ಪಾಟ್ನಾ ಸಾಹೀಬ್ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಆಸ್ತಿ ವಿವರ
ಪಾಟ್ನಾ, ಏಪ್ರಿಲ್ 29: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಶತ್ರುಘ್ನ ಸಿನ್ಹಾ ಅವರು ಸೋಮವಾರದಂದು ಪಟ್ನಾ ಸಾಹೀಬ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಅಭ್ಯರ್ಥಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದ ಸಿನ್ಹಾ ಅವರನ್ನು ಈ ಬಾರಿ ಬಿಜೆಪಿ ಮೂಲೆಗೆ ತಳ್ಳಿ ಪಾಟ್ನಾ ಸಾಹಿಬ್ ನಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡಿತ್ತು. ನಾನು ಈ ಪಾರ್ಟಿಯಲ್ಲಿ ಭಾರತ ರತ್ನ ನಾನಾಜಿ ದೇಶಮುಖ್, ದಿವಂಗತ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಬೆಳೆದಿದ್ದೇನೆ, ನೋವಿನಿಂದಲೇ ಪಕ್ಷ ತೊರೆಯುತ್ತಿದ್ದೇನೆ ಎಂದು ಬಿಜೆಪಿ ಸಂಸ್ಥಾಪನಾ ದಿನದಂದು ಬಿಜೆಪಿ ಬಿಟ್ಟಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಶತ್ರುಘ್ನ ಸಿನ್ಹಾ, ನಾಮಪತ್ರ ಸಲ್ಲಿಕೆ ದಿನ ಶುಭ ಹಾರೈಸಲು ಇಲ್ಲಿ ನೆರೆದಿರುವ ಜನರಿಗೆ ನಾನು ಆಭಾರಿಯಾಗಿದ್ದೇನೆ. ನಿಮ್ಮ ಪ್ರೀತಿ, ಉತ್ಸಾಹ ನೋಡಿ ನನ್ನ ಹೃದಯ ತುಂಬಿ ಬಂದಿದೆ ಎಂದರು.

ಕಾಂಗ್ರೆಸ್, ಆರ್ ಜೆ ಡಿ ಹಾಗೂ ವಿಕಾಸ್ ಶೀಲ್ ಇನ್ಸಾನ್ ಪಾರ್ಟಿಯ ಕಾರ್ಯಕರ್ತರಿಗೆ ನನ್ನ ಧನ್ಯವಾದಗಳು ಎಂದುಹಾಲಿ ಸಂಸದ ಶತ್ರುಘ್ನ ಸಿನ್ಹಾ ಹೇಳಿದರು. ಬಿಹಾರದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, 40 ಲೋಕಸಭಾ ಸ್ಥಾನಗಳ ಪೈಕಿ 19 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಮೇ 19ರಂದು ಅಂತಿಮ ಹಂತದ ಮತದಾನವಾಗಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ.
ಪಾಟ್ನಾ ಸಾಹೀಬ್ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಆಸ್ತಿ ವಿವರ
ಹೆಸರು: ಶತ್ರುಘ್ನ್ ಪ್ರಸಾದ್ ಸಿನ್ಹ
ತಂದೆ: ಭುವನೇಶ್ವರ್ ಪ್ರಸಾದ್ ಸಿನ್ಹಾ
ವಯಸ್ಸು: 73
* ಪಾಟ್ನಾದ ನಿವಾಸಿ, ಪಾಟ್ನಾ ಸಾಹೀಬ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
* 2018-19ರ ಆರ್ಥಿಕ ವರ್ಷದಲ್ಲಿ 1,34,24,388 ರು ಆದಾಯ ತೋರಿಸಿದ್ದಾರೆ.2014-15ರಲ್ಲಿ 53,94,830 ರು ನಷ್ಟಿತ್ತು.
ನಗದು : 4,58,232 ರು, ಪತ್ನಿ ಬಳಿ 5,95,366 ರು
ಚರಾಸ್ತಿ: 8,60,43,051 ರು, ಪತ್ನಿ : 18,67,25,965 ರು
ಸ್ಥಿರಾಸ್ತಿ : 93,81,20,000ರು
* 10,67,04,403 ಬ್ಯಾಂಕ್ ನಿಂದ ಸಾಲ ಹೊಂದಿದ್ದಾರೆ. ಪತ್ನಿ 17,8,59, 359 ರು
ಸ್ವಯಾರ್ಜಿತ ಆಸ್ತಿ: ಶತ್ರುಘ್ನ: 2,01,65,993 ರು, ಪತ್ನಿ : 2,20,60,765 ರು
ವಸತಿ ಆಸ್ತಿ: 1,03,61,76,600 ರು, ಅವರ ಪತ್ನಿ : 62,65,14,140 ರು
* ಮರ್ಸಿಡೀಸ್ ಬೆಂಜ್ ಸೇರಿದಂತೆ 48,20,484 ರು ಮೌಲ್ಯದ ವಾಹನಗಳಿವೆ.
* 1,03,67,807 ರು ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ.
* ಪೀಠೋಪಕರಣ, ಎಸಿ, ಸಿಸಿಟಿವಿ, ಜೆರಾಕ್ಸ್ ಯಂತ್ರ ಇತ್ಯಾದಿ; 13,93,767 ರು
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications