Viral Video of Baby Cat: ಹೆದ್ದಾರಿಯಲ್ಲಿ ಹೃದಯಸ್ಪರ್ಶಿ ಘಟನೆ, ಪೊಲೀಸ್‌ ಅಧಿಕಾರಿಗೆ ನೆಟ್ಟಿಗರ ಪ್ರಶಂಸೆ

ಬೆಂಗಳೂರು, ಜೂನ್ 06: ಸಾಕು ಪ್ರಾಣಿಗಳೆಂದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೆಗೂ ಎಲ್ಲಿರಿಗೂ ಇಷ್ಟವಾಗುತ್ತವೆ. ಅವುಗಳಿಗೂ ಚೂರೇ ಚೂರು ನೋವಾದರೂ ತಮಗೆ ನೋವಾಗಿದೆ ಎಂಬಂತೆ ಕೆಲವು ಫೀಲ್ ಮಾಡಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಪ್ರಾಣಿಗಳನ್ನು ಪ್ರೀತಿಸುವವರು ಮಧ್ಯೆ ಇದ್ದಾರೆ. ಇದೇ ರೀತಿ ಬೆಕ್ಕಿನ ಮರಿಗೆ ಎದುರಾಗಿದ್ದ ಸಂಕಷ್ಟವನ್ನು ತಪ್ಪಿಸಿದ ಪೊಲೀಸ್ ಆಫೀಸರ್ ವಿಡಿಯೋ ಭಾರೀ ವೈರಲ್ ಆಗಿದೆ. ನೆಟ್ಟಿಗರು ರಿಯಲ್ ಹಿರೋ ಎಂದಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು ಎಂದಿನಂತೆ ಗಸ್ತು ತಿರುಗುವ ವೇಳೆ ಅತ್ಯಧಿಕ ವಾಹನಗಳ ಸಂಚರಿಸುವ ಹೆದ್ದಾರಿಯ ಮಧ್ಯದಲ್ಲಿ ಬೆಕ್ಕಿನ ಮರಿಯೊಂದು ಪರತಪಿಸುತ್ತಿತ್ತು. ಯಾವ ಕಡೆ ಹೋಗಬೇಕೆಂದು ತಿಳಿಯದೇ ವಾಹನಗಳ ಜೋರು ಶಬ್ದ ಭಯಪಟ್ಟು ನಡುರಸ್ತೆಯಲ್ಲೇ ಸಿಲುಕಿಕೊಂಡಿತ್ತು.

Police Officers Rescue Baby Cat on Highway Wins Hearts of Netizens Video Goes Viral

ಇದೇ ವೇಳೆಗೆ ಜೋರಾಗಿ ಬಂದ ಲಾರಿಯೊಂದು ಬೆಕ್ಕಿನ ಹತ್ತಿರಕ್ಕೆ ಹೋಗಿ ನಿಲ್ಲಿಸಿದ್ದನ್ನು ಗಸ್ತು ತಿರುತ್ತಿದ್ದ ಈ ಪೊಲೀಸ್ ಅಧಿಕಾರಿ ನೋಡಿದರು. ನಂತರ ಆ ಬೆಕ್ಕಿನ ಮರಿಯನ್ನು ರಕ್ಷಿಸಲು ಮುಂದಾದ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಾಣಿಪ್ರಿಯರು ಫುಲ್ ಖುಷ್

ಬೆಕ್ಕಿನ ಮರಿ ಹೆದ್ದಾರಿಯಲ್ಲಿ ಇರುವುದ್ದನ್ನು ಕಂಡು ಪೊಲೀಸ್ ಇಲಾಖೆ ಅದನ್ನು ರಕ್ಷಣೆ ಮಾಡಿದ ಈ ಹೃದಯಸ್ಪರ್ಶಿ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಯುಎಸ್‌ ನಲ್ಲಿ (NW US Hwy 441) ನಡೆದಿರುವ ಘಟನೆ ವೀಡಿಯೊದಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಶೇರ್ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಮೆಚ್ಚಿ, ನೀವೇ ರಿಯಲ್ ಹಿರೋ ಎಂದಿದ್ದಾರೆ. ಇದನ್ನು ಕಂಡ ಪ್ರಾಣಿ ಪ್ರಿಯರು ಫುಲ್ ಖುಷಿ ಪಟ್ಟಿದ್ದು, ವಿಡಿಯೋವನ್ನು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮೂಕ ಜೀವಿಯ ರಕ್ಷಣೆ ವಿಡಿಯೋದಲ್ಲಿ ಸೆರೆ

ಹೆದ್ದಾರಿಯಲ್ಲಿ ವಾಹನಗಳ ಅಡಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದ, ರಸ್ತೆ ದಾಟಲಾಗದೇ ಪರದಾಡಿ ಕಪ್ಪು ಬಣ್ಣದ ಬೆಕ್ಕಿನ ಮರಿಯನ್ನು ಇವರು ರಕ್ಷಿಸಿದ್ದಾರೆ. ಮೊದಲು ರಸ್ತೆ ಮಧ್ಯೆ ನಿಂತಿದ್ದ ಲಾರಿ ಚಕ್ರದ ಪಕ್ಕದಲ್ಲಿದ್ದ ಬೆಕ್ಕಿನ ಮರಿ ರಕ್ಷಿಸಲು ಲಾರಿ ಚಾಲಕರ ಸಹಾಯ ಕೇಳಿದ್ದಾರೆ. ನಂತರ ಮರಿಯನ್ನು ಹಿಡಿದು ತಮ್ಮ ಕಾರಿನೊಳಗೆ ತೆಗೆದುಕೊಂಡು ಬಂದಿದ್ದಾರೆ. ಅಪಾಯದಲ್ಲಿದ್ದ ಮೂಕ ಜೀವಿಗೆ ಅವರು ಆಸರೆಯಾಗಿದ್ದಾರೆ. ಇದೆಲ್ಲವು ಈ ವಿಡಿಯೋ ಸೆರೆಯಾಗಿದೆ.

ಇದಕ್ಕೆ ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು ಅಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ. ಬೆಕ್ಕಿನ ಮರಿ ಅದೃಷ್ಟ ಮಾಡಿದೆ. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ರಕ್ಷಣೆ ಮಾಡಿದ ಕಪ್ಪು ಬಣ್ಣದ ಬೆಕ್ಕಿನ ಮರಿಯನ್ನು ತಮ್ಮ ಕಾರಿನಲ್ಲಿಟ್ಟುಕೊಂಡು ಜೋಪಾನವಾಗಿ ಒಯ್ದ ಅಧಿಕಾರಿಯ ಮಾನವೀಯ ಗುಣಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಜೀವ ಉಳಿಸುವುದು ಉತ್ತಮ ಕಾರ್ಯ ಎಂದು ಪೊಲೀಸ್ ಅಧಿಕಾರಿ ಕಾರ್ಯ ಶ್ಲಾಘಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+