ಶಿವಗಂಗಾ ಲೋಕಸಭಾ ಕ್ಷೇತ್ರದ ಪರಿಚಯ
ಶಿವಗಂಗಾ ಅಥವ ಸಿವಗಂಗೆ ತಮಿಳುನಾಡಿನ ಒಂದು ಲೋಕಸಭಾ ಕ್ಷೇತ್ರ. ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರ ಹುಟ್ಟೂರು ಕಣಾದುಕಥನ್ ಗ್ರಾಮ ಇದೇ ಜಿಲ್ಲೆಯ ವ್ಯಾಪ್ತಿಯಲ್ಲಿದೆ. 6 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಈ ಲೋಕಸಭಾ ಕ್ಷೇತ್ರವನ್ನು ರಚನೆ ಮಾಡಲಾಗಿದೆ.
ಶಿವಗಂಗಾ ಲೋಕಸಭಾ ಕ್ಷೇತ್ರದ ಜನಸಂಖ್ಯೆ 18,67,198 . ಇವರಲ್ಲಿ 75.23ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ, 24.77ರಷ್ಟು ಜನರು ನಗರ ಪ್ರದೇಶದಲ್ಲಿದ್ದಾರೆ. ಶೇ 16.38ರಷ್ಟು ಎಸ್‌ಸಿ, ಶೇ 0.05ರಷ್ಟು ಎಸ್‌ಟಿ ಸಮುದಾಯದವರಿದ್ದಾರೆ.

ರಸ್ತೆ ಮಾರ್ಗದ ಮೂಲಕ ಶಿವಗಂಗಾ ಕ್ಷೇತ್ರ ಸಾರಿಗೆ ಸಂಪರ್ಕವನ್ನು ಹೆಚ್ಚು ಹೊಂದಿದೆ. ರೈಲುಗಳ ಸಂಪರ್ಕವೂ ಕ್ಷೇತ್ರಕ್ಕೆ ಇದೆ. 189 ಕಿ.ಮೀ.ದೂರದಲ್ಲಿರುವ ತೂತುಕಡಿ ಬಂದರು ಕ್ಷೇತ್ರಕ್ಕೆ ಹತ್ತಿರದಲ್ಲಿರುವ ಬಂದರಾಗಿದೆ. ವಿಮಾನ ಸಂಪರ್ಕಕ್ಕಾಗಿ 53 ಕಿ.ಮೀ.ದೂರದ ಮಧುರೈ ವಿಮಾನ ನಿಲ್ದಾಣಕ್ಕೆ ಬರಬೇಕು.
ಕ್ಷೇತ್ರದ ಶೇ 72ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಭತ್ತ ಇಲ್ಲಿನ ಪ್ರಮುಖವಾದ ವಾಣಿಜ್ಯ ಬೆಳೆಯಾಗಿದೆ. ಕಬ್ಬು, ಕಡಲೆಗಳನ್ನು ಬೆಳೆಯಲಾಗುತ್ತದೆ. ಕ್ಷೇತ್ರ ಕೆಂಪುಮಣ್ಣಿನಿಂದ ಕೂಡಿದ್ದು, ತಮಿಳುನಾಡಿನ ಕೃಷಿ ವಿಶ್ವವಿದ್ಯಾಲಯ ಕ್ಷೇತ್ರದಲ್ಲಿ ರಾಜ್ಯದ ಪ್ರಥಮ ಕೆಂಪುಮಣ್ಣಿನ ಸಂಶೋಧನಾ ಘಟಕ ಸ್ಥಾಪನೆ ಮಾಡಲು ಮುಂದಾಗಿದೆ.

ಶಿವಗಂಗಾ ಜಿಲ್ಲೆಯ ಪ್ರಮುಖ ನಗರ ಶಿವಗಂಗಾ. ಇಲ್ಲಿ ಸಿಗುವ ಗ್ರಾಫೈಟ್ ಕಲ್ಲುಗಳು ಬಹಳ ಪ್ರಸಿದ್ಧಿ ಪಡೆದಿದೆ. ಪಡುಕೊಟ್ಟಿ, ರಾಮನಾಥಪುರಂ, ತಿರುಚಿರಾಪಳ್ಳಿ, ಮಧುರೈ ಜಿಲ್ಲೆಗಳು ಅಕ್ಕಪಕ್ಕದಲ್ಲಿವೆ. ರಾಜಕೀಯವಾಗಿ 1971ರ ಬಳಿಕ ಕಾಂಗ್ರೆಸ್ 7ಬಾರಿ, ಎಐಎಡಿಎಂಕೆ 2 ಬಾರಿ ಕ್ಷೇತ್ರದಲ್ಲಿ ಜಯಗಳಿಸಿವೆ.
ಶಿವಗಂಗಾ ಕ್ಷೇತ್ರದ ಒಟ್ಟು ಮತದಾರರು 14,12,373. ಇವರಲ್ಲಿ 7,04,489 ಪುರುಷರು ಮತ್ತು 7,07,884 ಮಹಿಳೆಯರು. 2014ರ ಚುನಾವಣೆಯಲ್ಲಿ ಶೇ 73ರಷ್ಟು ಮತದಾನವಾಗಿತ್ತು. 10,27,036 ಜನರು ಮತಚಲಾಯಿಸಿದ್ದರು. ಇವರಲ್ಲಿ 4,75,004 ಪುರುಷರು ಮತ್ತು 5,52,032 ಮಹಿಳೆಯರು.

ಕ್ಷೇತ್ರದ ಹಾಲಿ ಸಂಸದರು ಎಐಎಡಿಎಂಕೆ ಪಕ್ಷದ ಪಿ.ಆರ್.ಸೆಂಥಿಲ್‌ನಾಥ್. 2014ರ ಚುನಾವಣೆಯಲ್ಲಿ ಅವರು 4,75,993 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಇವರ ಎದುರಾಳಿಯಾಗಿದ್ದ ಡಿಎಂಕೆಯ ಧ್ರುವರಾಜಾ ಶುಭ ಅವರು 2,46,608 ಮತಗಳನ್ನು ಪಡೆದು ಸೋಲು ಕಂಡಿದ್ದರು. ಸೆಂಥಿಲ್‌ನಾಥ್ ಅವರು ಬರೋಬ್ಬರಿ 2,29,385 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಾಜಿ ಕೇಂದ್ರ ಸಚಿವರ ಪಿ.ಚಿದಂಬರಂ ಅವರ ಹುಟ್ಟೂರು ಕಣಾದುಕಥನ್ ಗ್ರಾಮ ಇದೇ ಜಿಲ್ಲೆಯಲ್ಲಿದೆ. ಒಟ್ಟು 7 ಬಾರಿ ಈ ಕ್ಷೇತ್ರದಿಂದ ಪಿ.ಚಿದಂಬರಂ ಅವರು ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 2014ರ ಚುನಾವಣೆಯಲ್ಲಿ ಕ್ಷೇತ್ರವನ್ನು ಎಐಎಡಿಎಂಕೆ ವಶಕ್ಕೆ ಪಡೆದುಕೊಂಡಿದೆ.
ಹಾಲಿ ಸಂಸದ ಪಿ.ಆರ್.ಸೆಂಥಿಲ್‌ನಾಥ್ ಅವರು ಸಂಸತ್‌ನಲ್ಲಿ ಶೇ 69ರಷ್ಟು ಹಾಜರಾತಿ ಹೊಂದಿದ್ದಾರೆ. 46 ಚರ್ಚೆಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. 488 ಪ್ರಶ್ನೆಗಳನ್ನು ಕೇಳಿದ್ದಾರೆ. 24.95 ಕೋಟಿ ರೂ.ಗಳ ಸಂಸದರ ಅನುದಾನದಲ್ಲಿ 20.63 ಕೋಟಿ ರೂ.ಗಳನ್ನು ವಿವಿಧ ಕಾಮಗಾರಿಗಳಿಗೆ ಖರ್ಚು ಮಾಡಿದ್ದಾರೆ. 2.54 ಕೋಟಿ ಅನುದಾನ ಬಾಕಿ ಉಳಿದಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications