• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒನ್ಇಂಡಿಯಾ exclusive : ವಾಯುಸೇನೆ ಬಳಕೆ ಹಿಂದಿನ ಕಾರಣ ಏನು?

By ಕಿಶೋರ್ ನಾರಾಯಣ್
|
   Oneindia Exclusive : ವಾಯುಸೇನೆ ಬಳಕೆ ಹಿಂದಿನ ಕಾರಣ ಏನು? | Oneindia kannada

   ಭಾರತ ಮತ್ತು ಪಾಕಿಸ್ತಾನ ಮಧ್ಯದ ಗಡಿ ನಿಯಂತ್ರಣ ರೇಖೆಯ ಸುತ್ತಮುತ್ತಲ ಘಟನೆ ಕುರಿತು ಈ ದಿನ ನಿಮ್ಮ ಮುಂದೆ ವಿಶ್ಲೇಷಣೆಯೊಂದನ್ನು ಇಡುತ್ತಿದ್ದೇನೆ. ಫೆಬ್ರವರಿ ಇಪ್ಪತ್ತಾರು ಹಾಗೂ ಇಪ್ಪತ್ತೇಳನೇ ತಾರೀಕು ಭಾರತೀಯ ವಾಯುಸೇನೆಯು ಬಹಳ ಚರ್ಚೆಯಲ್ಲಿದೆ. ಮೊದಲಿಗೆ ಪಾಕಿಸ್ತಾನದ ಒಳಗೇ ಹೋಗಿ, ಜೈಶ್-ಇ-ಮೊಹ್ಮದ್ ನ ಉಗ್ರ ನೆಲೆಯನ್ನು ಧ್ವಂಸ ಮಾಡಿ ಬಂದಿತ್ತು.

   ಇನ್ನು ಬುಧವಾರದಂದು ಭಾರತದ ವಾಯು ಗಡಿಯನ್ನು ರಕ್ಷಣೆ ಮಾಡಿಕೊಳ್ಳುವುದರಲ್ಲಿ ನಿರತವಾಗಿತ್ತು. ಎಲ್ಲರಿಗೂ ಇರುವಂಥ ಕುತೂಹಲ ಹಾಗೂ ಪ್ರಶ್ನೆ ಏನೆಂದರೆ, ಇಷ್ಟು ಸಮಯ ಇಲ್ಲದಂಥ ಈ ತಂತ್ರ ಅಂದರೆ, ವಾಯು ಸೇನೆಯನ್ನು ಯಾಕೆ ಬಳಸಿಕೊಳ್ಳುತ್ತಿದ್ದಾರೆ? ಇದಕ್ಕೆ ಕಾರಣ ಬಹಳ ಸರಳವಾಗಿದೆ. ಎರಡನೇ ವಿಶ್ವ ಯುದ್ಧದ ನಂತರ ಎಲ್ಲ ದೇಶಗಳೂ ವಾಯು ಸೇನೆಯ ಬಳಕೆ, ಅವಲಂಬನೆಯನ್ನೇ ನೆಚ್ಚಿಕೊಂಡಿವೆ.

   ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

   ಎರಡನೇ ವಿಶ್ವಯುದ್ಧದಲ್ಲೂ ಹಾಗೇ ಆಗಿತ್ತು. ಆ ನಂತರದ ಯಾವುದೇ ಯುದ್ಧಗಳಲ್ಲೂ ಹಾಗೇ. ಕಾರಣ ಏನೆಂದರೆ, ಕಾಲಾಳುಗಳು- ಸೈನಿಕರು ಮುನ್ನುಗ್ಗಬೇಕು ಅಂದರೆ ಬಹಳ ನಿಧಾನ ಆಗುತ್ತದೆ. ಒಂದೊಂದೇ ಹಳ್ಳಿ, ಒಂದೊಂದೇ ಊರು ದಾಟಿಕೊಂಡು ಹೋಗಬೇಕು. ಹೀಗೆ ಸಾಗಿ ಹೋಗುವಾಗ ಯಾರು, ಎಲ್ಲಿಂದ ಬಂದು ದಾಳಿ ಮಾಡುತ್ತಾರೆ ಎಂಬುದು ಕೂಡ ಊಹಿಸುವುದು ಕಷ್ಟ.

   ಆದರೆ, ನೀವೇ ಮೇಲ್ಮಟ್ಟದಲ್ಲಿ ಇರುವಾಗ ಅಂದರೆ ಎಲ್ಲವೂ ಸ್ಪಷ್ಟವಾಗಿ ಕಾಣುವಂಥ ಎತ್ತರದಲ್ಲಿ ನೀವಿದ್ದರೆ ಎಲ್ಲವನ್ನೂ ಸುಲಭವಾಗಿ ಕಂಡುಹಿಡಿದುಕೊಳ್ಳಬಹುದು. ಇದರ ಜತೆಗೆ ತುಂಬ ವೇಗವಾಗಿ ಮುನ್ನುಗ್ಗಬಹುದು. ಕ್ಷಿಪ್ರ ಕಾರ್ಯಾಚರಣೆ, ಪರಿಹಾರ ಬೇಕು, ಪ್ರತಿಕ್ರಿಯೆ ನೀಡಬೇಕು ಅಂದರೆ ಸಾಮಾನ್ಯವಾಗಿ ವಾಯು ಶಕ್ತಿಯನ್ನೇ ಅವಲಂಬಿಸುತ್ತಾರೆ. ಇದರಿಂದ ಅನುಕೂಲ ಏನು ಎಂಬ ಪ್ರಶ್ನೆ ಬರುತ್ತದೆ.

   ಕಾರ್ಗಿಲ್ ಯುದ್ಧವನ್ನು ನೆನಪಿಸಿಕೊಳ್ಳಿ

   ಕಾರ್ಗಿಲ್ ಯುದ್ಧವನ್ನು ನೆನಪಿಸಿಕೊಳ್ಳಿ

   ಒಮ್ಮೆ ಕಾರ್ಗಿಲ್ ಯುದ್ಧವನ್ನು ನೆನಪಿಸಿಕೊಳ್ಳಿ. ಟೈಗರ್ ಹಿಲ್, ಟೋಲೋ ಲಿಂಗ್, .4590 ಈ ರೀತಿಯ ಎತ್ತರದ ಬೆಟ್ಟಗಳಿವೆ. ಅಲ್ಲಿ ಪಾಕಿಸ್ತಾನಿ ಸೈನಿಕರು ವೇಷ ಮರೆಸಿಕೊಂಡು ಇದ್ದರು. ಆ ಬೆಟ್ಟಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು. ಅವರ ಉದ್ದೇಶ ಏನಿತ್ತು ಅಂದರೆ, ಶ್ರೀನಗರ್ ನಿಂದ ಲಡಾಖ್ ಜಿಲ್ಲೆಯ ಲೇಹ್ ಗೆ ಹೋಗುವ ಹೆದ್ದಾರಿ ಏನಿದೆ, ಆ ಹೆದ್ದಾರಿ ಮೇಲೆ ಬೆಟ್ಟದಿಂದ ದಾಳಿ ಮಾಡಬೇಕು ಎಂಬುದು ಅವರ ಗುರಿಯಾಗಿತ್ತು. ಆ ಮೂಲಕ ಜಮ್ಮು-ಕಾಶ್ಮೀರದ ಉತ್ತರದ ಭಾಗ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಅನ್ನೋದು ಉದ್ದೇಶವಾಗಿತ್ತು. ಹಾಗಾಗಿ ಮೇಲೆ ಕೂತುಕೊಂಡಿದ್ದರು. ಹಾಗೆ ಅವರು ಮೇಲೆ ಕೂತು ಗುಂಡು ಹಾರಿಸುತ್ತಿದ್ದಾಗಲೂ ಬೆಟ್ಟ ಹತ್ತಿಕೊಂಡು ಹೋಗಿ, ಅವರನ್ನು ಹೊಡೆದುರುಳಿಸಿ, ಆ ಬೆಟ್ಟಗಳನ್ನು ಮರು ವಶಪಡಿಸಿಕೊಂಡರು. ಆದರೆ ಒಂದು ಮಾತು ನೆನಪಿನಲ್ಲಿರಲಿ, ಯಾರು ಎತ್ತರದಲ್ಲಿ ಇರುತ್ತಾರೆ, ಅದು ಬೆಟ್ಟ ಇರಬಹುದು ಅಥವಾ ವಿಮಾನ ಇರಬಹುದು. ದಾಳಿ ನಡೆಸಲು ಅನುಕೂಲ ಆಗುತ್ತದೆ.

   ಸವಾಲುಗಳು ಇದ್ದೇ ಇರುತ್ತವೆ

   ಸವಾಲುಗಳು ಇದ್ದೇ ಇರುತ್ತವೆ

   ಇಷ್ಟು ಸಮಯ ಇಲ್ಲದೆ ಈ ಎರಡ್ಮೂರು ದಿನದಿಂದ ಮಾತ್ರ ವಾಯುಪಡೆಯನ್ನು ಯಾಕೆ ಬಳಸಿಕೊಂಡಿವಿ? ಇದರಲ್ಲಿನ ಸವಾಲುಗಳೇನು ಅಂತ ನೋಡೋಣ. ಉರಿ ದಾಳಿ ನಡೆದ ನಂತರ ಭಾರತ ಮಾಡಿದ ಸರ್ಜಿಕಲ್ ಸ್ಟ್ರೈಕ್ ವೇಳೆ ಗಡಿ ನಿಯಂತ್ರಣ ರೇಖೆ ದಾಟಿ, ಕೆಲವು ಕಿ.ಮೀ. ದೂರ ಸಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳನ್ನು ಧ್ವಂಸ ಮಾಡಿ ಬರಬೇಕಿತ್ತು. ಹಾಗಾಗಿ ತುಂಬ ಒಳಗೆ ಹೋಗಬೇಕು, ನಮ್ಮ ಸುಳಿವು ಸಿಕ್ಕಿಬಿಡುತ್ತದೆ, ನಾವು ಸಿಕ್ಕಿ ಬೀಳಬಹುದು ಮತ್ತು ನಮ್ಮ ಉದ್ದೇಶ ಈಡೇರದೇ ಇರಬಹುದು ಎಂಬ ಆತಂಕ ಅಷ್ಟಾಗಿ ಇರಲಿಲ್ಲ. ಹಾಗಾಗಿ ಒಳಗೆ ಹೋಗಿ, ಬೇಗ ಕೆಲಸ ಮುಗಿಸಿ ವಾಪಸ್ ಬಂದೆವು. ಆದರೆ ಈ ಸಲ ಹಾಗಿರಲಿಲ್ಲ. ಗುಪ್ತಚರ ಮಾಹಿತಿ ಪ್ರಕಾರ, ಉಗ್ರರ ನೆಲೆಗಳು ಬಹಳ ಹಿಂದಕ್ಕೆ ಇದ್ದವು. ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದ ನಂತರ ಉಗ್ರ ನೆಲೆಗಳನ್ನು ಪಾಕಿಸ್ತಾನದೊಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಹೀಗೆ ಆ ದೇಶದ ಒಳಗೆ ನುಗ್ಗಿ, ಕಡಿಮೆ ಸಮಯದಲ್ಲಿ ಉಗ್ರ ನೆಲೆಯನ್ನು ಧ್ವಂಸ ಮಾಡುವುದು ಹೇಗೆ ಅಂತ ನೋಡಿದಾಗ ವಾಯು ದಾಳಿಯೊಂದೇ ಆಯ್ಕೆಯಾಗಿ ಉಳಿದುಕೊಂಡಿತು. ಎಷ್ಟು ಬೇಗ ಹಾಗೂ ನಿಖರವಾಗಿ ಹೊಡೆಯಬಹುದು ಅನ್ನೋದರ ಕುರಿತಾಗಿಯೇ ಯೋಜನೆ ಮಾಡಲಾಗಿತ್ತು. ಇಂಥ ದಾಳಿ ನಡೆಸುವ ವೇಳೆ ಸವಾಲುಗಳು ಸಹ ಸಹಜವಾಗಿ ಇದ್ದೇ ಇರುತ್ತವೆ.

   ನಮ್ಮ ನೆಲೆ ಮೇಲೆ ಭಾರತ ದಾಳಿ ಮಾಡಿದ್ದು ಸತ್ಯ: ಜೈಷ್ ಉಗ್ರ ಮಸೂದ್

   ಈ ಹಿಂದಿನ ಸರಕಾರ ಒಪ್ಪಿಕೊಂಡಿರಲಿಲ್ಲ

   ಈ ಹಿಂದಿನ ಸರಕಾರ ಒಪ್ಪಿಕೊಂಡಿರಲಿಲ್ಲ

   ವಿಮಾನಗಳ ಹಾರಾಟವನ್ನು ಗುರುತಿಸುವ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಎಲ್ಲ ದೇಶಗಳ ಬಳಿಯೂ ಇರುತ್ತದೆ. ಇದರ ಜತೆಗೆ ರೇಡಾರ್ ಇಟ್ಟುಕೊಂಡಿರುತ್ತಾರೆ. ನಾವು ಅವುಗಳನ್ನು ಭೇದಿಸಿ ಅಥವಾ ಕಣ್ಣು ತಪ್ಪಿಸಿ, ಗುರಿಯನ್ನು ಮುಗಿಸಿ ವಾಪಸ್ ಬಂದಿದ್ದೆವು. ಭಾರತದ ದಾಳಿಗೆ ಪ್ರತ್ಯುತ್ತರ ಅನ್ನೋ ಹಾಗೆ ಬುಧವಾರದಂದು ಪಾಕಿಸ್ತಾನದವರು ಭಾರತದ ವಾಯು ಗಡಿಯೊಳಗೆ ನುಗ್ಗಿದ್ದರು. ಅದರೆ ನಮ್ಮ ರಕ್ಷಣಾ ವ್ಯವಸ್ಥೆ ಕಣ್ಣು ತಪ್ಪಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ಆದ್ದರಿಂದಲೇ ಮೊದಲಿಗೆ ಹೇಳಿದ್ದು ಕ್ಷಿಪ್ರವಾಗಿ ಕಾರ್ಯಾಚರಣೆ ಮುಗಿಸಬೇಕು ಅಂದಾಗ ವಾಯು ಸೇನೆಯ ಬಳಕೆ ಮಾಡಲಾಗುತ್ತದೆ. 26/11ರ ಮುಂಬೈ ದಾಳಿ ನಂತರ ಕೂಡ ಹೀಗೆ ವಾಯು ದಾಳಿ ಮಾಡುವ ಆಯ್ಕೆ ಭಾರತಕ್ಕೆ ಇತ್ತು. ಸ್ವತಃ ವಾಯುಸೇನೆ ಮುಖ್ಯಸ್ಥರೇ ಸರಕಾರದ ಬಳಿ ಹೇಳಿದ್ದರು. ಆದರೆ ಆಗಿನ ಸರಕಾರ ಈ ಅಯ್ಕೆಯನ್ನು ಒಪ್ಪಿರಲಿಲ್ಲ. ಅದಕ್ಕೆ ಕಾರಣ ಏನೇ ಇರಬಹುದು. ಉರಿ ದಾಳಿ ನಂತರ ನಮಗೆ ಬೇಕಾದ ಗುರಿ ಹತ್ತಿರದಲ್ಲೇ ಇತ್ತು. ಹಾಗಾಗಿ ಆಗಲೂ ವಾಯು ಸೇನೆಯನ್ನು ಹೆಚ್ಚು ಬಳಸಲಿಲ್ಲ. ಆದರೆ ಈ ಬಾರಿ ಉಗ್ರರ ನೆಲೆಗಳು ತೀರಾ ಒಳಗಿವೆ ಎಂಬ ಕಾರಣ ಇತ್ತು. ಈ ರೀತಿ ದಾಳಿಯಲ್ಲಿ ಮುಖ್ಯವಾದ ಸವಾಲೆಂದರೆ, ವೈರಿಯು ನಮ್ಮನ್ನು ಬಹಳ ಬೇಗ ಕಂಡುಹಿಡಿಯಬಹುದು. ದಾಳಿಗೆ ಎರಡು-ಎರಡೂವರೆ ನಿಮಿಷ ಆಗಬಹುದು. ಅಷ್ಟರಲ್ಲೇ ವೈರಿ ಪಡೆಯ ಶತ್ರು ಪಡೆಯ ವಾಯು ಸೇನೆ ಅಡ್ಡವಾಗಿ ಎದುರಾಗಬಹುದು.

   ಉಗ್ರರ ಮೇಲಿನ ದಾಳಿಗೆ ಎಂಥ ಸಿದ್ಧತೆ, ಎಂಥೆಂಥ ವಿಮಾನ, ಅದೆಂಥ ತಂತ್ರಜ್ಞಾನ?

   ಡಾಗ್ ಫೈಟ್ ಅಂತ ಕರೆಯುತ್ತಾರೆ

   ಡಾಗ್ ಫೈಟ್ ಅಂತ ಕರೆಯುತ್ತಾರೆ

   ಬುಧವಾರದಂದು ಪಾಕಿಸ್ತಾನದ ಯುದ್ಧ ವಿಮಾನ ಭಾರತದ ವಾಯು ಗಡಿ ಪ್ರವೇಶಿಸಿದೆ. ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಮ್ಮ ಯುದ್ಧ ವಿಮಾನಗಳಿಂದ ಆಗಿದೆ. ಸಾಮಾನ್ಯವಾಗಿ ಎದುರು ಬದರಾಗಿ ಒಬ್ಬರು ಮತ್ತೊಬ್ಬರಿಗೆ ಕಾಣುವಷ್ಟು ದೂರದಲ್ಲಿ ಇರುವುದನ್ನು ವಿಥಿನ್ ವಿಸಿಬಲ್ ರೇಂಜ್ ಅಂತ ಕರೆಯುತ್ತೇವೆ. ಹಾಗಿರುವಾಗ ಯಾವ ಕಾರಣಕ್ಕೂ ಎದುರಾಳಿಗೆ ಬೆನ್ನು ತೋರಿಸಲ್ಲ. ಅಂದರೆ ಯುದ್ಧ ವಿಮಾನಗಳನ್ನು ಹಿಂದಕ್ಕೆ ತಿರುಗಿಸಲ್ಲ. ಏಕೆಂದರೆ ಆಅಗ ಕ್ಷಿಪಣಿ ಮೂಲಕ ಹೊಡೆದುರುಳಿಸುವುದು ಸಲೀಸಾಗುತ್ತದೆ. ಅದರ ಬದಲಿಗೆ ಎದುರು ಬದರು ನಿಂತು, ಸರ್ಪಗಳ ರೀತಿ ಮುಖಾಮುಖಿ ಆಗುತ್ತಾ, ಸುತ್ತ್ ಹೊಡೆಯುತ್ತಾರೆ. ಇದನ್ನು ಮಿಲಿಟರಿ ಭಾಷೆಯಲ್ಲಿ ಡಾಗ್ ಫೈಟ್ ಅಂತ ಕರೆಯುತ್ತಾರೆ. ಏನೇ ಅದರೂ ವೈರಿಯು ವಿಮಾನದ ನೇರ ಗುರಿಯಲ್ಲಿರಬೇಕು. ಆಗ ಕ್ಷಿಪಣಿ ದಾಳಿ ಸಲೀಸು ಎಂಬುದೇ ಅದಕ್ಕೆ ಕಾರಣ. ಇನ್ನು ಕಣ್ಣಿಗೆ ಕಾಣದಷ್ಟು ದೂರ ಇದ್ದರೆ ಬಿಯಾಂಡ್ ವಿಸಿಬಲ್ ರೇಂಜ್ ಅಂತ ಕರೆಯುತ್ತಾರೆ. ಅಂಥ ಸಮಯದಲ್ಲಿ ಯುದ್ಧ ವಿಮಾನದೊಳಗಿರುವ ರೇಡಾರ್ ಮೂಲಕ ವೈರಿ ಎಲ್ಲಿರುವುದು ಅನ್ನೋದನ್ನು ಗಮನಿಸುತ್ತಾರೆ. ಬುಧವಾರದಂದು ಆಗಿದ್ದು ವಿಥಿನ್ ವಿಸಿಬಲ್ ರೇಂಜ್ ಕಾದಾಟ. ಹಾಗೆ ನೋಡಿದರೆ ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದ ವಾಯು ಸೇನೆ ಬಹಳ ದುರ್ಬಲವಾಗಿದೆ.

   ಸರ್ಜಿಕಲ್ ಸ್ಟ್ರೈಕ್: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್

   ಆರೇಳು ವಾರಗಳಿಗೆ ಮಾತ್ರ ಆಗುವ ದುಡ್ಡು

   ಆರೇಳು ವಾರಗಳಿಗೆ ಮಾತ್ರ ಆಗುವ ದುಡ್ಡು

   ಈ ರೀತಿ ಕಾದಾಟದ ಮಧ್ಯೆ ನಮ್ಮ ಪೈಲಟ್ ಪಾಕಿಸ್ತಾನಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಮುಂದೇನು ಎಂಬ ಬಗ್ಗೆ ನಮ್ಮ ಸರಕಾರ ಹಾಗೂ ಸೈನ್ಯ ನಿರ್ಧಾರ ತೆಗೆದುಕೊಳ್ಳಬೇಕು. ಈ ಸಂದರ್ಭದಲ್ಲಿ ಉಗ್ರರ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಬಾರದು ಎಂಬುದು ನನ್ನ ವೈಯಕ್ತಿಕ ನಿಲವು. ಯಾವಾಗೆಲ್ಲ ಉಗ್ರರ ಬಗ್ಗೆ ಗುಪ್ತಚರ ಇಲಾಖೆಯಿಂದ ನಮಗೆ ಮಾಹಿತಿ ಸಿಗುತ್ತದೋ ಆಗ ನಾವೇ ಅವರನ್ನು ಮುಗಿಸಿ, ಬರಬೇಕು. ಪಾಕಿಸ್ತಾನ ಪ್ರತಿ ದಾಳಿ ಮಾಡಬಹುದು ಎಂಬುದು ನಮಗೆ ಚಿಂತೆಯ ವಿಷಯ ಆಗಬಾರದು. ವಾಯು ಸೇನೆಯ ಈ ಕಾದಾಟವನ್ನು ಯುದ್ಧ ಎಂಬಂತೆ ಬಿಂಬಿಸುವುದು ಅಥವಾ ಆ ಎತ್ತರಕ್ಕೆ ಏರಿಸುವುದು ಭಾರತಕ್ಕೂ ಬೇಡ, ಪಾಕಿಸ್ತಾನಕ್ಕೂ ಬೇಡ. ನಮ್ಮ ಗಮನ ದೇಶದ ಅಭಿವೃದ್ಧಿ ಕಡೆಗಿದೆ. ಪಾಕಿಸ್ತಾನಕ್ಕೂ ಹಣಕಾಸಿನ ಕೊರತೆ ಇದೆ. ಪಾಕಿಸ್ತಾನದ ಹತ್ತಿರ ಈಗ ಆರೇಳು ವಾರಗಳಿಗೆ ಆಗುವಷ್ಟು ಮಾತ್ರ ದುಡ್ಡಿದೆ. ಅಷ್ಟು ಮಾತ್ರ ಅವರ ಹತ್ತಿರ ಇರುವ ಡಾಲರ್ ಗಳು. ಅದನ್ನೇ ಅವರು ಯುದ್ಧಕ್ಕೆ ಬಳಸಿಕೊಂಡರೆ ಮೂರ್ನಾಲ್ಕು ವಾರಕ್ಕೆ ಖರ್ಚಾಗುತ್ತದೆ. ಆ ನಂತರ ಅವರಿಗೆ ಯುದ್ಧ ಮುಂದಕ್ಕೆ ನಡೆಸುವುದು ಕಷ್ಟಸಾಧ್ಯ. ಹಾಗಾಗಿ ಪಾಕ್ ಗೆ ಈಗ ಯುದ್ಧ ಬೇಕಿಲ್ಲ. ನಮ್ಮ ಉದ್ದೇಶ ಉಗ್ರರನ್ನು ಹೊಡೆದುಹಾಕುವುದೇ ವಿನಾ ಪೂರ್ಣ ಪ್ರಮಾಣದ ಯುದ್ಧವಲ್ಲ. ಅದ್ದರಿಂದ ಯಾವಾಗ ಅಗತ್ಯ ಬರುತ್ತದೋ ಆಗ ಉಗ್ರಗಾಮಿಗಳನ್ನು ಸದೆಬಡಿದರೆ ಸಾಕು ಅಂತಿದ್ದರೆ ಆಯಿತು ಎಂಬುದು ನನ್ನ ಅಭಿಪ್ರಾಯ. ಮೇಲಾಗಿ ರಾಜತಾಂತ್ರಿಕ ನಡೆಯ ಮೂಲಕ ವಿಂಗ್ ಕಮ್ಯಾಂಡರ್ ಅಭಿನಂದನ್ ಅವರನ್ನು ವಾಪಸ್ ಕರೆತರುವ ಪ್ರಯತ್ನ ಶುರು ಆಗುತ್ತದೆ. ಇನ್ನು ಇದು ಘೋಷಿತ ಯುದ್ಧ ಸಮಯ ಅಲ್ಲ. ಇಂಥ ವೇಳೆ ಅಕಸ್ಮಾತ್ ಸೈನಿಕರು ಸಿಕ್ಕಿಬಿದ್ದಾಗ ಎರಡೂ ದೇಶ ಗೌರವದಿಂದ ನಡೆಸಿಕೊಳ್ಳಲೇಬೇಕು.

   ಪಾಕ್ ವಶದಲ್ಲಿ ಅಭಿನಂದನ್ ಸುರಕ್ಷಿತವಾಗಿದ್ದಾರೆ, ನಿರಾತಂಕವಾಗಿದ್ದಾರೆ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Here is an analysis by Kishor Narayan about why India used Air force against terrorists? This is an Oneindia exclusive article.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more