ಆಹಾ ನನ್ನ ಮದ್ವೆಯಂತೆ, ಓಹೋ ನನ್ನ ಮದ್ವೆಯಂತೆ, ವರನ್ಯಾರು ಇಲ್ಲಂತೆ ಟಾಂ ಟಾಂ ಟಾಂ
ವಡೋದರಾ ಜೂನ್ 02: ಕೆಲವೊಮ್ಮೆ ಕೆಲವರು ವಿಭಿನ್ನ ಕೆಲಸಗಳನ್ನು ಮಾಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ಸುದ್ದಿಯ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇಂತಹದೊಂದು ಪ್ರಕರಣ ಗುಜರಾತ್‌ನ ವಡೋದರಾದಿಂದ ಬೆಳಕಿಗೆ ಬಂದಿದ್ದು, ಕೇಳುಗರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಹೌದು... ಜೂನ್ 11ರಂದು ಮದುವೆಯೊಂದು ನಡೆಯಲಿದ್ದು ಈ ಮದುವೆಯಲ್ಲಿ ವರನಿಲ್ಲ. ಇದನ್ನು ಕೇಳಿದ ಜನ ಬೆರಗಾಗಿದ್ದಾರೆ. ವರನಿಲ್ಲದೆ ನಡೆಯುವುದು ಇದೆಂಥ ಮದುವೆ ಎಂದು ಅಘಾತಗೊಂಡಿದ್ದಾರೆ.
ವಧು ವೇಷಧಾರಿಯಾಗಿ ಮಂಟಪಕ್ಕೆ ಬರಲಿದ್ದಾರೆ. ಆದರೆ ಅವಳೊಂದಿಗೆ ಸಪ್ತಪದಿ ತುಳಿಯಲು ವರ ಇರುವುದಿಲ್ಲ. ವರ ಇಲ್ಲದಿದ್ದಾಗ ಅವಳು ಯಾರನ್ನು ಮದುವೆಯಾಗುತ್ತಾಳೆ ಎಂದು ಯೋಚಿಸಿದರೆ ನಿಮಗೆ ಆಶ್ಚರ್ಯವಾಗುತ್ತದೆ? ವಾಸ್ತವವಾಗಿ, ಹುಡುಗಿ ತನ್ನ ಸ್ವಂತ ಪ್ರೀತಿಗೆ ವ್ಯಸನಿಯಾಗಿದ್ದಾಳೆ. ಆದರೆ ಬೇರೆಯವರೊಂದಿಗೆ ಅಲ್ಲ, ತನಗೇ ತಾನೇ ಮದುವೆಯಾಗಲು ನಿರ್ಧರಿಸಿದ್ದಾಳೆ. ಅಷ್ಟಕ್ಕೂ ಇದನ್ನು ಸೋಲೋಗಾಮಿ ವಿವಾಹ ಎಂದು ಕರೆಯುತ್ತಾರೆ. ಅಂದರೆ ಸ್ವಯಂ ವಿವಾಹ ಅಥವಾ ವರನಿಲ್ಲದೆ ಒಂಟಿಯಾಗಿ ತಮಗೆ ತಾವೇ ಮದುವೆ ಮಾಡಿಕೊಳ್ಳುವುದು ಎಂದರ್ಥ.

24 ವರ್ಷದ ವಧು ಕ್ಷಮಾ ಬಿಂದು
24 ವರ್ಷದ ಕ್ಷಮಾ ಬಿಂದು ಭಾರತೀಯ ವಧುವಿನಂತೆಯೇ ತನ್ನ ಮದುವೆಯ ತಯಾರಿಯಲ್ಲಿ ನಿರತಳಾಗಿದ್ದಾಳೆ. ಕ್ಷಮಾ ಲೆಹೆಂಗಾ, ಆಭರಣ ಖರೀದಿಸಿ ಮದುವೆಗೆ ಮೇಕಪ್ ಮಾಡಿಕೊಳ್ಳಲು ಪಾರ್ಲರ್ ಕೂಡ ಬುಕ್ ಮಾಡಿದ್ದಾರೆ. ಜೂನ್ 11 ರಂದು ವಧುವಾಗಿ ದೇವಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧವಾಗುತ್ತಿದ್ದಾರೆ. ಕ್ಷಮಾ ಬಿಂದು ಇದಕ್ಕಾಗಿ ಸಂಪೂರ್ಣ ತಯಾರಿ ನಡೆಸಿದ್ದಾರೆ. ಜೊತೆಗೆ ಮದುವೆಗೆ ಕ್ಷಮಾ ಗೋತ್ರಿಯ ದೇವಾಲಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮದುವೆ ಮಾಡಿಕೊಳ್ಳಲು ಐದು ವ್ರತಗಳನ್ನು ಮಾಡಲಿದ್ದಾರೆ.

ಮೆರವಣಿಗೆ ಮಾಡಿಸಿಕೊಳ್ಳದ ವಧು
ಕ್ಷಮಾ ಬಿಂದು ತನ್ನನ್ನು ತಾನೇ ಮದುವೆಯಾಗುತ್ತಿರುವುದನ್ನು ಕೇಳಲು ಸ್ವಲ್ಪ ನಂಬಲಾಗದಂತಿರಬಹುದು. ಆದರೆ ಇದು ನಿಜ. ಕ್ಷಮಾ ಬಿಂದು ತನ್ನನ್ನು ತಾನು ಮದುವೆಯಾದ ಮೊದಲ ಹುಡುಗಿ ಎಂದಲ್ಲ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಪೆಟ್ರೀಷಿಯಾ ಕ್ರಿಸ್ಟಿನ್ ಎಂಬ ಹುಡುಗಿ ತನ್ನನ್ನು ತಾನೇ ಮದುವೆಯಾಗಿದ್ದಳು. ಬ್ರೆಜಿಲಿಯನ್ ಮಾಡೆಲ್ ಕ್ರಿಸ್ ಗಲೆರಾ ಸೆಪ್ಟೆಂಬರ್ 2021 ರಲ್ಲಿ ತನ್ನನ್ನು ತಾನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದರು. ಈಗ ಬರೋಡದ ಕ್ಷಮಾ ಬಿಂದು ಕೂಡ ತನ್ನನ್ನು ತಾನೇ ಮದುವೆಯಾಗಲು ಹೊರಟಿದ್ದಾಳೆ.

ಹನಿಮೂನ್‌ಗಾಗಿ ಗೋವಾ ಆಯ್ಕೆ
ವರದಿಗಳ ಪ್ರಕಾರ, ಕ್ಷಮಾ ಬಿಂದುವಿನ ಮದುವೆಯ ಸಾಂಪ್ರದಾಯಿಕವಾಗಿ ನಡೆಯಲಿದೆ. ಸಾಮಾನ್ಯ ಮಧುವೆಯಲ್ಲಿ ವಧು ಅಲಂಕಾರಗೊಳ್ಳುವಂತೆ ಈ ಮದುವೆಯಲ್ಲಿ ಕ್ಷಮಾ ಬಿಂದು ಅಲಂಕಾರಗೊಳ್ಳಲಿದ್ದಾರೆ. ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಈ ಮದುವೆ ನಡೆಯಲಿ ಸಿದ್ದತೆಗಳು ನಡೆದಿವೆ. ಆದರೆ ಈ ಮದುವೆಯಲ್ಲಿ ವರ ಮಾತ್ರ ಇರುವುದಿಲ್ಲ. ದೊಡ್ಡ ಮೆರವಣಿಗೆ ಇರುವುದಿಲ್ಲ. ಇದು ಬಹುಶಃ ಗುಜರಾತಿನಲ್ಲಿ ಮಾತ್ರವಲ್ಲ, ಭಾರತದಲ್ಲಿ ವರನಿಲ್ಲದ ಮೊದಲ ಏಕೈಕ ಮದುವೆವಾಗಿದೆ. ಅಷ್ಟೇ ಅಲ್ಲ, ಮದುವೆಯ ನಂತರ ಕ್ಷಮಾ ಹನಿಮೂನ್‌ಗೂ ಹೋಗುತ್ತಾಳೆ. ಇದಕ್ಕಾಗಿ ಎರಡು ವಾರಗಳ ಕಾಲ ತಂಗಲು ಕ್ಷಮಾ ಬಿಂದು ಗೋವಾವನ್ನು ಆಯ್ಕೆ ಮಾಡಿಕೊಂಡಿದ್ದಾಳೆ.

ವಧುವಾಗಲು ಬಯಸಿದ್ದ ಕ್ಷಮಾ
ಕ್ಷಮಾ ಬಿಂದು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ವಧುವಾಗಲು ಬಯಸಿದ್ದಳು. ಹಾಗಾಗಿ ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿದ್ದಾರೆ. ಇದಕ್ಕೂ ಮೊದಲು ಕ್ಷಮಾ ದೇಶದಲ್ಲಿ ಯಾರಾದರೂ ಮಹಿಳೆಯರು ತಮ್ಮನ್ನು ತಾವೇ ಸ್ವಯಂ ವಿವಾಹವಾಗಿದ್ದಾರೆಯೇ ಎಂದು ಕಂಡುಹಿಡಿಯಲು ಕೆಲವು ಆನ್‌ಲೈನ್ ಸಂಶೋಧನೆಗಳನ್ನು ಮಾಡಿದರು. ಆದರೆ ಯಾವುದನ್ನೂ ಕಂಡುಹಿಡಿಯಲಾಗಲಿಲ್ಲ. ಇದರಿಂದಾಗಿ ಕ್ಷಮಾ 'ನನ್ನ ದೇಶದಲ್ಲಿ ಸ್ವಯಂ ವಿವಾಹವಾದ ಮೊದಲ ಹುಡುಗಿ ನಾನೇ' ಎಂದಿದ್ದಾರೆ.

ಮದುವೆಗೆ ಪೋಷಕರ ಆಶೀರ್ವಾದ
ಕ್ಷಮಾ ಬಿಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. 'ಸ್ವಯಂ ವಿವಾಹ ಬೇಷರತ್ತಾದ ಪ್ರೀತಿಯನ್ನು ಹೊಂದಲು ಬದ್ಧವಾಗಿದೆ. ಇದು ಸ್ವಯಂ ಸ್ವೀಕಾರ ಕ್ರಿಯೆಯೂ ಆಗಿದೆ. ಜನರು ಪ್ರೀತಿಸುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ ಮತ್ತು ಅದಕ್ಕಾಗಿಯೇ ನಾನು ನನ್ನೊಂದಿಗೆ ಈ ಮದುವೆಯನ್ನು ಮಾಡಿಕೊಳ್ಳುತ್ತಿದ್ದೇನೆ' ಎಂದು ಕ್ಷಮಾ ಹೇಳಿದ್ದಾರೆ.
ಈ ವಿಷಯವನ್ನು ಕ್ಷಮಾ ತನ್ನ ಪೋಷಕರಿಗೆ ಹೇಳಿದಾಗ, ಅವನು ಮೊದಲು ತುಂಬಾ ಆಶ್ಚರ್ಯಪಟ್ಟರು. ಆದರೆ ನಂತರ ಅವರು ಒಪ್ಪಿಕೊಂಡರು. ಆಕೆಯ ಪೋಷಕರು ಮುಕ್ತ ಮನಸ್ಸಿನವರು ಮತ್ತು ಅವರ ಮದುವೆಗೆ ತಮ್ಮ ಆಶೀರ್ವಾದವನ್ನು ನೀಡಿದ್ದಾರೆ ಎಂದು ಕ್ಷಮಾ ಹೇಳಿದರು. ಕೆಲವರು ಸ್ವಯಂ ವಿವಾಹವನ್ನು ಅಪ್ರಸ್ತುತವೆಂದು ಪರಿಗಣಿಸಬಹುದು. 'ಆದರೆ ನಾನು ನಿಜವಾಗಿಯೂ ಬಿಂಬಿಸಲು ಪ್ರಯತ್ನಿಸುತ್ತಿರುವುದು ಮಹಿಳೆಯರ ಸ್ವಾತಂತ್ರ್ಯ' ಎಂದು ಕ್ಷಮಾ ಹೇಳಿದ್ದಾರೆ.












Click it and Unblock the Notifications