ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯ ಆರ್ಭಟ ಜೋರು; ಆರೋಗ್ಯ ರಕ್ಷಣೆಗೆ ಸಲಹೆಗಳು

|
Google Oneindia Kannada News

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಲವು ಗ್ರಾಮಗಳು ಜಲಾವೃತವಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಗಳಲ್ಲಿ, ಮನೆಗಳ ಸುತ್ತಮುತ್ತ ಮಳೆಗಾಲದಲ್ಲಿ ಕೊಳಚೆ ನೀರು ನಿಂತು ಅದು ರೋಗ ಹರಡಲು ಕಾರಣವಾಗಬಹುದು. ಆದ್ದರಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಪ್ರವಾಹ ಪರಿಸ್ಥಿತಿಯ ಕಾರಣ ಕಲುಷಿತ ನೀರು ಮತ್ತು ಆಹಾರದಿಂದ ಕಾಲರಾ, ವಿಷಮಶೀತ ಜ್ವರ, ವಾಂತಿ-ಬೇಧಿ, ಆಮಶಂಕೆ, ಕಾಮಾಲೆ ರೋಗಗಳು ಹರಡುವ ಸಾಧ್ಯತೆ ಇದೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಸಹ ಕೈಗೊಳ್ಳಬೇಕಿದೆ. ಆರೋಗ್ಯ ಇಲಾಖೆಯ ಮಳೆಗಾಲದಲ್ಲಿ ಆರೋಗ್ಯ ರಕ್ಷಣೆಗೆ ಹಲವು ಸಲಹೆಗಳನ್ನು ನೀಡಿದೆ. ರೋಗಗಳು ಹರಡದಂತೆ ಸೇವಿಸುವ ಆಹಾರ ಮತ್ತು ನೀರಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜನರಿಗೆ ಕರೆ ನೀಡಿದೆ.

ಆರೋಗ್ಯ ಸೇವೆಗಾಗಿ ಬಿಬಿಎಂಪಿಯ ವಾರ್ಡ್‌ಗೊಂದು ನಮ್ಮ ಕ್ಲಿನಿಕ್!ಆರೋಗ್ಯ ಸೇವೆಗಾಗಿ ಬಿಬಿಎಂಪಿಯ ವಾರ್ಡ್‌ಗೊಂದು ನಮ್ಮ ಕ್ಲಿನಿಕ್!

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯಾವುದೇ ಸಾಂಕ್ರಾಮಿಕರೋಗ ಕಾಣಿಸಿದ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಜಲಜನ್ಯ ಹಾಗೂ ಕೀಟಜನ್ಯ ರೋಗಗಳು ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಸಹ ಇಲಾಖೆ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಕರಾವಳಿಯಲ್ಲಿ ಮಳೆ ಅಬ್ಬರ, ರೆಡ್‌ ಅಲರ್ಟ್‌ ಘೋಷಣೆ ಬಂಟ್ವಾಳಕ್ಕೆ ಸಚಿವರ ಭೇಟಿಕರಾವಳಿಯಲ್ಲಿ ಮಳೆ ಅಬ್ಬರ, ರೆಡ್‌ ಅಲರ್ಟ್‌ ಘೋಷಣೆ ಬಂಟ್ವಾಳಕ್ಕೆ ಸಚಿವರ ಭೇಟಿ

ಕೈಗಳನ್ನು ಚೆನ್ನಾಗಿ ತೊಳೆಯಿರಿ

ಕೈಗಳನ್ನು ಚೆನ್ನಾಗಿ ತೊಳೆಯಿರಿ

ಮಲ, ಮೂತ್ರ ವಿಸರ್ಜನೆಗೆ ಶೌಚಾಲಯವನ್ನು ಉಪಯೋಗಿಸಬೇಕು. ಮಲ, ಮೂತ್ರ ವಿಸರ್ಜನೆಯ ನಂತರ ಹಾಗೂ ಆಹಾರ ಸೇವಿಸುವ ಮೊದಲು ಕೈ-ಕಾಲುಗಳನ್ನು ಚೆನ್ನಾಗಿ ಸಾಬೂನಿನಿಂದ ತೊಳೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

ಕೈ ಬೆರಳುಗಳ ಉಗುರುಗಳು ಹೆಚ್ಚು ಬೆಳೆಯದಂತೆ ಕತ್ತರಿಸಬೇಕು. ಕುಡಿಯುವ ನೀರಿನ ಅಭಾವವಿದ್ದ ಪ್ರದೇಶಗಳಲ್ಲಿ ಸಾರ್ವಜನಿಕರು ಕಾಯಿಸಿ ಅರಿಸಿದ ನೀರನ್ನು ಅಥವಾ ಹ್ಯಾಲೋಜಿನ್ ಗುಳಿಗೆಗಳಿಂದ ಶುದ್ಧೀಕರಿಸಿದ ನೀರನ್ನು ಉಪಯೋಗಿಸಬೇಕು ಎಂದು ಕರೆ ನೀಡಲಾಗಿದೆ.

ಮಳೆಗಾಲದಲ್ಲಿ ಆಹಾರ ಕ್ರಮ

ಮಳೆಗಾಲದಲ್ಲಿ ಆಹಾರ ಕ್ರಮ

* ಕುಡಿಯುವ ನೀರಿನ ಸ್ಥಾವರಗಳ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು. ಗ್ರಾಮದಲ್ಲಿ ಪರಿಸರ ನೈರ್ಮಲ್ಯಕ್ಕೆ ಮಹತ್ವ ಕೊಡಬೇಕು. ನೊಣಗಳ ಹಾವಳಿಯನ್ನು ಹತೋಟಿಯಲ್ಲಿಡಬೇಕು.

* ತಾಜಾ ಹಾಗೂ ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ಬಿಸಿ ನೀರಿನಲ್ಲಿ ಅಥವಾ ಉಪ್ಪು ಮಿಶ್ರಿತ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸಬೇಕು.

ಹೀಗೆ ಮಾಡಬೇಡಿ ಎಂದು ಸೂಚನೆ

ಹೀಗೆ ಮಾಡಬೇಡಿ ಎಂದು ಸೂಚನೆ

* ಬಯಲಿನಲ್ಲಿ ನೀರಿನ ಸ್ಥಾವರಗಳ ಸುತ್ತಮುತ್ತ ದನಕರುಗಳ ಮೈ ತೊಳೆಯುವುದು ಹಾಗೂ ಬಟ್ಟೆ, ಪಾತ್ರೆಗಳನ್ನು ತೊಳೆಯುವುದು. ಕುಡಿಯುವ ನೀರಿನಲ್ಲಿ ಕೈ ಅದ್ದುವುದು. ಬೀದಿ ಬದಿಯಲ್ಲಿ ತೆರೆದಿಟ್ಟ ಮತ್ತು ಕರಿದ ಆಹಾರ ಪದಾರ್ಥಗಳನ್ನು ಹಾಗೂ ಕತ್ತರಿಸಿಟ್ಟ ಹಣ್ಣುಗಳನ್ನು ತಿನ್ನುವುದು ಮಾಡಬೇಡಿ.

* ಆರೋಗ್ಯ ಹದಗೆಟ್ಟರೆ ಮನೆ ಮದ್ದು ಮಾಡಿಕೊಳ್ಳುಬೇಡಿ. ವೈದ್ಯರನ್ನು ಭೇಟಿ ಮಾಡಿ. ಮೊದಲೇ ಸಿದ್ದಪಡಿಸಿದ ಆಹಾರವನ್ನು ಸೇವಿಸದಿರಿ.

* ಕೆರೆ, ನದಿ, ಹಳ್ಳ, ಹೊಂಡ, ಹೊಲಗದ್ದೆ ಮತ್ತು ಹರಿಯುವ ಕಾಲುವೆ ನೀರನ್ನು ಕುಡಿಯಬಾರದು. ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಬಾರದು.

ಇಂತಹ ಕ್ರಮಗಳನ್ನು ಅನುಸರಿಸಿ

ಇಂತಹ ಕ್ರಮಗಳನ್ನು ಅನುಸರಿಸಿ

* ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯೂಜ್ವರ, ಪೈಲೇರಿಯಾ, ಮೆದುಳುಜ್ವರ, ಚಿಕನಗುನ್ಯಾ ಮುಂತಾದ ರೋಗಗಳು ಹರಡುತ್ತವೆ. ಈ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು.

* ನೀರನ್ನು ಇಟ್ಟಿರುವ ಪಾತ್ರೆ, ಟ್ಯಾಂಕುಗಳನ್ನು ಸರಿಯಾಗಿ ಮುಚ್ಚಿಡುವುದು. ಸಿಮೆಂಟ್ ಟ್ಯಾಂಕ್ ಹಾಗೂ ಹೂವಿನ ದಾನಿಗಳಲ್ಲಿರುವ ನೀರನ್ನು ವಾರಕ್ಕೊಂದು ಸಾರಿ ಖಾಲಿ ಮಾಡಿ ಒಣಗಿಸಿ ನಂತರ ನೀರನ್ನು ತುಂಬುವುದು.

* ಯಾವುದೇ ಜ್ವರವಾಗಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಬಾವಿಗಳಲ್ಲಿ, ಕಾರಂಜಿಗಳಲ್ಲಿ ಹಾಗೂ ಸಿಮೆಂಟಿನ ಟ್ಯಾಂಕ್‍ಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬೀಡಿವುದು.

* ಮಲಗುವಾಗ ಸೊಳ್ಳೆ ಪರದೆಯನ್ನು ಕಟ್ಟಿಕೊಳ್ಳುಬೇಕು. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಪರಿಸರದ ನೈರ್ಮಲ್ಯ ಕಾಪಾಡಿಕೊಳ್ಳಬೇಕು.

Rain And Flood Tips To Maintain Good Health

Recommended Video

ಟೀಮ್ ಇಂಡಿಯಾದಿಂದ ವಿರಾಟ್ ಕೊಹ್ಲಿಗೆ ಗೇಟ್ ಪಾಸ್ ಸಿಕ್ರೆ ಆ ಜಾಗ ತುಂಬೋ ಆಟಗಾರ ಇವನೇ | *Cricket |OneIndia Kannada

English summary
Karnataka's various district witnessed for heavy rainfall. Flood situation in Coastal districts. Health department tips to maintain good health during rainy season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X