ಜೈಲಿನಲ್ಲೊಬ್ಬ ಜೊತೆಗಾರ: ಬಾಲಿವುಡ್ ಸುಂದರಿಯರ ಪಾಲಿಗೆ ಸುಕೇಶನೇ ಸಾಹುಕಾರ!
ನವದೆಹಲಿ, ಸೆಪ್ಟೆಂಬರ್ 15: ಕಾಸ್ಟ್ಲಿ ದುನಿಯಾದಲ್ಲಿ ಕಾಸಿದ್ದೋನೇ ಬಾಸ್. ಗಂಡನಿಗಾಗಿ ಅಲ್ಲೊಬ್ಬ ಕೈದಿಯನ್ನು ನಂಬಿಗೆ ಆಂಟಿಗೆ 215 ಕೋಟಿ ರೂಪಾಯಿ ಲಾಸ್. ಜೈಲಿಗೆ ಹೋಗಿ ವಂಚಕನ ಮೀಟ್ ಮಾಡಿದ್ದು ಈ ನಾಲ್ಕು ಮಾಡಲ್ಸ್, ಇದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುವ ಸುಕೇಶ್ ಚಂದ್ರಶೇಖರನ ವಂಚನೆ ಕೇಸ್.
ಬಾಲಿವುಡ್ ನಟಿ ಜಾಕ್ವೆಲಿನ್ ಬೆನ್ನು ಬಿದ್ದಿದ್ದ ವಂಚಕ ಸುಕೇಶ್ ಚಂದ್ರಶೇಖರ್ ರಂಗಿನಾಟ ಬಟಾಬಯಲಾಗಿದೆ. ಮಾಡೆಲ್ಸ್ ಮೈಮಾಟಕ್ಕೆ ಮನಸೋತ ಮನ್ಮಥ ಕೊಟ್ಟಿದ್ದು ಮಾತ್ರ ಕೋಟಿ ಕೋಟಿ ಬೆಲೆ ಬಾಳುವ ಉಡುಗೊರೆ. ಇಂಥ ಎಷ್ಟೋ ರೋಚಕ ಕಥೆಗಳು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
215 ಕೋಟಿ ವಂಚಿಸಿದ ಸುಕೇಶ್ ಚಂದ್ರಶೇಖರ್ ಭೇಟಿಗೆ ಆ ನಾಲ್ಕು ಸುಂದರಿಯರು ಹೋಗಿದ್ದು ಏಕೆ?, ಜೈಲಿನಲ್ಲೇ ಆತನನ್ನು ಮಾಡೆಲ್ಸ್ ಮೀಟ್ ಮಾಡಿದ್ದು ಏಕೆ?, ಸುಕೇಶ್ ಕಡೆಯಿಂದ ಗಿಫ್ಟ್ ಪಡೆದ ಮಾಡೆಲ್ ಕಹಾನಿ ಹೇಗಿದೆ?, ಸುಂದರಿಯರ ಜೊತೆಗೆ ಸುಕೇಶ್ ಸಂಬಂಧ ಎಷ್ಟಿತ್ತು? ಸುಕೇಶ್ ಮತ್ತು ಸುಂದರಿಯರ ನಡುವೆ ನಿಂತ ಇನ್ನೊಬ್ಬ ಸುಂದರಿ ಹೇಳಿದ ಕಥೆಯೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

'Money' ಮ್ಯಾನ್ ನೋಡಲು ಜೈಲಿಗೆ ಮಾಡೆಲ್ಸ್!
ಕೋಟ್ಯಧಿಪತಿ ಪತ್ನಿಗೆ 215 ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಹೊರ ಬೀಳುತ್ತಿದ್ದಂತೆ ಸುಕೇಶ್ ಚಂದ್ರಶೇಖರ್ ಒಂದೊಂದೇ ಮುಖ ತೆರೆದುಕೊಳ್ಳುತ್ತಿವೆ. ತಿಹಾರ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದ ಸುಕೇಶ್ ಭೇಟಿಗೆ ನಾಲ್ಕು ಮಾಡೆಲ್ಸ್ ಹೋಗಿದ್ದರು. ನಿಖಿತಾ ತಂಬೋಲಿ, ಚಾಹತ್ ಖನ್ನಾ, ಸೋಫಿಯಾ ಸಿಂಗ್ ಮತ್ತು ಅರುಶಾ ಪಟೇಲ್ ಭೇಟಿ ಮಾಡಿದ್ದರು. ತಿಹಾರ್ ಜೈಲಿನಲ್ಲಿ ಸುಕೇಶ್ ಅನ್ನು ಈ ನಾಲ್ಕೂ ನಟಿಯರು ಭೇಟಿ ಮಾಡುವುದಕ್ಕೆ ಆತನ ಸಹಾಯಕಿ ಪಿಂಕಿ ಇರಾನಿ ಸೇತುವೆಯಾಗಿ ನಿಂತಿದ್ದಳು.
ಈ ನಟಿಯರನ್ನು ವಿವಿಧ ಹೆಸರುಗಳಿಂದ ಸುಕೇಶ್‌ಗೆ ಸಹಾಯಕಿ ಪಿಂಕಿ ಪರಿಚಯಿಸಿದರು. ಅಲ್ಲಿಂದ ಮುಂದೆ ಈ ಮಾಡೆಲ್ಸ್ ದುಬಾರಿ ಉಡುಗೊರೆ ಅನ್ನು ವಂಚಕನಿಂದ ಪಡೆದುಕೊಂಡರು. ನಾಲ್ವರು ನಟಿಯರಲ್ಲಿ ಅರುಷಾ ಪಾಟೀಲ್ ತಾವು ಸುಕೇಶ್ ಭೇಟಿ ಆಗುವುದಕ್ಕೆ ಪಿಂಕಿ ಇರಾನಿ ಕಾರಣ ಎಂದು ಒಪ್ಪಿಕೊಂಡರು. ಆದರೆ ತಿಹಾರ್ ಜೈಲಿನಲ್ಲಿ ಆತನನ್ನು ಭೇಟಿ ಮಾಡಿಲ್ಲ ಎಂದು ಉಲ್ಲೇಖಿಸಿದರು. ಈಕೆಯೂ ಸಹ ವಂಚಕನಿಂದ ಹಣ ಪಡೆದುಕೊಂಡಿದ್ದಾಳೆ ಎಂದು ಇಡಿ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಸುಕೇಶ್ ಮತ್ತು ನಿಖಿತಾ ತಂಬೋಲಿ ನಡುವಿನ ನಂಟು!
ಬಿಗ್ ಬಾಸ್ ಖ್ಯಾತಿಯ ನಿಖಿತಾ ತಂಬೋಲಿ ತಿಹಾರ್ ಜೈಲಿನಲ್ಲೇ ಸುಕೇಶ್ ಅನ್ನು ಭೇಟಿ ಮಾಡಿದ್ದರು. ಈ ಇಬ್ಬರ ನಡುವೆ ಲಿಂಕ್ ಹಚ್ಚಿದ ಪಿಂಕಿ ವಂಚಕನನ್ನು ಶೇಖರ್ ಎಂಬ ಹೆಸರಿನಲ್ಲೂ, ದಕ್ಷಿಣ ಭಾರತದ ಖ್ಯಾತ ನಿರ್ಮಾಪಕನಂತಲೂ ಪರಿಚಯ ಮಾಡಿ ಕೊಟ್ಟಿದ್ದಳು. "ಎರಡು ಸಂದರ್ಭಗಳಲ್ಲಿ ಇಬ್ಬರು ಪರಸ್ಪರ ಭೇಟಿ ಮಾಡಿದ್ದು, ಒಮ್ಮೆ ತಿಹಾರ್ ಜೈಲು ಮತ್ತೊಮ್ಮೆ ದೆಹಲಿ ಕಚೇರಿಯಲ್ಲಿ ಭೇಟಿ ಮಾಡಿದ್ದರು. 2018ರ ಏಪ್ರಿಲ್ ತಿಂಗಳಿನಲ್ಲಿ ಮೊದಲ ಭೇಟಿ ಮಾಡಿದ್ದು, ಅಂದು 10 ಲಕ್ಷ ರೂಪಾಯಿ ಪಡೆದುಕೊಂಡಿದ್ದ ಪಿಂಕಿ ಇರಾನಿ, ಅದರಲ್ಲಿ 1.5 ಲಕ್ಷ ರೂಪಾಯಿ ಹಣವನ್ನು ನಿಖಿತಾ ತಂಬೋಲಿಗೆ ನೀಡಿದ್ದಳು.
ಮೊದಲ ಭೇಟಿಯ ಎರಡು-ಮೂರು ವಾರಗಳ ನಂತರದಲ್ಲಿ ಎರಡನೇ ಭೇಟಿ ನಡೆಯಿತು. ಅಂದು ಸುಕೇಶ್ ಅನ್ನು ಭೇಟಿ ಮಾಡುವುದಕ್ಕೆ ನಿಖಿತಾ ತಂಬೋಲಿ ಒಬ್ಬಂಟಿಯಾಗೇ ಹೋಗಿದ್ದಳು. ಅಂದು 2 ಲಕ್ಷ ರೂಪಾಯಿ ಹಣದ ಜೊತೆಗೆ ಗುಚ್ಚಿ ಬ್ಯಾಗ್ ಅನ್ನು ಪಡೆದುಕೊಂಡಿದ್ದಳು," ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.

ವಾಟ್ಸಾಪ್ ಸಂದೇಶದಿಂದ ಬಲೆಗೆ ತಂಬೋಲಿ!
ಕಳೆದ 2021ರ ಡಿಸೆಂಬರ್ 15ರಂದು ನಿಖಿತಾ ತಂಬೋಲಿ ಹೇಳಿಕೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಖಲಿಸಿಕೊಂಡಿದ್ದರು. ಅಂದು ವಾಟ್ಸಾಪ್ ಮೂಲಕ ಪಿಂಕಿ ಇರಾನಿ ತಮ್ಮನ್ನು ಸಂಪರ್ಕಿಸಿದ್ದು, ತಾವು ದಕ್ಷಿಣ ಭಾರತದ ನಿರ್ಮಾಪಕರ ಸಹಾಯಕಿ ಎಂದು ಹೇಳಿಕೊಂಡಿದ್ದಳು. "ದಕ್ಷಿಣ ಭಾರತದ ನಿರ್ಮಾಪಕರು ನಿಮ್ಮೊಂದಿಗೆ ಸೇರಿ ಚಿತ್ರವೊಂದನ್ನು ಮಾಡುವುದಕ್ಕೆ ಬಯಸುತ್ತಿದ್ದಾರೆ ಅಂತಾ ಪಿಂಕಿ ಹೇಳಿಕೊಂಡಿದ್ದರು. 2018ರ ಏಪ್ರಿಲ್ ತಿಂಗಳಿನಲ್ಲಿ ದೆಹಲಿಯಲ್ಲಿರುವ ತಮ್ಮ ನಿರ್ಮಾಪಕರನ್ನು ಭೇಟಿ ಮಾಡುವುದಕ್ಕೆ ಹೋಗೋಣ ಎಂದು ಪಿಂಕಿ ಹೇಳಿದ್ದು, ತಾವೇ ಏರ್ ಟಿಕೆಟ್ ಬುಕ್ ಮಾಡುವುದಾಗಿ ನಂಬಿಸಿದ್ದಳು. ಅದರಂತೆ ಮರುದಿನವೇ ಪಿಂಕಿ ಇರಾನಿ ಹಾಗೂ ನಿಖಿತಾ ತಂಬೋಲಿ ಸೇರಿಕೊಂಡು ಮುಂಬೈನಿಂದ ದೆಹಲಿಗೆ ತೆರಳಿದ್ದರು," ಎಂದು ಇಡಿ ಉಲ್ಲೇಖಿಸಿದೆ.

ಆ ಜೈಲಿನವರೆಗೂ BMW, ಜೈಲು ಆವರಣದಲ್ಲಿ Innova ಕಾರು!
ದೆಹಲಿಗೆ ತಲುಪಿದ್ದ ಪಿಂಕಿ ಮತ್ತು ತಂಬೋಲಿ, ತಿಹಾರ್ ಜೈಲಿನವರೆಗೂ ಬಿಎಂಡಬ್ಲ್ಯು ಕಾರಿನಲ್ಲಿ ಹೋಗಿದ್ದು, ಅಲ್ಲಿಂದ ಮುಂದೆ ಜೈಲಿನ ಆವರಣದಲ್ಲಿ ಇನ್ನೋವಾ ಕಾರಿನಲ್ಲಿ ಹೋದರು. ಹೀಗೆ ಹೋದವರಿಗೆ ಯಾವುದೇ ಭದ್ರತಾ ತಪಾಸಣೆ ನಡೆಸಲಿಲ್ಲ, ಐಡಿ ಕಾರ್ಡ್ ಕೇಳಲಿಲ್ಲ. ಅಲ್ಲಿ ವಂಚನ ಸುಕೇಶ್ ಅನ್ನು ಶೇಖರ್ ಎಂಬ ಹೆಸರಿನಲ್ಲಿ ಮಾಡೆಲ್ ತಂಬೋಲಿಗೆ ಪಿಂಕಿ ಇರಾನಿ ಪರಿಚಯ ಮಾಡಿ ಕೊಟ್ಟಿದ್ದು, ದೊಡ್ಡ ನಿರ್ಮಾಪಕ ಎಂದು ಹೇಳಿದ್ದಳು. ಮೊದಲು ಇದೇ ಅವರ ಕಚೇರಿ ಎಂದು ಉಲ್ಲೇಖಿಸಿದ್ದ ಪಿಂಕಿ, ನಂತರದಲ್ಲಿ ಹಗರಣವೊಂದರಲ್ಲಿ ಸುಕೇಶ್ ಜೈಲು ಸೇರಿರುವುದಾಗಿ ತಿಳಿಸಿದ್ದರು. 2018ರ ಆಗಸ್ಟ್ ತಿಂಗಳಿನಲ್ಲಿ ಅವರಿಗೆ ಜಾಮೀನು ಸಿಗಲಿದೆ ಅಂತಾ ಹೇಳಿದ್ದಳು. ಮೊದಲಿಗೆ ಪಿಂಕಿ ಜೊತೆಗೆ ಹೋಗಿದ್ದ ನಿಖಿತಾಗೆ ಎರಡನೇ ಬಾರಿ ಸುಕೇಶ್ ನೇರವಾಗಿ ಏರ್ ಟಿಕೆಟ್ ಬುಕ್ ಮಾಡಿದ್ದನು. ಅಂದು ಮುಂಬೈನಿಂದ ದೆಹಲಿಗೆ ಆಗಮಿಸಿದ ನಿಖಿತಾ ಏಕಾಂಗಿಯಾಗೇ ಸುಕೇಶ್ ಅನ್ನು ಭೇಟಿ ಮಾಡಿದ್ದಳು.
ಎರಡನೇ ಬಾರಿ ತಿಹಾರ್ ಜೈಲಿಗೆ ಹೋಗಿದ್ದ ನಿಖಿತಾಳನ್ನು ಅಲ್ಲಿನ ವ್ಯಕ್ತಿಯೊಬ್ಬ ಮೊದಲ ಅಂತಸ್ತಿನಲ್ಲಿದ್ದ ಸುಕೇಶ್ ಕೋಣೆಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ನಿಖಿತಾಗೆ ದುಬಾರಿ ಬೆಲೆಯ ಗುಚ್ಚಿ ಬ್ಯಾಗ್ ಜೊತೆ 2 ಲಕ್ಷ ರೂಪಾಯಿ ಹಣವನ್ನು ಕೊಟ್ಟು ಕಳುಹಿಸಲಾಗಿತ್ತು," ಎಂದು ಚಾರ್ಜ್ ಶೀಟ್ ಹೇಳುತ್ತದೆ. ಇದಾದ ನಂತರ ಇಬ್ಬರ ನಡುವೆ ಯಾವುದೇ ಸಂಪರ್ಕ ಇರಲಿಲ್ಲ. ನಿಖಿತಾ ತಂಬೋಲಿ ದೆಹಲಿಯಲ್ಲಿ ತಂಗಿದ್ದ ದಾಖಲೆಯನ್ನು ಇಡಿ ಪರಿಶೀಲಿಸಿದೆ. ಮಾರ್ಚ್ 22, 2018 ರಿಂದ ಮಾರ್ಚ್ 23,2018 ರವರೆಗೆ ಏರೋಸಿಟಿಯಲ್ಲಿರುವ ದೆಹಲಿಯ ಜೆಡಬ್ಲ್ಯೂ ಮ್ಯಾರಿಯೊಟ್‌ನಲ್ಲಿ ಅವರು ತಂಗಿದ್ದರು ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ.

ಚಾಹತ್ ಖನ್ನಾಗೆ ಚೆಂದದ ಗಿಫ್ಟ್ ಕೊಟ್ಟಿದ್ದ ಸುಕೇಶ್
'ಬಡೇ ಅಚ್ಚೆ ಲಗ್ತೇ ಹೈ ಧಾರಾವಾಹಿಯ ಪಾತ್ರದಿಂದ ಖ್ಯಾತಿ ಗಳಿಸಿದ್ದ ನಟಿ ಚಾಹತ್ ಖನ್ನಾಗೆ ದಕ್ಷಿಣ ಭಾರತದ ಚಾನೆಲ್‌ನ ಮಾಲೀಕ ಶೇಖರ್ ರೆಡ್ಡಿ ಎಂದು ಸುಕೇಶ್ ಅನ್ನು ಪಿಂಕಿ ಇರಾನಿ ಪರಿಚಯಿಸಿದ್ದಳು. "ಮೇ, 2018ರಲ್ಲಿ ಒಮ್ಮೆ ಚಾಹತ್ ಖನ್ನಾ ಅನ್ನು ದೆಹಲಿಯ ತಿಹಾರ್ ಜೈಲಿನೊಳಗೆ ಆರೋಪಿ ಸುಖೇಶ್ ಚಂದ್ರಶೇಖರ್ ಅನ್ನು ಭೇಟಿ ಆಗಿದ್ದರು. ಇದಕ್ಕಾಗಿ ಆರೋಪಿ ಪಿಂಕಿ ಇರಾನಿ ಅವರಿಗೆ 2 ಲಕ್ಷ ರೂಪಾಯಿ ನಗದು ಮತ್ತು ನೀಲಿ ಬಣ್ಣದ ವರ್ಸೇಸ್ ವಾಚ್ ನೀಡಿದ್ದರು," ಎಂದು ಇಡಿ ಆರೋಪ ಪಟ್ಟಿಯಲ್ಲಿ ಹೇಳಿದೆ.
ಡಿಸೆಂಬರ್ 16, 2021ರಂದು ಚಾಹತ್ ಖನ್ನಾ ಹೇಳಿಕೆಯನ್ನು ಇಡಿ ದಾಖಲಿಸಿತು. 2018ರ ಜನವರಿ-ಫೆಬ್ರವರಿಯಲ್ಲಿ ಚಾಹತ್ ಖನ್ನಾಗೆ ಕರೆ ಮಾಡಿದ್ದ ಪಿಂಕಿ, ಅವರ ಉತ್ತಮ ಸ್ನೇಹಿತನಿಗೆ ನಿಧಿ ಸಂಗ್ರಹಿಸುವ ಕಾರ್ಯಕ್ರಮಕ್ಕಾಗಿ ತಾಯಿ ಬ್ಲಾಗರ್ ಆಗಬೇಕೆಂದು ಬಯಸಿದ್ದರು ಎಂದು ಪರಿಚಯಿಸಿಕೊಂಡಿದ್ದಳು. ಪಿಂಕಿ ತನ್ನನ್ನು ತಾನು ಏಂಜೆಲ್ ಎಂದು ಪರಿಚಯಿಸಿಕೊಂಡಳು. ದುಬೈ ಮತ್ತು ಮುಂಬೈನಲ್ಲಿ ನೆಲೆಗೊಂಡಿರುವ ಟ್ಯಾಲೆಂಟ್ ಏಜೆನ್ಸಿಯ ಮಾಲೀಕರಾಗಿದ್ದು, ವೃತ್ತಿಯಲ್ಲಿ ವಕೀಲೆ ಎಂದಿದ್ದಳು. ಮೇ, 2018ರಲ್ಲಿ, ಪಿಂಕಿ ಸುಕೇಶ್‌ನನ್ನು ಭೇಟಿಯಾಗುವಂತೆ ಚಾಹತ್‌ಗೆ ಕೇಳಿದಳು. ನಂತರ ಪಿಂಕಿ ಇಬ್ಬರಿಗೂ ಬುಕ್ ಮಾಡಿದ ಟಿಕೆಟ್‌ಗಳನ್ನು ಪಡೆದುಕೊಂಡು ಒಟ್ಟಿಗೆ ಮುಂಬೈನಿಂದ ದೆಹಲಿಗೆ ಪ್ರಯಾಣಿಸಿದ್ದರು.

ಸುಕೇಶ್ ವಿಷಯದಲ್ಲಿ ಡಬಲ್ ಗೇಮ್ ಆಟವಾಡಿದ್ದ ಪಿಂಕಿ!
"ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ನಿಂತ ಬಿಎಂಡಬ್ಲ್ಯು ಕಾರಿನಲ್ಲಿ ಕುಳಿತ ಅವರನ್ನು ತಿಹಾರ್ ಜೈಲ್ ಗೇಟ್ ನಂ. 03ಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ಕಾರುಗಳನ್ನು ಬದಲಾಯಿಸಬೇಕಾಗಿತ್ತು. ಸುಕೇಶ್ ದೊಡ್ಡ ವ್ಯಕ್ತಿಯಾಗಿದ್ದು, ಭದ್ರತೆಗಾಗಿ ಇಷ್ಟೆಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅದಾಗ್ಯೂ, ಕೆಲವು ಜನರಿಗೆ ಮಾತ್ರ ಭೇಟಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಪಿಂಕಿ ಹೇಳಿದ್ದಳು. ಆಗ ನಮ್ಮನ್ನು ಕರೆದುಕೊಂಡು ಹೋಗಲು ಇನ್ನೋವಾ ಕಾರು ಬಂದಿತು. ನಂತರ ಅವರನ್ನು ಜೈಲಿನ ಆವರಣಕ್ಕೆ ಕರೆದೊಯ್ಯಲಾಯಿತು. ಸಿಸಿಟಿವಿ ಫೂಟೇಜ್‌ನಲ್ಲಿ ಅವರ ಫೋಟೋಗಳು ದಾಖಲಾಗದಂತೆ ಕೆಳಮುಖವಾಗಿ ನೋಡುವಂತೆ ಪಿಂಕಿ ಹೇಳಿದ್ದಳು. ಅಲ್ಲಿ ಇತರೆ ಯಾವುದೇ ತಪಾಸಣೆ ಇರಲಿಲ್ಲ, ಯಾವುದೇ ಐಡಿಗಳನ್ನು ತೆಗೆದುಕೊಳ್ಳಲಾಗಿಲ್ಲ, ಆದರೆ ಅವಳು ರಿಜಿಸ್ಟರ್‌ಗೆ ಸಹಿ ಮಾಡಿದ್ದಳು.
ನಂತರ ಸಮವಸ್ತ್ರದಲ್ಲಿದ್ದ ಇಬ್ಬರು ಜೈಲು ಅಧಿಕಾರಿಗಳು ಸಂಜಯ್ ಚಂದ್ರ ಅವರಿಬ್ಬರನ್ನೂ ಮೊದಲ ಮಹಡಿಗೆ ಕರೆದೊಯ್ದರು. ಸಾಕಷ್ಟು ಗ್ಯಾಜೆಟ್‌ಗಳು, ದೊಡ್ಡ ಟಿವಿ, ಪ್ಲೇ ಸ್ಟೇಷನ್, ಎ/ಸಿ, ದೊಡ್ಡ ಆಪಲ್ ಬ್ಲೂಟೂತ್ ಸ್ಪೀಕರ್‌ಗಳು, ಲ್ಯಾಪ್‌ಟಾಪ್‌ಗಳು, ಸೋಫಾ, ರಿಕ್ಲೈನರ್, ಕೂಲರ್, ಫ್ರಿಡ್ಜ್, ಫೋನ್‌ಗಳು, ರೋಲೆಕ್ಸ್ ವಾಚ್‌ಗಳು, ಅನೇಕ ದುಬಾರಿ ಗುಚ್ಚಿ, ಎಲ್‌ವಿ, ಹರ್ಮ್ಸ್ ಬ್ಯಾಗ್‌ಗಳು ಅಲ್ಲಿದ್ದವು,' ಎಂದು ಇಡಿ ಆರೋಪಪಟ್ಟಿಯಲ್ಲಿ ಹೇಳಿದೆ.

ತಾನು ಜಯಲಲಿತಾ ಸಂಬಂಧಿ ಎಂದು ಪರಿಚಯಿಸಿಕೊಂಡಿದ್ದ ಸುಕೇಶ್
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಂಬಂಧಿ ಎಂದು ಪರಿಚಯಿಸಿಕೊಂಡಿದ್ದ ಸುಕೇಶ್, ಚುನಾವಣಾ ಹಗರಣವೊಂದರಲ್ಲಿ ತಾವು ಜೈಲು ಸೇರಿರುವುದಾಗಿ ಹೇಳಿಕೊಂಡಿದ್ದನು. ನಾಲ್ಕೈದು ದಿನಗಳಲ್ಲೇ ಜೈಲಿನಿಂದ ಹೊರ ಬರುವುದಾಗಿಯೂ ತಿಳಿಸಿದ್ದನು. "ಅವಳು ಇನ್ನೋವಾ ಕಾರಿನಲ್ಲಿ ಜೈಲಿನ ಆವರಣದ ಹೊರಗೆ ಬಂದು ಬಿಎಂಡಬ್ಲ್ಯು ಕಾರಿನಲ್ಲಿ ಕುಳಿತು 5 ನಿಮಿಷಗಳ ಕಾಲ ಚಾಲನೆ ಮಾಡಿದಳು. ನಂತರ ರಸ್ತೆಯಲ್ಲಿ ನಿಂತಿದ್ದ ಪಿಂಕಿ ಕೂಡ ಕಾರು ಏರಿದಳು. ನಂತರ ಅವರು ವಿಮಾನ ನಿಲ್ದಾಣಕ್ಕೆ ತೆರಳಿದರು. ಅಲ್ಲಿ ಪಿಂಕಿ ಇರಾನಿ ತನ್ನ ನಿಜವಾದ ಹೆಸರು ಅಫ್ರೀನ್ ಖಾನ್ ಎಂದು ಹೇಳಿದ್ದು, ಚಾಹತ್‌ಗೆ 2 ಲಕ್ಷ ರೂಪಾಯಿ ನಗದು ಮತ್ತು ನೀಲಿ ಬಣ್ಣದ ವರ್ಸೇಸ್ ಗಡಿಯಾರವನ್ನು ಕೊಟ್ಟಿದ್ದಳು.

ತಿಹಾರ್ ಜೈಲಿನಲ್ಲೇ ಸೋಫಿಯಾ ಸಿಂಗ್-ಸುಕೇಶ್ ಭೇಟಿ
ಸಿನಿಮಾವೊಂದರ ಕೆಲಸಕ್ಕೆ ಸಂಬಂಧಿಸಿದಂತೆ ಸುಕೇಶ್ ಚಂದ್ರಶೇಖರ್ ಭೇಟಿ ಮಾಡುವಂತೆ ಪಿಂಕಿ ನಟಿ ಸೋಫಿಯಾ ಸಿಂಗ್ ಅನ್ನು ಸಂಪರ್ಕಿಸಿದ್ದಳು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಎರಡು ಸಂದರ್ಭಗಳಲ್ಲಿ, ಸೋಫಿಯಾ ಸಿಂಗ್ ತಿಹಾರ್ ಜೈಲಿನಲ್ಲಿ ಸುಕೇಶ್ ಚಂದ್ರಶೇಖರ್ ಅನ್ನು ಭೇಟಿ ಆಗಿದ್ದರು. ಪಿಂಕಿ ಇರಾನಿ ಸೋಫಿಯಾಗೆ ಶೇಖರ್ ರೆಡ್ಡಿ ಎಂಬ ದೊಡ್ಡ ಅಧಿಕಾರಿಯನ್ನು ಪರಿಚಯಿಸಲು ಬಯಸುವುದಾಗಿ ಹೇಳಿದ್ದರು. ಅವರು ಚಲನಚಿತ್ರವನ್ನು ನಿರ್ಮಿಸಲು ಬಯಸಿದ್ದರು. ಶೇಖರ್ ದೊಡ್ಡ ಬ್ಯಾನರ್ ಸೌತ್ ಫಿಲ್ಮ್‌ಗೆ ಸಹಿ ಹಾಕಲು ಬಯಸುತ್ತಿದ್ದಾರೆ ಎಂದು ಸೋಫಿಯಾಗೆ ತಿಳಿಸಿದ್ದಳು.
"ಮೇ, 2018 ರಲ್ಲಿ ನಡೆದ ಮೊದಲ ಸಭೆ ಸಮಯದಲ್ಲಿ ಸುಕೇಶ್ ಚಂದ್ರಶೇಖರ್ ಬ್ಯಾಂಕ್ ಖಾತೆಗೆ 2 ಲಕ್ಷ ರೂಪಾಯಿಗಳ ಹಣವನ್ನು ಠೇವಣಿ ಮಾಡಿದರು. ಅದಾಗಿ 15 ದಿನಗಳ ನಂತರ ಎರಡನೇ ಬಾರಿಗೆ ಒಬ್ಬಳೇ ಹೋಗಿ ಸೋಫಿಯಾ ಸಿಂಗ್, ಸುಕೇಶ್ ಅನ್ನು ಭೇಟಿ ಮಾಡಿದಳು. ಅಲ್ಲಿ ಆಕೆಗೆ ಸುಕೇಶ್ ಚಂದ್ರಶೇಖರ್ ಒಂದು ಎಲ್ವಿ ಬ್ಯಾಗ್ ಜೊತೆ ಆಕೆ ಬ್ಯಾಂಕ್ ಖಾತೆಗೆ 1.5 ಲಕ್ಷ ರೂಪಾಯಿ ಜಮಾ ಮಾಡಲಾಗಿತ್ತು.

ಸುಕೇಶ್-ಸೋಫಿಯಾ ಸಿಂಗ್ ಬಗ್ಗೆ ಇಡಿ ಚಾರ್ಜ್ ಶೀಟ್
"ಮೊದಲು ಸೋಫಿಯಾ ಸಿಂಗ್ ದೆಹಲಿಗೆ ಹೋದಳು. ನಾಲ್ಕು ದಿನಗಳ ನಂತರ ಸೋಫಿಯಾ ಸಿಂಗ್ ಪಿಂಕಿಯನ್ನು ತಿಹಾರ್ ಜೈಲಿನ ಹೊರಗೆ ಭೇಟಿಯಾದಳು. ಅಲ್ಲಿ ಅವಳು ಇನ್ನೋವಾ ಕಾರಿನಲ್ಲಿ ಕಾಯುತ್ತಿದ್ದಳು. ನಂತರ ಸೋಫಿಯಾ ತಿಹಾರ್ ಜೈಲಿನ ಮುಖ್ಯ ಗೇಟ್‌ಗೆ ಹೋಗಿದ್ದು, ಅಲ್ಲಿ ಈಕೆಯ ಗುರುತನ್ನೂ ಪರಿಶೀಲಿಸಲಾಗಿಲ್ಲ. ಸೋಫಿಯಾ ತನ್ನ ಮೊಬೈಲ್ ಫೋನ್ ತರದಂತೆ ಸೂಚಿಸಲಾಗಿತ್ತು. ನಂತರ ಅವರು ಮಹಡಿಯ ಮೇಲಿದ್ದ ಸುಕೇಶ್ ಕೋಣೆಗೆ ಹೋದರು. ಆ ಕೋಣೆಯಲ್ಲಿ ದೊಡ್ಡ ಪರದೆಯ ಟಿವಿ, ಸೋಫಾ, ಡೈಸನ್ ಫ್ಯಾನ್, ಸಣ್ಣ ರೆಫ್ರಿಜರೇಟರ್ ಮತ್ತು ಸಣ್ಣ ಫುಡ್ ಬಾರ್‌ನಂತಹ ಅದ್ದೂರಿ ವಸ್ತುಗಳು ತುಂಬಿದ್ದವು. ಕೊಠಡಿಯು ಸಂಪೂರ್ಣ ಸುವಾಸನೆಯಿಂದ ಕೂಡಿತ್ತು. ಒಮ್ಮೆ ಅವಳು ಕೋಣೆಗೆ ಪ್ರವೇಶಿಸಿದಾಗ, ಇಬ್ಬರು ಪೊಲೀಸ್ ಸಿಬ್ಬಂದಿ ಹೊರಗೆ ಭದ್ರತೆಯಾಗಿ ನಿಂತರು," ಎಂದು ಆರೋಪಪಟ್ಟಿ ಸೇರಿಸಲಾಗಿದೆ.
ಸುಕೇಶ್ ಅವಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ಭರವಸೆ ನೀಡಿದನು. ತನ್ನ ಮೊಬೈಲ್ ಸಂಖ್ಯೆಯನ್ನು ನಟಿ ಹಂಚಿಕೊಳ್ಳುತ್ತಿದ್ದಂತೆ ಮತ್ತೊಂದು ಬಾರಿ, ಏಕಾಂಗಿ ಆಗಿ ತನ್ನನ್ನು ಭೇಟಿ ಮಾಡುವಂತೆ ಸುಕೇಶ್ ಹೇಳಿದ್ದನು. ಅದೇ ದಿನ ಪಿಜ್ಜಾ ಮತ್ತು ತಂಪು ಪಾನೀಯಗಳನ್ನು ಆರ್ಡರ್ ಮಾಡಿದ್ದ ಸುಕೇಶ್, ಸೋಫಿಯಾಗೆ ಒಂದು ಲಕ್ಷ ರೂಪಾಯಿ ಕಾಸು ಕೊಟ್ಟು ಕಳುಹಿಸಿದ್ದನು. ಇದಾಗಿ 15 ದಿನಗಳಲ್ಲಿ ಮತ್ತೊಮ್ಮೆ ಸುಕೇಶ್ ಅನ್ನು ಭೇಟಿ ಮಾಡಿದ್ದ ಸೋಫಿಯಾ ಆತನೊಂದಿಗೆ 45 ನಿಮಿಷಗಳ ಕಾಲ ಸಮಯ ಕಳೆದಿದ್ದಳು. ಅಲ್ಲಿ ಆಕೆಗೆ ಎಲ್ವಿ ಬ್ಯಾಗ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದ ಸುಕೇಶ್, 2018ರ ಮೇ 16ರಂದು 50 ಸಾವಿರ ರೂಪಾಯಿ ಹಣವನ್ನು ನೀಡುವುದರ ಜೊತೆಗೆ ಆಕೆಯ ಬ್ಯಾಂಕ್ ಖಾತೆಗೆ 1 ಲಕ್ಷ ರೂಪಾಯಿ ಜಮೆ ಮಾಡಿದ್ದನು," ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ತಿಹಾರ್ ಜೈಲಿನಲ್ಲಿ ಭೇಟಿಗೆ ಒಪ್ಪಲಿಲ್ಲ ಅರುಷಾ ಪಟೇಲ್!
ಮತ್ತೊಬ್ಬ ನಟಿ ಅರುಷಾ ಪಾಟೀಲ್ ಅವರು ಸುಕೇಶ್ ಚಂದ್ರಶೇಖರ್ ಅವರನ್ನು ಎಂದಿಗೂ ಭೇಟಿ ಮಾಡಿರಲಿಲ್ಲ. ವಾಟ್ಸಾಪ್ ಮೂಲಕ ಮಾತ್ರ ಇಬ್ಬರು ಮಾತನಾಡಿಕೊಂಡಿದ್ದರು. ಇದಕ್ಕಾಗಿ ಆಕೆಗೆ 5.20 ಲಕ್ಷ ರೂಪಾಯಿಗಳನ್ನು ಸುಕೇಶ್ ನೀಡಿದ್ದನು. ಇದರಲ್ಲಿ ಪಿಂಕಿ ಇರಾನಿಗೆ ಒಂದು ಲಕ್ಷ ರೂಪಾಯಿ ಅನ್ನು ವರ್ಗಾಯಿಸಲಾಗಿತ್ತು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಳೆದ ಜನವರಿ 3, 2022 ರಂದು ಇಡಿಗೆ ನೀಡಿದ ಹೇಳಿಕೆಯಲ್ಲಿ, ಸುಕೇಶ್ ಚಂದ್ರಶೇಖರ್ ಅನ್ನು ಶೇಖರ್ ಎಂಬ ಹೆಸರಿನಲ್ಲಿ ಪಿಂಕಿ ಇರಾನಿ ಅಲಿಯಾಸ್ ಏಂಜಲ್ ಪರಿಚಯಿಸಿದ್ದಳು ಎಂದು ಅಧಿಕಾರಿಗಳಿಗೆ ತಿಳಿಸಿದ್ದರು.
"ನ್ಯೂಯಾರ್ಕ್‌ನಿಂದ ಹಿಂತಿರುಗಿದ ನಂತರ, ಅವಳು ನಯ್ನಾ ಮುಕ್ ಎಂಬ ಸ್ನೇಹಿತನ ಮೂಲಕ ಏಂಜೆಲ್‌ನೊಂದಿಗೆ ಸಂಪರ್ಕಕ್ಕೆ ಬಂದಳು. 2020ರ ಡಿಸೆಂಬರ್‌ನಲ್ಲಿ ಏಂಜೆಲ್ ತನ್ನನ್ನು ಶೇಖರ್‌ಗೆ ಪರಿಚಯಿಸಿದಳು. ಅವಳ ಚಿತ್ರಗಳನ್ನು ನೋಡಿದ ನಂತರ ಅವನು ಅರುಷಾ ಪಟೇಲ್ ಅನ್ನು ಭೇಟಿಯಾಗಲು ಬಯಸಿದ್ದಾಗಿ ಹೇಳಿದ್ದಳು. ಶೇಖರ್ ಕೂಡಾ ವಾಟ್ಸಾಪ್ ನಂಬರ್‌ನಿಂದ ಆಕೆಗೆ ಕೆಲವು ಬಾರಿ ಕರೆ ಮಾಡಿದ್ದನು. ಸುಮಾರು 20-25 ದಿನಗಳ ಕಾಲ ದೂರವಾಣಿಯಲ್ಲಿ ಮಾತನಾಡಿದರು.
-
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
ಶೂಟಿಂಗ್ ವೇಳೆ ನನ್ನ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ನಟಿ ಮೊನಾಲಿಸಾ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications