ಭಾರತದಲ್ಲಿ ಸೂಪರ್ ಮೂನ್ ಗೋಚರ, ನೋಡುವುದು ಹೇಗೆ?

ಬೆಂಗಳೂರು, ಏಪ್ರಿಲ್ 7: ಕೊರೊನಾವೈರಸ್ ಭೀತಿಯಲ್ಲಿ ಎಲ್ಲೆಡೆ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಮನೆಯಲ್ಲೇ ಇದ್ದು, ಖಗೋಳ ವಿಸ್ಮಯವೊಂದನ್ನು ವೀಕ್ಷಿಸುವ ಅವಕಾಶ ಭಾರತೀಯರಿಗೆ ಲಭಿಸಿದೆ. ನಿಮ್ಮ ಬಾಲ್ಕನಿ, ಮನೆ ಮಹಡಿಯಿಂದ ಸೂಪರ್ ಪಿಂಕ್ ಚಂದ್ರನನ್ನು ನೋಡಿ ಆನಂದಿಸಬಹುದು.

Recommended Video

      ಇನ್ನೂ ಅಬ್ಬರಿಸಲಿದೆ ಕೊರೊನಾ!!ಕೋಡಿ ಶ್ರೀಗಳು ಕೊರೊನಾ ಬಗ್ಗೆ ನುಡಿದ ಭವಿಷ್ಯ ಇಲ್ಲಿದೆ

      ಏಪ್ರಿಲ್ 7 ಹಾಗೂ ಏಪ್ರಿಲ್ 8 ರಂದು ಭಾರತದಲ್ಲಿ ಸೂಪರ್ ಮೂನ್ ಗೋಚರಿಸಲಿದೆ, ಏಪ್ರಿಲ್ ತಿಂಗಳ ಈ ಚಂದ್ರ ಹೆಚ್ಚು ಪ್ರಕಾಶಮಾನವಾಗಿ, ದೊಡ್ಡ ಗಾತ್ರದಲ್ಲಿ ಕಾಣಿಸಲಿದ್ದಾನೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

      ಏಪ್ರಿಲ್ 8 ರ ಬೆಳಗ್ಗೆ 8 ಗಂಟೆಗೆ ಸೂಪರ್ ಮೂನ್ ಸ್ಪಷ್ಟವಾಗಿ ಗೋಚರಿಸಲಿದೆ. ಸೂರ್ಯನ ಬೆಳಕು ಇರುವುದರಿಂದ ವೀಕ್ಷಣೆಗೆ ತೊಡಕಾಗುವ ಸಾಧ್ಯತೆಯಿದೆ. ಏಪ್ರಿಲ್ 7 ರ ರಾತ್ರಿ ಉತ್ತರ ಅಮೆರಿಕ ಹಾಗೂ ಇತರ ರಾಷ್ಟ್ರಗಳಲ್ಲಿ ಕೂಡ ಸೂಪರ್ ಮೂನ್ ಗೋಚರಿಸಲಿದೆ.

      ಎಲ್ಲೆಲ್ಲಿ ಚಂದ್ರ ಗ್ರಹಣ ಗೋಚರಿಸುತ್ತದೋ ಅಲ್ಲೆಲ್ಲ ಜನರು ಬರಿಗಣ್ಣಿನಿಂದ ಚಂದ್ರ ಗ್ರಹಣವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ವೀಕ್ಷಿಸಬಹುದು. ಸ್ಪಷ್ಟವಾಗಿ ಬರಿಗಣ್ಣಿಗೆ ಗೋಚರಿಸಿಲ್ಲ ಎಂದು ಚಿಂತಿಸಬೇಡಿ. ನಾಸಾ ಒದಗಿಸುವ ಲೈವ್ ಸ್ಟ್ರೀಮಿಂಗ್ ಮೂಲಕ ಈ ಅದ್ಭುತವನ್ನು ವೀಕ್ಷಿಸಿ ಆನಂದಿಸಬಹುದು.

      ಏನಿದು ಸೂಪರ್ ಮೂನ್?

      ಏನಿದು ಸೂಪರ್ ಮೂನ್?

      ಏಪ್ರಿಲ್ 7 ರ ರಾತ್ರಿ ಹಾಗೂ ಏಪ್ರಿಲ್ 8 ರ ಬೆಳಗ್ಗೆ ಚಂದ್ರನು ಭೂಮಿಗೆ ಅತಿ ಸಮೀಪದಲ್ಲಿರುತ್ತಾನೆ. ಸುಮಾರು 3,56, 907 ಕಿ.ಮೀ ಹತ್ತಿರವಾಗಿರುವ ಚಂದ್ರ ಕೆಂಪಗೆ ಕಾಣುತ್ತಾನೆ. ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಆರ್ಗನೈಜೇಶನ್ (ನಾಸಾ) ಈ ಸೂಪರ್ ಮೂನ್ ಅಧ್ಯಯನಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಬಹುತೇಕ ದಿನಗಳಲ್ಲಿ ಈ ಅಂತರ 3,84,000 ಕಿ.ಮೀ. ಇರುತ್ತದೆ.

      1948ರಿಂದ ನಾಲ್ಕು ಬಾರಿ ಹತ್ತಿರ

      1948ರಿಂದ ನಾಲ್ಕು ಬಾರಿ ಹತ್ತಿರ

      1948ರಲ್ಲಿ ಕಾಣಿಸಿಕೊಂಡಿತ್ತು ಅತಿ ದೊಡ್ಡದಾದ ಚಂದ್ರ. ಆ ನಂತರ ಈಗಲೇ ಚಂದ್ರ ಇಷ್ಟು ದೊಡ್ಡದಾಗಿ ನೋಡಲು ಸಿಗುತ್ತಿರುವುದು. ನಾಸಾ ಪ್ರಕಾರ, ಭೂಮಿಗೆ ಇಷ್ಟು ಹತ್ತಿರದಿಂದ, ಇಷ್ಟು ಪ್ರಕಾಶಮಾನವಾಗಿ ಚಂದ್ರನನ್ನು ನೋಡಲು ನವೆಂಬರ್ 25, 2034ರವರೆಗೆ ಕಾಯಬೇಕು.

      ಸೂಪರ್ ಪಿಂಕ್ ಮೂನ್

      ಸೂಪರ್ ಪಿಂಕ್ ಮೂನ್

      2016ನೇ ಇಸವಿಯಲ್ಲೇ ಮೂರು ಬಗೆಯ ಚಂದ್ರನ ನೋಡಲು ಸಾಧ್ಯವಾಗಿದೆ. ಅಕ್ಟೋಬರ್ 16ರಂದು 'ಹಂಟರ್ ಮೂನ್' ಕಂಡಿತ್ತು. ಮುಂದಿನ ತಿಂಗಳು 14ಕ್ಕೆ 'ಕೋಲ್ಡ್ ಮೂನ್' ಕಾಣಿಸಲಿದೆ. ಸೋಮವಾರ (ನವೆಂಬರ್ 14, 206) ಕಾಣಿಸಿದ್ದು ಸೂಪರ್ ಮೂನ್. 2020ರ ಏಪ್ರಿಲ್ 7 ಹಾಗೂ 8ರಂದು ಕಾಣಿಸುವುದು ಸೂಪರ್ ಪಿಂಕ್ ಮೂನ್.

      ಪಿಂಕ್ ಸೂಪರ್ ಮೂನ್ ಹೆಸರೇಕೆ?

      ಪಿಂಕ್ ಸೂಪರ್ ಮೂನ್ ಹೆಸರೇಕೆ?

      ಉತ್ತರ ಅಮೆರಿಕದ ಪೂರ್ವಭಾಗದಲ್ಲಿ ಕಾಣಿಸಿಕೊಳ್ಳುವ ಪಿಂಕ್ ಹೂ(Phlox subulata) ನಿಂದ ಚಂದ್ರನಿಗೆ ಈ ಹೆಸರು ಬಂದಿದೆ. ಚಂದ್ರನ ಬಣ್ಣವೇನು ಬದಲಾವಣೆಯಾಗಿ ಈ ರೀತಿ ಕಾಣಿಸುವುದಿಲ್ಲ. ಪ್ರಾದೇಶಿಕ ಹಾಗೂ ವಿವಿಧ ಋತುಗಳ ಆಧಾರದ ಮೇಲೆ ಬೇರೆ ಬೇರೆ ಹೆಸರಿನಲ್ಲಿ ದೊಡ್ಡ ಗಾತ್ರದ ಚಂದ್ರನನ್ನು ಕರೆಯುವುದು ರೂಢಿಯಲ್ಲಿದೆ. Sprouting Grass Moon, the Egg Moon, and the Fish Moon ಎಂಬ ಹೆಸರುಗಳು ಚಂದಿರನಿಗೆ ಕರೆಯಲಾಗಿದೆ. ಚಂದ್ರನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾಸಾದ ವಿಶೇಷ ಪುಟ ನೋಡಬಹುದು

      ಯಾವಾಗ ಎಲ್ಲಿ, ಹೇಗೆ ನೋಡುವುದು

      ಯಾವಾಗ ಎಲ್ಲಿ, ಹೇಗೆ ನೋಡುವುದು

      ಭಾರತದಲ್ಲಿ ಏಪ್ರಿಲ್ 7 ರ ರಾತ್ರಿ 8 ಹಾಗೂ ಏಪ್ರಿಲ್ 8 ರ ಬೆಳಗ್ಗೆ 8.05 IST ಸರಿಯಾಗಿ ಪ್ರಕಾಶಮಾನವಾದ ಚಂದ್ರ ಕಾಣಬಹುದು. ಇತರೆಡೆ ಪೂರ್ವದಿಂಗತದಲ್ಲಿ ಏಪ್ರಿಲ್ 7ರ 2.08 PM EDT, 18.08GMT, 4:30 pm PDT, 23:30 UTC ಅವಧಿಯಲ್ಲಿ ನೋಡಬಹುದು. ಸೂರ್ಯನ ಬೆಳಕಿನಲ್ಲಿ ಪಿಂಕ್ ಮೂನ್ ಕಾಣಿಸದಿದ್ದರೆ, ವೆಬ್ ತಾಣಗಳ ಮೂಲಕ ನೋಡಬಹುದು. ವರ್ಚ್ಯುಯಲ್ ಟೆಲಿಸ್ಕೋಪ್, ಸ್ಲೂಶ್ ಮೂಲಕ ನೋಡಬಹುದು. ಯೂಟ್ಯೂಬಿನಲ್ಲಿ ಲೈವ್ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+