ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ RBI, CBI, PMO ಮೇಲೆ ಜನರು ಇಟ್ಟಿರುವ ವಿಶ್ವಾಸವೆಷ್ಟು?

|
Google Oneindia Kannada News

ನವದೆಹಲಿ, ಆಗಸ್ಟ್ 16: ಭಾರತ ಹೇಳಿಕೊಳ್ಳುವುದಕ್ಕೆ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳೇ ಪ್ರಭುಗಳು ಎನ್ನುವ ಮಾತು ಕೇವಲ ಮಾತಾಗಿಯೇ ಉಳಿದು ಬಿಟ್ಟಿದೆ. ದೇಶದಲ್ಲಿ ರಾಜಕೀಯ ಮತ್ತು ರಾಜಕಾರಣಿಗಳ ಮೇಲಿನ ವಿಶ್ವಾಸವೇ ಹೊರಟು ಹೋಗಿದೆ. ಈ ಮಾತು ನಾವು ಹೇಳುತ್ತಿರುವುದಲ್ಲ, ಬದಲಿಗೆ ಸಮೀಕ್ಷೆಯೊಂದು ತೆರೆದಿಟ್ಟಿರುವ ಸತ್ಯಸಂಗತಿ.

ಭಾರತೀಯ ರಕ್ಷಣಾ ಪಡೆ, ಭಾರತೀಯ ರಿಸರ್ವ್ ಬ್ಯಾಂಕ್, ಪ್ರಧಾನಮಂತ್ರಿ ಕಚೇರಿ ಹೀಗೆ ಕೆಲವೇ ಕೆಲವು ಸಚಿವಾಲಯಗಳು ಮತ್ತು ಸಂಸ್ಥೆಗಳ ಮೇಲೆ ಭಾರತೀಯರು ಇಂದಿಗೂ ವಿಶ್ವಾಸ ಇಟ್ಟುಕೊಂಡಿದ್ದಾರೆ. ಇದರ ಹೊರತಾಗಿ ರಾಜಕೀಯ ಪಕ್ಷ ಮತ್ತು ರಾಜಕೀಯ ನಾಯಕರ ಲೆಕ್ಕಕ್ಕೆ ಬಂದರೆ ಫಲಿತಾಂಶ ಅಷ್ಟಕಷ್ಟೇ.

ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!

ದೇಶದಲ್ಲಿ ಜನರ ನಂಬಿಕೆ ವಿಶ್ವಾಸವನ್ನು ಉಳಿಸಿಕೊಂಡ ಸಚಿವಾಲಯಗಳು ಯಾವುದು? ಜನರ ಮಧ್ಯೆಯೇ ಬದುಕುತ್ತಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಜನರು ನೀಡಿರುವ ಮಾರ್ಕ್ಸ್ ಎಷ್ಟು?, ಸಂಘ ಸಂಸ್ಥೆಗಳ ಜೊತೆಗೆ ಮಾಧ್ಯಮ ಲೋಕದ ಮೇಲೆ ಜನರ ವಿಶ್ವಾಸ ಎಷ್ಟರ ಮಟ್ಟಿಗಿದೆ ಎಂಬುದನ್ನು ಇಪ್ಸೋಸ್ ಇಂಡಿಯಾ ಸಮೀಕ್ಷೆಯು ತೆರೆದಿಟ್ಟಿದೆ. ಈ ಕುರಿತು ವಿಶೇಷ ವರದಿ ಇಲ್ಲಿದೆ.

RBI, PMO ಮತ್ತು ರಕ್ಷಣಾ ಪಡೆ ಮೇಲೆ ಹೆಚ್ಚು ವಿಶ್ವಾಸ

RBI, PMO ಮತ್ತು ರಕ್ಷಣಾ ಪಡೆ ಮೇಲೆ ಹೆಚ್ಚು ವಿಶ್ವಾಸ

ಇಪ್ಸೋಸ್ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ರಕ್ಷಣಾ ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಪ್ರಧಾನಮಂತ್ರಿ ಕಚೇರಿಗಳು ಅತ್ಯಂತ ವಿಶ್ವಾಸಾರ್ಹ ಸಂಸ್ಥೆಗಳಾಗಿ ಗುರುತಿಸಿಕೊಂಡಿವೆ. ಸುಪ್ರೀಂಕೋರ್ಟ್ ನಾಲ್ಕನೇ ಸ್ಥಾನದಲ್ಲಿದ್ದರೆ, ಕೇಂದ್ರ ತನಿಖಾ ತಂಡ(ಸಿಬಿಐ) ಐದನೇ ಸ್ಥಾನದಲ್ಲಿದೆ. ದೇಶದಲ್ಲಿ ಶೇ.65ರಷ್ಟು ಜನರ ವಿಶ್ವಾಸ ಗಳಿಸುವ ಮೂಲಕ ರಕ್ಷಣಾ ಪಡೆಯು ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಶೇ.50ರಷ್ಟು ಜನರ ವಿಶ್ವಾಸವನ್ನು ಸಂಪಾದಿಸಿರುವ ಆರ್ ಬಿಐ ಎರಡನೇ ಸ್ಥಾನದಲ್ಲಿದ್ದರೆ, ಶೇ.49ರಷ್ಟು ಮತಗಳನ್ನು ಪಡೆದಿರುವ ಪ್ರಧಾನಮಂತ್ರಿ ಕಚೇರಿ(PMO) ಮೂರನೇ ಸ್ಥಾನದಲ್ಲಿದೆ.

ಕೇಂದ್ರ ಸಂಸತ್ತು ಮಧ್ಯಮ ಕ್ರಮಾಂಕದಿಂದ ಕೆಳಹಂತದಲ್ಲಿ ಗುರುತಿಸಿಕೊಂಡಿದೆ. ಶೇ.33ರಷ್ಟು ವಿಶ್ವಾಸಾರ್ಹತೆ ಗಳಿಸಿರುವ ಸಂಸತ್ 7ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇನ್ನು ಸಂವಿಧಾನದ ನಾಲ್ಕನೇ ಅಂಗ ಎನಿಸಿಕೊಂಡಿರುವ ಮಾಧ್ಯಮಗಳಿಗೆ ಜನರು ಶೇ.32ರಷ್ಟು ಮಾರ್ಕ್ಸ್ ಕೊಟ್ಟಿದ್ದಾರೆ.

ಜನರ ವಿಶ್ವಾಸಾರ್ಹತೆ ಸಂಪಾದಿಸಿದ್ದು ಹೇಗೆ ಈ ಸಂಸ್ಥೆಗಳು?

ಜನರ ವಿಶ್ವಾಸಾರ್ಹತೆ ಸಂಪಾದಿಸಿದ್ದು ಹೇಗೆ ಈ ಸಂಸ್ಥೆಗಳು?

"ನಂಬಿಕೆಯು ವಿಶ್ವಾಸಾರ್ಹತೆ, ನೈತಿಕತೆ ಮತ್ತು ಗೌರವವಾಗಿದ್ದು, ಇದು ಅನುಕರಣೀಯವಾಗಿದೆ. ದೇಶದ ರಕ್ಷಣಾ ಪಡೆಗಳು, ಆರ್‌ಬಿಐ, ಭಾರತದ ಪ್ರಧಾನ ಮಂತ್ರಿಗಳು ಬಲವಾದ ಅಡಿಪಾಯವನ್ನು ಹೊಂದಿರುವ ಸ್ತಂಭಗಳಾಗಿವೆ. ಅವರ ಧ್ಯೇಯ ಮತ್ತು ಕೆಲಸದಲ್ಲಿ ಅಚಲವಾಗಿದ್ದು, ಜನರಿಂದ ಹೆಚ್ಚು ವಿಶ್ವಾಸಾರ್ಹತೆಯನ್ನು ಸಂಪಾದಿಸಿವೆ," ಎಂದು ಹೇಳಿದೆ.

ವಿಶ್ವಾಸ ಕಳೆದುಕೊಂಡ ಸಂಘ-ಸಂಸ್ಥೆ, ರಾಜಕಾರಣಿಗಳು

ವಿಶ್ವಾಸ ಕಳೆದುಕೊಂಡ ಸಂಘ-ಸಂಸ್ಥೆ, ರಾಜಕಾರಣಿಗಳು

ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಸಂಸ್ಥೆಗಳ ಮೇಲೆ ಜನರು ವಿಶ್ವಾಸವನ್ನು ಹೊಂದಿದ್ದಾರೆ. ಆದರೆ ಆಡಳಿತಕ್ಕಾಗಿ ಸರ್ಕಾರಗಳನ್ನು ರಚಿಸುವ ಮತ್ತು ಉರುಳಿಸುವ ರಾಜಕಾರಣಿಗಳು ಜನರ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ ಎನ್ನುವುದು ಸಮೀಕ್ಷೆಯ ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಮೀಕ್ಷೆ ವರದಿಯಲ್ಲಿ ರಾಜಕಾರಣಿಗಳಿಗೆ ಜನರು ಶೇ.16ರಷ್ಟು ವಿಶ್ವಾಸಾರ್ಹತೆಯನ್ನು ತೋರಿದ್ದರೆ, ರಾಜಕೀಯ ಪಕ್ಷಗಳ ಮೇಲಿನ ಜನರ ನಂಬಿಕೆ ಶೇ.17ಕ್ಕೆ ಸೀಮಿತವಾಗಿದೆ. ಅದೇ ರೀತಿ ಸಮುದಾಯದ ಮುಖಂಡರ ಮೇಲಿನ ನಂಬಿಕೆ ಶೇ.19ರಷ್ಟಿದ್ದರೆ, ಧಾರ್ಮಿಕ ಮುಖಂಡರ ಮೇಲಿನ ವಿಶ್ವಾನ ಶೇ.21ರಷ್ಟಿದೆ ಎಂದು ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ವಿಶ್ವಾಸ ಕಳೆದುಕೊಂಡಿದ್ದು ಹೇಗೆ ಸಂಸ್ಥೆಗಳು?

ವಿಶ್ವಾಸ ಕಳೆದುಕೊಂಡಿದ್ದು ಹೇಗೆ ಸಂಸ್ಥೆಗಳು?

"ಈ ಸಂಸ್ಥೆಗಳ ಮೇಲಿನ ನಂಬಿಕೆ ಕಡಿಮೆಯಾಗಿದ್ದು ಏಕೆ? ಮೊದಲು ನೀಡಿದ ಭರವಸೆಗಳನ್ನು ಈಡೇರಿಸದೇ ಇರುವುದು ಇದಕ್ಕೆ ಕಾರಣವಾಯಿತೇ ಅಥವಾ ಮುಖ್ಯ ಉದ್ದೇಶಗಳ ಸತ್ಯಾಸತ್ಯತೆ ಪರೀಕ್ಷೆಯಲ್ಲಿ ಸೋಲುತ್ತಿವೆಯೇ ಎಂಬುದು ಸ್ಪಷ್ಟವಾಗಿಲ್ಲ. ಆ ಕಾರಣಗಳು ಏನೇ ಇರಲಿ, ಈ ಸಂಸ್ಥೆಗಳು ನಂಬಿಕೆಯನ್ನು ಮರಳಿ ಪಡೆಯುವುದು ಹೇಗೆ ಎಂಬುದರ ಕುರಿತು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ನುಡಿದಂತೆ ನಡೆಯುವುದು ಹಾಗೂ ಕಾರ್ಯವಿಧಾನದ ಮೂಲಕ ಜನರ ವಿಶ್ವಾಸವನ್ನು ಗಳಿಸಿಕೊಳ್ಳಬೇಕಾಗಿದೆ.

ಇಪ್ಸೋಸ್ ಇಂಡಿಯಾ ಸಮೀಕ್ಷೆ ನಡೆದಿದ್ದು ಹೇಗೆ?

ಇಪ್ಸೋಸ್ ಇಂಡಿಯಾ ಸಮೀಕ್ಷೆ ನಡೆದಿದ್ದು ಹೇಗೆ?

ರಚನಾತ್ಮಕ ಪ್ರಶ್ನಾವಳಿಯನ್ನು ಬಳಸಿಕೊಂಡು ಪರಿಮಾಣಾತ್ಮಕ ಸಮೀಕ್ಷೆಯ ಮೂಲಕ ಇಪ್ಪೋಸ್ ಇಂಡಿಯಾ ಸಮೀಕ್ಷೆಯನ್ನು ನಡೆಸಲಾಯಿತು. ಮಹಿಳೆಯರು ಸೇರಿದಂತೆ 2,950 ವಯಸ್ಕರನ್ನು ಪ್ರಶ್ನೆ ಮಾಡಲಾಯಿತು. ನಾಲ್ಕು ಮಹಾನಗರಗಳು, ಶ್ರೇಣಿ 1, ಶ್ರೇಣಿ 2 ಮತ್ತು ಶ್ರೇಣಿ 3 ಪಟ್ಟಣಗಳಿಂದ ಮಾಹಿತಿ ಕಲೆ ಹಾಕಲಾಗಿದೆ.

English summary
Survey: Defence forces, RBI and PM office in list of Indias trusted institution. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X