ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Oneindia Explainer: ಹೊಸ ರಾಷ್ಟ್ರಪತಿ ಆಯ್ಕೆ ಹೇಗೆ? ಏನಿದು electoral-college?

|
Google Oneindia Kannada News

ಭಾರತದ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರ ಅವಧಿ ಮುಕ್ತಾಯ ಹಂತಕ್ಕೆ ತಲುಪಿದ್ದು, ನೂತನ ರಾಷ್ಟ್ರಪತಿ ಆಯ್ಕೆಗೆ ದಿನಾಂಕವನ್ನು ಜೂನ್ 9ರಂದು ಘೋಷಣೆ ಮಾಡಲಾಗಿದೆ.

ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ, ಜುಲೈ 18ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ ಎಂದು ಪ್ರಕಟಿಸಿದರು.

Oneindia Expaliner: ರಾಜ್ಯಸಭೆಗೆ ಚುನಾವಣೆ ಹೇಗೆ ನಡೆಯಲಿದೆ?Oneindia Expaliner: ರಾಜ್ಯಸಭೆಗೆ ಚುನಾವಣೆ ಹೇಗೆ ನಡೆಯಲಿದೆ?

ಈ ಬಾರಿ ಸಂಸದರ ಮತದ ಮೌಲ್ಯ 700 ಆಗಿದೆ. ಬಂಧನದಲ್ಲಿರುವ ಜನಪ್ರತಿನಿಧಿಗಳಿಗೂ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಜೈಲಿನಲ್ಲಿರುವವರು ಪೆರೋಲ್‌ಗೆ ಅರ್ಜಿ ಸಲ್ಲಿಸಬೇಕು ಮತ್ತು ಪೆರೋಲ್ ಪಡೆದರೆ ಅವರು ಮತ ಚಲಾಯಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಸಂಖ್ಯೆ. ರಾಜ್ಯ/ಕೇಂದ್ರಾಡಳಿತ ಪ್ರದೇಶ ಶಾಸಕರು ಜನಸಂಖ್ಯೆ ಮತದ ಮೌಲ್ಯ ಒಟ್ಟು ಮತದ ಮೌಲ್ಯ
1 ಆಂಧ್ರಪ್ರದೇಶ 175 43,502,708 248 43400
2 ಅರುಣಾಚಾಲ ಪ್ರದೇಶ 60 467,511 8 480
3 ಅಸ್ಸಾಂ 126 14,625,152 116 14,616
4 ಬಿಹಾರ 243 42,126,236 173 42,039
5 ಛತ್ತೀಸ್ ಗಢ 90 11,637,494 129 11,610
6 ದೆಹಲಿ 70 4,065,698 58 4,060
7 ಗೋವಾ 40 795,120 20 800
8 ಗುಜರಾತ್ 182 26,697,475 147 26,754
9 ಹರ್ಯಾಣ 90 10,036,808 112 10,080
10 ಹಿಮಾಚಲ ಪ್ರದೇಶ 68 3,460,434 51 3468
11 ಜಮ್ಮು ಮತ್ತು ಕಾಶ್ಮೀರ -- -- --- ---
12 ಜಾರ್ಖಂಡ್ 81 14,227,133 176 14,256
13 ಕರ್ನಾಟಕ 224 29,299,014 131 29,344
14 ಕೇರಳ 140 21,347,375 152 21,280
15 ಮಧ್ಯ ಪ್ರದೇಶ 230 30,016,625 131 30,130
16 ಮಹಾರಾಷ್ಟ್ರ 288 50,412,235 175 50,400
17 ಮಣಿಪುರ 60 1,072,753 18 1,080
18 ಮೇಘಾಲಯ 60 1,011,699 17 1,020
19 ಮಿಜೋರಾಂ 40 332,390 8 320
20 ನಾಗಾಲ್ಯಾಂಡ್ 60 516,499 9 540
21 ಒಡಿಶಾ 147 21,944,615 149 21,903
22 ಪುದುಚೇರಿ 30 471,707 16 480
23 ಪಂಜಾಬ್ 117 13,551,060 116 13,572
24 ರಾಜಸ್ಥಾನ 200 25,765,806 129 25,800
25 ಸಿಕ್ಕಿಂ 32 209,843 7 224
26 ತಮಿಳುನಾಡು 234 41,199,168 176 41,184
27 ತೆಲಂಗಾಣ 119 43,502,708 148 17612
28 ತ್ರಿಪುರಾ 60 1,556,342 26 1,560
29 ಉತ್ತರಪ್ರದೇಶ 403 83,849,905 208 83,824
30 ಉತ್ತರಾಖಂಡ 70 4,491,239 64 4,480
31 ಪಶ್ಚಿಮ ಬಂಗಾಳ 294 44,312,011 151 44,394
Total 4,120 549,302,055 549,474

(ಒನ್ಇಂಡಿಯಾ ಸುದ್ದಿ)

ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಸಕರಿಲ್ಲದ ಕಾರಣ ಸಂಸದರ ಮತ ಮೌಲ್ಯ ಕುಸಿಯಲಿದೆ.

ಹೊಸ ರಾಷ್ಟ್ರಪತಿಯನ್ನು ಭಾರತದ ಜನಪ್ರತಿನಿಧಿಗಳು ಆಯ್ಕೆ ಮಾಡಲಿದ್ದಾರೆ? ಭಾರತದ ರಾಷ್ಟಪತಿ ಅಯ್ಕೆಗೆ ಮತದಾನ ಮಾಡುವ ಜನಪ್ರತಿನಿಧಿಗಳ ಸಂಖ್ಯೆ ಎಷ್ಟು electrol college ಹೇಗಿದೆ? ಮುಂದೆ ಓದಿ...

ವ್ಯಕ್ತಿ ಚಿತ್ರ: ದಲಿತ ನಾಯಕ, ವಕೀಲ ರಾಮನಾಥ್ ಕೋವಿಂದ್ವ್ಯಕ್ತಿ ಚಿತ್ರ: ದಲಿತ ನಾಯಕ, ವಕೀಲ ರಾಮನಾಥ್ ಕೋವಿಂದ್

 ಎಷ್ಟು ಮತಗಳು ಬೇಕು?

ಎಷ್ಟು ಮತಗಳು ಬೇಕು?

ಜುಲೈ 24ರಂದು ರಾಮನಾಥ್‌ ಕೋವಿಂದ್‌ ಅಧಿಕಾರಾವಧಿ ಅಂತ್ಯಗೊಳ್ಳಲಿದೆ. ಸಾಮಾನ್ಯವಾಗಿ ಅಧಿಕಾರಾವಧಿಗಿಂತ ಮುನ್ನವೇ ಚುನಾವಣೆ ನಡೆಯುತ್ತದೆ ಮತ್ತು ಮುಂದಿನ ರಾಷ್ಟ್ರಪತಿಗಳನ್ನು ಹಾಲಿ ರಾಷ್ಟ್ರಪತಿ ಸ್ವಾಗತಿಸಿ ನಂತರ ನಿರ್ಗಮಿಸುತ್ತಾರೆ. 2017ರ ಜುಲೈ 17ರಂದು ರಾಮನಾಥ್‌ ಕೋವಿಂದ್‌ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 233 ಸಂಸದರು ಸೇರಿ ಒಟ್ಟಾರೆ 776 ಸಂಸದರಿರುತ್ತಾರೆ. 4,809 ಶಾಸಕರು ಮತ ಚಲಾವಣೆ ಮಾಡುವ ಮೂಲಕ ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ.

ಎಷ್ಟು ಮತಗಳು ಬೇಕು?; 776 ಸಂಸದರು, 4,120 ಶಾಸಕರು ಸೇರಿ 10,98,903 ಮತದಾರರು ಸೇರಿ ರಾಷ್ಟ್ರಪತಿಗಳನ್ನು ಆಯ್ಕೆ ಮಾಡುತ್ತಾರೆ. ಬಿಜೆಪಿ ಇದರಲ್ಲಿ ಶೇ 50ಕ್ಕಿಂತ ಹೆಚ್ಚಿನ ಮತಗಳನ್ನು ಹೊಂದಿದೆ. ಸದ್ಯ ರಾಷ್ಟ್ರಪತಿಯಾಗಿರುವ ರಾಮನಾಥ್ ಕೋವಿಂದ್ ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸು ಕುರಿತು ಚರ್ಚೆಗಳು ನಡೆದಿದೆ. ಆದರೆ ಇದುವರೆಗೂ ರಾಜೇಂದ್ರ ಪ್ರಸಾದ್ ಹೊರತುಪಡಿಸಿದರೆ ಬೇರೆ ಯಾರೂ ಸಹ ಎರಡನೇ ಅವಧಿಗೆ ರಾಷ್ಟ್ರಪತಿಯಾಗಿ ಆಯ್ಕೆಯಾಗಿಲ್ಲ.

ಏಲೆಕ್ಟ್ರೋಲ್ ಕಾಲೇಜ್

ಏಲೆಕ್ಟ್ರೋಲ್ ಕಾಲೇಜ್

ಏಲೆಕ್ಟ್ರೋಲ್ ಕಾಲೇಜ್ ಎಂದರೆ ಯಾವುದೇ ಸ್ಥಳವಲ್ಲ. ಬದಲಿಗೆ ರಾಷ್ಟ್ರಪತಿ/ಉಪ ರಾಷ್ಟ್ರಪತಿ ಆಯ್ಕೆಗೆ ಜನಪ್ರತಿನಿಧಿಗಳ ಒಟ್ಟಾರೆ ಸಮೂಹ ಒಕ್ಕೂಟ ವ್ಯವಸ್ಥೆಯಲ್ಲಿ ಆಯ್ಕೆ ಮಾಡುವ ವಿಧಾನ.

ಈ ಎಲೆಕ್ಟ್ರೋಲ್ ಕಾಲೇಜ್ ಲೋಕಸಭಾ, ರಾಜ್ಯಸಭಾ, ವಿಧಾನಸಭಾ ಸದಸ್ಯರನ್ನು ಒಳಗೊಂಡಿರುತ್ತದೆ. ಎಲ್ಲಾ ರಾಜ್ಯಗಳಲ್ಲದೆ, ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪಾಂಡಿಚೇರಿಯ ಶಾಸಕರೂ ಈ ಚುನಾವಣೆಯಲ್ಲಿ ಭಾಗವಹಿಸುತ್ತಾರೆ.

ಎಲೆಕ್ಟ್ರೋಲ್ ಮತಗಳು: ಎಲೆಕ್ಟ್ರೋಲ್ ಕಾಲೇಜಿನ ಒಟ್ಟು ಮತಗಳು 10.98 ಲಕ್ಷ. ರಾಷ್ಟ್ರಪತಿ ಆಯ್ಕೆಗೆ ಬೇಕಾಗಿರುವ ಸರಳ ಬಹುಮತ 5.49 ಲಕ್ಷ ಎಲೆಕ್ಟ್ರೋಲ್ ಮತಗಳು. ಲೋಕಸಭೆ ಮತ್ತು ರಾಜ್ಯಸಭೆಯ ಒಬ್ಬ ಸದಸ್ಯರ ಮತದ ಮೌಲ್ಯ 708 ಎಲೆಕ್ಟ್ರೋಲ್ ಮತಗಳು. ಶಾಸಕರ ಎಲೆಕ್ಟ್ರೋಲ್ ಮತಗಳ ಮೌಲ್ಯ ಆಯಾ ರಾಜ್ಯದ ಜನಸಂಖ್ಯೆಗೆ ಮತ್ತು ಶಾಸಕರ ಸಂಖ್ಯೆಗೆ ತಕ್ಕಂತೆ ಭಿನ್ನವಾಗಿರುತ್ತದೆ. ಆಯಾ ರಾಜ್ಯದ ಒಟ್ಟು ಜನಸಂಖ್ಯೆಯನ್ನು ರಾಜ್ಯದ ಒಟ್ಟು ಶಾಸಕರ ಸಂಖ್ಯೆಯಿಂದ ಭಾಗಿಸಿದಾಗ ಬರುವ ಶೇಷವನ್ನು ಪುನಃ 1000 ದಿಂದ ಭಾಗಿಸಿದಾಗ ಬರುವ ಉತ್ತರವೇ ಆ ರಾಜ್ಯದ ಒಬ್ಬ ಶಾಸಕನ ಎಲೆಕ್ಟ್ರೋಲ್ ವೋಟಿನ ಮೌಲ್ಯವಾಗಿರುತ್ತದೆ.

 ಮತ ಮೌಲ್ಯ 5,49,442 ಸಾಕು

ಮತ ಮೌಲ್ಯ 5,49,442 ಸಾಕು

ಎಲೆಕ್ಟ್ರೋಲ್ ಕಾಲೇಜಿನಲ್ಲಿ ರಾಷ್ಟ್ರಪತಿಗಳನ್ನು ಆಯ್ಕೆ ಮಾಡಲು ಮತ ಮೌಲ್ಯ 5,49,442 ಸಾಕು. ಎಲೆಕ್ಟ್ರೋಲ್ ಕಾಲೇಜು 4,896 ಶಾಸಕರನ್ನು ಒಳಗೊಂಡಿದೆ. ಇದರಲ್ಲಿ 776 ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಮತ್ತು 4,120 ಶಾಸಕರು ಸೇರಿದ್ದಾರೆ. 87 ಶಾಸಕರನ್ನು ಹೊಂದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲದ ಕಾರಣ ಈ ಬಾರಿ ಸಂಖ್ಯೆ 4,809 ಆಗಲಿದೆ. ನಾಮಾಂಕಿತ ಸದಸ್ಯರು ಹಾಗೂ ಎಂಎಲ್‌ಸಿ ಗಳಿಗೆ ಮತದಾನದ ಅವಕಾಶ ಇರುವುದಿಲ್ಲ.

 ಬಿಜೆಪಿಗೆ ಮಿತ್ರಪಕ್ಷಗಳ ನೆರವು ಅಗತ್ಯ

ಬಿಜೆಪಿಗೆ ಮಿತ್ರಪಕ್ಷಗಳ ನೆರವು ಅಗತ್ಯ

ಬಿಜೆಪಿಗೆ ರಾಷ್ಟ್ರಪತಿ ಆಯ್ಕೆಗೆ ಅಗತ್ಯವಿರುವ 17,500 ಮತಗಳ ಕೊರತೆ ಉಂಟಾಗುತ್ತಿದೆ. ಬಿಜೆಪಿ ಬಳಿ ಇರುವ ಎಲೆಕ್ಟ್ರೋಲ್ ಮತಗಳು 5.32 ಲಕ್ಷ. ಎಐಎಡಿ ಎಂಕೆ ಮತ್ತು ಬಿಜೆಡಿ ಪಕ್ಷಗಳು ಬೆಂಬಲ ನೀಡಿದರೆ ಬಿಜೆಪಿ 6.28 ಎಲೆಕ್ಟ್ರೋಲ್ ವೋಟುಗಳನ್ನು ಪಡೆಯುತ್ತದೆ. ಸದ್ಯ ಬಿಜೆಪಿ ಎಲ್ಲ ಶಾಸಕರು ಮತ್ತು ಸಂಸದರ ಮತಗಳ ಪೈಕಿ ಬಿಜೆಪಿ ಶೇ.48.9ರಷ್ಟು ಮತಗಳನ್ನು ಹೊಂದಿದೆ. ಪ್ರತಿಪಕ್ಷಗಳು ಮತ್ತು ಇತರ ಪಕ್ಷಗಳು ಶೇ. 51.1 ರಷ್ಟಿವೆ. ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಜೆಪಿಗೆ ಬಿಜೆಡಿ ಅಥವಾ ವೈಎಸ್‌ಆರ್ ಕಾಂಗ್ರೆಸ್‌ನ ಮತಗಳ ನೆರವು ಬೇಕಾಗುತ್ತದೆ.

2017 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು ಶೇ.50 ರಷ್ಟು ಮತಗಳು ಎನ್‌ಡಿಎ ಪರವಾಗಿ ಇದ್ದವು. ಒಟ್ಟು 4,880 ಮತದಾರರಲ್ಲಿ 4,109 ಶಾಸಕರು ಮತ್ತು 771 ಸಂಸದರು ಮತ ಚಲಾಯಿಸಿದ್ದರು. ಅಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ಜನರಿಗೆ ಭಾಗವಹಿಸಲು ಅವಕಾಶವಿಲ್ಲ. ಚುನಾಯಿತ ಜನಪ್ರತಿನಿಧಿಗಳು ಮತ ಚಲಾಯಿಸಿದ್ದರು.

Recommended Video

Suresh Kumar: ಹೊರಟ್ಟಿ ಗೆಲುವು ನಿಶ್ಚಿತ- ಶಿಕ್ಷಣ ಸಚಿವ ನಾಗೇಶ | OneIndia Kannada
 ಇಲ್ಲಿ ತನಕ ನಡೆದ ಚುನಾವಣೆ

ಇಲ್ಲಿ ತನಕ ನಡೆದ ಚುನಾವಣೆ

ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯ ಪ್ರಕಾರ, J&K ಕೇಂದ್ರಾಡಳಿತ ಪ್ರದೇಶವು ಶಾಸಕಾಂಗ ಸಭೆಯನ್ನು ಹೊಂದಿರುತ್ತದೆ, ಆದರೆ ಲಡಾಖ್ ನೇರವಾಗಿ ಕೇಂದ್ರದಿಂದ ಆಡಳಿತ ನಡೆಸುತ್ತದೆ. 87 ಶಾಸಕರನ್ನು ಹೊಂದಿದ್ದ ಜಮ್ಮು ಮತ್ತು ಕಾಶ್ಮೀರ 72 ಮತ ಮೌಲ್ಯ ಹೊಂದಿತ್ತು ಹಾಗೂ ಒಟ್ಟು 6,264 ಮತ ಮೌಲ್ಯ ಈಗ ಕಡಿಮೆಯಾಗಲಿದೆ.

ಮೊದಲ ಎರಡು ಚುನಾವಣೆಗಳಲ್ಲಿ ಡಾ ರಾಜೇಂದ್ರ ಪ್ರಸಾದ್ ಸತತ ಗೆಲುವು ಸಾಧಿಸಿದ್ದರು. ಇಲ್ಲಿ ತನಕ 14 ಪ್ರಥಮ ಪ್ರಜೆಗಳನ್ನು ಭಾರತ ತಂಡಿದೆ. 2022 ರಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯು16ನೇ ರಾಷ್ಟ್ರಪತಿಗಳನ್ನು ಆಯ್ಕೆ ಮಾಡಲಿದೆ. ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಾಗಿ ಕ್ರಮವಾಗಿ 1952, 1957, 1962, 1967, 1969, 1974, 1977, 1982, 1987, 1992, 1997, 2002, 2007, 2012 ರಲ್ಲಿ ನಡೆದಿವೆ.

English summary
President Election In India 2022 : Who elects the President of India? Here we explained in detail on How is the President of India elected in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X