ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೂಪ್‌ ಮಾಡದೆಯೇ ವಾಟ್ಸಾಪ್ ಮೂಲಕ 250 ಮಂದಿಗೆ ಮೆಸೇಜ್‌ ಮಾಡಿ: ಹೇಗೆ?

|
Google Oneindia Kannada News

ವಾಟ್ಸಾಪ್‌ ಭಾರತದಲ್ಲಿ ಹೆಚ್ಚಾಗಿ ಬಳಸಲಾಗುತ್ತಿರುವ ಮೆಸೇಜ್‌ ಆಪ್‌ ಆಗಿದೆ. ಇದನ್ನು ಜನರು ವೈಯಕ್ತಿಕ ಕಾರ್ಯಕ್ಕೆ ಮಾತ್ರವಲ್ಲದೇ ವೃತ್ತಿಪರ ಕಾರ್ಯಗಳಿಗೂ ಬಳಸಿಕೊಳ್ಳುತ್ತಾರೆ. ವಿದೇಶಗಳಲ್ಲಿ ಇದ್ದ ಓರ್ವ ವ್ಯಕ್ತಿಯಲ್ಲಿ ಮಾತನಾಡಲು ಕಷ್ಟವಾಗುತ್ತಿದ್ದ ಕಾಲ ಒಂದಿತ್ತು. ಆದರೆ ಈಗ ವಾಟ್ಸಾಪ್‌ ಮೂಲಕ ಅದು ಸುಲಭವಾಗಿದೆ. ವಿದೇಶದಲ್ಲಿರುವ ವ್ಯಕ್ತಿಯೊಂದಿಗೆ ವಾಟ್ಸಾಪ್‌ ಮೂಲಕವೇ ಯಾವ ಸಮಯದಲ್ಲಿ ಆದರೂ ಮೆಸೇಜ್‌ ಮಾಡಬಹುದಾಗಿದೆ.

ವಾಟ್ಸಾಪ್‌ ಕಾಲ ಕಾಲಕ್ಕೆ ತಕ್ಕಂತೆ ಅಪ್‌ಗ್ರೇಡ್‌ ಆಗುತ್ತಾ ಹೋಗಿದ್ದು, ಈಗ ಇಂಟರ್‌ನೆಟ್‌ ಇದ್ದರೆ ವಾಟ್ಸಾಪ್‌ನಲ್ಲೇ ಆಡಿಯೋ ಮೆಸೇಜ್‌, ಫೋಟೋಸ್‌, ಫೈಲ್‌ಗಳು, ಆಡಿಯೋ, ವಿಡಿಯೋ ಕಾಲ್‌ಗಳನ್ನು ಕೂಡಾ ಮಾಡಬಹುದಾಗಿದೆ. ಈಗ ನಾವು ಓರ್ವ ವ್ಯಕ್ತಿ ಎಲ್ಲೇ ಇದ್ದರೂ ವಾಟ್ಸಾಪ್‌ ವಿಡಿಯೋ ಕರೆಯ ಮೂಲಕ ಮಾತನಾಡಲು ಸಾಧ್ಯವಾಗುತ್ತದೆ. ಆದರೆ ಈ ನಡುವೆ ವಾಟ್ಸಾ‌ಪ್‌ನಲ್ಲಿ ಐವರಿಗೆ ಮಾತ್ರ ಮೆಸೇಜ್‌ ಕಳುಹಿಸಲು ಸಾಧ್ಯವಾಗುತ್ತಿದೆ.

ವಾಟ್ಸಪ್ ಮೆಸೇಜ್ ಮೂಲಕ ಹಣ ಕೀಳ್ತಾರೆ ಹ್ಯಾಕರ್‌ಗಳು! ವಾಟ್ಸಪ್ ಮೆಸೇಜ್ ಮೂಲಕ ಹಣ ಕೀಳ್ತಾರೆ ಹ್ಯಾಕರ್‌ಗಳು!

ಇತ್ತೀಚಿನ ಕೆಲವು ತಿಂಗಳುಗಳಿಂದ ವಾಟ್ಸಾಪ್‌ನಲ್ಲಿ ಒಂದು ಬಾರಿಗೆ ಕೇವಲ ಐದು ಮಂದಿಗೆ ಮಾತ್ರ ವಾಟ್ಸಾಪ್‌ ಮೆಸೇಜ್‌, ಫೋಟೋ, ಆಡಿಯೋ, ವಿಡಿಯೋವನ್ನು ಸೆಂಡ್‌ ಮಾಡಲು ಸಾಧ್ಯವಾಗುತ್ತಿದೆ. ನಾವು ಬಹಳಷ್ಟು ಜನರಿಗೆ ಒಂದು ಸಂದೇಶವನ್ನು ಕಳುಹಿಸಬೇಕಾದರೆ ಅದಕ್ಕಾಗಿ ವಾಟ್ಸಾಪ್‌ ಗ್ರೂಪ್‌ ಅನ್ನು ಮಾಡಿಕೊಳ್ಳಬೇಕಿದೆ. ಇದೂ ಮಾಡದ ಹೊರತು ನಾವು ವಾಟ್ಸಾಪ್‌ ಮೂಲಕ ಯಾವುದೇ ಸಂದೇಶವನ್ನು ಕಳುಹಿಸಬೇಕಾದರೆ ಒಂದು ಬಾರಿಗೆ ಐವರಿಗೆ ಕಳುಹಿಸುತ್ತಾ, ಮುಂದುವರಿಯಬೇಕಾಗುತ್ತದೆ. ಆದರೆ ನೀವು ವಾಟ್ಸಾಪ್‌ ಗ್ರೂಪ್‌ ಮಾಡದೆಯೇ 256 ಮಂದಿಗೆ ಒಂದೇ ಬಾರಿಗೆ ಮೆಸೇಜ್‌, ಆಡಿಯೋ, ವಿಡಿಯೋ ಎಲ್ಲವನ್ನು ಕಳುಹಿಸಲು ಸಾಧ್ಯವಾಗುತ್ತದೆ. ಹೇಗೆ ಎಂದು ತಿಳಿಯಲು ಮುಂದೆ ಓದಿ...

Send a WhatsApp message to 250 users at once without making a group

ವಾಟ್ಸಾಪ್‌ನಲ್ಲಿ ಒಂದೇ ಬಾರಿಗೆ 256 ಮಂದಿಗೆ ಮೆಸೇಜ್‌

ಹೌದು, ವಾಟ್ಸಾಪ್‌ನಲ್ಲಿ ಒಂದೇ ಬಾರಿಗೆ ನೀವು 256 ಮಂದಿಗೆ ಮೆಸೇಜ್‌, ಫೋಟೋ ಆಡಿಯೋವನ್ನು ಕಳುಹಿಸಲು ಸಾಧ್ಯವಾಗುತ್ತದೆ. ವಾಟ್ಸಾಪ್‌ನಲ್ಲಿರುವ ಈ ಫೀಚರ್‌ ಅನ್ನು "ಬ್ರಾಡ್‌ಕಾಸ್ಟ್‌ ಲಿಸ್ಟ್" ಎಂದು ಕರೆಯುತ್ತಾರೆ. ನೀವು ಒಂದು ಬಾರಿ "ಬ್ರಾಡ್‌ಕಾಸ್ಟ್‌ ಲಿಸ್ಟ್" ಮಾಡಿದರೆ ಬಳಿಕ ಆ ಲಿಸ್ಟ್‌ನಲ್ಲಿ ಇರುವ ಎಲ್ಲರಿಗೂ ಒಂದೇ ಬಾರಿಗೆ ಸಂದೇಶವನ್ನು ಕಳುಹಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ಇರುವ ಒಂದೇ ಒಂದು ಮುಖ್ಯ ವಿಷಯ ಎಂದರೆ, ನೀವು ಬ್ರಾಡ್‌ಕಾಸ್ಟ್‌ ಮೂಲಕ ಸಂದೇಶ ಕಳುಹಿಸಲು ಬಳಸುವ ವ್ಯಕ್ತಿಯ ಮೊಬೈಲ್‌ ಸಂಖ್ಯೆಯು ನಿಮ್ಮಲ್ಲಿ ಸೇವ್‌ ಆಗಿರಬೇಕು. ಅಂದರೆ ನಿಮ್ಮ ಕಾಂಟಾಕ್ಟ್‌ ಲಿಸ್ಟ್‌ನಲ್ಲಿ ಇರಬೇಕು ಎಂಬುವುದು ಆಗಿದೆ. ಹಾಗಾದರೆ ನಾವು ಹೇಗೆ ಬ್ರಾಡ್‌ಕಾಸ್ಟ್‌ ಲಿಸ್ಟ್‌ ಮಾಡುವುದು ಎಂದು ತಿಳಿಯೋಣ ಮುಂದೆ ಓದಿ...

ಜಾಹೀರಾತು ನೋಡಿ ಹಣ ಗಳಿಸಿ ಎಂಬ ಹೊಸ ಸೈಬರ್ ಸ್ಕ್ಯಾಮ್ ಜಾಲ: ಹುಷಾರ್!ಜಾಹೀರಾತು ನೋಡಿ ಹಣ ಗಳಿಸಿ ಎಂಬ ಹೊಸ ಸೈಬರ್ ಸ್ಕ್ಯಾಮ್ ಜಾಲ: ಹುಷಾರ್!

ಬ್ರಾಡ್‌ಕಾಸ್ಟ್‌ ಲಿಸ್ಟ್ ಮಾಡುವುದು ಹೇಗೆ?

* ಮೊದಲು ವಾಟ್ಸಾಪ್‌ ಆಪ್‌ ತೆರೆದು ಅದರಲ್ಲಿ ಬಲ ಭಾಗದಲ್ಲಿರುವ ಮೂರು ಡಾಟ್‌ ಅಥವಾ ಚುಕ್ಕಿಗಳ ಮೇಲೆ ಕ್ಲಿಕ್‌ ಮಾಡಿ
* ಅಲ್ಲಿ ಬರುವ ಆಯ್ಕೆಗಳ ಪೈಕಿ ಎರಡನೇ ಆಯ್ಕೆಯಾದ New Broadcast ಅನ್ನು ಕ್ಲಿಕ್‌ ಮಾಡಿ
* ಈ ವೇಳೆ ನೀವು ಯಾರನ್ನೆಲ್ಲಾ ಈ ಬ್ರಾಡ್‌ಕಾಸ್ಟ್‌ ಲಿಸ್ಟ್‌ನಲ್ಲಿ ಸೇರಿಸಲು ಬಯಸುತ್ತೀರಿ ಎಂಬುವುದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗಿದೆ
* ನೀವು 256 ರವರೆಗೆ ಜನರ ಕಾಂಟಾಕ್ಟ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು
* ಅದಕ್ಕಿಂತ ಕಡಿಮೆ ಜನರನ್ನು ಕೂಡಾ ಆಯ್ಕೆ ಮಾಡಿಕೊಳ್ಳಬಹುದು
* ನೀವು ನಿಮಗೆ ಬೇಕಾದ ಕಾಂಟಾಕ್ಟ್‌ ಅನ್ನು ಆಯ್ಕೆ ಮಾಡಿದ ಬಳಿಕ ಟಿಕ್‌ ಮಾರ್ಕ್ ಮೇಲೆ ಅನ್ನು ಆಯ್ಕೆ ಮಾಡಿ ಕ್ಲಿಕ್‌ ಮಾಡಿ
* ಈ ವೇಳೆ ನಿಮ್ಮ ಬ್ರಾಡ್‌ಕಾಸ್ಟ್‌ ಲಿಸ್ಟ್ ಸಿದ್ಧವಾಗಲಿದೆ, ನೀವು ಒಂದೇ ಬಾರಿಗೆ ಹಲವು ಮಂದಿಗೆ ಸಂದೇಶ ಕಳುಹಿಸಬಹುದು.

ನೀವು ಈ ಬ್ರಾಡ್‌ಕಾಸ್ಟ್‌ ಲಿಸ್ಟ್‌ನಲ್ಲಿ ಮೇಲ್ಭಾಗವನ್ನು ಕ್ಲಿಕ್‌ ಮಾಡಿ ಬಳಿಕ ಲಿಸ್ಟ್‌ಗೆ ಹೆಸರು ಕೂಡಾ ಹಾಕಬಹುದು. ಇದು ನಿಮಗೆ ಮಾತ್ರ ತಿಳಿದಿರುತ್ತದೆ. ಈ ಬ್ರಾಡ್‌ಕಾಸ್ಟ್‌ ಲಿಸ್ಟ್ ಬೇಡವೆಂದಾದರೆ ಈ ಲಿಸ್ಟ್ ಅನ್ನು ಡಿಲೀಟ್‌ ಕೂಡಾ ಮಾಡಬಹುದು.

Recommended Video

ಮೈದಾನದಲ್ಲಿ ಅಂಪೈರ್ ಗೆ ಗೇಲಿ ಮಾಡಿದ ವಿರಾಟ್ | Oneindia Kannada

English summary
Send a WhatsApp message to 250 users at once without making a group - Here’s How Read On.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X