Get Updates
Get notified of breaking news, exclusive insights, and must-see stories!

22 ವರ್ಷಗಳ ಹಿಂದೆ ಭಾರತದ ಅಣ್ವಸ್ತ್ರ ಪರೀಕ್ಷೆ ವಿರೋಧಿಸಿದ್ದ ಉಕ್ರೇನ್; ಇಂದು ಅಂಗಲಾಚಿದೆ!

ನವದೆಹಲಿ, ಫೆಬ್ರವರಿ 25: ರಷ್ಯಾ ದೇಶವು ನೆರೆಯ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದ್ದು, ಸದ್ಯದ ವರದಿಯ ಪ್ರಕಾರ ಉಕ್ರೇನ್‌ ರಾಜಧಾನಿ ಕೀವ್‌ನ ದಶದಿಕ್ಕುಗಳಿಗೂ ರಷ್ಯಾದ ಪಡೆಗಳು ಸುತ್ತುವರೆದಿವೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಉಕ್ರೇನಿಯನ್ ಸರ್ಕಾರವು ರಷ್ಯಾದ ಮನವೊಲಿಸಿ, ಈ ಯುದ್ಧದಲ್ಲಿ ಮಧ್ಯ ಪ್ರವೇಶಿಸಲು ಜಗತ್ತಿನ ಎಲ್ಲಾ ಪ್ರಮುಖ ದೇಶಗಳಿಗೆ ಮನವಿ ಮಾಡುತ್ತಿದ್ದರೂ, ಯಾರೊಬ್ಬರೂ ಬಲಿಷ್ಠ ರಷ್ಯಾವನ್ನು ಎದುರು ಹಾಕಿಕೊಳ್ಳಲು ಯತ್ನಿಸುತ್ತಿಲ್ಲ.

ಈ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ ನೇತೃತ್ವದ ಉಕ್ರೇನ್ ಸರ್ಕಾರವು ಭಾರತ ಮತ್ತು ರಷ್ಯಾ ದೇಶಗಳ ನಡುವಿನ ವಿಶೇಷ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು ಭಾರತ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಿದೆ. ಭಾರತದಲ್ಲಿನ ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕುರಿತು ಒತ್ತಾಯಿಸಿದ್ದಾರೆ.

Russia-Ukraine War: Ukraine Once Stood Against Indias Nuclear Tests In 1998

ಸದ್ಯ ಇಡೀ ದೇಶದ ಕಣ್ಣು ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಮೇಲೆ ಬಿದ್ದಿದೆ. ರಷ್ಯಾದ ದಾಳಿಗೆ ತತ್ತರಿಸುತ್ತಿರುವ ಉಕ್ರೇನ್ ಸಹಾಯಕ್ಕಾಗಿ ವಿಶ್ವದ ಎದುರು ಅಂಗಲಾಚುತ್ತಿದೆ. ರಷ್ಯಾದ ದಾಳಿಯಿಂದ ತಪ್ಪಿಸಿ ಜನರ ಪ್ರಾಣ ಉಳಿಸುವಂತೆ ಭಾರತ ಸೇರಿ ಹಲವು ರಾಷ್ಟ್ರಗಳ ಮುಂದೆ ಬೇಡಿಕೊಳ್ಳುತ್ತಿದೆ. ಅಲ್ಲದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಜೊತೆಗೆ ಮಾತನಾಡುವಂತೆ ಭಾರತದ ಮುಂದೆ ಉಕ್ರೇನ್ ಅಂಗಲಾಚುತ್ತಿದೆ. ಆದರೆ ಇಂದು ಭಾರತದ ಸಹಾಯಕ್ಕಾಗಿ ಬೆನ್ನು ಬಿದ್ದಿರುವ ಉಕ್ರೇನ್ ಈ ಹಿಂದೆ ಭಾರತದ ನಿರ್ಧಾರವನ್ನೇ ವಿರೋಧ ಮಾಡಿತ್ತು.
Russia-Ukraine War: Ukraine Once Stood Against Indias Nuclear Tests In 1998

1998ರಲ್ಲಿ ಭಾರತದ ಪರಮಾಣು ಪರೀಕ್ಷೆ
1998ನೇ ಇಸವಿಯ ಮೇ 11ರಂದು ಭಾರತ ರಾಜಸ್ಥಾನದ ಪೋಖ್ರಾನ್‌ನಲ್ಲಿ ಐತಿಹಾಸಿಕ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸಿತ್ತು. ಈ ಮೂಲಕ ಭಾರತ ಅಮೆರಿಕ ಮುಂತಾದ ರಾಷ್ಟ್ರಗಳ ವಿರೋಧದ ನಡುವೆಯೂ ತನ್ನ ಶಕ್ತಿ ಪ್ರದರ್ಶನ ನಡೆಸಿತ್ತು.

ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಈ ಮಿಷನ್‌ನಲ್ಲಿ ದೊಡ್ಡ ಪಾತ್ರವನ್ನು ನಿಭಾಯಿಸಿದ್ದರು. ಅಮೆರಿಕ ಬೇಹುಗಾರಿಕೆ ಹಾಗೂ ಸ್ಯಾಟಲೈಟ್ ‌ಗಳನ್ನು ಕಣ್ತಪ್ಪಿಸಿಕೊಂಡು ಅತ್ಯಂತ ಸೂಕ್ಷ್ಮವಾದ ರೀತಿಯಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸಿ ವಿಶ್ವದಲ್ಲಿ ಭಾರಿ ಸದ್ದು ಮಾಡಿತ್ತು. ಅಂದು ನಡೆದ ಪರಮಾಣು ಪರೀಕ್ಷೆಗೂ ಇಂದು ಭಾರತಕ್ಕೆ ಸಹಾಯಹಸ್ತ ಕೇಳುತ್ತಿರುವ ಉಕ್ರೇನ್‌ಗೂ ನಂಟಿದೆ.

Russia-Ukraine War: Ukraine Once Stood Against Indias Nuclear Tests In 1998

ಪರಮಾಣು ಪರೀಕ್ಷೆ ವಿರೋಧಿಸಿದ್ದ ಉಕ್ರೇನ್
1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಭಾರತ ಸರ್ಕಾರ 5 ಪರಮಾಣು ಪರೀಕ್ಷೆಗಳನ್ನು ನಡೆಸಲು ನಿರ್ಧರಿಸುವ ಮೂಲಕ ಇಡೀ ಜಗತ್ತನ್ನು ಬೆರಗುಗೊಳಿಸಿತು. ಆಪರೇಷನ್ ಶಕ್ತಿ ಎಂಬ ಪರಮಾಣು ಪರೀಕ್ಷೆಗಳು ಭಾರತವನ್ನು ಕೇವಲ ಪರಮಾಣು ಶಕ್ತಿಯನ್ನಾಗಿ ಮಾಡದೆ, ದೇಶದ ದೀರ್ಘಾವಧಿಯ ಭದ್ರತಾ ಹಿತಾಸಕ್ತಿಗಳನ್ನು ಖಾತರಿಪಡಿಸುವ ಹಾದಿಯಲ್ಲಿ ಮುಖ್ಯ ಪಾತ್ರ ವಹಿಸಿತ್ತು. ಆದರೆ ಅಂದು ಭಾರತದ ನಡೆಯುನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಖಂಡಿಸಿದ್ದವು. ಅಂದು ವಿಶ್ವದೆದುರು ಏಕಾಂಗಿಯಾಗಿದ್ದ ಭಾರತದ ನೆರವಿಗೆ ಬಂದಿದ್ದು ಇಸ್ರೇಲ್ ಮಾತ್ರ.

ರಷ್ಯಾ ದೇಶವು ತನ್ನ ಮೇಲೆ ಯುದ್ಧ ಸಾರಿದ ಸಂದರ್ಭದಲ್ಲಿ ಭಾರತವನ್ನು ಸಹಾಯ ಮಾಡಿ ಎಂದು ಕೇಳುತ್ತಿರುವ ಉಕ್ರೇನ್, ಭಾರತದ ಪರಮಾಣು ಪರೀಕ್ಷೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ 25 ದೇಶಗಳೊಂದಿಗೆ ಭಾರತದ ಭದ್ರತಾ ಹಿತಾಸಕ್ತಿಗಳ ವಿರುದ್ಧ ನಿಂತಿತ್ತು. ಭಾರತ ನಡೆಸಿದ ಪರಮಾಣು ಪರೀಕ್ಷೆಗಳನ್ನು ಖಂಡಿಸಿದ ಯುಎನ್ ರೆಸಲ್ಯೂಶನ್ 1172ರ ಪರವಾಗಿ ಉಕ್ರೇನ್ ಕೂಡಾ ಸಹಿ ಹಾಕಿತ್ತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 1172ರ ನಿರ್ಣಯ
ಭಾರತದ ಪರಮಾಣು ಪರೀಕ್ಷೆಗಳ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 1172ರ ನಿರ್ಣಯವನ್ನು ಅಂಗೀಕರಿಸಿತು. ಆ ಮೂಲಕ ಭಾರತವು ಹೆಚ್ಚಿನ ಪರಮಾಣು ಪರೀಕ್ಷೆಗಳಿಂದ ದೂರವಿರಲು ಒತ್ತಾಯಿಸಿತು. ಹಾಗೆಯೇ, ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ರಹಿತ (ಎನ್‌ಪಿಟಿ) ಮತ್ತು ಸಮಗ್ರ ಪರಮಾಣು ಪರೀಕ್ಷೆ ನಿಷೇಧದ ಒಪ್ಪಂದಕ್ಕೆ (ಸಿಟಿಬಿಟಿ) ಕರೆ ನೀಡಿತ್ತು.

ಇನ್ನು ಉಕ್ರೇನ್ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನೇತೃತ್ವದ ಸರ್ಕಾರವು ಭಾರತ ಮತ್ತು ರಷ್ಯಾ ದೇಶಗಳ ನಡುವಿನ ವಿಶೇಷ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು ಭಾರತ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಿದೆ. ಯುದ್ಧ ನಿಲ್ಲಿಸುವಂತೆ ಇಂದು ಭಾರತದಲ್ಲಿನ ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕುರಿತು ಒತ್ತಾಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+