ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ಜಾರಿಯಾದರೆ ಪೆಟ್ರೋಲ್ ಬೆಲೆ ಎಷ್ಟಾಗಲಿದೆ?

By Mahesh
|
Google Oneindia Kannada News

ಬೆಂಗಳೂರು, ಜೂನ್ 11: ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಸತತವಾಗಿ ಇಳಿಕೆ ಕಂಡು ಬಂದರೂ, ಗ್ರಾಹಕರ ಮೇಲೆ ಹೊರೆ ಕಡಿಮೆಯಾಗುತ್ತಿಲ್ಲ. ಇಂಧನ, ತೈಲ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ತರುವುದೇ ಇದಕ್ಕೆಲ್ಲ ಪರಿಹಾರ ಎಂಬ ಕೂಗು ಮತ್ತೊಮ್ಮೆ ಬಲವಾಗಿ ಕೇಳಿ ಬಂದಿದೆ.

ಕಳೆದ 13 ದಿನಗಳಲ್ಲಿ ಒಂದು ರೂಪಾಯಿ 65 ಪೈಸೆಯಷ್ಟು ಮಾತ್ರ ಪೆಟ್ರೋಲ್ ಬೆಲೆ ಇಳಿದಿದೆ. ಆದರೆ, ಭಾರಿ ಪರಿಣಾಮವೇನು ಬೀರಿಲ್ಲ. ಪೆಟ್ರೋಲ್-ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ಬಂದರೆ, ಪೆಟ್ರೋಲ್ ಬೆಲೆ ಎಷ್ಟಾಗಬಹುದು? ಎಂಬ ಲೆಕ್ಕಾಚಾರ ನಡೆದಿದೆ.

ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?

ಕೇಂದ್ರ ಸರ್ಕಾರ ಈಗ ವಿಧಿಸುತ್ತಿರುವ ತೆರಿಗೆ ಜೊತೆಗೆ ರಾಜ್ಯ ಸರ್ಕಾರಗಳು ಕೂಡ ಸೆಸ್ ಸೇರಿಸುತ್ತವೆ. ಹೀಗಾಗಿ, ರಾಜ್ಯದಿಂದ ರಾಜ್ಯಕ್ಕೆ ನಗರದಿಂದ ನಗರಕ್ಕೆ ತೈಲ ಬೆಲೆಯಲ್ಲಿ ವ್ಯತ್ಯಾಸ ಸಾಮಾನ್ಯ ಸಂಗತಿ. ಆದರೆ. ಸರ್ಕಾರ ವಿಧಿಸುವ ಬೇರೆ ಬೇರೆ ತೆರಿಗೆ ಬದಲು ಪೆಟ್ರೋಲ್-ಡಿಸೇಲ್ ಗೂ ಒಂದೇ ತೆರಿಗೆ ನಿಯಮ ಅನ್ವಯವಾಗಲಿದೆ. ತೈಲ ಬೆಲೆ ಇಳಿಯಲಿದೆ.

20 ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡಿ : ಸಿದ್ದರಾಮಯ್ಯ20 ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡಿ : ಸಿದ್ದರಾಮಯ್ಯ

ಒಂದು ವೇಳೆ ಪೆಟ್ರೋಲ್-ಡಿಸೇಲ್ ಜಿಎಸ್ಟಿ ಅಡಿಯಲ್ಲಿ ಬಂದ್ರೆ ಈಗ ಸರಾಸರಿ 78 ರು ನಷ್ಟಿರುವ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 38 ರೂಪಾಯಿಯಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

ಪೆಟ್ರೋಲ್-ಡಿಸೇಲ್ ಜಿಎಸ್ಟಿ ಅಡಿಯಲ್ಲಿ

ಪೆಟ್ರೋಲ್-ಡಿಸೇಲ್ ಜಿಎಸ್ಟಿ ಅಡಿಯಲ್ಲಿ

ಒಂದು ವೇಳೆ ಪೆಟ್ರೋಲ್-ಡಿಸೇಲ್ ಜಿಎಸ್ಟಿ ಅಡಿಯಲ್ಲಿ ಬಂದ್ರೆ ಈಗ ಸರಾಸರಿ 78 ರು ನಷ್ಟಿರುವ ತೈಲ ಬೆಲೆ ಸುಮಾರು 38 ರೂಪಾಯಿಯಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಅಬಕಾರಿ, ಇಂಧನ ಮುಂತಾದ ಉತ್ಪನ್ನಗಳ ಮೇಲೆ ಸದ್ಯ ಜಿಎಸ್ಟಿ ಜಾರಿಯಾಗಿಲ್ಲ. ಜಿಎಸ್ಟಿ ಜಾರಿಗೆ ಬಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮಾನವಾಗಿ ತೆರಿಗೆ ವಿಧಿಸಲಿದೆ.

ಸದ್ಯ ವಾಹನ ಸವಾರರು ಪೆಟ್ರೋಲ್ ಗೆ ಶೇಕಡಾ 55.5 ಹಾಗೂ ಡಿಸೇಲ್ ಗೆ 47.3ರಷ್ಟು ತೆರಿಗೆ ನೀಡುತ್ತಾರೆ. ಇದ್ರಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರದ ತೆರಿಗೆ ಸುಂಕ ಹಾಗೂ ರಾಜ್ಯ ಸರ್ಕಾರಗಳ ವ್ಯಾಟ್, ಸೆಸ್ ಕೂಡಾ ಸೇರಿವೆ.

ಲೀಟರ್ ಪೆಟ್ರೋಲ್ ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿಲೀಟರ್ ಪೆಟ್ರೋಲ್ ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ

ಜಿಎಸ್ಟಿ ಜಾರಿಯಾಗಿ ಜುಲೈ 01ಕ್ಕೆ ಒಂದು ವರ್ಷ

ಜಿಎಸ್ಟಿ ಜಾರಿಯಾಗಿ ಜುಲೈ 01ಕ್ಕೆ ಒಂದು ವರ್ಷ

ಜಿಎಸ್ಟಿ ಜಾರಿಯಾಗಿ ಜುಲೈ 01ಕ್ಕೆ ಒಂದು ವರ್ಷವಾಗಲಿದೆ. ಇದಕ್ಕೂ ಮುನ್ನವೇ ಪೆಟ್ರೋಲ್-ಡಿಸೇಲ್ ಉತ್ಪನ್ನವನ್ನು ಜಿಎಸ್ಟಿಗೆ ಸೇರಿಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಪೆಟ್ರೋಲ್ ಮೇಲೆ ಶೇಕಡಾ 18ರಷ್ಟು ಜಿಎಸ್ಟಿ ಜಾರಿಗೆ ಬಂದ್ರೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 45.75 ರೂಪಾಯಿಯಾಗಲಿದೆ.ಆದರೆ, ಶೇ 5 ರಿಂದ 28ರಷ್ಟು ತೆರಿಗೆ ವಿಧಿಸಬಹುದಾಗಿದೆ. ಸದ್ಯ ದೆಹಲಿಯಲ್ಲಿ ವ್ಯಾಟ್ ಶೇ 27ರಷ್ಟಿದ್ದರೆ, ಮುಂಬೈ, ಥಾಣೆ ಹಾಗೂ ನವೀ ಮುಂಬೈನಲ್ಲಿ ಈ ಪ್ರಮಾಣ ಶೇ 47.64ರಷ್ಟಿದೆ.

ಈಗಿನ ದರಕ್ಕೆ 20 ರುಪಾಯಿ ಕಡಿಮೆ ಅಷ್ಟೇ

ಈಗಿನ ದರಕ್ಕೆ 20 ರುಪಾಯಿ ಕಡಿಮೆ ಅಷ್ಟೇ

ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್ ಟಿ ಅಡಿಯಲ್ಲಿ ಬಂದರೆ ಏನಾಗುತ್ತದೆ ಅಂದರೆ, ಅಲ್ಲಿ 0, 5, 12, 28 ಹೀಗೆ ನಾಲ್ಕು ವರ್ಗೀಕರಣವಿದೆ. ಶೇ 12ಕ್ಕಿಂತ ಕಡಿಮೆ ತೆರಿಗೆ ಅಡಿಯಲ್ಲಿ ಪೆಟ್ರೋಲ್-ಡೀಸೆಲ್ ತರಲು ಸಾಧ್ಯವಿಲ್ಲ. ಹಾಗೆ ಶೇ 12ರ ಲೆಕ್ಕ ಹಾಕಿದರೆ ದೆಹಲಿಯಲ್ಲಿನ ಪೆಟ್ರೋಲ್ ಬೆಲೆ ರು.38.1 ಆಗುತ್ತದೆ. ಅಂದರೆ ಈಗಿನ ದರಕ್ಕಿಂತ ರು.32 ಕಡಿಮೆ. ಶೇ 18ರಷ್ಟಾದರೆ ರು.40.05, ಶೇ 28ರಷ್ಟು ವಿಧಿಸಿದರೆ ರು.43.44 ಆಗುತ್ತದೆ. ಇನ್ನು ಎಸ್ ಯುವಿ ವಾಹನಗಳಿಗೆ ವಿಧಿಸುವ ಸೆಸ್ ಸೇರಿಕೊಂದು ಶೇ 28ರಷ್ಟು ಜಿಎಸ್ ಟಿ ಹಾಕಿದರೂ ರು.50.91 ಆಗುತ್ತದೆ. ಆಗಲೂ ಈಗಿರುವ ಪೆಟ್ರೋಲ್ ದರಕ್ಕಿಂತ 20 ರುಪಾಯಿ ಕಡಿಮೆ ಆಗುತ್ತದೆ.

ಇನ್ನು ಡೀಸೆಲ್ ವಿಚಾರಕ್ಕೆ ಬಂದರೆ, ಶೇ 12ರಷ್ಟು ಜಿಎಸ್ ಟಿ ಹಾಕಿದರೆ 36.65 ರು ಆಗುತ್ತದೆ. ಶೇ 18ರ ಜಿಎಸ್ ಟಿಗೆ 38.61 ರು , ಶೇ 28ಕ್ಕೆ 48.88 ರು ಆಗುತ್ತದೆ. ಒಂದು ವೇಳೆ ಎಸ್ ಯುವಿ ಸೆಸ್ ಹಾಕಿದರೂ ದರ 49.08 ರು ಆಗುತ್ತದೆ. ಅಲ್ಲಿಗೂ ಸದ್ಯದ ದರಕ್ಕಿಂತ 9.64 ರು ಕಡಿಮೆಯಾಗುತ್ತದೆ.
ರಾಜ್ಯ ಸರ್ಕಾರಗಳ ಒಪ್ಪಿಗೆ ಅಗತ್ಯ

ರಾಜ್ಯ ಸರ್ಕಾರಗಳ ಒಪ್ಪಿಗೆ ಅಗತ್ಯ

ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ. ಅದರಲ್ಲಿ ಶೇ 67.54ರಷ್ಟು ಕೇಂದ್ರ ಅಬಕಾರಿ ಸುಂಕ ಮತ್ತು ಶೇ 30ರಷ್ಟು ರಾಜ್ಯ ಮಾರಾಟ ತೆರಿಗೆ (ಕರ್ನಾಟಕದಲ್ಲಿ ಇಷ್ಟು) ಬೀಳುತ್ತಿದೆ. ಒಂದು ವೇಳೆ ಪೆಟ್ರೋಲ್- ಡೀಸೆಲ್ ಅನ್ನು ಜಿಎಸ್ ಟಿ ಕೆಳಗೆ ತಂದುಬಿಟ್ಟರೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಇದರಿಂದ ಬರುತ್ತಿರುವ ಆದಾಯ ಶೇ 50ರಷ್ಟು ಕುಸಿದು ಹೋಗುತ್ತದೆ. ಜಿಎಸ್ ಟಿ ಅಡಿಯಲ್ಲಿ ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಪ್ರವೇಶ ತೆರಿಗೆ ತೆಗೆದಿರುವುದರಿಂದ ಕರ್ನಾಟಕ ಸರಕಾರಕ್ಕೆ ಬರಬೇಕಾದ 200 ಕೋಟಿ ಆದಾಯ ತಪ್ಪಿದೆ.

ರಾಜ್ಯ ಸರ್ಕಾರ ಏನು ಮಾಡಬಹುದು?

ರಾಜ್ಯ ಸರ್ಕಾರ ಏನು ಮಾಡಬಹುದು?

ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿದ ಮೇಲೆ ಆಯಾ ರಾಜ್ಯಗಳು ತಮ್ಮ ಆರ್ಥಿಕ ಮಾರ್ಗದರ್ಶನಕ್ಕೆ ಅನುಗುಣವಾಗಿ ವ್ಯಾಟ್, ಸೆಸ್ ಸೇರಿಸಬಹುದು. ಹೀಗಾಗಿ ಯಾವಾಗಲೂ ಪೆಟ್ರೋಲ್ ಬೆಲೆ ದೆಹಲಿ ಇನ್ನಿತರ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅಧಿಕವಾಗಿರುತ್ತದೆ.ತನ್ನ ಜನರ ಹಿತ ಕಾಯಲು ವೌಲ್ಯವರ್ಧಿತ ತೆರಿಗೆ(ವ್ಯಾಟ್)ಯನ್ನು ಶೇ.20ರಿಂದ ಶೇ.15ಕ್ಕೆ ಇಳಿಸಬಹುದಾಗಿದೆ.

ಡಾಲರ್ ಎದುರಿನ ಅಪಮೌಲ್ಯ, ಅಬಕಾರಿ ಸುಂಕ, ಲೀಟರ್ ಗೆ 12.10 ವ್ಯಾಟ್, ಕಂಪನಿಗಳ ಕಮಿಷನ್, ಲಾಭ, ತೆರಿಗೆ, ಸೆಸ್ ಅದು ಇದು ಎಲ್ಲಾ ಲೆಕ್ಕಾಚಾರ ಹಾಕಿ ರಾಜ್ಯದ ಬೊಕ್ಕಸ ತುಂಬಿಸಲು ಎಲ್ಲಾ ಕರ್ನಾಟಕ ಸರ್ಕಾರಗಳು ಹಿಂದಿನಿಂದ ಬಂದಿರುವ ಪದ್ಧತಿಯನ್ನೇ ಅನುಸರಿಸುತ್ತಿವೆ

English summary
Bringing petroleum products under the GST regime will make the fuels cheaper."The Petroleum products' inclusion in GST only way for rational fuel prices," tweeted Dharmendra Pradhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X