ರಂಗಭೂಮಿಯನ್ನೇ ಬದುಕಿದ ನಿರ್ಭೀತ ವ್ಯಕ್ತಿತ್ವ-ಮಾಸ್ಟರ್ ಹಿರಣ್ಣಯ್ಯ
Recommended Video
ನಾಟಕ ಅಂದ್ರೆ ಯಾರೋ ಬರೆದಿದ್ದನ್ನು ಉರುಹೊಡೆದು ವೇದಿಕೆ ಮೇಲೆ ನಿಂತು ಉಚ್ಚರಿಸೋದಲ್ಲ, ಆಯಾ ಕಾಲಘಟ್ಟದ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳು ನಟನ ಬಾಯಿಂದ ಸುಲಲಿತವಾಗಿ ಅವೇ ಹೊರಬರಬೇಕು. ನಾಟಕದ ಸಂದರ್ಭಗಳನ್ನು ನೈಜ ಬದುಕಿಗೆ ತಾಳೆ ಮಾಡುವಂಥ ಸನ್ನಿವೇಶವನ್ನು ನಟ ಸೃಷ್ಟಿಸಬೇಕು... ಆ ಮಾತಿಗೆ ನಿದರ್ಶನ ಎಂಬಂತಿದ್ದವರು ಮಾಸ್ಟರ್ ಹಿರಣ್ಣಯ್ಯ.
ರಂಗಭೂಮಿಗೆ ಹೊಸ ದಿಶೆಯನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಟಿವಿ, ಸಿನಿಮಾ, ತರಹೇವಾರಿ ಧಾರಾವಾಹಿಗಳು ಆರಂಭವಾದ ಕಾಲದಲ್ಲೂ ನಾಟಕದ ಬಗೆಗಿನ ಹುಚ್ಚನ್ನು ಉಳಿಸಿದ್ದು ನಿಸ್ಸಂದೇಹವಾಗಿ ಹಿರಣ್ಣಯ್ಯ ಅವರು.
ವ್ಯಂಗ್ಯ ಅವರ ಪ್ರತಿ ಮಾತಿನ ತುದಿಯಲ್ಲೂ ಇಣುಕಿದರೂ, ಆ ವ್ಯಂಗ್ಯದಲ್ಲಿ ಸಾಮಾಜಿಕ, ರಾಜಕೀಯ ಅಧಃಪತನದ ಬಗೆಗಿನ ಗಾಢ ವಿಷಾದ ವ್ಯಕ್ತವಾಗಿದೆ. ಹಾಸ್ಯಮಿಶ್ರಿತ ವ್ಯಂಗ್ಯ, ನಿರ್ಭೀತ ಮಾತುಗಳು ಅವರ ವ್ಯಕ್ತಿತ್ವಕ್ಕೆ ಒಂದು ತೂಕ ನೀಡಿವೆ.
ವಯೋಸಹಜ ಅನಾರೋಗ್ಯದ ಕಾರಣ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಹಿರಣ್ಣಯ್ಯ ಗುರುವಾರ ಬೆಳಿಗ್ಗೆ ನಿಧನರಾದರು. 85 ವರ್ಷ ವಯಸ್ಸಿನ ಅವರ ಅಗಲಿಕೆ ರಂಗಭೂಮಿ ಕ್ಷೇತ್ರದಲ್ಲಿ ನಿರ್ವಾತ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಅವರ ವ್ಯಕ್ತಿಚಿತ್ರದ ಮೆಲುಕು ಇಲ್ಲಿದೆ.

ನ್ಯೂಸ್ ಪೇಪರ್ ಮಾರಿ ವಿದ್ಯಾಭ್ಯಾಸ!
1934 ಫೆಬ್ರವರಿ 15 ರಂದು ಮೈಸೂರಿನಲ್ಲಿ ಜನಿಸಿದ ಹಿರಣ್ಣಯ್ಯ ಅವರ ತಂದೆ ಕೆ ಹಿರಣ್ಣಯ್ಯ, ತಾಯಿ ಶಾರದಮ್ಮ. ತಂದೆಯೂ ನಾಟಕಕಾರ, ಸಿನಿಮಾ ನಟ ಮತ್ತು ಬರಹಗಾರರಾಗಿದ್ದರಿಂದ ನಟನೆಯ ಕಲೆ ರಕ್ತದಲ್ಲೇ ಸಿದ್ಧಿಸಿತ್ತು. ಬನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶಾರದಾ ಚಿಲಾಸ್ ಶಾಲೆಯಲ್ಲಿ ಇಂಟರ್ ಮೀಡಿಯೇಟ್ ಓದಿದ ಮಾಸ್ಟರ್ ಹಿರಣ್ಣಯ್ಯ ಅವರ ಬಾಲ್ಯ ಎಲ್ಲರಂತಿರಲಿಲ್ಲ. ನ್ಯೂಸ್ ಪೇಪರ್ ಮಾರಿ ಬಂದ ಹಣದಲ್ಲಿ ಅವರು ವಿದ್ಯಾಭ್ಯಾಸ ಪೂರೈಸಿದರು. ಅದೇ ಸಂದರ್ಭದಲ್ಲಿ ನಾಟಕದಲ್ಲೂ ತಮ್ಮನ್ನು ತೊಡಗಿಸಿಕೊಂಡರು.

ರಂಗಭೂಮಿ ಪ್ರವೇಶ
ತಂದೆಯವರ ಮರಣಾನಂತರ ಅವರು ಆರಂಭಿಸಿದ್ದ, 'ಕೆ ಹಿರಣ್ಣಯ್ಯ ಮಿತ್ರ ಮಂಡಳಿ'ಯ ಆಡಳಿತವನ್ನು ನೋಡಿಕೊಳ್ಳುವುದಕ್ಕೆ ಮಾಸ್ಟರ್ ಹಿರಣ್ಣಯ್ಯ ಮುಂದಾದರು. ನಂತರ ಇದೇ ರಂಗಭೂಮಿ ಕಂಪನಿಯನ್ನು ಚೆನ್ನಾಗಿ ಬೆಳೆಸಿ, ನಟರಾಗಿ, ನಿರ್ದೇಶಕರಾಗಿ ಪ್ರಸಿದ್ಧಿ ಪಡೆದರು.

30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ಕೇವಲ ನಾಟಕ ಮಾತ್ರವಲ್ಲ, ಬದಲಾದ ಕಾಲಘಟ್ಟದಲ್ಲಿ ಸಿನಿಮಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದರು ಹಿರಣ್ಣಯ್ಯ. ಸುಮಾರು ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಶಾಂತಿ ನಿವಾಸ, ಯಕ್ಷ, ನಿರಂತರ, ಬಾಂಬುಗಳು ಸಾರ್ ಬಾಂಬುಗಳು, ಈ ಸಂಭಾಷಣೆ, ಲಂಚ ಸಾಮ್ರಾಜ್ಯ, ಆಪರೇಶನ್ ಅಂತ, ಗಜ, ಹುಡುಗೀರು ಸಾರ್ ಹುಡುಗೀರು ಅವರುಗಳಲ್ಲಿ ಪ್ರಮುಖ ಚಿತ್ರಗಳು.

ರಂಗಭೂಮಿಯಲ್ಲಿ ಅಚ್ಚಳಿಯದ ಹೆಜ್ಜೆಗುರುತು
ಲಂಚಾವತಾರ, ಡಬಲ್ ತಾಳಿ, ಕನ್ಯಾ ದಹನ, ಸನ್ಯಾಸಿ ಸಂಸಾರ, ಚಮಚಾವತಾರ, ಹಾಸ್ಯದಲ್ಲಿ ಉಲ್ಟಾ ಪಲ್ಟಾ, ಕಪಿಲ್ ಮುಷ್ಠಿ, ನಡುಬೀದಿ ನಾರಾಯಣ, ಭ್ರಷ್ಟಾಚಾರ, ಅನಾಚಾರ ಮುಂತಾದವು ಅವರ ಪ್ರಮುಖ ನಾಟಕಗಳು. ಅವರ ಲಂಚಾವತಾರ ನಾಟಕವಂತೂ ಅಮೆರಿಕ, ಆಸ್ಟ್ರೇಲಿಯಾ, ಸಿಂಗಪುರ, ಇಂಗ್ಲೆಂಡ್ ಸೇರಿದಮತೆ ಹೊರ ದೇಶಗಳಲ್ಲೂ ಪ್ರದರ್ಶನ ಕಂಡಿದ್ದು, ಸುಮಾರು 11,000 ಪ್ರದರ್ಶನಗಳನ್ನು ಕಂಡ ದಾಖಲೆ ಬರೆದಿದೆ.

ಪ್ರಶಸ್ತಿಗಳು
ನರ್ನಾಟಕ ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನಾಟಕ ಅಕಾಡಮಿ ಪ್ರಶಸ್ತಿ, ಆಲ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications