'ಉಪ್ಪಿನಕಾಯಿ ಪ್ರಿಯೆ' ನಿರ್ಮಲಾ ಸೀತಾರಾಮನ್ ಗೆ ಹಣಕಾಸು ವಿಚಾರವೂ ಹೊಸತಲ್ಲ
ಐದು ದಶಕಗಳ ನಂತರ ಹಣಕಾಸು ಇಲಾಖೆ ವಹಿಸಿಕೊಳ್ಳುತ್ತಿರುವ ಮಹಿಳೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವವರು. ಕಳೆದ ಅವಧಿಯಲ್ಲಿ ಹಣಕಾಸು ಸಚಿವಾಲಯ ರಾಜ್ಯ ಖಾತೆ ನಿರ್ವಹಣೆ ಮಾಡಿದ ಅನುಭವ ಅವರಿಗಿದೆ. ಆಗ ಅವರು ವಾಣಿಜ್ಯ ಇಲಾಖೆಯನ್ನು ನಿರ್ವಹಿಸುತ್ತಿದ್ದರು. ಆ ನಂತರ ಪೂರ್ಣಾವಧಿಯಾಗಿ ರಕ್ಷಣಾ ಖಾತೆಯನ್ನು ವಹಿಸಿಕೊಂಡರು.
ನಿರ್ಮಲಾ ಸೀತಾರಾಮನ್ ಅವರ ಟ್ವೀಟ್ ಗಳೇ ಆಕೆಗೆ ಇರುವ ವ್ಯಕ್ತಿತ್ವ ಹಾಗೂ ತಮ್ಮ ಇಲಾಖೆ ಬಗ್ಗೆ ಇರುವ ಜ್ಞಾನವನ್ನು ಸೂಚಿಸುತ್ತದೆ. ಆಟೋಮೊಬೈಲ್ಸ್ ಮಾರಾಟ- ಇದು ಭಾರತದ ನಗರ ಹಾಗೂ ಗ್ರಾಮೀಣ ಪ್ರದೇಶದ ಬೇಡಿಕೆಯ ಮುಖ್ಯ ಸೂಚಕ. ಅದೀಗ ಕುಸಿಯುತ್ತಾ ಬಂದಿದೆ. ಏಪ್ರಿಲ್ ನಲ್ಲಿ ಹದಿನಾರು ಪರ್ಸೆಂಟ್ ಇಳಿದಿತ್ತು. ಅದು ಕಾರಿನ ಮಾರಾಟಕ್ಕೆ ಮಾತ್ರ ಅಲ್ಲ. ಅದು ವಿಮಾನ ಯಾನದಿಂದ ಗ್ರಾಹಕರ ವಸ್ತುಗಳ ತನಕ ಬೇಡಿಕೆ ತಗ್ಗಿತ್ತು.
ಈ ಅಂಶಗಳು ಭಾರತದ ಆರ್ಥಿಕತೆಗೆ ಹಿನ್ನಡೆ ಆಗಿದೆ. ಈ ಟ್ವೀಟ್ ಅನ್ನು ನಿರ್ಮಲಾ ಕಳೆದ ವರ್ಷ ಜಿಡಿಪಿ ಎಂಟು ಪರ್ಸೆಂಟ್ ದಾಟಿದ್ದಾಗ ಮಾಡಿದ್ದರು. ಆ ನಂತರ ಮೂರು ತ್ರೈ ಮಾಸಿಕದಲ್ಲಿ ಕುಸಿತವಾಗಿ ವರ್ಷದ ಕೊನೆಯ ಮಾರ್ಚ್ ತ್ರೈ ಮಾಸಿಕದಲ್ಲಿ ಆರು ಪರ್ಸೆಂಟ್ ಹತ್ತಿರ ಬಂದಿತ್ತು.

ನಿರ್ಮಲಾ ಸೀತಾರಾಮನ್ ಅವರು ತಾವು ಓದುತ್ತಿರುವ ಪುಸ್ತಕಗಳ ಬಗ್ಗೆ ಟ್ವೀಟ್ ಮಾಡುತ್ತಾರೆ. ಯುಎಸ್ ಫೆಡರಲ್ ರಿಸರ್ವ್ ನ ಅಧ್ಯಕ್ಷ ಪಾಲ್ ವೊಲ್ಕರ್ ಬಗ್ಗೆ ಕೂಡ ಟ್ವೀಟ್ ಮಾಡಿದ್ದರು. ಅವರ ಹೃದಯಕ್ಕೆ ಹತ್ತಿರವಾದ ಮತ್ತೊಂದು "ಪವಿತ್ರ ಕಾರ್ಯ" ಅಂದರೆ ಅದು ಉಪ್ಪಿನಕಾಯಿ ತಯಾರಿಸುವುದು. ಅದು ಅವರ ನೆಚ್ಚಿನ ಹವ್ಯಾಸ.











Click it and Unblock the Notifications