ಹಾವು ಹಕ್ಕಿ ಕಾಳಗ: ಜಯ ಯಾರಿಗೆ ವಿಡಿಯೋ ನೋಡಿ..

ಹಾವು ಹಕ್ಕಿ ಕಾಳಗದಲ್ಲಿ ಜಯ ಯಾರಿಗೆ ಎಂದು ಕೇಳಿದರೆ ಹಾವಿಂದೆ ಎನ್ನಬಹುದು. ಆದರೆ ವಿಡಿಯೋದಲ್ಲಿ ಇರೋದೇ ಬೇರೆ.

ಹಾವುಗಳು ಸಾಮಾನ್ಯವಾಗಿ ಕಪ್ಪೆಗಳು, ಸಣ್ಣ ಪಕ್ಷಿಗಳು ಮತ್ತು ಪ್ರಾಣಿಗಳನ್ನು ಬೇಟೆಯಾಡುತ್ತವೆ. ಹಾವುಗಳು ಮೊದಲು ತಮ್ಮ ವಿಷದಿಂದ ಭೇಟೆಯನ್ನು ಮೂರ್ಛೆ ತಪ್ಪಿಸುತ್ತವೆ. ನಂತರ ಅದನ್ನು ಜೀವಂತವಾಗಿ ನುಂಗುತ್ತವೆ. ಆದರೆ ಈಗ ಆಘಾತಕಾರಿ ವಿಡಿಯೊ ವೈರಲ್ ಆಗುತ್ತಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಇದರಲ್ಲಿ ಭೇಟೆಯೇ ಹಾವಿಗೆ ತಲೆ ತಗ್ಗುವಂತೆ ಮಾಡಿದೆ.

ವೈರಲ್ ವಿಡಿಯೊವನ್ನು ಫೀಲ್ಡ್ ಗೈಡ್ ಪೀಟರ್ ವ್ಯಾನ್ ವೈಕ್ ರೆಕಾರ್ಡ್ ಮಾಡಿದ್ದಾರೆ. ವಿಡಿಯೊದಲ್ಲಿ ಹಾವು ಬೇಟೆಯನ್ನು ಹುಡುಕುತ್ತಿರುವುದನ್ನು ನೀವು ನೋಡಬಹುದು. ಆಗ ಅದಕ್ಕೆ ಒಂದು ಹಕ್ಕಿ ಕಂಡಿತು. ಹಾವು ಸುಲಭವಾಗಿ ಹಕ್ಕಿ ಮೇಲೆ ಆಕ್ರಮಣ ಮಾಡುತ್ತದೆ. ಆದರೆ ಹಾವನ್ನೇ ಭೇಟೆ ತಲೆ ತಗ್ಗಿಸುವಂತೆ ಮಾಡಿದೆ.

ಹಾವು ಹಕ್ಕಿ ಕಾಳಗ

ಹಾವು ಪಕ್ಷಿಯ ಮೇಲೆ ದಾಳಿ ಮಾಡಲು ಹೋದ ತಕ್ಷಣ, ಹಕ್ಕಿ ಹಾವಿನ ಕಣ್ಣಿಗೆ ಕುಕ್ಕಿದೆ. ತನ್ನ ಕೊಕ್ಕಿನಿಂದ ಹಾವಿನ ಮೇಲೆ ನಿರಂತರ ದಾಳಿ ಮಾಡಿದೆ. ಇದಾದ ನಂತರ ಹಾವು ಕಣ್ಣಿನ ಗಾಯದಿಂದಾಗಿ ನೆಲಕ್ಕಚ್ಚಿದೆ. ಈ ಕಾಳಗದಲ್ಲಿ ಹಕ್ಕಿ ಹಾವನ್ನು ಸಂಪೂರ್ಣ ಸದೆಬಡಿದಿದೆ. ಹಾವಿನ ಮೇಲೆ ಎಷ್ಟೋ ಬಾರಿ ಹಕ್ಕಿ ದಾಳಿ ಮಾಡಿದೆ. ಇದರಿಂದ ಹಾವು ಅರ್ಧ ಸತ್ತು ಹೊಂದಂತೆ ಕಾಣಿಸುತ್ತದೆ.

Snake bird fight: Who won? Video

ಇದನ್ನು ಬೆಳಿಗ್ಗೆ ಪ್ರವಾಸಿಗರ ಗುಂಪು ಕಂಡಿದೆ. ಅವರು ಹೊರಟು 10 ಸೆಕೆಂಡ್ ಕೂಡ ಆಗಿರಲಿಲ್ಲ. ಹಾವು ಪಕ್ಷಿಯನ್ನು ಬೇಟೆಯಾಡುತ್ತಿರುವುದನ್ನು ಕಂಡಿದ್ದಾರೆ. ಆದರೆ ಹತ್ತಿರ ಹೋದಾಗ ಹಾವು ಬಲಿಯಾಗುತ್ತಿರುವುದು ಕಂಡುಬಂದಿದೆ. ಹಕ್ಕಿ ಹಾವಿನ ದೇಹದ ವಿವಿಧ ಭಾಗಗಳಲ್ಲಿ ಚುಚ್ಚಿದೆ.

ಅದು ಯಾವ ಹಕ್ಕಿ?

ಆ ಅಪಾಯಕಾರಿ ಹಕ್ಕಿಯ ಹೆಸರು ಬೂದು ತಲೆಯ ಬುಷ್‌ಶ್ರೈಕ್. ಇದು ಅವಕಾಶ ಸಿಕ್ಕರೆ ಹಾವುಗಳನ್ನೂ ಬಿಡುವುದಿಲ್ಲ. ಸ್ವಲ್ಪ ಸಮಯದ ನಂತರ ಬುಷ್‌ಶ್ರೈಕ್ ಹಾವು ಅರ್ಧ ಸತ್ತ ಸ್ಥಿತಿಯಲ್ಲಿ ಬಿಟ್ಟು ಅಲ್ಲಿಂದ ಹೊರಟು ಹೋಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+