• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಜಾಬ್‌ ಎಎಪಿ ಸಿಎಂ ಅಭ್ಯರ್ಥಿ ಭಗವಂತ್‌ ಮನ್‌ ಯಾರು?

|
Google Oneindia Kannada News

ಚಂಡೀಗಢ, ಜನವರಿ 18: ಫೆಬ್ರವರಿಯಲ್ಲಿ ನಡೆಯಲಿರುವ ಮುಂಬರುವ ಪಂಜಾಬ್ ಅಸೆಂಬ್ಲಿ ಚುನಾವಣೆ 2022 ರಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುವುದು ಈಗಾಗಲೇ ಆಮ್‌ ಆದ್ಮಿ ಪಕ್ಷ ಬಹಿರಂಗ ಮಾಡಿದೆ. ರಾಜಕಾರಣಿಯಾಗಿ ಮಾರ್ಪಟ್ಟಿರುವ ಪಂಜಾಬ್‌ನ ನಟ ಭಗವಂತ್‌ ಮನ್‌ ಹೆಸರನ್ನು ಆಮ್‌ ಆದ್ಮಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರು ಘೋಷಣೆ ಮಾಡಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Breaking news: ಪಂಜಾಬ್‌ ಚುನಾವಣೆ: ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಎಎಪಿBreaking news: ಪಂಜಾಬ್‌ ಚುನಾವಣೆ: ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಎಎಪಿ

2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆಯನ್ನು ಎದುರಿಸಿದ್ದಾರೆ. ಆದರೆ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿದೆ. ಈ ಬಾರಿ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಸಂಗ್ರೂರು ಸಂಸದರನ್ನು ಆಮ್‌ ಆದ್ಮಿ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಹಾಗಾದರೆ ಭಗವಂತ್‌ ಮನ್‌ ಯಾರು ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

ಯಾರಿದು ಪಂಜಾಬ್‌ ಸಿಎಂ ಅಭ್ಯರ್ಥಿ ಭಗವಂತ್‌ ಮನ್‌?

48 ವರ್ಷದ ಭಗವಂತ್ ಮನ್‌ ಅಕ್ಟೋಬರ್ 17, 1973 ರಂದು ಸಂಗ್ರೂರಿನ ಸರ್ತೋಜ್ ಗ್ರಾಮದಲ್ಲಿ ಜನಿಸಿದರು. ಹಾಸ್ಯನಟ-ನಟ-ರಾಜಕಾರಣಿಯಾಗಿ ಪರಿವರ್ತನೆಗೊಂಡ ಭಗವಂತ್ ಮನ್‌ ಹೆಚ್ಚಾಗಿ ವಿವಾದದ ವಿಚಾರಗಳಲ್ಲಿ ಸುದ್ದಿಯಾಗಿದ್ದಾರೆ. ಜಟ್ ಸಿಖ್, ಭಗವಂತ್‌ ಮನ್‌ ಪಂಜಾಬ್‌ನ ಸಂಗ್ರೂರ್ ಕ್ಷೇತ್ರದ ಲೋಕಸಭಾ ಸಂಸದರಾಗಿದ್ದಾರೆ. ಭಗವಂತ್‌ ಮನ್‌ ಒಂದು ದಶಕದ ಹಿಂದೆ 2011 ರಲ್ಲಿ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಮೂಲಕ ರಾಜಕೀಯ ಪ್ರವೇಶಿಸಿದರು. ಮೊದಲು 2012 ರಲ್ಲಿ ಪಂಜಾಬ್‌ನ ಲೆಹ್ರಾ ಕ್ಷೇತ್ರಕ್ಕೆ ಸ್ಪರ್ಧಿಸಿ, ಪರಾಭವವಗೊಂಡಿದ್ದಾರೆ.

ಚನ್ನಿ ಮತ್ತೆ ಸಿಎಂ ಆಗ್ತಾರಾ?: ಕಾಂಗ್ರೆಸ್‌ ಶಾಸಕರು ಹೇಳುವುದು ಹೀಗೆ..ಚನ್ನಿ ಮತ್ತೆ ಸಿಎಂ ಆಗ್ತಾರಾ?: ಕಾಂಗ್ರೆಸ್‌ ಶಾಸಕರು ಹೇಳುವುದು ಹೀಗೆ..

ಬಳಿಕ 2014 ರಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಹಾಸ್ಯನಟ-ರಾಜಕಾರಣಿಯನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಭಗವಂತ್‌ ಮನ್‌ 2014 ರಲ್ಲಿ ಸಂಗ್ರೂರ್ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದ್ದರು. 2019 ರಲ್ಲಿ ಅದೇ ಸ್ಥಾನದಿಂದ ಮತ್ತೆ ಗೆಲುವು ಸಾಧಿಸಿದರು. ಪ್ರಸ್ತುತ ಪಂಜಾಬ್‌ನ ಏಕೈಕ ಎಎಪಿ ಸಂಸದರಾಗಿದ್ದಾರೆ. ಭಗವಂತ್‌ ಮನ್‌ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೇವಲ್ ಧಿಲ್ಲೋನ್ ಅವರನ್ನು 1,10,211 ಮತಗಳ ಅಂತರದಿಂದ ಸೋಲಿಸಿ ಸತತ ಎರಡನೇ ಬಾರಿಗೆ ಸ್ಥಾನ ಪಡೆದರು.

2019 ರಲ್ಲಿ ಪಂಜಾಬ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಭಗವಂತ್‌ ಮನ್‌ ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುವುದಾಗಿ ಘೋಷಿಸಿದ್ದರು. ಭಗವಂತ್‌ ಮನ್‌ ದೂರದರ್ಶನ ಕಾರ್ಯಕ್ರಮ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಕೆಲಸ ಮಾಡಿದರು. ಇನ್ನು ಮುಂದೆ ಫೆಬ್ರವರಿಯಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಧುರಿ ವಿಧಾನಸಭಾ ಕ್ಷೇತ್ರದಿಂದ ಭಗವಂತ್‌ ಮನ್‌ ಸ್ಪರ್ಧಿಸುವ ಸಾಧ್ಯತೆ ಇದೆ. ಭಗವಂತ್‌ ಮನ್‌ ತಮ್ಮದೇ ಆದ ಚಾರಿಟಬಲ್ ಫೌಂಡೇಶನ್ ಅನ್ನು ಹೊಂದಿದ್ದಾರೆ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಹಾಯ ಮಾಡುವ ಲೋಕ್ ಲೆಹರ್ ಫೌಂಡೇಶನ್ ಅದಾಗಿದೆ. ಈ ಹಿಂದೆ ಇರಾಕ್‌ನಿಂದ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ಕರೆತರಲು ಭಗವಂತ್ ಮನ್‌ ಕಾರ್ಯ ನಿರ್ವಹಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

ಭಗವಂತ ಖೂಬಾ
Know all about
ಭಗವಂತ ಖೂಬಾ
English summary
Who is Bhagwant Mann, AAP's CM candidate for Punjab Assembly Elections 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X