ಪಠಾಣ್ ವಿವಾದ: ಶಾರುಖ್, ದೀಪಿಕಾ ಪ್ರತಿಕೃತಿ ದಹಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು
ನವದೆಹಲಿ, ಡಿಸೆಂಬರ್ 16: ಪಠಾಣ್ ಚಿತ್ರದ ವಿವಾದ ದಿನೇದಿನೇ ಕಾವು ಪಡೆಯುತ್ತಿದೆ. ಹಿಂದೂ ಸಂಘಟನೆಗಳು ಪಠಾಣ್ ಚಿತ್ರವನ್ನು ನಿಷೇಧಿಸುವಂತೆ ಒತ್ತಡ ಹೇರುತ್ತಿವೆ. ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶಾರುಖ್ ಹಾಗೂ ದೀಪಿಕಾ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿವೆ.
ಉತ್ತರ ಪ್ರದೇಶದಲ್ಲಿ 'ಪಠಾಣ್' ಚಿತ್ರ ಪ್ರದರ್ಶನ ಗೊಳ್ಳುವ ಥಿಯೆಟರ್‌ಗಳಿಗೆ ಬೆಂಕಿ ಹಚ್ಚುವುದಾಗಿಯೂ ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಅಯೋದ್ಯೆ ಮಹಾಂತರ ಎಚ್ಚರಿಕೆ ಬೆನ್ನಲ್ಲೇ ಪ್ರತಿಭಟನೆ
ಬೇಷರಮ್ ರಂಗ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಉಡುಪು ಧರಿಸಿದ್ದಾಳೆ ಎನ್ನುವುದೇ ಹಿಂದೂವಾಗಿಗಳ ಖ್ಯಾತೆಗೆ ಕಾರಣವಾಗಿದೆ.
ಕೇಸರಿ ಬಿಕಿನಿಯು ಹಿಂದೂ ಧರ್ಮಕ್ಕೆ ಹಾನಿಯುಂಟು ಮಾಡುತ್ತದೆ ಎಂಬ ಆರೋಪದ ಮೇಲೆ ಹಾಡನ್ನು ನಿಷೇಧಿಸಬೇಕೆಂದು ಒತ್ತಾಯಿಸಲಾಗಿದೆ.
ಈ ಸಂಬಂಧ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಗುರುವಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಮತ್ತೊಂದೆಡೆ, ಅಯೋಧ್ಯೆಯ ಮಹಂತ್ ಹನುಮಾನ್ ಗರ್ಹಿ ರಾಜು ದಾಸ್, ಚಲನಚಿತ್ರವನ್ನು ಬಹಿಷ್ಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

'ಪಠಾಣ್ ಚಿತ್ರವನ್ನು ಪ್ರದರ್ಶನ ಮಾಡುವ ಥಿಯೇಟರ್‌ಗಳಿಗೆ ಬೆಂಕಿ ಹಚ್ಚುವಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ' ಎಂದು ಮಹಂತ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ತಮ್ಮ ದೂರಿನಲ್ಲಿ, ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರಿಂದ ಹಾಡು ಅಸಭ್ಯ ಮತ್ತು ಅಶ್ಲೀಲವಾಗಿದೆ. ಇದು ಹಿಂದೂ ಭಾವನೆಗಳನ್ನು ನೋಯಿಸುತ್ತದೆ ಎಂದು ವಕೀಲರು ಹೇಳಿದ್ದಾರೆ.
ಹಾಡಿನ ಹೆಸರು 'ಬೇಷರಂ ರಂಗ್' (ನಾಚಿಕೆಯಿಲ್ಲದ ಬಣ್ಣ), ಮತ್ತು ಇದು ಕೇಸರಿ ಬಣ್ಣವನ್ನು ಪೂಜಿಸುವವರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ವಕೀಲರು ತಮ್ಮ ದೂರಿನಲ್ಲಿ ಬರೆದಿದ್ದಾರೆ.
'ಕೇಸರಿಯು ತ್ಯಾಗ, ಜ್ಞಾನ, ಪರಿಶುದ್ಧತೆ ಮತ್ತು ಸೇವೆಯ ಸಂಕೇತವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಈ ಹಾಡಿನಲ್ಲಿ ಅಶ್ಲೀಲ ನಡೆಗಳನ್ನು ಪ್ರದರ್ಶಿಸುವ ಮೂಲಕ ಹೆಮ್ಮೆ ಮತ್ತು ಭಕ್ತಿಯ ಬಣ್ಣವನ್ನು ಅವಮಾನಿಸುವ ಕೆಲಸವನ್ನು ಬಾಲಿವುಡ್ ಮಾಡಿದೆ. ಈ ಮೂಲಕ ಕೇಸರಿಯನ್ನು ನಾಚಿಕೆಯಿಲ್ಲದ ಸಂಕೇತವೆಂದು ತೋರಿಸಲಾಗಿದೆ' ಎಂದು ವಕೀಲರು ಬರೆದಿದ್ದಾರೆ.
ಈ ಸಂಬಂಧ ಅಯೋಧ್ಯೆಯ ಮಹಂತ್ ರಾಜು ದಾಸ್ ಅವರು ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಹಾಡು ನೋವುಂಟುಮಾಡುತ್ತದೆ ಮತ್ತು ಶಾರುಖ್ ಖಾನ್ ಹಿಂದೂ ಧರ್ಮವನ್ನು ಹಲವಾರು ಬಾರಿ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

'ಬಾಲಿವುಡ್ ಮತ್ತು ಹಾಲಿವುಡ್ ಯಾವಾಗಲೂ ಸನಾತನ ಧರ್ಮವನ್ನು ಗೇಲಿ ಮಾಡಲು ಪ್ರಯತ್ನಿಸುತ್ತವೆ. ದೀಪಿಕಾ ಪಡುಕೋಣೆ ಅವರು ಕೇಸರಿ ಬಳಸುತ್ತಿರುವ ರೀತಿ ನಮಗೆ ನೋವುಂಟು ಮಾಡುತ್ತದೆ. ಕೇಸರಿ ಬಿಕಿನಿಯನ್ನು ಧರಿಸುವ ಅವಶ್ಯಕತೆ ಏನಿತ್ತು? ಚಲನಚಿತ್ರವನ್ನು ಬಹಿಷ್ಕರಿಸುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ. ಚಿತ್ರ ಪ್ರದರ್ಶನಗೊಳ್ಳುವ ಥಿಯೇಟರ್‌ಗಳನ್ನು ಸುಟ್ಟು ಹಾಕಿ, ಇಲ್ಲದಿದ್ದರೆ ಅವರಿಗೆ ಅರ್ಥವಾಗುವುದಿಲ್ಲ. ಕೆಟ್ಟದ್ದನ್ನು ಎದುರಿಸಲು ನೀವು ದುಷ್ಟರಾಗಬೇಕು' ಎಂದೂ ಹೇಳಿದ್ದಾರೆ.
'ಇದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ ಮತ್ತು ಅದನ್ನು ಸರಿಪಡಿಸಲು ನಾನು ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಹೇಳುತ್ತೇನೆ. ಈ ಹಿಂದೆಯೂ ದೀಪಿಕಾ ಪಡುಕೋಣೆ ಜೆಎನ್‌ಯುನಲ್ಲಿ (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) 'ತುಕ್ಡೆ ತುಕ್ಡೆ ಗ್ಯಾಂಗ್' ಬೆಂಬಲಕ್ಕೆ ಬಂದರು' ಎಂದು ಮಧ್ಯಪ್ರದೇಶ ಸಚಿವ ನರೋತ್ತಮ್ ಮಿಶ್ರಾ ಬುಧವಾರ ಹೇಳಿದ್ದಾರೆ.
ಪಠಾಣ್ ಚಿತ್ರಕ್ಕೆ ಒಂದು ಕಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, 'ಬೇಷರಮ್ ರಂಗ್' ಹಾಡಿಗೆ ಯುಟ್ಯೂಬ್‌ನಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.
ಹಾಡು ಬಿಡುಗಡೆಯಾಗಿ ಎರಡು ದಿನ ಕಳೆದರೂ, ಯುಟ್ಯೂಬ್‌ನಲ್ಲಿ ನಂ. ಒನ್ ಟ್ರೆಂಡಿಂಗ್‌ನಲ್ಲಿದೆ. ಕಳೆದ 48 ಗಂಟೆಗಳಲ್ಲಿ 3 ಕೋಟಿ 60 ಲಕ್ಷಕ್ಕೂ ಹೆಚ್ಚು ಜನ ಬೇಷರಮ್ ರಂಗ್ ಹಾಡನ್ನೂ ವೀಕ್ಷಣೆ ಮಾಡಿದ್ದಾರೆ.
ಚಿತ್ರ ಸಾಹಿತಿ ಕುಮಾರ್ ಸಾಹಿತ್ಯದೊಂದಿಗೆ ವಿಶಾಲ್-ಶೇಖರ್ ಸಂಯೋಜಿಸಿದ ಹಾಟ್ ಹಾಡು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಡುವಿನ ಹಾಟ್ ಕೆಮಿಸ್ಟ್ರಿಯನ್ನು ಎತ್ತಿ ತೋರಿಸಿದೆ.
-
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್












Click it and Unblock the Notifications