• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿವಾಳಿ ಅಂಚಿನಲ್ಲಿ ಪಾಕಿಸ್ತಾನ ಸೇರಿದಂತೆ 12 ದೇಶಗಳು

|
Google Oneindia Kannada News

ನವದೆಹಲಿ, ಜುಲೈ 17: ಶ್ರೀಲಂಕಾದಲ್ಲಿ ಆರ್ಥಿಕ ಮುಗ್ಗಟ್ಟು ಯಾವ ಮಟ್ಟಕ್ಕೆ ಮುಟ್ಟಿದೆ, ಎಂಥ ಸಂಕಷ್ಟಕ್ಕೆ ಆ ದೇಶ ಸಿಲುಕಿದೆ, ಅದರ ಪರಿಣಾಮಗಳೇನು ಎಂದು ನೆರೆ ದೇಶವಾಗಿ ಭಾರತೀಯರಿಗೆ ಸಮೀಪ ದರ್ಶನವಾಗಿದೆ.

ಇನ್ನೂ ಹಲವು ದೇಶಗಳು ಸಾಲದ ಕೂಪಕ್ಕೆ ಸಿಲುಕಿ ಆರ್ಥಿಕವಾಗಿ ದಿವಾಳಿ ಏಳುವ ಪರಿಸ್ಥಿತಿಯಲ್ಲಿವೆ. ರಷ್ಯಾ ಈಗಾಗಲೇ ವಿಪರೀತ ಸಾಲ ಮೈಮೇಲೆ ಎಳೆದುಕೊಂಡಿದೆ. ಯುದ್ಧದ ಪಾಪಕರ್ಮ ಕೂಡ ರಷ್ಯಾವನ್ನು ಮುಂದಿನ ಅನೇಕ ದಿನಗಳವರೆಗೆ ಕಾಡಲಿದೆ. ಹಾಗೆಯೇ, ಲೆಬನಾನ್, ಸುರಿನೇಮ್, ಝಾಂಬಿಯಾ ದೇಶಗಳು ಆರ್ಥಿಕ ಅಧಃಪತನ ಕಂಡಿವೆ. ಬೆಲಾರಸ್ ದೇಶ ಕೂಡ ದಿವಾಳಿಯ ಅಂಚಿಗೆ ಬಂದು ನಿಂತಿದೆ ಎಂದು ವಿಶ್ವ ಆರ್ಥಿಕ ಸಮೀಕ್ಷೆಗಳು ಹೇಳುತ್ತವೆ.

 ಹಣದುಬ್ಬರ ಎಫೆಕ್ಟ್; ಅಮೆರಿಕದಲ್ಲಿ ಆಹಾರಕ್ಕಾಗಿ ಹಾಹಾಕಾರ, ಫುಡ್ ಬ್ಯಾಂಕ್‌ಗಳ ಎದುರು ಕ್ಯೂ ನಿಂತ ಜನರು ಹಣದುಬ್ಬರ ಎಫೆಕ್ಟ್; ಅಮೆರಿಕದಲ್ಲಿ ಆಹಾರಕ್ಕಾಗಿ ಹಾಹಾಕಾರ, ಫುಡ್ ಬ್ಯಾಂಕ್‌ಗಳ ಎದುರು ಕ್ಯೂ ನಿಂತ ಜನರು

ಈ ದೇಶಗಳ ಜೊತೆಗೆ, ಅರ್ಜೆಂಟೀನಾ, ಉಕ್ರೇನ್, ಟುನಿಶಿಯಾ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳಲ್ಲಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಜಾಗತಿಕವಾಗಿ ಆರ್ಥಿಕತೆ ಚೇತರಿಕೆ ಕಾಣಲು ಆರಂಭಿಸಿ ಸ್ಥಿರತೆ ಸಿಗುವವರೆಗೂ ಈ ದೇಶಗಳನ್ನು ಆ ದೇವರೇ ಕಾಪಾಡಬೇಕು ಎಂಬಂತಿದೆ ಸ್ಥಿತಿ.

ಉತ್ತರ ಮತ್ತು ದಕ್ಷಿಣ ಅಮೆರಿಕದ ಮೂರು ದೇಶಗಳು, ಆಫ್ರಿಕಾದ ನಾಲ್ಕೈದು ದೇಶಗಳು, ಯೂರೋಪ್‌ನ ೨-೩ ದೇಶಗಳು ಮತ್ತು ಪಾಕಿಸ್ತಾನ ಆರ್ಥಿಕ ದಿವಾಳಿತನದ ಅಂಚಿನಲ್ಲಿರುವ ದೇಶಗಳಾಗಿವೆ. ರಷ್ಯಾಗೆ ಯುದ್ಧದಲ್ಲಿ ಬೆಂಬಲವಾಗಿ ನಿಂತಿದ್ದಕ್ಕೆ ಬೆಲಾರಸ್ ಜಾಗತಿಕ ಆರ್ಥಿಕ ದಿಬ್ಬಂಧನದ ಶಿಕ್ಷೆಗೆ ಗುರಿಯಾಗಿದೆ.

ಶ್ರೀಲಂಕಾ ಬಿಕ್ಕಟ್ಟು; ಭಾರತದ ಪಾತ್ರವೇನು, ನಮಗೂ ಕಾದಿದೆಯಾ ಗಂಡಾಂತರ? ಶ್ರೀಲಂಕಾ ಬಿಕ್ಕಟ್ಟು; ಭಾರತದ ಪಾತ್ರವೇನು, ನಮಗೂ ಕಾದಿದೆಯಾ ಗಂಡಾಂತರ?

ಆರ್ಥಿಕ ಮುಗ್ಗಟ್ಟು ಹೇಗೆ ಲೆಕ್ಕ?

ಆರ್ಥಿಕ ಮುಗ್ಗಟ್ಟು ಹೇಗೆ ಲೆಕ್ಕ?

ಒಂದು ದೇಶ ಸಾಲದ ಶೂಲಕ್ಕೆ ಸಿಲುಕಿದೆ ಎನ್ನುವುದಕ್ಕೆ ಕೆಲ ಮಾನದಂಡಗಳಿವೆ. ವಿದೇಶೀ ಸರಕಾರಗಳು ಮತ್ತ ಸಂಸ್ಥೆಗಳಿಂದ ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಲು ಅಸಾಧ್ಯವಾದಲ್ಲಿ ಸಾಲದ ಬಿಕ್ಕಟ್ಟು ಎಂದು ಪರಿಗಣಿಸಲಾಗುತ್ತದೆ. ಸಾಲಗಾರರು ಬಡ್ಡಿ ದರ ಹೆಚ್ಚಿಸುವುದು, ಸಾವಿರ ಮೂಲಾಂಕಗಳಷ್ಟು ಬಾಂಡ್ ಮೌಲ್ಯ ವ್ಯತ್ಯಯವಾಗುವುದು, ಕರೆನ್ಸಿ ಮೌಲ್ಯ ಕುಸಿಯುವುದು, ಫಾರೆಕ್ಸ್ ಮೀಸಲು ನಿಧಿ ಕಡಿಮೆಯಾಗುವುದು ಇವೆಲ್ಲವೂ ಸಾಲದ ಬಿಕ್ಕಟ್ಟು ಇರುವುದರ ಸೂಚಕಗಳು.

ಸಾಲದ ಹೊರೆ ಹೆಚ್ಚಾಗಿ ಸಾಲ ವಾಪಸಾಗಿ ಅಸಾಧ್ಯವಾದ ಸ್ಥಿತಿ ಬಂದರೆ ಅದು ಡೆಬ್ಟ್ ಡೀಫಾಲ್ಟ್ ಎಂದು ಕರೆಯಲಾಗುತ್ತದೆ. ಶ್ರೀಲಂಕಾ, ರಷ್ಯಾ, ಲೆಬನಾನ್ ಸುರಿನೇಮ್, ಝಾಂಬಿಯಾ, ಬೆಲಾರಸ್ ದೇಶಗಳು ಈಗ ಡೀಫಾಲ್ಟ್ ದೇಶಗಳಾಗಿವೆ. ಇನ್ನೂ ಹಲವು ದೇಶಗಳು ಈ ಸ್ಥಿತಿಯ ಅಂಚಿಗೆ ಬಂದಿವೆ.

ಪಾಕಿಸ್ತಾನದಲ್ಲಿ ಶೋಚನೀಯ ಸ್ಥಿತಿ

ಪಾಕಿಸ್ತಾನದಲ್ಲಿ ಶೋಚನೀಯ ಸ್ಥಿತಿ

ಪಾಕಿಸ್ತಾನದ ಫಾರೆಕ್ಸ್ ಮೀಸಲು ೯.೮ ಬಿಲಿಯನ್ ಡಾಲರ್‌ಗೆ ಕುಸಿದಿದೆ. ಐದು ವಾರ ಕಾಲ ಮಾತ್ರ ಅದು ಇಂಧನ ಇತ್ಯಾದಿ ಅಗತ್ಯವಸ್ತುಗಳ ಆಮದು ಮಾಡಿಕೊಳ್ಳಲು ಮಾತ್ರ ಈ ಹಣ ಸಾಕಾಗುತ್ತದೆ. ಅಲ್ಲದೇ, ಪಾಕಿಸ್ತಾನದ ರೂಪಾಯಿ ಮೌಲ್ಯ ಕೂಡ ದಾಖಲೆ ಮಟ್ಟಕ್ಕೆ ಕುಸಿಯುತ್ತಾ ಹೋಗುತ್ತಿದೆ. ಈ ದೇಶದ ಶೇ.. ೪೦ರಷ್ಟು ವರಮಾನವು ಬಡ್ಡಿ ಪಾವತಿಗೇ ಹೋಗುತ್ತದೆ.

ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಐಎಂಎಫ್ ಸಾಲ ಸಿಕ್ಕಿತು. ಇದರಿಂದ ಪಾಕಿಸ್ತಾನ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ. ಆದರೂ ಮುಂದಿನ ದಿನಗಳಲ್ಲಿ ಪಾಕಿಸ್ತಾನ ಚೇತರಿಕೆ ದಾರಿ ಕಾಣದೇ ಹೋದರೆ ದಿವಾಳಿ ದಾರಿ ಎಡೆತಾಕುವುದು ನಿಶ್ಚಿತ.

ಅಮೆರಿಕನ್ ದೇಶಗಳ ಬಿಕ್ಕಟ್ಟು

ಅಮೆರಿಕನ್ ದೇಶಗಳ ಬಿಕ್ಕಟ್ಟು

ಸೌತ್ ಅಮೆರಿಕದ ಅರ್ಜೆಂಟೀನಾ, ಸೆಂಟ್ರಲ್ ಅಮೆರಿಕದ ಎಲ್ ಸಾಲ್ವಡಾರ್ ಮತ್ತು ಲ್ಯಾಟಿನ್ ಅಮೆರಿಕದ ಈಕ್ವಡಾರ್ ದೇಶಗಳು ಸಾಲದ ಬಿಕ್ಕಟ್ಟು ಎದುರಿಸುತ್ತಿವೆ.

ಅರ್ಜೆಂಟೀನಾದ ಪೆಸೋ ಕರೆನ್ಸಿ ಕಾಳಸಂತೆಯಲ್ಲಿ ಅರ್ಧದಷ್ಟು ಬೆಲೆಗೆ ಬಿಕರಿಯಾಗುತ್ತಿದೆ. ಅದರ ಫಾರೆಕ್ಸ್ ರಿಸರ್ವ್ ಬಹಳ ಕಡಿಮೆ ಇದೆ. ಅದರ ಬಾಂಡ್‌ಗಳೂ ತೀರಾ ಕಡಿಮೆ ಮೌಲ್ಯಕ್ಕೆ ಬಂದು ನಿಂತಿವೆ.

ಎಲ್ ಸಾಲ್ವಡಾರ್ ದೇಶ ಕೂಡ ಯಾವಾಗಬೇಕಾದರೂ ಆರ್ಥಿಕವಾಗಿ ದಿವಾಳಿಯಾಗುವ ಹಂತದಲ್ಲಿದೆ. ಇಲ್ಲಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧಗೊಳಿಸಿರುವುದು ಅರ್ಥಿಕ ಬಿಕ್ಕಟ್ಟನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಐಎಂಎಫ್ ಸಾಲ ಸಿಗುವುದೂ ದುಸ್ತರವಾಗಿದೆ. ಅದರ ಕೋಟ್ಯಂತರ ಮೌಲ್ಯದ ಬಾಂಡ್‌ಗಳು ಶೇ. ೩೦-೭೦ರಷ್ಟು ಮೌಲ್ಯಕ್ಕೆ ಕುಸಿದಿವೆ.

ಶ್ರೀಲಂಕಾದಂತೆ ರಾಜಕೀಯ ಬಿಕ್ಕಟ್ಟು ಮತ್ತು ಹಿಂಸಾಚಾರ ಪರಿಸ್ಥಿತಿ ಎದುರಿಸುತ್ತಿರುವ ಈಕ್ವಡಾರ್ ದೇಶದಲ್ಲಿ ಸಾಲ ಕೈಮೀರುವ ಹಂತದಲ್ಲಿದೆ. ಇಂಧನ ಮತ್ತು ಆಹಾರವಸ್ತುಗಳ ಬೆಲೆ ಇಳಿಸಿದ ಕಾರಣಕ್ಕೆ ಸರಕಾರಕ್ಕೆ ಹೊರೆ ಹೆಚ್ಚಾಗಿದೆ.

ಉಕ್ರೇನ್, ಬೆಲಾರಸ್ ಬಿಕ್ಕಟ್ಟು

ಉಕ್ರೇನ್, ಬೆಲಾರಸ್ ಬಿಕ್ಕಟ್ಟು

ರಷ್ಯಾದಿಂದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ ದೇಶದ ಅರ್ಥವ್ಯವಸ್ಥೆಯೂ ಬುಡಮೇಲಾಗುವ ಹಾದಿಯಲ್ಲಿದೆ. ಪಾಶ್ಚಿಮಾತ್ಯ ದೇಶಗಳ ಸಹಾಯದ ನಡುವೆಯೂ ಉಕ್ರೇನ್ ಸದ್ಯದ ಮಟ್ಟಿಗೆ ಚೇತರಿಕೆ ಕಾಣುವ ಸ್ಥಿತಿಯಲ್ಲಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ೧.೨ ಬಿಲಿಯನ್ ಯುಎಸ್ ಡಾಲರ್ ಮೌಲ್ಯದಷ್ಟು ಬಾಂಡ್ ಪಾವತಿ ಮಾಡುವಷ್ಟು ಹಣ ಉಕ್ರೇನ್ ಬಳಿ ಇದೆ. ಹಾಗೂ ಹೀಗೂ ಆ ಹಣ ಹೊಂದಿಸಿದರೂ ಅದಾದ ನಂತರ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳುವುದು ಕಷ್ಟ.

ರಷ್ಯಾ ಜೊತೆಗೆ ಸ್ನೇಹರಾಷ್ಟ್ರವಾಗಿ ನಿಂತಿರುವ ಬೆಲಾರಸ್‌ಗೆ ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳು ಬಾಧಿಸುತ್ತಿವೆ. ಹೀಗಾಗಿ, ಬೆಲಾರಸ್‌ನ ಅರ್ಥವ್ಯವಸ್ಥೆ ಸಂಪೂರ್ಣ ಕುಸಿದುಬೀಳಲು ದಿನಗಣನೆ ಎಂಬಂತಹ ಸ್ಥಿತಿ ಇದೆ.

ಆಫ್ರಿಕಾದ ದೇಶಗಳಿಗೆ ಹೆಚ್ಚು ಬಾಧೆ

ಆಫ್ರಿಕಾದ ದೇಶಗಳಿಗೆ ಹೆಚ್ಚು ಬಾಧೆ

ಆಫ್ರಿಕಾದ ಹಲವು ದೇಶಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಟುನಿಶಿಯಾ, ಘಾನಾ, ಈಜಿಪ್ಟ್, ಕೀನ್ಯಾ, ಇಥಿಯೋಪಿಯಾ ಮತ್ತು ನೈಜೀರಿಯಾ ಆರ್ಥಿಕವಾಗಿ ದಿವಾಳಿಯಾಗುವ ಪರಿಸ್ಥಿತಿಯಲ್ಲಿರುವ ಪ್ರಮುಖ ದೇಶಗಳು.

ಸಾಲದ ಬಿಕ್ಕಟ್ಟು ಎದುರಿಸಬಹುದು ಎಂದು ಮಾರ್ಗನ್ ಸ್ಟಾನ್ಲೀ ಎಂಬ ಹಣಕಾಸು ಸಲಹೆಗಾರ ಸಂಸ್ಥೆ ಅಂದಾಜು ಮಾಡಿರುವ ಮೂರು ದೇಶಗಳಲ್ಲಿ ಟುನಿಶಿಯಾ ಕೂಡ ಒಂದು. ಈ ದೇಶದ ಅಧ್ಯಕ್ಷರಿಗೆ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳುವತ್ತಲೇ ಗಮನ ಹೊರತು ಆರ್ಥಿಕ ಚೇತರಿಕೆಗೆ ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಈ ದುರವಸ್ಥೆಗೆ ಎಡೆಮಾಡಿಕೊಟ್ಟಿದೆ. ಟುನಿಶಿಯಾಗೆ ಐಎಂಎಫ್ ಸಾಲ ಸಿಗುವುದೂ ದುಸ್ತರವಾಗಿದೆ.

ಘಾನಾದಲ್ಲಿ ಅದರ ಜಿಡಿಪಿಯ ಶೇ. ೮೫ರಷ್ಟು ಹಣ ಸಾಲವಾಗಿದೆ. ಈಜಿಪ್ಟ್ ದೇಶದಲ್ಲಿ ಇದು ಶೇ. ೯೫ರಷ್ಟಿದೆ. ಘಾನಾದ ಹಣದುಬ್ಬರ ಶೇ. ೩೦ ಗಡಿ ಸಮೀಪ ಇದೆ. ಇನ್ನು, ಕೀನ್ಯಾ ದೇಶ ತನ್ನ ಆದಾಯದಲ್ಲಿ ಶೇ. ೩೦ರಷ್ಟು ಹಣವನ್ನು ಬಡ್ಡಿ ಕಟ್ಟಲೇ ವಿನಿಯೋಗಿಸುವಂತಾಗಿದೆ.

ಇಥಿಯೋಪಿಯಾದಲ್ಲಿ ಆರ್ಥಿಕ ಸ್ಥಿತಿ ಸ್ವಲ್ಪ ಸುಧಾರಿಸಬಹುದು ಎಂದು ನಿರೀಕ್ಷಿಸುವಷ್ಟರಲ್ಲಿ ಅಲ್ಲಿ ನಾಗರಿಕ ಯುದ್ಧ ದೊಡ್ಡ ತೊಡಕಾಗಿ ಕಾಡುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
Lebanon, Sri Lanka, Russia, Suriname and Zambia are already in default, Belarus is on the brink and at least another dozen are in the danger zone as rising borrowing costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X