ಪಂಜಾಬ್‌ ಚುನಾವಣೆ: ರೈತರ ಪಕ್ಷಕ್ಕೆ ತಲೆನೋವಾದ ನಗರ ಪ್ರದೇಶ

ಚಂಡೀಗಢ, ಜನವರಿ 26: ಪಂಜಾಬ್ ವಿಧಾನಸಭೆ ಚುನಾವಣೆ 2022ಕ್ಕೆ ರೈತ ಸಂಘಟನೆಗಳ ಪಕ್ಷವಾದ ಸಂಯುಕ್ತ ಸಮಾಜ ಮೋರ್ಚಾ ಸಜ್ಜಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಈ ರೈತರ ಪಕ್ಷವು ಬಲವನ್ನು ಹೊಂದಿದ್ದರೂ ಕೂಡಾ ನಗರ ಪ್ರದೇಶದಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಪ್ರಚಾರದ ವಿಚಾರದಲ್ಲಿ ರೈತ ಒಕ್ಕೂಟವು ಎಡವುತ್ತಿದೆ.

ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ಪ್ರತಿಸ್ಪರ್ಧಿ ಅಭ್ಯರ್ಥಿಗಳ ವಿರುದ್ಧವಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ನಗರ ಪ್ರದೇಶಗಳಲ್ಲಿ ಸಂಯುಕ್ತ ಸಮಾಜ ಮೋರ್ಚಾ (ಎಸ್‌ಎಸ್‌ಎಂ) ಅಭ್ಯರ್ಥಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನಮ್ಮ ನಾಯಕರುಗಳು ಚುನಾವಣೆಗೆ ಸ್ಪರ್ಧಿಸಲು ನಗರದ ಕ್ಷೇತ್ರಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಎರಡು ಬಾರಿ ಆಲೋಚನೆ ಮಾಡಬೇಕಿತ್ತು ಎಂದು ನಾಯಕರುಗಳು ಹೇಳುತ್ತಾರೆ.

ಈ ಬಗ್ಗೆ ಮಾತನಾಡಿದ ಸಂಯುಕ್ತ ಸಮಾಜ ಮೋರ್ಚಾದ ಒಂದು ಘಟಕವಾದ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷರು ಲಖ್ಬೀರ್ ಸಿಂಗ್ ನಿಜಂಪುರ, "ನಮ್ಮ ಪ್ರಸ್ತುತ ಕಾರ್ಯಕರ್ತರು ಗ್ರಾಮೀಣ ಹಿನ್ನೆಲೆಯಿಂದ ಬಂದವರು, ಅವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ನಗರ ಮತದಾರರು ಈ ಎಸ್‌ಎಸ್‌ಎಂ ಅಭ್ಯರ್ಥಿಗಳಿಗೆ ತಮ್ಮ ಸಮಸ್ಯೆಗಳ ಬಗ್ಗೆ ತಿಳಿದಿಲ್ಲ ಎಂದು ಭಾವಿಸುತ್ತಾರೆ," ಎಂದು ತಿಳಿಸಿದ್ದಾರೆ.

 ರೈತರ ಚಳುವಳಿಯಲ್ಲ, ಇದು ಸಾಮಾಜಿಕ ಚಳುವಳಿ

ರೈತರ ಚಳುವಳಿಯಲ್ಲ, ಇದು ಸಾಮಾಜಿಕ ಚಳುವಳಿ

"ನಗರ ಪ್ರದೇಶಗಳಿಂದ ಎಸ್‌ಎಸ್‌ಎಂ ಟಿಕೆಟ್‌ನಲ್ಲಿ ಸ್ಪರ್ಧಿಸಲು ಕೈಗಾರಿಕೋದ್ಯಮಿಗಳು, ದೊಡ್ಡ ರೈತರು ಮತ್ತು ವ್ಯಾಪಾರ ಮುಖ್ಯಸ್ಥರನ್ನು ಆಯ್ಕೆ ಮಾಡಿದ್ದೇವೆ," ಎಂದು ನಿಜಾಂಪುರ ಹೇಳಿದರು. ಆದರೆ ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ಗೇರ್, ಸಂಘಟನಾ ರಚನೆ ಮತ್ತು ಕಾರ್ಯಕರ್ತರ ಸಂಖ್ಯೆಯು ಉತ್ತಮವಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷರು ಲಖ್ಬೀರ್ ಸಿಂಗ್ ನಿಜಂಪುರ ಭಾವಿಸಿದ್ದಾರೆ. "ಆದರೆ ಇದು ಇನ್ನು ಮುಂದೆ ರೈತರ ಚಳುವಳಿಯಲ್ಲ, ಸಾಮಾಜಿಕ ಚಳುವಳಿಯಾಗಿದೆ. ಹಾಗಾಗಿ ನಮ್ಮ ದೃಷ್ಟಿ ಮತ್ತು ಸಿದ್ಧಾಂತಕ್ಕೆ ಒಲವು ತೋರುವ ಜನರಿದ್ದಾರೆ," ಎಂದಿದ್ದಾರೆ.

"ನಗರ ಪ್ರದೇಶದಲ್ಲಿ ಖಂಡಿತ ಸಮಸ್ಯೆ ಇದೆ"

"ನಿಸ್ಸಂದೇಹವಾಗಿ, ನಗರ ಪ್ರದೇಶಗಳಲ್ಲಿ ನಿರ್ದಿಷ್ಟವಾದ ಸಮಸ್ಯೆಗಳಿವೆ, ಆದರೆ ಒಟ್ಟಾರೆ ವಿಷಯವೆಂದರೆ ಪಂಜಾಬ್ ಅನ್ನು ಸಾಲದಿಂದ ಮುಕ್ತಗೊಳಿಸುವುದು. ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಪಂಜಾಬಿ ಯುವಕರು ವಿದೇಶಕ್ಕೆ ಹೋಗುವುದನ್ನು ತಡೆಯುವುದು, ಡ್ರಗ್ಸ್ ಹಾವಳಿಯನ್ನು ತೊಡೆದುಹಾಕುವುದು ಹಾಗೂ ಸ್ವಚ್ಛ ಆಡಳಿತವನ್ನು ನೀಡುವುದು ಆಗಿದೆ. ಪಂಜಾಬ್‌ ಈವರೆಗೆ ಆ ರೀತಿಯ ಆಡಳಿತವನ್ನು ನೋಡಿಲ್ಲ," ಎಂದು ಜಮ್ಹುರಿ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಸತ್ನಮ್ ಸಿಂಗ್ ಅಜ್ನಾಲಾ ಹೇಳಿದ್ದಾರೆ.

 ನಗರ ಸಮಸ್ಯೆಗಳು ಸ್ವಲ್ಪ ವಿಭಿನ್ನ

ನಗರ ಸಮಸ್ಯೆಗಳು ಸ್ವಲ್ಪ ವಿಭಿನ್ನ

ಅಮೃತಸರ ಪಶ್ಚಿಮ ವಿಧಾನಸಭಾ ಕ್ಷೇತ್ರದ ಎಸ್‌ಎಸ್‌ಎಂ ಅಭ್ಯರ್ಥಿ ಅಮರ್ಜಿತ್ ಸಿಂಗ್ ಅಸಲ್ ಮಾತನಾಡಿ, "ಎಸ್‌ಎಸ್‌ಎಂ ಘಟಕಗಳು ರೈತ ಸಂಘಗಳು ಆದರೆ ಕೈಗಾರಿಕೋದ್ಯಮಿಗಳು, ಅಂಗಡಿಯವರು, ಕಾರ್ಮಿಕರು ಮತ್ತು ಉದ್ಯೋಗಿಗಳಿಂದ ನಮಗೆ ಅಪಾರ ಬೆಂಬಲ ಸಿಕ್ಕಿದೆ. ಆದ್ದರಿಂದ ನಾವು ಪ್ರಚಾರಕ್ಕೆ ಹೋದಾಗ, ಜನರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ. ನಾವು ಈ ವಿಚಾರದಲ್ಲಿ ಗೆದ್ದಿದ್ದೇವೆ. ಆದರೆ ನಗರ ಸಮಸ್ಯೆಗಳು ಸ್ವಲ್ಪ ವಿಭಿನ್ನವಾಗಿವೆ," ಎಂದು ಅಭಿಪ್ರಾಯ ಪಟ್ಟಿದ್ದಾರೆ.

 ರೈತರ ಪಕ್ಷದ ಅಭ್ಯರ್ಥಿಗಳು

ರೈತರ ಪಕ್ಷದ ಅಭ್ಯರ್ಥಿಗಳು

ಪಂಜಾಬ್ ವಿಧಾನಸಭೆ ಚುನಾವಣೆ 2022ಕ್ಕೆ ರೈತ ಸಂಘಟನೆಗಳ ಪಕ್ಷವಾದ ಸಂಯುಕ್ತ ಸಮಾಜ ಮೋರ್ಚಾ ತನ್ನ ಎಂಟು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಇತ್ತೀಚಗೆ ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನ 17 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಜನವರಿ 17 ರಂದು, ಸಂಯುಕ್ತ ಸಮಾಜ ಮೋರ್ಚಾ (ಎಸ್‌ಎಸ್‌ಎಂ) ಮುಂಬರುವ ಪಂಜಾಬ್‌ ವಿಧಾನಸಭೆ ಚುನಾವಣೆಗೆ 20 ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಒಟ್ಟಾರೆಯಾಗಿ ಈವರೆಗೆ ಸಂಯುಕ್ತ ಸಮಾಜ ಮೋರ್ಚಾ 56 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಪಂಜಾಬ್ ವಿಧಾನಸಭಾ ಚುನಾವಣೆಗೆ ಗುರ್ನಾಮ್ ಸಿಂಗ್ ಚಾರುಣಿ ನೇತೃತ್ವದ ರಾಜಕೀಯ ಸಂಘಟನೆಯೊಂದಿಗೆ ಸಂಯುಕ್ತ ಸಮಾಜ ಮೋರ್ಚಾ ಮೈತ್ರಿಯನ್ನು ಮಾಡಿಕೊಂಡಿದೆ.

Recommended Video

      KL Rahul ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+