Get Updates
Get notified of breaking news, exclusive insights, and must-see stories!

ಶಾಸಕರ ಮೌಲ್ಯ ಮಾಪನ; ಗದಗ ಜಿಲ್ಲೆಯ ಶಾಸಕರಿಗೆ ಅಂಕ ನೀಡಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕರ್ನಾಟಕ ಸಿದ್ಧವಾಗುತ್ತಿದೆ. ರಾಜಕೀಯ ಪಕ್ಷಗಳು ಚುನಾವಣೆಯ ತಯಾರಿ ಆರಂಭಿಸಿವೆ. 2023ರ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಕಳೆದ ಚುನಾವಣೆಯಲ್ಲಿ ಜನರು ಆಯ್ಕೆ ಮಾಡಿದ ಶಾಸಕರು ಮಾಡಿದ ಕೆಲಸಗಳಿಗೆ ಅಂಕ ನೀಡಲು ಈಗ ಅವಕಾಶ ನೀಡಲಾಗಿದೆ.

ಶಾಸಕರು ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ್ದು ಹೇಗೆ?, ಕೋವಿಡ್ ಸಮಯದಲ್ಲಿ ಶಾಸಕರ ಕಾರ್ಯ ವೈಖರಿ ಹೇಗಿತ್ತು?, ಎಂದು ಜನರು ಮೌಲ್ಯ ಮಾಪನ ಮಾಡಬಹುದು. ಒನ್ ಇಂಡಿಯಾ ಕನ್ನಡದ ಈ ಮೂಲಕ ಶಾಸಕರಿಗೆ ಅಂಕ ನೀಡಲು ಅವಕಾಶ ನೀಡಿದೆ.

ಒನ್ ಇಂಡಿಯಾ ಕನ್ನಡ ಶಾಸಕರ ಮೌಲ್ಯ ಮಾಪನ ಮಾಡಲು Rate your MLA ಎಂಬ ಅಭಿಯಾನ ನಡೆಸುತ್ತಿದೆ. ನಿಮ್ಮ ಕ್ಷೇತ್ರದ ಶಾಸಕರು ಮಾಡಿದ ಕೆಲಸಗಳಿಗೆ ನೀವು ಇಲ್ಲಿ ಸ್ಟಾರ್‌ಗಳನ್ನು ನೀಡುವ ಮೂಲಕ ಅಂಕ ಕೊಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಈ ಪುಟವನ್ನು ಶೇರ್ ಮಾಡಬಹುದಾಗಿದೆ.

ಈ ಪುಟದಲ್ಲಿ ಜನರು ಗದಗ ಜಿಲ್ಲೆಯ ಶಾಸಕರ ಕಾರ್ಯ ವೈಖರಿಗೆ ಅಂಕ ನೀಡಬಹುದು. ಮತದಾನ ಪೂರ್ಣಗೊಂಡ ಬಳಿಕ ಪುಟದ ಕೊನೆಯಲ್ಲಿ ಜನರು ನೀಡಿದ ಸರಾಸರಿ ಅಂಕ ನೋಡಬಹುದು. ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪುಟ ಶೇರ್ ಮಾಡಬಹುದು.

ಒಟ್ಟು 9 ಅಂಶಗಳ ಆಧಾರದ ಮೇಲೆ ಜನರು ಶಾಸಕರ ಕಾರ್ಯ ವೈಖರಿ ಮೌಲ್ಯ ಮಾಪನ ಮಾಡಬಹುದು. ಸ್ಟಾರ್ ರೇಟಿಂಗ್ ಮೂಲಕ ಅಂಕ ನೀಡಬಹುದು. ಜನರು ವೋಟ್ ಮಾಡಿದ ಬಳಿಕ ಪುಟವನ್ನು ಹಂಚಿಕೆ ಮಾಡಬಹುದು. ಶಾಸಕರ ಲಭ್ಯತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯ, ವಿಧಾನಸಭೆಯಲ್ಲಿ ಮಾತನಾಡಿದ್ದು, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ಮೂಲ ಸೌಕರ್ಯ ಮುಂತಾದ ಅಂಶಗಳ ಆಧಾರದ ಮೇಲೆ ಜನರು ವೋಟ್ ಮಾಡಲು ಅವಕಾಶ ಕೊಡಲಾಗಿದೆ.

ಗದಗ ವಿಧಾನಸಭಾ ಕ್ಷೇತ್ರ

ಗದಗ ವಿಧಾನಸಭಾ ಕ್ಷೇತ್ರ

ಗದಗ ಜಿಲ್ಲೆ ರಾಜ್ಯದಲ್ಲಿಯೇ ಕಡಿಮೆ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ. ಜಿಲ್ಲೆಯಲ್ಲಿ ಕೇವಲ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ಶಿರಹಟ್ಟಿ, ಗದಗ, ರೋಣ ಮತ್ತು ನರಗುಂದ. ನಾಲ್ಕು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಎರಡು ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಅಧಿಕಾರದಲ್ಲಿದ್ದಾರೆ.

ಗದಗ ಕ್ಷೇತ್ರದ ಶಾಸಕರು ಕಾಂಗ್ರೆಸ್‌ನ ಹೆಚ್‌. ಕೆ. ಪಾಟೀಲ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಅವರು 2018ರ ಚುನಾವಣೆಯಲ್ಲಿ 77,699 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಹೆಚ್. ಕೆ. ಪಾಟೀಲ್ ಕಾರ್ಯ ವೈಖರಿಗೆ ನೀವು ಅಂಕ ನೀಡಲು ವೋಟ್ ಮಾಡಿ.ವೋಟ್ ಮಾಡಲು ಲಿಂಕ್

ರೋಣ ವಿಧಾನಸಭಾ ಕ್ಷೇತ್ರ

ರೋಣ ವಿಧಾನಸಭಾ ಕ್ಷೇತ್ರ

ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ಶಾಸಕರು ಬಿಜೆಪಿಯ ಜಿ. ಕಳಕಪ್ಪ ಬಂಡಿ. 2018ರ ಚುನಾವಣೆಯಲ್ಲಿ ಜಿ. ಕಳಕಪ್ಪ ಬಂಡಿ 83,735 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಒಟ್ಟು 9 ಅಂಶಗಳ ಆಧಾರದ ಮೇಲೆ ಜನರು ಜಿ. ಕಳಕಪ್ಪ ಬಂಡಿ ಕಾರ್ಯ ವೈಖರಿಯನ್ನು ಮೌಲ್ಯ ಮಾಪನ ಮಾಡಬಹುದು. ಬಳಿಕ ಆ ಪುಟವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಬಹುದಾಗಿದೆ.ವೋಟ್ ಮಾಡಲು ಲಿಂಕ್

ನರಗುಂದ ಕ್ಷೇತ್ರದ ಶಾಸಕರು

ನರಗುಂದ ಕ್ಷೇತ್ರದ ಶಾಸಕರು

ನರಗುಂದ ಕ್ಷೇತ್ರದ ಶಾಸಕರು ಬಿಜೆಪಿಯ ಸಿ. ಸಿ. ಪಾಟೀಲ್. 2018ರ ಚುನಾವಣೆಯಲ್ಲಿ 73,045 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಲೋಕೋಪಯೋಗಿ ಸಚಿವರು. ವೋಟ್ ಮಾಡಲು ಲಿಂಕ್

ಶಿರಹಟ್ಟಿ ಕ್ಷೇತ್ರದ ಶಾಸಕ

ಶಿರಹಟ್ಟಿ ಕ್ಷೇತ್ರದ ಶಾಸಕ

ಶಿರಹಟ್ಟಿ ಕ್ಷೇತ್ರದ ಶಾಸಕರು ಬಿಜೆಪಿಯ ರಾಮಣ್ಣ ಲಮಾಣಿ. 2018ರ ಚುನಾವಣೆಯಲ್ಲಿ 91,967 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಶಾಸಕರಿಗೆ ಮತದಾನ ಮಾಡಲು ಲಿಂಕ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+