ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷರ ಭವನದಲ್ಲಿ ಶ್ರೀಲಂಕಾ ಯುವತಿಯ ಫೋಟೋ ಪೋಸ್: ಚಿತ್ರಗಳು ವೈರಲ್

|
Google Oneindia Kannada News

ಶ್ರೀಲಂಕಾ 70 ವರ್ಷಗಳಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಆಹಾರ ಮತ್ತು ಇಂಧನದ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದು, ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ. ದ್ವೀಪ ರಾಷ್ಟ್ರದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ ಮತ್ತು ಅಧ್ಯಕ್ಷರ ಭವನವನ್ನು ಸಹ ಉಳಿಸಲಾಗಿಲ್ಲ. ಅನೇಕ ಪ್ರತಿಭಟನಾಕಾರರು ಸರ್ಕಾರಿ ಕಟ್ಟಡವನ್ನು ಪ್ರವೇಶಿಸಿ ಅಲ್ಲಿನ ಕೊಠಡಿಗಳನ್ನು ಆಕ್ರಮಿಸಿಕೊಂಡಿರುವುದು ಕಂಡುಬಂದಿದೆ.

ಇದೆಲ್ಲದರ ನಡುವೆ ಮಧುಹಂಸಿ ಹಸಿಂತರಾ ಎಂಬ ಯುವತಿ ಕೊಲಂಬೊದಲ್ಲಿರುವ ರಾಷ್ಟ್ರಪತಿ ನಿವಾಸಕ್ಕೆ ಭೇಟಿ ನೀಡಿ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಪ್ರತಿಭಟನೆಯ ನಡುವೆಯೂ ಹಸಿಂತರಾ ಅವರು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದಂತಿದೆ. ಫೋಟೋ ಹಂಚಿಕೊಂಡ ಅವರು "ಕೊಲಂಬೊದ ಅಧ್ಯಕ್ಷರ ಭವನದಲ್ಲಿ" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಜುಲೈ 12 ರಂದು ಮಹಿಳೆಯೇ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಶ್ರೀಲಂಕಾ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭ: ಇಲ್ಲಿಯವರೆಗೆ ನಡೆದಿದ್ದೇನು? ಶ್ರೀಲಂಕಾ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭ: ಇಲ್ಲಿಯವರೆಗೆ ನಡೆದಿದ್ದೇನು?

ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ 26 ಫೋಟೋಗಳು ಹಸಿಂತರಾ ಅವರನ್ನು ಹಾಸಿಗೆಯ ಮೇಲೆ, ಕುರ್ಚಿಗಳು ಮತ್ತು ಸೋಫಾಗಳ ಮೇಲೆ, ಕಾರಿನ ಪಕ್ಕದಲ್ಲಿ ಮತ್ತು ಹುಲ್ಲುಹಾಸಿನ ಮೇಲೆ ತೋರಿಸುತ್ತವೆ.

Photos Of Sri Lankan Girl At Presidents Palace Go Viral

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿರುವ ಬಳಕೆದಾರರು ಇದು ಸೂಕ್ತವಲ್ಲ ಎಂದು ಭಾವಿಸಿದ್ದಾರೆ ಮತ್ತು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಮಹಿಳೆಯನ್ನು ಅಪಹಾಸ್ಯ ಮಾಡಿದ್ದಾರೆ. ದೇಶದ ಬಿಕ್ಕಟ್ಟಿನ ನಡುವೆ ಇವರಿಗಿರುವ ಫೋಟೋ ಕ್ಲಿಕ್ಕಿಸಿಕೊಳ್ಳುವ ಆಸಕ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಅವರನ್ನು ಬಳೆಕೆದಾರರು ಅಪಹಾಸ್ಯ ಮಾಡಿದ್ದಾರೆ.

"ನೀವು ಶ್ರೀಲಂಕಾದ ಹೊಸ ಅಧ್ಯಕ್ಷರಾಗಬೇಕು" ಎಂದು ಬಳಕೆದಾರರು ಬರೆದಿದ್ದಾರೆ.

"ಶ್ರೀಲಂಕಾ ಹೊಸ ಪ್ರವಾಸಿ ತಾಣ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.

ಮೂರನೇ ಬಳಕೆದಾರರು ಬರೆದಿದ್ದಾರೆ, "ಸ್ವಂತ ದೇಶವನ್ನು ಅಪಹಾಸ್ಯ ಮಾಡುವುದು"

Photos Of Sri Lankan Girl At Presidents Palace Go Viral

ಪೋಸ್ಟ್‌ಗೆ 20,000 ಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿವೆ. 8,000 ಕ್ಕೂ ಹೆಚ್ಚು ಬಳಕೆದಾರರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಅನ್ನು ಮರು-ಶೇರ್ ಮಾಡಿದ್ದಾರೆ.

English summary
Amid Sri Lanka's economic crisis netizens ridiculed a Girl for posing for a photo at the President's House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X