ಶಾಲಾ ಕಪ್ಪುಹಲಗೆಗೆ ಹೊಳಪು ನೀಡುವ ರಂಗಸ್ವಾಮಿಗೆ ಸಲ್ಯೂಟ್
ಸಮಾಜದ ಒಳಿತಿಗಾಗಿ ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಾ ಬರುತ್ತಿರುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಅವರು ಎಲೆ ಮರೆಯ ಕಾಯಿಯಂತೆ ತಮ್ಮ ಪಾಡಿಗೆ ಸೇವೆ ಮಾಡುತ್ತಾ ಅದರಲ್ಲಿಯೇ ತೃಪ್ತಿ ಪಡುತ್ತಿರುತ್ತಾರೆ.
ಇಂತಹವರನ್ನು ಗುರುತಿಸದ ಕಾರಣ ಅವರ ಕಾರ್ಯಗಳು ಬೆಳಕಿಗೆ ಬರುವುದೇ ಇಲ್ಲ. ಇಂತಹವರ ಪೈಕಿ ಮೈಸೂರಿನ ನಿವಾಸಿ ರಂಗಸ್ವಾಮಿ ಎಂಬುವರು ಒಬ್ಬರು.
ಮೈಸೂರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಇವರು ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಕಪ್ಪು ಹಲಗೆಯನ್ನು ಶಿಕ್ಷಕರು ಬರೆಯಲು ಅನುಕೂಲವಾಗುವಂತೆ ಬಣ್ಣ ಹಚ್ಚಿ ಬರುವ ಕಾಯಕವನ್ನು ಮಾಡುತ್ತಿದ್ದಾರೆ. ಇದುವರೆಗೆ ಇವರು ಮೈಸೂರು ಮಾತ್ರವಲ್ಲದೆ ಇತರೆ ಜಿಲ್ಲೆಗಳಿಗೂ ತೆರಳಿ ಕಪ್ಪು ಹಲಗೆಗೆ ಬಣ್ಣ ಹಚ್ಚುವ ಕೆಲಸ ಮಾಡಿದ್ದಾರೆ. ಮುಂದೆ ಓದಿ...

3854 ಸರ್ಕಾರಿ ಶಾಲೆಗಳಲ್ಲಿ ಕಪ್ಪು ಹಲಗೆಗೆ ಬಣ್ಣ
ಇದುವರೆಗೂ 3854 ಸರ್ಕಾರಿ ಶಾಲೆಗಳಲ್ಲಿ ಕಪ್ಪು ಹಲಗೆ (ಬೋರ್ಡ್)ಗೆ ಬಣ್ಣ ಹಚ್ಚಿ ಶಿಕ್ಷಕರು ಉತ್ತಮವಾಗಿ ಬರೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ ಇವರು. ಇವತ್ತಿಗೂ ಸೈಕಲ್‌ನಲ್ಲಿಯೇ ಓಡಾಡುವ ಅವರು, ಬಡತನದ ನಡುವೆಯೂ ಸಮಾಜ ಸೇವೆ ಮಾಡುತ್ತಿರುವುದು ಮೆಚ್ಚಲೇಬೇಕಾದ ಸಂಗತಿ. ಮೈಸೂರಿನ ಒಂಟಿಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಮಸುಕಾಗಿದ್ದ ಶಾಲಾ ತರಗತಿಯ ಕಪ್ಪು ಹಲಗೆಗೆ ಇದ್ದಿಲು ಹಾಗೂ ತುಂಬೆ ಸೊಪ್ಪನ್ನು ಅರೆದು ಅದಕ್ಕೆ ಹಚ್ಚುವ ಕೆಲಸವನ್ನು ಶಿಕ್ಷಕರು ಅವರಿಗೆ ವಹಿಸುತ್ತಿದರಂತೆ. ಇದರಿಂದ ಪ್ರೇರಿತರಾದ ಅವರು ಈಗಲೂ ಸರ್ಕಾರಿ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲಗೆಗೆ ಬಣ್ಣ ಹಚ್ಚುತ್ತಿದ್ದಾರೆ.

ರಂಗಸ್ವಾಮಿಯವರ ಅವರ ಅಭಿಮಾನದ ಮಾತು
ಇದರಿಂದ ಯಾವ ಲಾಭವೂ ಅವರಿಗಿಲ್ಲವಾದರೂ "ಇದು ನನಗೆ ಖುಷಿ ಕೊಡುತ್ತದೆ. ಆ ಮೂಲಕ ಸಮಾಜಸೇವೆ ಮಾಡಿದ ತೃಪ್ತಿ ಸಿಗುತ್ತದೆ" ಎಂದು ಹೇಳುವ ಅವರು, ನಮ್ಮಂತಹ ಬಡವರಿಂದ ದೊಡ್ಡದಾದ ಯಾವ ಕೊಡುಗೆಯನ್ನು ಸಮಾಜಕ್ಕೆ ಕೊಡಲು ಸಾಧ್ಯವಿಲ್ಲ. ಆದರೆ ಕನ್ನಡಕ್ಕೆ ಸಣ್ಣದಾದ ಅಳಿಲು ಸೇವೆಯನ್ನು ಕಪ್ಪು ಹಲಗೆಯನ್ನು ಹೊಳಪು ಮಾಡಿ ಅದರಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನುಕೂಲ ಮಾಡಿಕೊಡುತ್ತಿರುವುದಾಗಿ ಅಭಿಮಾನದಿಂದ ನುಡಿಯುತ್ತಾರೆ.

ಸೈಕಲ್ ನಲ್ಲಿಯೇ ಎಲ್ಲೆಡೆಗೂ ಪಯಣ
ಪರಿಸರ ಪ್ರೇಮಿ ಆಗಿರುವ ಇವರು ಸೈಕಲ್ ನಲ್ಲಿಯೇ ಎಲ್ಲೆಡೆಗೂ ಪ್ರಯಾಣ ಮಾಡುತ್ತಾರೆ. ಸೈಕಲ್ ಮೂಲಕವೇ ರಾಜ್ಯದ ಹಲವು ಜಿಲ್ಲೆಗಳ ಶಾಲೆಗಳಿಗೆ ತೆರಳಿ ಸೇವೆ ಮಾಡಿರುವುದು ವಿಶೇಷ. ಬಿಳಿಯ ಉಡುಪು ಹಳೆಯ ಸೈಕಲ್ ಇವರ ಆಸ್ತಿ. ಸೈಕಲ್ ನಲ್ಲಿ ಅಳವಡಿಸಿರುವ ಚಿಕ್ಕ ನಾಮಫಲಕದಲ್ಲಿ ಬರೆದಿರುವ, ವಿದ್ಯೆ ಕಡಿಮೆ ಇದ್ದರೂ ಪರವಾಗಿಲ್ಲ ನಮ್ಮ ನಡತೆ ಶುದ್ಧವಾಗಿರಬೇಕು ಎಂಬ ಸಾಲು ಎಲ್ಲರ ಗಮನಸೆಳೆಯುತ್ತದೆ.

ಇವರ ಕಾಯಕ ಮೆಚ್ಚಲೇಬೇಕು
ದೊಡ್ಡ ದೊಡ್ಡ ಸಮಾಜ ಸೇವಕರ ನಡುವೆ ಶಾಲೆಯನ್ನೇ ದೇವಾಲಯವೆಂದು, ಅಲ್ಲಿ ಕಲಿಯುವ ಮಕ್ಕಳೇ ಭವಿಷ್ಯದ ಪ್ರಜೆಗಳಾಗಿದ್ದು ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಪ್ಪುಹಲಗೆಗೆ ಇದ್ದಿಲು ಹಾಗೂ ತುಂಬೆ ಸೊಪ್ಪನ್ನು ಅರೆದು ಬಣ್ಣ ಬಳಿಯುವ ಕೆಲಸ ಮಾಡುತ್ತಾ ಬಂದಿರುವ ರಂಗಸ್ವಾಮಿ ಕಾಯಕ ನಿಜಕ್ಕೂ ಮೆಚ್ಚಲೇ ಬೇಕಾಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications