Get Updates
Get notified of breaking news, exclusive insights, and must-see stories!

ರೆವರೆಂಡ್ ಎಫ್ ಕಿಟೆಲ್ ನೆನಪಿನ ತಾಣ, ವಿಶಿಷ್ಟ ಫಾಂಟ್ ಲೋಕಾರ್ಪಣೆ

ಬೆಂಗಳೂರು, ನ. 14: ಕನ್ನಡ ನಿಘಂಟು ತಜ್ಞ ರೆವರೆಂಡ್ ಎಫ್ ಕಿಟೆಲ್ ಅವರ ಸುಮಾರು 150 ವರ್ಷಗಳ ಬಳಿಕ ಕರ್ನಾಟಕ ಪ್ರವಾಸದಲ್ಲಿದ್ದಾರೆ. ವಿದ್ಯಾಕಾಶಿ ಧಾರವಾಡಕ್ಕೆ ಭೇಟಿ ನೀಡಿದ ಬಳಿಕ ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

'ಕಿಟೆಲ್ ಫಾಂಟ್' ಅನ್ನು ಮಾಜಿ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಹಾಗೂ ಕಿಟೆಲ್ ಪರಿವಾರದ ಸದಸ್ಯರು ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದ್ದಾರೆ. ಕಿಟೆಲ್ ಮರಿಮೊಮ್ಮಗಳಾದ ಅಲ್ಮುತ್ ಬರ್ಬೋರ್ ಎಲಿನೋರ್ ಮೇಯರ್ ಹಾಗೂ ಅವರ ಪುತ್ರ ಯವೆಸ್ ಪ್ಯಾಟ್ರಿಕ್ ಮೇಯರ್ ಈ ವಿಶಿಷ್ಟ ಸಂದರ್ಭಕ್ಕೆ ಸಾಕ್ಷಿಯಾದರು.

ಫಾಂಟ್ ಬಿಡುಗಡೆಗೊಳಿಸಿ ಮಾತನಾಡಿದ ಚಿರಂಜೀವಿ ಸಿಂಗ್, ''ಭಾರತೀಯ ಭಾಷೆಗಳ ಲಿಪಿ ಕ್ಯಾಲಿಗ್ರಫಿ ಶೈಲಿಯಲ್ಲಿದ್ದು ಕಿಟೆಲ್ ಫಾಂಟನ್ನು ಅದೇ ರೀತಿ ಕಾಣುವಂತೆ ಮಾಡಿದ್ದನ್ನು ನೋಡಿ ಸಂತೋಷವಾಗಿದೆ. ಈ ಹಿಂದೆ ಬಂದಿದ್ದ ಶ್ರೀರಾಜು ಹಾಗೂ ಇತರ ಫಾಂಟುಗಳನ್ನೂ ಸ್ಮರಿಸಿ, ಭಾರತೀಯ ಭಾಷೆಗಳಲ್ಲಿ ಇಂತಹ ಟೈಪೋಗ್ರಫಿ ಕೆಲಸಗಳನ್ನು ರಿವೈವ್ ಮಾಡಿದ್ದು ಕಡಿಮೆ, ಇಂತಹ ಕೆಲಸಗಳು ಇನ್ನೂ ಹೆಚ್ಚಾಗಬೇಕು''ಎಂದು ಹೇಳಿದರು.

ಯವೆಸ್ ಪ್ಯಾಟ್ರಿಕ್ ಮೇಯರ್ ಮಾತನಾಡಿ

ಯವೆಸ್ ಪ್ಯಾಟ್ರಿಕ್ ಮೇಯರ್ ಮಾತನಾಡಿ

ಕಿಟೆಲ್ ಮರಿಮೊಮ್ಮಗ ಯವೆಸ್ ಪ್ಯಾಟ್ರಿಕ್ ಮೇಯರ್ ಮಾತನಾಡಿ, ''ದೇಶ ಸುತ್ತುವಾಗ ರಾಜ ಮಹಾರಾಜರ ಕೈಯಲ್ಲಿ ಕತ್ತಿ ರಾರಾಜಿಸುವುದನ್ನು ನೋಡುತ್ತೇವೆ. ಕರ್ನಾಟಕ ರಾಜ್ಯದ ಎಲ್ಲ ಪ್ರತಿಮೆಗಳಲ್ಲಿ. ನನ್ನ ಮುತ್ತಾತ ಕಿಟೆಲ್ ಅವರ ಎಲ್ಲ ಪ್ರತಿಮೆಗಳ ಕೈಯಲ್ಲಿ ಪುಸ್ತಕ ನೋಡಿದೆ. ಅವರು ಜ್ಞಾನದ ಮೂಲಕ ಎಲ್ಲರನ್ನು ಗೆಲ್ಲಲು ಪ್ರಯತ್ನಿಸಿದರು - ಬಹುಶಃ ಅವರು ಬಳಸಿದ ಒಂದೇ ಆಯುಧ - ಲೇಖನಿ. ಅದು ಒಂದು ರೆಕ್ಕೆಯ ಪುಕ್ಕವಾಗಿದ್ದಿರಬಹುದು ಎಂದು ಹೇಳಿದರು.

ಕಿಟೆಲ್ ಅವರನ್ನು ನನ್ನ ಅಮ್ಮ ಕೂಡಾ ಒಮ್ಮೆಯೂ ನೇರವಾಗಿ ನೋಡಲು ಸಾಧ್ಯವಾಗಲಿಲ್ಲ. ಭಾರತ ಹಾಗೂ ಕರ್ನಾಟಕ ಎಂಬ ಅದ್ಭುತ ಪ್ರದೇಶಗಳ ಕತೆಗಳ ಕೇಳುವ ಮೂಲಕ ನನ್ನ ಅಜ್ಜನನ್ನು ಆ ಕತೆಗಳ ಒಬ್ಬ ಪಾತ್ರಧಾರಿಯಾಗಿ ಕಾಣುತ್ತಾ ನಾವು ಬೆಳೆದೆವು ಎಂದು ಸ್ಮರಿಸಿದರು.

ರಿವೈವಲ್ ಫಾಂಟುಗಳು

ರಿವೈವಲ್ ಫಾಂಟುಗಳು

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚಿತ್ರಕರ್ಮಿ, ಸಂಚಿ ಫೌಂಡೇಶನ್ನಿನ ತಂತ್ರಜ್ಞ ಪ್ರಶಾಂತ ಪಂಡಿತ್, ಕನ್ನಡ ಮುದ್ರಣ ಲೋಕದ ಇತಿಹಾಸದ ಪುಟಗಳನ್ನು ತಿರುವುತ್ತಾ ಎಲ್ಲರಿಗೂ ತಿಳಿಯುವಂತೆ ಮುದ್ರಣ ಹಾಗೂ ಕಂಪ್ಯೂಟರಿನಲ್ಲಿ ಕನ್ನಡ ಕಾಣುವ ಬಗೆ, ರಿವೈವಲ್ ಫಾಂಟುಗಳ ಬಗ್ಗೆ ವಿವರಿಸಿದರು.

ಫಾಂಟ್ ಕಿಟೆಲ್ ಕಾಲದ ಪುಸ್ತಕಗಳಲ್ಲಿನ ಅಂಕೆಗಳು ಹಾಗೂ ಆಗಿನ ಕಾಲಕ್ಕೆ ಅವಶ್ಯವಿದ್ದ ಕೆಲವೇ ಕೆಲವು ಸಂಜ್ಞೆಗಳನ್ನು ಮಾತ್ರ ಹೊಂದಿವೆ(ಹೀಗಾಗಿ, ಈ ಫಾಂಟು ಬಳಸಿದ ಹಲವರಿಗೆ ಅರ್ಕಾವತ್ತು ಕಾಣಸಿಕ್ಕಿಲ್ಲ) ಎಂದು ವಿವರಿಸಿದರು. - ಮುಂದಿನ ದಿನಗಳಲ್ಲಿ ಈ "ರಿವೈವಲ್ ಫಾಂಟುಗಳು" ಹಳೆಯ ಕನ್ನಡ ಪುಸ್ತಕದಲ್ಲಿನ ಮಾಹಿತಿಯನ್ನು ಡಿಜಿಟಲೀಕರಣ ಹಾಗೂ ಓಸಿಆರ್ ಮೂಲಕ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ) ಮೂಲಕ ಓದಲು ಬೇಕಾದ ಸವಲತ್ತನ್ನು ಒದಗಿಸುತ್ತೇವೆ. ಈ ಫಾಂಟ್ ಇನ್ನೂ ಬಹಳಷ್ಟು ಪ್ರಯೋಗ, ಪರೀಕ್ಷೆಗೆ ಒಳಪಟ್ಟು, ಸುಧಾರಣೆಗಳನ್ನು ಕಾಣಬೇಕಿದೆ. ಫಾಂಟನ್ನು ಮುಕ್ತ ಹಾಗೂ ಸ್ವತಂತ್ತ ತಂತ್ರಾಂಶವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಕನ್ನಡದ ಡಿಜಿಟಲೀಕರಣ ಯೋಜನೆ

ಕನ್ನಡದ ಡಿಜಿಟಲೀಕರಣ ಯೋಜನೆ

ಕನ್ನಡದ ಡಿಜಿಟಲೀಕರಣ ಯೋಜನೆ ಭಾಗವಾಗಿ, 1817 ರಿಂದ 1925ರ ವರೆಗಿನ ಕನ್ನಡದ ಮುದ್ರಿತ ಪುಸ್ತಕಗಳನ್ನು ಒಟ್ಟುಗೂಡಿಸಿ, ಅಲ್ಲಿನ ಅಕ್ಷರ ಶೈಲಿಯನ್ನು ಸಂಶೋಧನೆಗೆ ಒಡ್ಡಿ ಸಮುದಾಯ ಹಾಗೂ ಓಪನ್ ಸೊರ್ಸ್ ಯೋಜನೆಯನ್ನು ಸಂಚಯ - ಸಂಚಿ ಫೌಂಡೇಶನ್ ಆಶ್ರಯದಲ್ಲಿ ಪ್ರಾರಂಭಿಸಿದೆ ಇದಕ್ಕೆ ಆಸಕ್ತರು ಕೈಜೋಡಿಸಬಹುದು ಎಂದು ಓಂಶಿವಪ್ರಕಾಶ್ ತಿಳಿಸಿದರು. ಕಿಟೆಲ್ ಕುರಿತ ವೆಬ್ ತಾಣ https://kittel.sanchaya.net ದಲ್ಲಿ ವಿಶಿಷ್ಟ ಫಾಂಟ್ ಕೂಡಾ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಕಿಟಲ್ ಅವರ ಪುಸ್ತಕಗಳು, ಅವರ ಕಾಲಮಾನದ ಆಗುಹೋಗುಗಳು, ಸಂಶೋಧನಾ ಕೃತಿಗಳು, ಡಿಜಿಟಲೀಕರಣಗೊಂಡ ಕಿಟೆಲ್ ಕೃತಿಗಳನ್ನು ಕಾಣಬಹುದಾಗಿದೆ ಎಂದರು.

ಕಿಟೆಲ್‌ ಪದಕೋಶ

ಕಿಟೆಲ್‌ ಪದಕೋಶ

ಜರ್ಮನಿಯ ಕ್ರೆೃಸ್ತ ಧರ್ಮ ಪ್ರಚಾರಕ ಯುವಕನೊಬ್ಬ ಕನ್ನಡ ನಾಡಿಗೆ ಕಾಲಿರಿಸಿ, ಇಲ್ಲಿನ ಭಾಷೆ ಕಲಿತು, ಆಪ್ತವಾಗಿಸಿಕೊಂಡು, ತೊದಲು ಮಾತುಗಳನ್ನು ಕನ್ನಡ ಪ್ರಾರಂಭಿಸಿದ 21ರ ಹರೆಯದ ಯುವಕ ಕನ್ನಡಕ್ಕಾಗಿ ನಿಘಂಟು ರೂಪಿಸಲು ಮುಂದಾಗುತ್ತಾನೆ. 52ನೇ ವಯಸ್ಸಿನಲ್ಲಿ ತಾನೇ ಸಿದ್ಧಪಡಿಸಿದ ಕೋಶ ಕೈಲಿ ಹಿಡಿದು ನಿಂತಾಗ ಶ್ರಮ ಸಾರ್ಥಕವೆನಿಸುತ್ತದೆ. ತನ್ನದಲ್ಲದ ಭಾಷೆಗೆ ಮರೆಯಲಾರದ ಕೊಡುಗೆ ಕೊಡುವ ಹೆಗ್ಗುರಿ ತಲುಪಿದ ಮಹಾನುಭಾವ ರೆವರೆಂಡ್‌ ಫರ್ಡಿನ್ಯಾಂಡ್‌ ಕಿಟೆಲ್‌. ಕಿಟೆಲ್‌ ಪದಕೋಶ ಇವತ್ತಿಗೂ ಕನ್ನಡ ಸಾಹಿತ್ಯ ವಲಯದ ಹೆಗ್ಗುರುತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+