ ಪಂಜಾಬಿನಲ್ಲಿ ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸುತಿದ್ದಾಗ ಬ್ರಿಟೀಷರು ಡಾ|| ಕಿಚ್ಲು & ಸತ್ಯಪಾಲ್ ಅವರನ್ನು ಬಂಧಿಸಿದರು. ಇದರ ವಿರುದ್ಧ ಜನರು ಜಲಿಯನ್ ವಾಲಾಬಾಗ್ ನಲ್ಲಿ ಸಭೆ ಸೇರಿದಾಗ ಆ ಸಭೆಯನ್ನು ಹತ್ತಿಕ್ಕಲು ಜನರಲ್ ಓ ಡಯರ್ ನನ್ನು ನೇಮಿಸಲಾಯಿತು. ಇವನು ಆ ಜನರಿಗೆ ಯಾವುದೇ ಆದೇಶ ನೀಡದೆ ಬೇಕಾಬೆಟ್ಟಿ ಗುಂಡುಹಾರಿಸಿದಾಗ ಸಭೆ ಸೇರಿದ್ದ ನೂರಾರು ಜನರು ಹತ್ಯೆಯಾದರು ಮತ್ತು ಸಾವಿರಾರು ಜನರು ಗಾಯಾಳುಗಳಾದರು.

ಕಿಲಾಫತ್ ಚಳವಳಿ

ಈ ಘಟನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳಾದಾಗ ಬ್ರಿಟೀಷರು ಇದರ ವಿಚಾರಣೆಗಾಗಿ ಹಂಟರ್ ಆಯೋಗವನ್ನು ನೇಮಿಸಿದರು. ಇದನ್ನು ಪ್ರತಿಭಟಿಸಿ ರವೀಂದ್ರನಾಥ ಟ್ಯಾಗೂರರು ತಮಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂತಿರುಗಿಸಿದರು.

ಈ ಘಟನೆಗೆ ಪ್ರತಿಕಾರವಾಗಿ ಸರ್ದಾರ್ ಉಧಮ್ ಸಿಂಗರು ಲಂಡನ್ನಿನಲ್ಲಿದ್ದ ಜನರಲ್ ಓ ಡಯರ್ ನನ್ನು ಹುಡುಕಿಕೊಂಡು ಹೋಗಿ ಲಂಡನ್ನಿನಲ್ಲಿ ಹತ್ಯೆಗೈದರು.

ಕಿಲಾಫತ್ ಚಳವಳಿ 1920 ರಲ್ಲಿ ಮೊಹಮ್ಮದ್ದ ಆಲಿ ಮತ್ತು ಶೌಕತ್ ಆಲಿ ಅವರಿಂದ ಪ್ರಾರಂಭವಾಯಿತು.

ಅಸಹಕಾರ ಚಳುವಳಿ ಸೆಪ್ಟೆಂಬರ್ 1920 ಇದು ರೌಲತ್ ಕಾಯ್ದೆ ಮತ್ತು ಬ್ರಿಟೀಷರ ಧೋರಣೆಯ ವಿರುದ್ಧ ಗಾಂಧೀಜಿಯವರು ಬ್ರಿಟೀಷ್ ಸರ್ಕಾರದ ವಿರುದ್ಧ ನೀಡಿದ ಕರೆಯಾಗಿತ್ತು ಇದರ ಪ್ರಕಾರ ಎಲ್ಲಾ ಭಾರತೀಯರಿಗೆ ಬ್ರಿಟೀಷರು ನೀಡಿದ್ದ ಪದಕ ಮತ್ತು ಬಿರುದುಗಳನ್ನು ವಾಪಸ್ ನೀಡುವುದು, ಸರ್ಕಾರದಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಭಾರತೀಯರು ರಾಜಿನಾಮೆ ನೀಡುವುದು, ಕೋರ್ಟು ಕಛೇರಿಗಳಿಗೆ ಬಹಿಷ್ಕಾರ ಹಾಕುವುದು, ಸೇನೆಯ ಭಾರತೀಯರು ಸೇನೆ ಬಿಟ್ಟುಬರುವುದು ಮತ್ತು ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಮುಂದೆ ಚೌರಿ ಚೌರ ಘಟನೆಯ ನಂತರ ಈ ಚಳುವಳಿಯನ್ನು ಹಿಂತೆಗೆದುಕೊಳ್ಳಲಾಯಿತು.

ಚೌರಿ-ಚೌರ ಘಟನೆ

ಚೌರಿ-ಚೌರ ಘಟನೆ 1922ರಲ್ಲಿ ಗೋರಖ್ ಪುರದ ಚೌರಿ-ಚೌರ ಎಂಬಲ್ಲಿ ಚಳುವಳಿಯಲ್ಲಿ ಭಾಗವಹಿಸಿದ್ದವರ ಮೇಲೆ ಪೊಲೀಸರು ವಿನಾಕಾರಣ ಹೊಡೆದ ಪರಿಣಾಮ ಚಳವಳಿಗಾರರು ಅಲ್ಲಿದ್ದ ಪೊಲೀಸರನ್ನು ಕೂಡಿಹಾಕಿ ಸುಟ್ಟುಬಿಟ್ಟರು ಇದರ ಪರಿಣಾಮವಾಹಿ ಗಾಂಧೀಜಿಯವರು ತಮ್ಮ ಅಹಿಂಸಾ ಚಳುವಳಿಗೆ ಧಕ್ಕೆ ಬಂದಿತೆಂದು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು.

ಸ್ವರಾಜ್ ಪಕ್ಷ 1923ರಲ್ಲಿ ಮೋತಿಲಾಲ್ ನೆಹರು, ಚಿತ್ತರಂಜನ್ ದಾಸ್ ಮತ್ತು ಕೇಲ್ಕರ್ ರವರು ಬ್ರಿಟೀಷ್ ಸರ್ಕಾರದ ವಿರುದ್ಧ ಚುನಾವಣೆಯಲ್ಲಿ ಸ್ಪರ್ದಿಸಲು ಸ್ಥಾಪಿಸಿದರು

ಸೈಮನ್ ಆಯೋಗ ಭಾರತದಲ್ಲಿ ರಾಜಕೀಯ ಪರಿಸ್ಥಿಯನ್ನು ಅವಲೋಕಿಸಲು ಬ್ರಿಟೀಷ್ ಸರ್ಕಾರವು 1927ರಲ್ಲಿ ಜಾನ್ ಸೈಮನ್ ರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ ಭಾರತಕ್ಕೆ ಕಳುಹಿಸಿಕೊಟ್ಟಿತು ಆ ಆಯೋಗದಲ್ಲಿ ಭಾರತೀಯರಾರು ಇಲ್ಲದಿದ್ದರಿಂದ ಎಲ್ಲಾ ಭಾರತೀಯರು ಇದನ್ನು ಪ್ರತಿಭಟಿಸಿದರು.

ಪೂರ್ಣಸ್ವರಾಜ್ಯ ಘೋಷಣೆ

ನೆಹರು ವರದಿ 1928ರಲ್ಲಿ ಸೈಮನ್ ಆಯೋಗವನ್ನು ಪ್ರತಿಭಟಿಸಿದನಂತರ ಭಾರತದಲ್ಲಿ ಸ್ವಂತವಾಗಿಯೇ ಸಂವಿಧಾನವನ್ನು ರಚಿಸಲು ಮೊತಿಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ವರದಿಯನ್ನು ಸಲ್ಲಿಸಲಾಯಿತು ಈ ವರದಿಯು ನೆಹರು ವರದಿಯೆಂದು ಪ್ರಖ್ಯಾತವಾಗಿದೆ.

ಲಾಹೋರ್ ಸಮಾವೇಶ 19-12-1929 ರಲ್ಲಿ ಜವಾಹರ್ ಲಾಲ್ ನೆಹರು ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಷಣ ನೆಡೆಯಿತು. ಈ ಸಮಾವೇಶದಲ್ಲಿ ನೆಹರುರವರು 26-1-1930ರಂದು ಪೂರ್ಣಸ್ವರಾಜ್ಯ ಘೋಷಣೆ ಮಾಡಿದರು. 31-12-1929ರಂದು ಈ ಸಮಾವೇಶದಲ್ಲಿ ಮೊದಲ ಬಾರಿಗೆ ತ್ರಿಮರ್ಣ ಧ್ವಜ ಹಾರಿಸಲಾಯಿತು ಲಾಹೋರ್ ನ ರಾವಿ ನದಿಯ ದಡದಲ್ಲಿ ಮತ್ತು 26-1-1930ರಂದು ಸ್ವತಂತ್ರದಿನ ಎಂದು ಘೋಷಿಸಲಾಗಿತ್ತು.

ಸ್ವದೇಶಿ ವಸ್ತ್ರಗಳ ಖರೀದಿಯತ್ತ ಚಿಂತನೆ

ಸ್ವದೇಶಿ ವಸ್ತ್ರಗಳ ಖರೀದಿಯತ್ತ ಚಿಂತನೆಗೆ ಹಚ್ಚಿದ ಕೈಮಗ್ಗ ದಿನಾಚರಣೆ. ಟ್ವಿಟ್ಟರ್ ನಲ್ಲಿ ಈ ಕುರಿತು ಜಾಗೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು narendra modi ಸುದ್ದಿಗಳುView All

English summary
#NationalHandloomDay is being observed today across the India to honour the handloom weavers in the country & also carter an impetus to India's handloom industry. August 7 was chosen to mark launch day #SwadeshiMovement which was officially proclaimed on 7 August, 1905.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more