ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Rama Navami 2022: ರಾಮ ನವಮಿ ದಿನಾಂಕ, ಶುಭ ಮುಹೂರ್ತ, ಇತಿಹಾಸ , ಮಹತ್ವ ತಿಳಿಯಿರಿ

|
Google Oneindia Kannada News

ಭಗವಂತ ಶ್ರೀ ರಾಮನ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಲು, ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು, ರಾಮ ನವಮಿಯನ್ನು ಆಚರಿಸಲಾಗುತ್ತದೆ. ತ್ರೇತಾಯುಗದಲ್ಲಿ ಅಯೋಧ್ಯೆಯಲ್ಲಿ ರಾಣಿ ಕೌಸಲ್ಯೆ ಮತ್ತು ರಾಜ ದಶರಥನಿಗೆ ಈ ದಿನದಂದು ವಿಷ್ಣುವಿನ ಅವತಾರವಾದ ಭಗವಂತ ಶ್ರೀ ರಾಮನು ಭೂಮಿಗೆ ಕಾಲಿಟ್ಟಿದೆ ಎಂದು ಭಕ್ತರು ನಂಬಿಕೆಯಾಗಿದೆ.

ವಿಷ್ಣುವಿನ 7 ನೇ ಅವತಾರ ಎಂದು ಕರೆಯಲ್ಪಡುವ ರಾಮನ ಜನ್ಮದಿನವನ್ನು ರಾಮನವಮಿ ಎಂದು ಆಚರಣೆ ಮಾಡಲಾಗುತ್ತದೆ. ಈ ದಿನದಂದು ರಾಮನನ್ನು ಪೂಜಿಸುವುದು ಕೆಟ್ಟ ಶಕ್ತಿಗಳ ನಿವಾರಣೆ ಮತ್ತು ಭೂಮಿಯ ಮೇಲಿನ ದೈವಿಕ ಶಕ್ತಿಯ ಪ್ರವೇಶವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ.

Ramadan 2022 Time Table : ಸೆಹ್ರಿ, ಇಫ್ತಾರ್ ಸಮಯದ ಸಂಪೂರ್ಣ ಪಟ್ಟಿ ಇಲ್ಲಿದೆRamadan 2022 Time Table : ಸೆಹ್ರಿ, ಇಫ್ತಾರ್ ಸಮಯದ ಸಂಪೂರ್ಣ ಪಟ್ಟಿ ಇಲ್ಲಿದೆ

ಈ ದಿನ ರಾಮನನ್ನು ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ರಾಮಾಯಣ ಅಥವಾ ನಾಮ ರಾಮಾಯಣವನ್ನು ಪಠಿಸುತ್ತಾರೆ. ಅಷ್ಟೇ ಅಲ್ಲದೇ ಈ ದಿನ ರಾಮ ಮತ್ತು ಸೀತಾ ದೇವಿಯ ವಿಧ್ಯುಕ್ತ ವಿವಾಹವನ್ನು ಮಾಡುತ್ತಾರೆ. ರಾಮ ನವಮಿಗೆ ಸಂಬಂಧಿಸಿದ ದಿನಾಂಕ, ಸಮಯ, ಆಚರಣೆಗಳು, ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಲು ಮುಂದೆ ಓದಿ...

ರಾಮ ನವಮಿ 2022: ದಿನಾಂಕ, ಸಮಯ

ರಾಮ ನವಮಿ 2022: ದಿನಾಂಕ, ಸಮಯ

ರಾಮ ನವಮಿಯನ್ನು ಭಾನುವಾರ, 10 ಏಪ್ರಿಲ್ 2022 ರಂದು ಆಚರಿಸಲಾಗುತ್ತದೆ. ರಾಮ ನವಮಿ ಮಧ್ಯಾಹ್ನ ಮುಹೂರ್ತವು 10:23 ರಿಂದ ಪ್ರಾರಂಭವಾಗುತ್ತದೆ ಮತ್ತು 12:53 ರವರೆಗೆ ಮುಂದುವರಿಯುತ್ತದೆ. ಅವಧಿ 02 ಗಂಟೆ 31 ನಿಮಿಷಗಳು ಆಗಿದೆ. ರಾಮ ನವಮಿ ಮಧ್ಯಾಹ್ನ 11:38 ಕ್ಕೆ ಆಗಲಿದೆ. ನವಮಿ ತಿಥಿಯು 09 ಏಪ್ರಿಲ್ 2022 ರಂದು 01:23 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವಮಿ ತಿಥಿ 10 ಏಪ್ರಿಲ್ 2022 ರಂದು 03:15 ಕ್ಕೆ ಕೊನೆಗೊಳ್ಳುತ್ತದೆ.

ರಾಮ ನವಮಿ 2022: ಪೂಜಾ ವಿಧಿಗಳು

ರಾಮ ನವಮಿ 2022: ಪೂಜಾ ವಿಧಿಗಳು

ರಾಮ ನವಮಿಯ ದಿನದಂದು, ಭಕ್ತರು ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ ಮತ್ತು ನಂತರ ರಾಮ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ಭಗವಂತ ರಾಮನಿಗೆ ಸಮರ್ಪಿತವಾದ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಈ ದಿನವು ಹಿಂದೂ ಸಮುದಾಯದ ಜನರಿಗೆ ಮಾತ್ರ ಮಹತ್ವದ್ದಾಗಿಲ್ಲ ಆದರೆ ಪ್ರಪಂಚದಾದ್ಯಂತದ ಹಲವಾರು ಜನರು ಈ ಆಚರಣೆಯನ್ನು ಮಾಡುತ್ತಾರೆ. ಭಗವಂತ ರಾಮನ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟಿರುವ ಅಯೋಧ್ಯೆಯು ಬಹಳ ಜನಪ್ರಿಯವಾದ ಸ್ಥಳವಾಗಿದೆ. ಈ ದಿನ ಭಗವಂತ ರಾಮನ ಹಿರಿಮೆಗೆ ಸಂಬಂಧಿಸಿದ ಭಜನೆಗಳನ್ನು ಹಾಡಲಾಗುತ್ತದೆ. ಮಂತ್ರಗಳನ್ನು ಪಠಿಸಲಾಗುತ್ತದೆ. ಪೂಜೆಯ ಸಮಯದಲ್ಲಿ ಯಜ್ಞಗಳನ್ನು ಸಹ ನಡೆಸಲಾಗುತ್ತದೆ.

ಭಕ್ತರಿಂದ ಶ್ರೀರಾಮನಿಗಾಗಿ ಉಪವಾಸ

ಭಕ್ತರಿಂದ ಶ್ರೀರಾಮನಿಗಾಗಿ ಉಪವಾಸ

ಈ ದಿನ, ಭಕ್ತರು ಎಂಟು ಪ್ರಹಾರಗಳಲ್ಲಿ ಉಪವಾಸವನ್ನು ಆಚರಿಸುತ್ತಾರೆ. ಅಂದರೆ ಅವರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಪ್ರತಿ ಪ್ರಹಾರದ ಅವಧಿಯು ಮೂರು ಗಂಟೆಗಳಿರುತ್ತದೆ. ಆದ್ದರಿಂದ ರಾಮ ನವಮಿಯನ್ನು ಅದ್ಧೂರಿಯಾಗಿ ಆಚರಿಸುವುದು ಅನಾದಿ ಕಾಲದ ಸಂಪ್ರದಾಯ. ರಾಮ ನವಮಿ ವ್ರತವನ್ನು ಮೂರು ವಿಭಿನ್ನ ರೀತಿಯಲ್ಲಿ ಆಚರಿಸಬಹುದು. ಪ್ರಾಸಂಗಿಕವಾಗಿ ಅಂದರೆ ಯಾವುದೇ ಕಾರಣವಿಲ್ಲದೆ ಆಚರಿಸಬಹುದು, ನಿರಂತರವಾಗಿ ಅಂದರೆ ಇದು ಯಾವುದೇ ಆಸೆ ಮತ್ತು ಅಪೇಕ್ಷಣೀಯ ಜೀವನದ ಉದ್ದಕ್ಕೂ ಮಾಡಲಾಗುವ ಆಚರಣೆ, ಯಾವುದೇ ಆಸೆಯನ್ನು ಹೊಂದದೆ ಆಚರಣೆ ಮಾಡುವುದು ಮೂರನೇಯ ರೀತಿಯಾಗಿದೆ.

ರಾಮ ನವಮಿ 2022: ಇತಿಹಾಸ ಮತ್ತು ಮಹತ್ವ

ರಾಮ ನವಮಿ 2022: ಇತಿಹಾಸ ಮತ್ತು ಮಹತ್ವ

ಉತ್ತರ ಭಾರತದಲ್ಲಿ ರಾಮ ನವಮಿಯನ್ನು ರಾಮದೇವರ ಹುಟ್ಟುಹಬ್ಬವೆಂದು ಆಚರಣೆ ಮಾಡುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ರಾಮ ಸೀತೆಯರ ವಿವಾಹದ ದಿನವಾಗಿ ರಾಮ ನವಮಿಯನ್ನು ಆಚರಣೆ ಮಾಡುತ್ತಾರೆ. ಮಹಿಮಾನ್ವಿತ ದೇವತೆಗಳ ದೈವಿಕ ಬಂಧವಾಗಿ ರಾಮನವಮಿಯನ್ನು ಅವರು ಆಚರಿಸುತ್ತಾರೆ. ಭಗವಂತ ರಾಮನ ಹೆಸರನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಮಾತ್ರವಲ್ಲ, ಜೈನ ಮತ್ತು ಬೌದ್ಧ ಧಾರ್ಮಿಕ ಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ. ಅವರು ಆರು ಘಟಿಗಳ ಕಾಲ ಅಂದರೆ ಸರಿಸುಮಾರು 2 ಗಂಟೆ 24 ನಿಮಿಷಗಳ ಕಾಲ ಇರುವ ಮಧ್ಯಾಹ್ನ ಕಾಲದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ರಾಮ ನವಮಿ ಪೂಜಾ ವಿಧಿವಿಧಾನಗಳನ್ನು ಮಾಡಲು ಯೋಜಿಸಿದರೆ ಇದು ಅತ್ಯಂತ ಮಂಗಳಕರ ಸಮಯ ಎಂದು ಭಕ್ತರು ನಂಬುತ್ತಾರೆ.

English summary
Ram Navami 2022 : Read on to know Rama Navami Date, Shubh Muhurat, Puja Vidhi, Mantra, History, Rituals, why we celebrate and significance in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X