ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶೂನ್ಯ ಆವರಿಸಿದೆ', ವಾಜಪೇಯಿ ಅಗಲಿಕೆ ನೋವಲ್ಲಿ ಮೋದಿ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 15: ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯ ನೋವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ದೆಹಲಿಯ ಏಮ್ಸ್ ನಲ್ಲಿ 5.05ರ ಸುಮಾರಿಗೆ ಆಗಸ್ಟ್ 16ರ ಗುರುವಾರ ಸಂಜೆ ಭಾರತದ ಹೆಮ್ಮೆಯ ಪುತ್ರ ಅಟಲ್ ಅವರ ದೇಹಾಂತ್ಯವಾಗಿದೆ. ವಾಜಪೇಯಿಯ ನಿಧನದ ಬಗ್ಗೆ ಭಾವನಾತ್ಮಕವಾಗಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿಯನ್ನು ಹಂತ ಹಂತವಾಗಿ ಕಟ್ಟಿ ಬೆಳೆಸಿದ ಧೀಮಂತ ನಾಯಕ, ದೇಶದ ಉದ್ದಗಲಕ್ಕೂ ಸಂಚರಿಸಿ ಬಿಜೆಪಿ ಬಗ್ಗೆ ಜನರಲ್ಲಿ ಗೌರವ ತಂದ ಮುಖಂಡ, ಇಂದು ದೇಶದಲ್ಲಿ ರಾಷ್ಟ್ರ್ರೀಯ ಪಕ್ಷವಾಗಿ, ಅನೇಕ ರಾಜ್ಯಗಳಲ್ಲಿ ಅಧಿಕಾರ ಅನುಭವಿಸಲು ಅಟಲ್ ಜೀ ಅವರ ಕಠಿಣ ಪರಿಶ್ರಮವೇ ಕಾರಣ ಎಂದು ಮೋದಿ ಅವರು ಸ್ಮರಿಸಿದ್ದಾರೆ.

ವಾಜಪೇಯಿಯ ಬಿಚ್ಚು ಮನಸ್ಸಿನ ಭಾಷಣಗಳು</a> | <a class=ವಾಜಪೇಯಿಯ 5 ನಿರ್ಣಯಗಳು" title="ವಾಜಪೇಯಿಯ ಬಿಚ್ಚು ಮನಸ್ಸಿನ ಭಾಷಣಗಳು | ವಾಜಪೇಯಿಯ 5 ನಿರ್ಣಯಗಳು" />ವಾಜಪೇಯಿಯ ಬಿಚ್ಚು ಮನಸ್ಸಿನ ಭಾಷಣಗಳು | ವಾಜಪೇಯಿಯ 5 ನಿರ್ಣಯಗಳು

ನನಗೆ ಮಾತನಾಡಲು ಪದಗಳಿಲ್ಲ. ನಾನು ಭಾವುಕನಾಗಿದ್ದೇನೆ. ಗೌರವಾನ್ವಿತ ಅಟಲ್​ ಜೀ ಅವರು ಇನ್ನಿಲ್ಲ. ಅವರ ಜೀವನದ ಪ್ರತಿಯೊಂದು ಕ್ಷಣವೂ ದೇಶಕ್ಕಾಗಿಯೇ ಸಮರ್ಪಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ.

ಮೋದಿ ಮಾಡಿದ ಟ್ವೀಟ್ಸ್

ಬಿಜೆಪಿಯನ್ನು ಹಂತ ಹಂತವಾಗಿ ಕಟ್ಟಿ ಬೆಳೆಸಿದ ಧೀಮಂತ ನಾಯಕ, ದೇಶದ ಉದ್ದಗಲಕ್ಕೂ ಸಂಚರಿಸಿ ಬಿಜೆಪಿ ಬಗ್ಗೆ ಜನರಲ್ಲಿ ಗೌರವ ತಂದ ಮುಖಂಡ, ಇಂದು ದೇಶದಲ್ಲಿ ರಾಷ್ಟ್ರ್ರೀಯ ಪಕ್ಷವಾಗಿ, ಅನೇಕ ರಾಜ್ಯಗಳಲ್ಲಿ ಅಧಿಕಾರ ಅನುಭವಿಸಲು ಅಟಲ್ ಜೀ ಅವರ ಕಠಿಣ ಪರಿಶ್ರಮವೇ ಕಾರಣ ಎಂದು ಮೋದಿ ಅವರು ಸ್ಮರಿಸಿದ್ದಾರೆ.

ಅವರು ಕಲಿಸಿದ ಪಾಠಗಳು ಎಂದಿಗೂ ಅನುಕರಣೀಯ

ಆಟಲ್ ಜೀ ಅವರ ನಿಧನ ವೈಯಕ್ತಿಕವಾಗಿ ಭಾರಿ ನಷ್ಟವಾಗಿದೆ. ಅವರೊಂದಿಗೆ ಅಚ್ಚಳಿಯದ ಅಗಣಿತ ನೆನಪುಗಳಿವೆ. ನನ್ನಂಥ ಕಾರ್ಯಕರ್ತರಿಗೆ ಅವರು ಸ್ಫೂರ್ತಿಯಾಗಿದ್ದರು. ಹಾಸ್ಯದ ಧಾಟಿಯಲ್ಲಿ ಅವರು ಕಲಿಸಿದ ಪಾಠಗಳು ಎಂದಿಗೂ ಅನುಕರಣೀಯ.

ಭಾರತ ಅಭ್ಯುದಯಕ್ಕೆ ಅಡಿಗಲ್ಲು ಹಾಕಿದರು

ಅಟಲ್ ಅವರ ದೂರದರ್ಶಿತ್ವದ ಫಲವಾಗಿ 21ನೇ ಶತಮಾನದಲ್ಲಿ ಭಾರತ ಪ್ರಕಾಶಿಸುವಂತಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಅನುಕೂಲವಾಗುವಂಥ ಹಲವು ಯೋಜನೆಗಳ ಹರಿಕಾರರಾಗಿದ್ದರು. ಭಾರತ ಅಭ್ಯುದಯಕ್ಕೆ ಅಡಿಗಲ್ಲು ಹಾಕಿದರು.

ಓಂ ಶಾಂತಿ, ವಾಜಪೇಯಿ ಅಗಲಿಕೆ ನೋವು

ವಾಜಪೇಯಿ ಅವರ ಅಗಲಿಕೆಯೊಂದಿಗೆ ಒಂದು ಯುಗಾಂತ್ಯವಾಗಿದೆ. ದೇಶಕ್ಕಾಗಿ ಜೀವಿಸಿ, ದಶಕಗಳ ಕಾಲ ಸೇವೆ ಸಲ್ಲಿಸಿದ ನಾಯಕನ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ, ಅಭಿಮಾನಿಗಳಿಗೆ ಸಿಗಲಿ, ಓಂ ಶಾಂತಿ

ಸಾವಿಗೆ ಸರಿಯಾದ ವಯಸ್ಸುಯಾವುದು?

ಸಾವಿಗೆ ಸರಿಯಾದ ವಯಸ್ಸು ಯಾವುದು? ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಕವನವೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಮೋದಿ.

ವಾಜಪೇಯಿಯ ನಿಧನದ ಬಗ್ಗೆ ಮೋದಿ

ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯ ನೋವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

English summary
The passing away of former Prime Minister of India, Atal Vajpayee has seen an outpouring of grief across the nation. The former PM who was conferred with the Bharat Ratna passed away at AIIMS at 5.05 on August 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X