ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬಿ ಗಾಯಕರು ಕಣಕ್ಕೆ: ಮತದಾರರ ಓಲೈಕೆಗೆ ಯತ್ನ

|
Google Oneindia Kannada News

ಚಂಡೀಗಢ, ಜನವರಿ 23: ಪ್ರಸಿದ್ಧ ಪಂಜಾಬಿ ಗಾಯಕರು ಪಂಜಾಬ್‌ನಲ್ಲಿ ಚುನಾವಣಾ ರಂಗಕ್ಕೆ ಇಳಿದಿದ್ದಾರೆ. ಈ ಮೂಲಕ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಕೆ ಮಾಡುವ ಯತ್ನವನ್ನು ಮಾಡಿದ್ದಾರೆ. ಪಂಜಾಬ್‌ನಲ್ಲಿ ಪಾಪ್ ಸಂಸ್ಕೃತಿಯು ಭಾರೀ ಏರಿಕೆಗೆ ಸಾಕ್ಷಿಯಾಗಿರುವುದರಿಂದ, ಜನಪ್ರಿಯ ಗಾಯಕರನ್ನು ಕಣಕ್ಕಿಳಿಸುವ ಮೂಲಕ ಮತ ಗಳಿಸುವ ಯತ್ನವನ್ನು ರಾಜಕೀಯ ಪಕ್ಷಗಳು ಮಾಡುತ್ತಿದೆ.

ಕಾಂಗ್ರೆಸ್ ಜನಪ್ರಿಯ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧುರನ್ನು ಕಣಕ್ಕೆ ಇಳಿಸಿದೆ. ಸಿಧು ಮೂಸೆವಾಲಾ ಎಂದೇ ಖ್ಯಾತರಾಗಿರುವ ಮತ್ತು ರಾಜ್ಯ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಿಕಟರಾದ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧುರನ್ನು ಕಣಕ್ಕೆ ಇಳಿಸುವ ಮೂಲಕ ಪಂಜಾಬ್‌ನಲ್ಲಿ ಜನರನ್ನು ಸೆಳೆಯುವ ಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ. ಗಾಯಕರಾದ ಅನ್ಮೋಲ್ ಗಗನ್ ಮಾನ್ ಮತ್ತು ಬಾಲ್ಕರ್ ಸಿಧುರನ್ನು ಕೂಡಾ ಚುನಾವಣೆಗೆ ನಿಂತಿದ್ದಾರೆ. ಖರಾರ್ ಕ್ಷೇತ್ರದಿಂದ ಗಾಯಕರಾದ ಅನ್ಮೋಲ್ ಗಗನ್ ಮಾನ್ ಹಾಗೂ ರಾಂಪುರ ಫುಲ್ ಕ್ಷೇತ್ರದಿಂದ ಗಾಯಕ ಬಾಲ್ಕರ್ ಸಿಧು ಕಣಕ್ಕೆ ಇಳಿದಿದ್ದು, ಇಬ್ಬರು ಕೂಡಾ ಎಎಪಿ ಅಭ್ಯರ್ಥಿಗಳಾಗಿದ್ದಾರೆ.

 ಪಂಜಾಬ್ ಚುನಾವಣೆ: ದ್ವೇಷ ಭಾಷಣ ವಿಡಿಯೋ ವೈರಲ್, ಸಿಧು ಸಲಹೆಗಾರರ ​​ವಿರುದ್ಧ ಎಫ್‌ಐಆರ್ ಪಂಜಾಬ್ ಚುನಾವಣೆ: ದ್ವೇಷ ಭಾಷಣ ವಿಡಿಯೋ ವೈರಲ್, ಸಿಧು ಸಲಹೆಗಾರರ ​​ವಿರುದ್ಧ ಎಫ್‌ಐಆರ್

ಕೊರೊನಾ ವೈರಸ್‌ ಸೋಂಕು ಹೆಚ್ಚಳವಾದ ನಂತರ ರಾಜಕೀಯ ಪಕ್ಷಗಳ ರ್‍ಯಾಲಿಗಳು ಹಾಗೂ ರೋಡ್‌ಶೋಗಳ ಮೇಲೆ ಚುನಾವಣಾ ಆಯೋಗ ನಿಷೇಧವನ್ನು ಹೇರಿಕೆ ಮಾಡಿದೆ. ಈ ಹಿನ್ನೆಲೆಯಿಂದಾಗಿ ಪಂಜಾಬ್‌ನ ಪ್ರಸಿದ್ಧ ಗಾಯಕ, ಈಗ ಕಾಂಗ್ರೆಸ್‌ನ ಚುನಾವಣಾ ಅಭ್ಯರ್ಥಿ ಆಗಿರುವ ಶುಭದೀಪ್ ಸಿಂಗ್ ಸಿಧು ಅಥವಾ ಸಿಧು ಮೂಸೆವಾಲಾ ಸಭೆಗಳನ್ನು ನಡೆಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಚ ರಾಜ್ಯಗಳಲ್ಲಿ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

 ಪಂಜಾಬ್‌ನಲ್ಲಿ ಎಎಪಿ ವೇಗವಾಗಿ ಮುನ್ನಡೆಯುತ್ತಿದೆ ಎಂದ ಕಾಂಗ್ರೆಸ್‌ ಸಮೀಕ್ಷೆ! ಪಂಜಾಬ್‌ನಲ್ಲಿ ಎಎಪಿ ವೇಗವಾಗಿ ಮುನ್ನಡೆಯುತ್ತಿದೆ ಎಂದ ಕಾಂಗ್ರೆಸ್‌ ಸಮೀಕ್ಷೆ!

 ರ್‍ಯಾಲಿ, ರೋಡ್‌ಶೋಗಳ ಮೇಲಿನ ನಿಷೇಧ ವಿಸ್ತರಣೆ

ರ್‍ಯಾಲಿ, ರೋಡ್‌ಶೋಗಳ ಮೇಲಿನ ನಿಷೇಧ ವಿಸ್ತರಣೆ

ಮತದಾನ ನಡೆಯುವ ಐದು ರಾಜ್ಯಗಳಲ್ಲಿ ರ್‍ಯಾಲಿಗಳು ಹಾಗೂ ರೋಡ್‌ಶೋಗಳ ಮೇಲಿನ ನಿಷೇಧವನ್ನು ಚುನಾವಣಾ ಆಯೋಗವು ಶನಿವಾರ ಜನವರಿ 31 ರವರೆಗೆ ವಿಸ್ತರಣೆ ಮಾಡಿದೆ. ಆದರೆ ಮೊದಲ ಎರಡು ಹಂತಗಳಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಗರಿಷ್ಠ 500 ಜನರೊಂದಿಗೆ ಸಾರ್ವಜನಿಕ ಸಭೆಗಳನ್ನು ನಡೆಸಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಮನೆ ಮನೆಗೆ ತೆರಳಿ ಪ್ರಚಾರ ನಡೆಸುವುದಕ್ಕೂ ಅವಕಾಶವನ್ನು ನೀಡಿದೆ.

 ಸಾಮಾಜಿಕ ಜಾಲತಾಣದಲ್ಲಿ ಮೂಸೆವಾಲಾಗೆ ಲಕ್ಷಾಂತರ ಅಭಿಮಾನಿ

ಸಾಮಾಜಿಕ ಜಾಲತಾಣದಲ್ಲಿ ಮೂಸೆವಾಲಾಗೆ ಲಕ್ಷಾಂತರ ಅಭಿಮಾನಿ

ಸಾಮಾಜಿಕ ಜಾಲತಾಣದಲ್ಲಿ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಪ್ರಸಿದ್ಧ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಚುನಾವಣೆಯ ಬಗ್ಗೆ ಮಾತನಾಡಿದ ಸಿಧು ಮೂಸೆವಾಲಾ, "ನಾಯಕರನ್ನು ಆಯ್ಕೆ ಮಾಡಲು ಮತ ಹಾಕುತ್ತಿದ್ದೀರಿ. ಈ ಬಾರಿ ನಿಮ್ಮ ಮಗನಿಗೆ ಮತ ನೀಡಿ," ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

 ಕಾಂಗ್ರೆಸ್‌ ವಿರುದ್ಧ ಎಎಪಿ ಪ್ರಚಾರ

ಕಾಂಗ್ರೆಸ್‌ ವಿರುದ್ಧ ಎಎಪಿ ಪ್ರಚಾರ

ಗಾಯಕ ಅನ್ಮೋಲ್ ಗಗನ್ ಮನ್‌ ಮತ್ತು ಖರಾರ್‌ನ ಎಎಪಿ ಅಭ್ಯರ್ಥಿ ಮನೆ-ಮನೆ ಪ್ರಚಾರ ಆರಂಭಿಸಿದ್ದಾರೆ. ಬಡ ಮಹಿಳೆಯೊಬ್ಬರ ಮನೆಗೆ ಭೇಟಿ ನೀಡಿದ್ದಾರೆ. ತನ್ನ ಪಕ್ಷವು ಸರ್ಕಾರವನ್ನು ರಚಿಸಿದ ನಂತರ "ಎಲ್ಲವೂ ಸರಿಯಾಗುತ್ತದೆ" ಎಂಬ ಭರವಸೆಯನ್ನು ನೀಡಿ ಆ ಮಹಿಳೆಗೆ ಸಮಾಧಾನ ಪಡಿಸಿದ್ದಾರೆ. ರಾಂಪುರ ಫುಲ್‌ನಲ್ಲಿ ಸಭೆ ನಡೆಸುತ್ತಿರುವ ಬಾಲ್ಕರ್ ಸಿಧು, ಪಂಜಾಬ್ ಅನ್ನು ಮತ್ತೆ ಸಮೃದ್ಧಗೊಳಿಸಲು ಆಪ್ ಅನ್ನು ಅಧಿಕಾರಕ್ಕೆ ತರುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಮಾದಕ ದ್ರವ್ಯ ಮತ್ತು ತ್ಯಾಗದ ವಿಷಯಗಳಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಿ ಪ್ರಚಾರ ನಡೆಸಿದ್ದಾರೆ.

 ಸೆಲೆಬ್ರೆಟಿಗಳಿಂದಲೇ ಪಂಜಾಬ್‌ ಚುನಾವಣೆಯೇ!

ಸೆಲೆಬ್ರೆಟಿಗಳಿಂದಲೇ ಪಂಜಾಬ್‌ ಚುನಾವಣೆಯೇ!

ಮೋಗಾ ವಿಧಾನಸಭಾ ಕ್ಷೇತ್ರದಲ್ಲಿ ನಟ ಸೋನು ಸೂದ್‌ರ ಸಹೋದರಿ ಮಾಳವಿಕಾ ಸೂದ್‌ರನ್ನು ಕಣಕ್ಕಿಳಿಸುವ ಮೂಲಕ ಕೋವಿಡ್‌ ಸಂದರ್ಭದಲ್ಲಿ ನಟ ಸೋನು ಸೂದ್‌ ಮಾಡಿದ ಜನ ಸೇವೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪ್ರಚಾರ ಮಾಡುತ್ತಿದೆ. ಮತದಾರರನ್ನು ಓಲೈಸಲು ಪಕ್ಷಗಳು ಸೆಲೆಬ್ರಿಟಿಗಳನ್ನು ಕಣಕ್ಕೆ ಇಳಿಸಿ ಪ್ರಚಾರ ನಡೆಸುತ್ತಿದೆ. ಪಂಜಾಬಿ ಗಾಯಕ ಮೊಹಮ್ಮದ್ ಸಾದಿಕ್ ಫರೀದ್ಕೋಟ್ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದಾರೆ. ಗುರುದಾಸ್‌ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಜನಪ್ರಿಯ ನಟರಾಗಿದ್ದಾರೆ. ಈ ಕ್ಷೇತ್ರವನ್ನು ಈ ಹಿಂದೆ ದಿವಂಗತ ನಟ ವಿನೋದ್ ಖನ್ನಾ ಪ್ರತಿನಿಧಿಸಿದ್ದರು. ಅದಲ್ಲದೆ, ಸಂಗ್ರೂರ್‌ನ ಎಎಪಿಯ ಸಂಸದ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್‌ ದಶಕದ ಹಿಂದೆ ರಾಜಕೀಯಕ್ಕೆ ಧುಮುಕಿದ ಪ್ರಸಿದ್ಧ ಹಾಸ್ಯನಟರಾಗಿದ್ದಾರೆ. ಕಾಂಗ್ರೆಸ್‌ನ ನವಜೋತ್ ಸಿಂಗ್ ಸಿಧು ಒಬ್ಬ ಕ್ರಿಕೆಟಿಗರಾಗಿದ್ದರು. (ಒನ್‌ಇಂಡಿಯಾ ಸುದ್ದಿ)

Recommended Video

ಸರಣಿ ಸೋತ ಬಳಿಕ Rahul ಹೇಳಿದ್ದೇನು | Oneindia Kannada

English summary
Punjab Poll:Parties field Punjabi singers to cash in on their popularity to woo voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X