ಬಾರ್ಸಿಲೋನಾದಲ್ಲಿ ಜುಲೈ 17ಕ್ಕೆ ಬಿಡುಗಡೆ ಆಗಲಿದೆ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450
ಬೈಕ್ ಕ್ರೇಜ್ ಹೊಂದಿರುವವರಿಗೆ ಇದೊಂದು ಖುಷಿ ಸುದ್ದಿ.. ಭರ್ಜರಿ ಲುಕ್ ಹಾಗೂ ಸ್ಟೈಲ್ ಹೊಂದಿರುವ ರಾಯಲ್ ಎನ್‌ಫೀಲ್ಡನ್ ಗೆರಿಲ್ಲಾ -450 ಮಾರುಕಟ್ಟೆಗೆ ಬಿಡುಗಡೆ ಆಗಲು ಸಿದ್ಧವಾಗಿದೆ. ಇದೇ 17 ರಂದು ಬೈಕ್ ಬಾರ್ಸಿಲೋನಾದಲ್ಲಿ ಬಿಡುಗಡೆ ಆಗಲಿದೆ.
ರಾಯಲ್ ಎನ್‌ಫೀಲ್ಡ್ ಬೈಕ್ ರೈಡರ್ ಹಾಗೂ ಹಲವು ಜನರ ನೆಚ್ಚಿನ ಬೈಕ್. ಈ ಬೈಕ್‌ನ್ನು ನೀವು ಹಿಮಾಲಯದಂತಹ ಗುಡ್ಡಗಾಡು ಪ್ರದೇಶದಲ್ಲಿ ಹಾಗೂ ನಗರ ಪಟ್ಟಣಗಳಲ್ಲಿ ಸುಲಭವಾಗಿ ಓಡಿಸಬಹುದು. ಈ ಬೈಕ್ ಕಳೆದ ಬಾರಿ ಬಿಡುಗಡೆ ಆಗಿದ್ದು ಬೈಕ್‌ಗಿಂತ ಕಡಿಮೆ ಬೆಲೆಗೆ ಗ್ರಾಹರಕ ಕೈ ಸೇರಲಿದೆ.

ಏನೆಲ್ಲಾ ವಿಶೇಷತೆಗಳಿವೆ?
ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋಗಳುನ್ನು ನೋಡಿದರೆ, ಬೈಕ್ ಸಿಂಗಲ್-ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್, ರೌಂಡ್ ಎಲ್ಇಡಿ ಹೆಡ್ಲೈಟ್, ದೊಡ್ಡ ಇಂಧನ ಟ್ಯಾಂಕ್ ಮತ್ತು ಒನ್-ಪೀಸ್ ಸೀಟ್ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬೈಕ್‌ನ ಟ್ಯಾಂಕ್ ಮತ್ತು ಟೈಲ್ ವಿಭಾಗವು ಹಿಮಾಲಯನ್ 450 ಅನ್ನು ಹೋಲುತ್ತದೆ.
ಸಿಂಗಲ್ ಸಿಲಿಂಡರ್?
ಗೆರಿಲ್ಲಾ 450 ಮಿಶ್ರಲೋಹದ ಚಕ್ರಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಇದಲ್ಲದೇ, ಈ ಬೈಕ್ ಹಿಮಾಲಯದಲ್ಲಿ ನೀಡಲಾದ USD ಫೋರ್ಕ್ ಬದಲಿಗೆ ಗೈಟರ್ಡ್ ಟೆಲಿಸ್ಕೋಪಿಕ್ ಫೋರ್ಕ್ ವೈಶಿಷ್ಟ್ಯವನ್ನು ಹೊಂದಿದೆ. ಗೆರಿಲ್ಲಾ 450 ಗೆ ಹಿಮಾಲಯದಂತಹ 452cc ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಸಹ ನೀಡಬಹುದು, ಇದು 40hp ಮತ್ತು 40Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಗೆರಿಲ್ಲಾ 450 ಬೈಕ್‌ನಲ್ಲೂ ಸಹ ಅದೇ ಶೆರ್ಪಾ 450 ಎಂಜಿನ್ ಅನ್ನು ಬಳಸುತ್ತದೆ. ಈ ಎಂಜಿನ್ ಅನ್ನು ಹೊಸ ಮಾದರಿಗೆ ಹೇಗೆ ಟ್ಯೂನ್ ಮಾಡಲಾಗುತ್ತದೆ ಎಂಬುದನ್ನು ನೋಡಬೇಕಾಗಿದೆ. ಈ ಬೈಕ್ ಭಾರತದಲ್ಲಿ ಬೆಳೆಯುತ್ತಿರುವ 400+ಸಿಸಿ ಮೋಟಾರ್‌ಸೈಕಲ್ ವಿಭಾಗದಲ್ಲಿ ತನ್ನ ಪ್ರಾಬಲ್ಯ ಹೊಂದುವ ಸಾಧ್ಯತೆ ಇದೆ.
ಗೆರಿಲ್ಲಾ 450 ಬೆಲೆ ಎಷ್ಟು?
ವರದಿಗಳ ಪ್ರಕಾರ, ಬಾರ್ಸಿಲೋನಾದಲ್ಲಿ ಬಿಡುಗಡೆ ಆದ ಬಳಿಕ ಈ ಬೈಕ್ ವಿಶ್ವದ ಬೇರೆ ಬೇರೆ ದೇಶಗಳಲ್ಲೂ ಬಿಡುಗಡೆ ಆಗಲಿದೆ. ಗೆರಿಲ್ಲಾ 450 ನಿರೀಕ್ಷಿತ ಬೆಲೆ ರೂ 2.30-2.40 ಲಕ್ಷ (ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.
ಬಾರ್ಸಿಲೋನಾದಲ್ಲಿ ಬಿಡುಗಡೆಯಾದ ಬಳಿಕ ಈ ಫೋನ್ ಭಾರತದಲ್ಲೂ ಶೀಘ್ರದಲ್ಲಿ ಬಿಡುಗಡೆ ಆಗಲಿದೆ. ಈ ಬೈಕ್ ಮೊಟರ್ ಬೈಕ್ ಪ್ರೀಯರ ಚಿತ್ತ ಕದಿಯಲಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications