Miss Universe India 2024: ವಿಶ್ವ ಸುಂದರಿಯಾಗಲು ಹೊರಟಿರುವ ಈ ಬೆಡಗಿ ಯಾರು?
ಮಿಸ್ ಯೂನಿವರ್ಸ್ ಇಂಡಿಯಾ 2024 ಸೌಂದರ್ಯ ಸ್ಪರ್ಧೆಯ ವಿಜೇತರ ಹೆಸರು ಘೋಷಣೆಯಾಗಿದೆ. ರಾಜಸ್ಥಾನದ ಜೈಪುರದಲ್ಲಿ ನಡೆದ Miss Universe India 2024 ಸ್ಪರ್ಧೆ ಗ್ರ್ಯಾಂಡ್ ಫಿನಾಲೆಯಲ್ಲಿ ರಿಯಾ ಸಿಂಘಾ ಅವರು ಈ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಮೆಕ್ಸಿಕೋದಲ್ಲಿ ನಡೆಯಲಿರುವ ಜಾಗತಿಕ ವಿಶ್ವ ಸುಂದರಿ (global Miss Universe 2024) ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ರಿಯಾ ಸಜ್ಜಾಗಿದ್ದಾರೆ.
ಗುಜರಾತ್ ಮೂಲದ ರಿಯಾ ಸಿಂಘಾ ಅವರಿಗೆ ಇನ್ನೂ 19 ವರ್ಷ. ಇವರು ಗುಜರಾತ್‌ನ ಅಹಮದಾಬಾದ್‌ನ ಬೆಡಗಿ ಎಂದು ತಿಳಿದು ಬಂದಿದೆ. ಮಾಡೆಲ್ ಕೂಡ ಆಗಿರುವ ರಿಯಾ, ಉದ್ಯಮಿ ಮತ್ತು ಇಸ್ಟೋರ್ ಫ್ಯಾಕ್ಟರಿಯ ನಿರ್ದೇಶಕರಾಗಿರುವ ರೀಟಾ ಸಿಂಘಾ ಮತ್ತು ಬ್ರಿಜೇಶ್ ಸಿಂಘಾ ಅವರ ಪುತ್ರಿ ದಂಪತಿ ಪುತ್ರ. ಇವರು ಗುಜರಾತ್‌ನ GLS ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ ಎಂದು ವರದಿಯಾಗಿದೆ.

ಟೈಟಲ್ ವಿನ್ ಆದ ಬಗ್ಗೆ ಮಾತನಾಡಿರುವ ರಿಯಾ, ಈ ದಿನ ನಾನು ಮಿಸ್ ಯೂನಿವರ್ಸ್ ಇಂಡಿಯಾ ಪ್ರಶಸ್ತಿ ಗೆದ್ದಿರುವುದು ತುಂಬಾ ಸಂತಸ ನೀಡಿದೆ. ನಾನು ಈ ಹಂತ ತಲುಪಲು ತುಂಬಾ ಕಷ್ಟ ಪಟ್ಟಿದ್ದೇನೆ. ಈ ಸ್ಪರ್ಧೆ ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ. ಹಾಗಾಗಿ ಈ ಕಿರೀಟಕ್ಕೆ ನಾನು ಅರ್ಹಳೆಂದು ಭಾವಿಸಿದ್ದೇನೆ ಎಂದು ಖುಷ್ ಆಗಿದ್ದಾರೆ.
ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಬಾಲಿವುಡ್ ನಟಿ ಹಾಗೂ 2015ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದಿದ್ದ ಊರ್ವಶಿ ರೌಟೇಲಾ ಅವರೇ ರಿಯಾಗೆ ಈ ವರ್ಷದ ಕಿರೀಟ ತೊಡಿಸಿದರು. ಬಳಿಕ ಮಾತನಾಡಿರುವ ಅವರು ಭಾರತವು ಈ ವರ್ಷ ಮತ್ತೆ ವಿಶ್ವ ಸುಂದರಿ ಕಿರೀಟವನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಹುಡುಗಿಯರು ಮಿಸ್ ಯೂನಿವರ್ಸ್‌ನಲ್ಲಿ ನಮ್ಮ ದೇಶವನ್ನು ಉತ್ತಮವಾಗಿ ಪ್ರತಿನಿಧಿಸುತ್ತಾರೆ. ಎಲ್ಲ ಹುಡುಗಿಯರು ಕಠಿಣ ಪರಿಶ್ರಮದೊಂದಿಗೆ ಅತ್ಯಂತ ಸುಂದರವಾಗಿದ್ದಾರೆ. ಹಾಗಾಗಿ ಈ ವರ್ಷ ಮತ್ತೆ ವಿಶ್ವ ಸುಂದರಿಯನ್ನು ಭಾರತ ನೀಡಲಿದೆ ಎಂಬ ನಂಬಿಕೆ ನನಗಿದೆ ಎಂದು ರೌಟೇಲಾ ಹೇಳಿದ್ದಾರೆ.
ಮಿಸ್ ಯೂನಿವರ್ಸ್ ಇಂಡಿಯಾ 2024 ಟೈಟಲ್ ಗೆದ್ದಿರುವ ರಿಯಾ ಸಿಂಘಾ ಮಿಸ್ ಯೂನಿವರ್ಸ್ 2024 ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ರಿಯಾ ಆ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಮತ್ತೊಮ್ಮೆ ಭಾರತದ ಬೆಡಗಿ ವಿಶ್ವಸುಂದರಿಯಾಗುವ ಸಮಯ ಸನ್ನಿಹಿತವಾಗಿದೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ರಿಯಾ ಅವರ ಫೋಟೋಗಳು ವೈರಲ್ ಆಗಿದ್ದು, ಮತ್ತೊಮ್ಮೆ ಮಿಸ್ ಯೂನಿವರ್ಸ್ ಎಂದು ಕಾಮೆಂಟ್ ಮಾಡಲಾರಂಭಿಸಿದ್ದಾರೆ. ರಿಯಾಗೆ ಶುಭಾಶಯಗಳ ಸುರಿಮಳೆ ಹರಿದಿದೆ.












Click it and Unblock the Notifications