100W ಸೂಪರ್ ಫಾಸ್ಟ್ ಚಾರ್ಜ್‌ನೊಂದಿಗೆ ಗ್ರಾಹಕರ ಗಮನ ಸೆಳೆದಿದೆ OnePlus Nord 4
ಗ್ರಾಹಕರ ಬಹುದಿನಗಳ ಕಾಯುವಿಕೆ ಅಂತ್ಯವಾಗಿದೆ. ಕೊನೆಗೂ ಒನ್‌ಪ್ಲಸ್ ನಾರ್ಡ್ 4 ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಿದೆ. ಲಾಂಚ್ ಆಗುವ ಮುನ್ನವೇ ಹವಾ ಕ್ರಿಯೇಟ್ ಮಾಡಿದ್ದ ಫೋನ್ ಈಗ, ಚೀನಾದಲ್ಲಿ ಗ್ರಾಹಕರ ಕೈ ಸೇರಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ.
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಿಡಿತ ಸಾಧಿಸಿರುವ ಒನ್‌ಪ್ಲಸ್, ಇನ್ನೇನು ಕೆಲವೇ ದಿನಗಳಲ್ಲಿ ಮತ್ತೊಂದು ಫೋನ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈ ಪೋನ್ ಬ್ಯಾಕ್ ಕವರ್ ಕ್ಲಾಸಿಕ್ ಆಗಿದ್ದು, ಮಾರುಕಟ್ಟೆಯಲ್ಲಿರುವ ಹಲವು ಫೋನ್‌ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಈ ಫೋನ್ ಸುಮಾರು 26,9998 ರೂಪಾಯಿಗಳಲ್ಲಿ ಬಿಡುಗಡೆ ಆಗಲಿದೆ.

ಎಷ್ಟು ರೂಪಾಂತರಗಳಲ್ಲಿ ಲಭ್ಯ?
ಈ ಫೋನ್ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಾಗಲಿದೆ. 8 ಜಿಬಿ ಹಾಗೂ 128 ಜಿಬಿ + 256 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. ಅಲ್ಲದೆ 12 ಜಿಬಿ ಹಾಗೂ 256 ಜಿಬಿ ಇಂಟರ್ನಲ್ ಸ್ಟೋರೇಜ್ ನೊಂದಿಗೆ ಫೋನ್ ಲಾಂಚ್ ಆಗಲಿದೆ. ಇನ್ನು ವಿಶ್ವದ ಮಾರುಕಟ್ಟೆಯಲ್ಲಿ ಈ ಫೋನ್ 16 ಜಿಬಿ ಹಾಗೂ 512 ಜಿಬಿ ಇಂರ್ಟನಲ್ ಸ್ಟೋರೇಜ್ ನೊಂದಿಗೆ ಲಾಂಚ್ ಆಗಿದೆ. ಈ ಫೋನ್ ಬೆಲೆ 29,999 ರೂ. 32,999 ರೂ, 35,999 ರೂ ಆಗಿರಲಿದೆ.
ಈ ಫೋನ್‌ಗಳ ಪ್ರಿ ಆರ್ಡರ್ ಬುಕ್ಕಿಂಗ್ ಸೇವೆಗಳು ಇದೇ ಜುಲೈ 20 ರಿಂದ ಆರಂಭವಾಗಲಿವೆ. ಈ ಫೋನ್‌ಗಳ ಮೊದಲ ಸೇಲ್ ಆಗಸ್ಟ್ 2 ರಿಂದ ಆರಂಭವಾಗಲಿದ್ದು, ಕಂಪನಿಯ ಅಧಿಕೃತ ವೆಬ್ ಸೈಟ್ ಹಾಗೂ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲೂ ಖರೀದಿಸಬಹುದಾಗಿದೆ. ಅಬ್ಸಿಡಿಯನ್ ಮಿಡ್ನೈಟ್, ಮರ್ಕ್ಯುರಿಯಲ್ ಸಿಲ್ವರ್ ಮತ್ತು ಓಯಸಿಸ್ ಗ್ರೀನ್ನಲ್ಲಿ ಖರೀದಿಸಬಹುದು. ಫೋನ್ ಖರೀದಿಯ ಮೇಲೆ 3,000 ರೂ.ವರೆಗೆ ತ್ವರಿತ ರಿಯಾಯಿತಿಯನ್ನು ನೀಡಲಾಗುವುದು.
ಫೋನ್ ವಿಶೇಷತೆಗಳು ಏನು?
- ಈ ಪೋನ್ 6.74 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೇಶ್ ದರವನ್ನು ಹೊಂದಿದೆ. ಒನ್‌ಪ್ಲಸ್ ನಾರ್ಡ್ 4 ಫೋನ್ 2150 ನಿಟ್ಸ್‌ಗಳ ಗರಿಷ್ಠ ಹೊಳಪು ನೀಡುತ್ತದೆ.
- ಈ ಮಿಡ್ ರೆಂಜ್ ಫೋನ್‌ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 7 ಜನರೇಷನ್ 3 ಪ್ರೋಸೆಸರ್ ನೀಡಲಾಗಿದೆ. ಇದರೊಂದಿಗೆ 12 ಜಿಬಿ ರ್ಯಾಮ್ ಹಾಗೂ 256 ಜಿಬಿ ಇಂರ್ಟನಲ್ ಸ್ಟೋರೇಜ್ ಸಪೋರ್ಟ್ ಸಹ ಸಿಗಲಿದೆ.
- ಒನ್‌ಪ್ಲಸ್ ನಾರ್ಡ್ 4 ಹಿಂಬಾಗದಲ್ಲಿ ಎರಡು ಕ್ಯಾಮೆರಾ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹಾಗೂ ಅಲ್ಟ್ರಾ ವೈಡ್ ಕ್ಯಾಮೆರಾ 8 ಮೆಗಾ ಪಿಕ್ಸಲ್ ನೀಡಲಾಗಿದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇದರ ಸಹಾಯದಿಂದ ವಿಡಿಯೋ ಕರೆಗಳು ಹಾಗೂ ಸೆಲ್ಫಿ ತೆಗೆದುಕೊಳ್ಳಬಹುದು.
- ಈ ಫೋನ್ ಸುಧಾರಿತ ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಬರಲಿದೆ. ಇದರೊಂದಿಗೆ ಫೋನ್‌ಗೆ 4 ವರ್ಷಗಳ ಫ್ರೀ ಅಪ್ಡೇಟ್ ವ್ಯವಸ್ಥೆ ನೀಡಲಾಗುತ್ತದೆ.
- ಈ ಫೋನ್ 5000 ಎಂಎಎಚ್ ಬ್ಯಾಟರಿ ಹಾಗೂ 100 ವ್ಯಾಟ್ ಸೂಪರ್ ವೋಕ್ ಫಾಸ್ಟ್ ಚಾರ್ಜಿಂಗ್ ಫೀಚರ್ ವ್ಯವಸ್ಥೆ ಹೊಂದಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications