• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನಮಿಡಿವ 'ಆ ಸುದ್ದಿ'ಗೆ ಒನ್ಇಂಡಿಯಾ ಓದುಗರ ಹೃದಯಸ್ಪರ್ಶಿ ಪ್ರತಿಕ್ರಿಯೆ

|

ಹಣ್ಣೆಲೆ ಉದುರುವಾಗ ಚಿಗುಲೆರೆ ನಗುತ್ತಿತ್ತಂತೆ, ಮುಂದೊದು ದಿನ ತಾನೂ ಹಣ್ಣೆಲೆಯಾಗುತ್ತೇನೆ ಅನ್ನೋ ಪರಿವೆ ಇಲ್ಲದೆ!

ಶಾಲಾ ಪ್ರವಾಸಕ್ಕೆಂದು ವೃದ್ಧಾಶ್ರಮಕ್ಕೆ ಹೋಗಿದ್ದ ಬಾಲಕಿಗೆ ಆ ವೃದ್ಧಾಶ್ರಮದಲ್ಲಿ ತನ್ನದೇ ಅಜ್ಜಿ ಸಿಕ್ಕ ಘಟನೆಯ ಕುರಿತು 'ಒನ್ ಇಂಡಿಯಾ' ಈಗಾಗಲೇ ಸುದ್ದಿ ಮಾಡಿದೆ. ಈ ಸುದ್ದಿಗೆ ನೂರಾರು ಕನ್ನಡಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಇಂದಿನ ಸಮಾಜದ ನೈತಿಕ ಅಧಃಪತನಕ್ಕೆ ಕನ್ನಡಿಯಾಗುವ, ಮನಮಿಡಿಯುವ, ಕುಟುಂಬ ವ್ಯವಸ್ಥೆಗೇ ಸವಾಲೆಸೆವ ಈ ಘಟನೆಗೆ ಜನರು ಹೃದಯಸ್ಪರ್ಶಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರವಾಸಕ್ಕೆ ಹೋದ ಬಾಲಕಿಗೆ ವೃದ್ಧಾಶ್ರಮದಲ್ಲಿ ಸಿಕ್ಕರು ಅಜ್ಜಿ: ಕಣ್ಣು ಒದ್ದೆ ಮಾಡುವ ಘಟನೆ

ಘಟನೆ ನಡೆದಿದ್ದು ಎಲ್ಲಿ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ ವೃದ್ಧಾಶ್ರಮಕ್ಕೆ ಪ್ರವಾಸಕ್ಕೆ ಬಂದಿದ್ದ ಬಾಲಕಿಗೆ ತನ್ನ ಅಜ್ಜಿಯನ್ನು ಅಲ್ಲಿ ಕಂಡು ಒಮ್ಮೆ ಸಂಭ್ರಮ ಉಕ್ಕಿದರೆ, ಮರುಗಳಿಗೆಯಲ್ಲೇ ವಿಷಾದವೊಂದು ಮನಸ್ಸನ್ನು ಆವರಿಸಿದೆ. 'ಅಜ್ಜಿ ಎಲ್ಲಿ ಎಂದು ಕೇಳಿದರೆ ತಂದೆ-ತಾಯಿ, ಅವರು ನೆಂಟರ ಮನೆಗೆ ಹೋಗಿದ್ದಾರೆ ಎನ್ನುತ್ತಿದ್ದರು' ಎಂಬ ಆ ಬಾಲಕಿಯ ಮಾತು ಪಾಲಕರ ಅಮಾನವೀಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ!

ಈ ಮನಕಲಕುವ ಘಟನೆಗೆ 'ಒನ್ಇಂಡಿಯಾ' ಕನ್ನಡ ಓದುಗರು ಪ್ರತಿಕ್ರಿಯಿಸಿದ್ದು ಹೇಗೆ ನೋಡಿ. ಎಲ್ಲರ ಪ್ರತಿಕ್ರಿಯೆಗಳೂ ಒಂದಿಲ್ಲೊಂದು ರೀತಿಯಲ್ಲಿ ತೂಕವುಳ್ಳದ್ದೇ ಆದರೂ, ಆಯ್ದ ಕೆಲವನ್ನಷ್ಟೇ ಇಲ್ಲಿ ನೀಡಿದ್ದೇವೆ.

ಇದು ನಮ್ಮ ಸಂಸ್ಕೃತಿ!

ಇದು ನಮ್ಮ ಸಂಸ್ಕೃತಿ!

"ಇದು ನಮ್ಮ ಸಂಸ್ಕೃತಿ. ತಾಯಿ ದೇವರು. ಆಕೆ ತನ್ನ ಬದುಕಿನಲ್ಲಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ಆದರೆ ಆಕೆಯ ಮಗನನ್ನು ನೋಡಿ! ದೇವರು ಆಕೆಯ ಮಗ ಮತ್ತು ಸೊಸೆಗೂ ತಮ್ಮ ಮಕ್ಕಳಿಂದ ಅಂಥದೇ ಬದುಕನ್ನು ಕೊಡಬೇಕು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸೌಮ್ಯಾ ಮಂಜುನಾಥ್

ಕುಸುಮಜ್ಜಿ ಬದುಕಿನ ಸಂಧ್ಯಾಕಾಲದಲ್ಲಿ ಬೆಳಕಾದ ಬಜಪೆ ಪೊಲೀಸರು

ಕಾಲ ಸರಿಇಲ್ಲಾ

ಕಾಲ ಸರಿಇಲ್ಲಾ

"ಕಾಲ ಸರಿ ಇಲ್ಲ. ತಾಯಿಯನ್ನು ದೇವರಂತೆ ನೋಡುವ ಮಗನು ಹೆಂಡತಿ ಬಂದಾಗ ಹೆಂಡತಿ ಸೆರಗು ಹಿಡಿದು ಹಿಂದೆ ಮುಂದೆ ಅಡ್ಡಾಡುತ್ತಾ ಹೆಂಡತಿಯ ಮಾತು ಕೇಳಿ, ತಾಯಿಯನ್ನೂ ದೆವ್ವದಂತೆ ಭಾವಿಸುತ್ತಾನೋ ಏನೋ! ಅದೇ ಹೆಂಡತಿ ಮುಂದೊಂದು ದಿನ ಆಕೆಯು ತಾಯಿಯಾಗುವಳು. ಆಕೆಯ ಮಗನಿಗೂ ಮದುವೆಯಾಗುತ್ತೆ. ಆಗ ಈಕೆ ಮಾಡಿದ ಕೆಲಸವನ್ನೇ ಈಕೆಯ ಸೊಸೆಯೂ ಮಾಡಿದರೆ ತಾನು ಮಾಡಿದ ತಪ್ಪು ಅರಿವಾಗ ಬಹುದೇನೋ!" ಎಂದಿದ್ದಾರೆ ದಿನೇಶ್ ದಿನಿ.

ಉಳುವಾ ನ್ಯಾಯಮೂರ್ತಿಯ ನೋಡಲ್ಲಿ!: ಕೃಷಿಗಿಳಿದು ಮಾದರಿಯಾದ ನ್ಯಾ. ಸೆಲ್ವಂ

ಎಲ್ಲಾರ್ ಕಾಲೆಳೆಯುತ್ತೆ ಕಾಲ!

ಎಲ್ಲಾರ್ ಕಾಲೆಳೆಯುತ್ತೆ ಕಾಲ!

"ಈಗಿನ ಸಮಾಜದಲ್ಲಿ ಆದರ್ಶ, ಮಾನವೀಯ ಮೌಲ್ಯಗಳು ಬಹಳಷ್ಟು ಜನರಿಗೆ ಬೇಡವಾಗಿದೆ. ತನ್ನ ಹೆತ್ತವರನ್ನು ನೋಡಿಕೊಳ್ಳದ ಮಕ್ಕಳು ಬೇರೆಯವರಿಗೆ ಏನು ತಾನೇ ಮಾಡಬಲ್ಲರು. ಎಲ್ಲರಿಗೂ ಕಾಲೆಳುಯುತ್ತೆ ಕಾಲ ಎಂದು ಎಚ್ಚರಿಕೆ ನೀಡಿದ್ದಾರೆ ಅನಂತ ಕೃಷ್ಣ.

ನನ್ನಪ್ಪನ ಸಾವಿನ ಪ್ರತೀಕಾರ ತೀರಿಸಿಕೊಳ್ಳುತ್ತೇನೆ: ಯೋಧನ ಮಗನ ಭಾವುಕ ನುಡಿ!

ಮಹೋನ್ನತ ಭಾರತದ ಇಂದಿನ ಸ್ಥಿತಿ ಇದು!

ಮಹೋನ್ನತ ಭಾರತದ ಇಂದಿನ ಸ್ಥಿತಿ ಇದು!

"ಕೌಟುಂಬಿಕ ಮೌಲ್ಯಗಳು ಹೇಗಿರಬೇಕು ಅನ್ನೋ ಬಗ್ಗೆ ಮೇಲ್ಪಂಕ್ತಿ ಹಾಕಿಕೊಟ್ಟ ಭಾರತದ ಇಂದಿನ ಪರಿಸ್ಥಿತಿ ಇದು" ಎಂದು ಬೇಸರದಿಂದ ಹೇಳಿದ್ದಾರೆ ಪ್ರಶಾಂತ್ ಹೆಗಡೆ ಶಿಂಡ್ಲೆ.

ಒಬ್ಬ ಮಗಳ ಕೈವಾಡವಿದೆ!

ಒಬ್ಬ ಮಗಳ ಕೈವಾಡವಿದೆ!

"ವೃದ್ಧಾಶ್ರಮದಲ್ಲಿ ತಂದೆ-ತಾಯೊಯರನ್ನು ನೋಡಿ ಎಲ್ಲರೂ ಮಗನನ್ನೇ ಹಳಿಯುತ್ತಾರೆ. ಆದರೆ ಸಮಾಜ ಮರೆತು ಹೋಗುತ್ತೆ, ಅವರನ್ನು ಆಶ್ರಮಕ್ಕೆ ಅಟ್ಟುವುದರಲ್ಲಿ ಒಬ್ಬ ಮಗಳ ಕೈವಾಡವಿದೆಯೆಂದು! ಇಲ್ಲಾಂದ್ರೆ ಮದುವೆಗೆ ಮುಂಚೆ ಯಾಕೆ ಪುತ್ರ ಪೋಷಕರನ್ನು ಆಶ್ರಮಕ್ಕೆ ಕಳಿಸುವುದಿಲ್ಲ? ಸಂಸ್ಕಾರ ಮಗಳಿಗೂ ಕಲಿಸಿ!" ಎಂದಿದ್ದಾರೆ ಮಹದೇವೋಜಿ ರಾವ್.

ನಾಚಿಕೆ ಆಗಬೇಕು!

ನಾಚಿಕೆ ಆಗಬೇಕು!

"ನಾಚಿಕೆ ಆಗಬೇಕು ಅವರುಗಳಿಗೆ. ಮುಂದೊಂದು ದಿನ ಅವರಿಗೂ ಅದೇ ಪರಿಸ್ಥಿತಿ ಬಂದೆ ಬರುತ್ತೆ ಅನ್ನೋದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಲಿ. ದುಡ್ಡಿನ ಅಹಂಕಾರ ಅಷ್ಟೇ" ಎಂದಿದ್ದಾರೆ ವಿಮಲಾ ಸಿಜಿ

ಮಾನವೀಯತೆ ಸತ್ತಿದೆ!

ಮಾನವೀಯತೆ ಸತ್ತಿದೆ!

"ಮಾನವೀಯತೆ ಸತ್ತವರ ನಡುವೆ ನಾವು ಬದುಕುತ್ತಿದ್ದೇವೆ. ಯಾರಿಗೂ ಮಾತನಾಡುವ ಹಾಗಿಲ್ಲ. ಹಿಂದೆ ಹಣ ಇರಲಿಲ್ಲ ಪ್ರೀತಿ ತುಂಬಿತ್ತು. ಈಗ ಪ್ರೀತಿ ಬತ್ತಿ ಸ್ವಾರ್ಥ ತುಂಬಿದೆ" ಎಂದಿದ್ದಾರೆ ಎಂ ಇಶಾಕ್ ಕೌಸಾರಿ.

ಆ ಅಪ್ಪ-ಅಮ್ಮಂದಿರೂ ಅಜ್ಜ-ಅಜ್ಜಿ ಆಗ್ತಾರಲ್ವಾ?

ಆ ಅಪ್ಪ-ಅಮ್ಮಂದಿರೂ ಅಜ್ಜ-ಅಜ್ಜಿ ಆಗ್ತಾರಲ್ವಾ?

"ಆ ಪುಟ್ಟ ಹುಡುಗಿಯ ಮತ್ತು ಆ ತಾಯಿಯ ಒಂದೊಂದು ಕಣ್ಣೀರ ಹನಿಗೂ ಆ ಹುಡುಗಿಯ ಅಪ್ಪ ಅಮ್ಮಂದಿರು ಬೆಲೆ ತೆರಬೇಕು. ಮುಂದೊಂದು ದಿನ ಆ ಅಪ್ಪಅಮ್ಮಂದಿರೂ ಅಜ್ಜಅಜ್ಜಿ ಆಗೇ ಆಗ್ತಾರೆ ಅಲ್ವಾ? ಆಗ ಮಗಳು ಕೂಡ ತನ್ನ ಅಪ್ಪಅಮ್ಮನನ್ನು ವೃದ್ಧಾಶ್ರಮಕ್ಕೆ ತಳ್ಳಿದರೆ? ಇದನ್ನು ಏಕೆ ಚಿಂತಿಸಲಿಲ್ಲ?" ಎಂದು ಪ್ರಶ್ನಿಸಿದ್ದಾರೆ ಪ್ರಸಾದ್ ನಾಯಕ್.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Readers' reactions for a human interest story published in Oneindia. News explains a heart touching story of a student who had been to an old age home as her school trip and there she finds her Grandmother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more