Get Updates
Get notified of breaking news, exclusive insights, and must-see stories!

ಬೊಮ್ಮಾಯಿ ಸರಕಾರಕ್ಕೆ 1 ವರ್ಷ: ಬೆಂಗಳೂರು ಅಭಿವೃದ್ಧಿಗೇನು ಪ್ಲಾನ್ ? ನೀವೇ ನೋಡಿ..

ರಾಜ್ಯದ ಮುಖ್ಯಂತ್ರಿಗಳಾಗಿ ಒಂದು ವರ್ಷ ಪೂರ್ಣಗೊಳಿಸಿರುವ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಒಂದು ವರ್ಷಗಳಲ್ಲಿ ಇಲಾಖೆಗಳ ಮೂಲಕ ಸಾಧಿಸಿರುವ ಅನೇಕ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಾಗೂ ಕಾರ್ಯರೂಪಕ್ಕೆ ತರಲಾದ ಹೊಸ ಯೋಜನೆಗಳನ್ನು ಬಿಂಬಿಸಿದೆ. ಇನ್ನು ಬೆಂಗಳೂರಿನ ಅಭಿವೃದ್ಧಿಯ ಕುರಿತು ಒಂದು ವರ್ಷದಲ್ಲಿ ಆದ ಕಾಮಗಾರಿಗಳ ಕುರಿತು ಹಾಗೂ ಸರ್ಕಾರ ಕೈಗೊಂಡಿರುವ ನೂತನ ಆಯಮಗಳು ಹೇಳಿಕೊಂಡಿರುವ ಯೋಜನೆಗಳು ಮತ್ತಷ್ಟು ಬೆಂಗಳೂರು ಅಭಿವೃದ್ಧಿ ಮಾಡಲು ಸಹಕರಿಸಲಿವೆ ಎಂಬ ಹೊಸ ಅಂಶಗಳು ಬಿಂಬಿಸಿದೆ.

ಒಂದು ವರ್ಷದ ಸಾಧನೆಯನ್ನು ಅವಲೋಕನ ಮಾಡಿರುವ ಬೊಮ್ಮಾಯಿ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಎರಡು ಮಹತ್ವದ ಕಾರ್ಯಕ್ರಮಗಳನ್ನು ಮೂಲಕ ಸಿಲಿಕಾನ್ ಸಿಟಿ ಬೆಂಗಳೂರು ಮತ್ತಷ್ಟು ಅಭಿವೃದ್ಧಿಯ ಕುರಿತು ಬೆಂಗಳೂರು ಅಭಿವೃದ್ಧಿಯ ಕೇಂದ್ರಬಿಂದು ಆಗಿರುವ ಬಿಡಿಎ ತನ್ನ ಸಾಧನೆಗಳನ್ನು ಹಾಗೂ ಅಭಿವೃದ್ಧಿಯ ನೂತನ ಆಯಾಮಗಳ ಮೂಲ ಗುರಿಯನ್ನು ಹೊಂದಿದೆ. ಬೆಂಗಳೂರಿನ ಅಭಿವೃದ್ಧಿಯ ಕುರಿತು ಒಂದು ವರ್ಷದ ಆದ ಕಾಮಗಾರಿಗಳ ಕುರಿತು ಸರ್ಕಾರ ಕೈಗೊಂಡಿರುವ ನೂತನ ಆಯಮಗಳು ಮತ್ತಷ್ಟು ಬೆಂಗಳೂರು ಅಭಿವೃದ್ಧಿ ಮಾಡಲು ಸಹಕರಿಸಲಿವೆ ಎಂಬ ಅಂಶಗಳನ್ನು ಬಿಂಬಿಸಿದೆ.

ಒಂದು ವರ್ಷದ ಸಾಧನೆಯನ್ನು ಅವಲೋಕನ ಮಾಡಿರುವ ಬೊಮ್ಮಾಯಿ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಧಿಕಾರ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಎರಡು ಮಹತ್ವದ ಕಾರ್ಯಕ್ರಮಗಳನ್ನು ಮೂಲಕ ಸಿಲಿಕಾನ್ ಸಿಟಿ ಮತ್ತಷ್ಟು ಅಭಿವೃದ್ಧಿಯ ಕುರಿತು ಬೆಂಗಳೂರು ಅಭಿವೃದ್ಧಿಯ ಕೇಂದ್ರಬಿಂದು ಆಗಿರುವ ಬಿಡಿಎ ತನ್ನ ಸಾಧನೆಗಳನ್ನು ಹಾಗೂ ಅಭಿವೃದ್ಧಿಯ ನೂತನ ಆಯಾಮಗಳ ಮೂಲ ಗುರಿ ಹೊಂದಿದ್ದು ಬಿಡಿಎ ಹೇಳಿಕೊಂಡಿರುವ ಹಾಗೆ ಬೆಂಗಳೂರು ಬೃಹತ್ ನಗರಗಳಲ್ಲಿ ಕಾಮಗಾರಿಗಳ ವೇಗವನ್ನು ಚುರುಕುಗೊಳಿಸಲು ಬಿಡಿಎಯ ಯೋಜನೆಗಳು ಅಭಿವೃದ್ಧಿ ಕಾರ್ಯಗಳ ಎರಡು ಗುರಿಗಳೊಡನೆ ಪ್ರಾರಂಭಿಸಿದೆ. ಈಗಾಗಲೇ ಯೋಜಿತ ಸ್ವರೂಪದಲ್ಲಿ ಬೆಂಗಳೂರು ಅಭಿವೃದ್ಧಿಯ ಒಟ್ಟು 1206.97 ಚದರ ಕಿ.ಮೀ. ವಿಸ್ತೀರ್ಣದ ವ್ಯಾಪ್ತಿಯನ್ನು ಒಳಗೊಂಡಿದೆ.

 ಬೆಂಗಳೂರು ಅಭಿವೃದ್ಧಿಗೆ ಹೊಸ ನೋಟ

ಬೆಂಗಳೂರು ಅಭಿವೃದ್ಧಿಗೆ ಹೊಸ ನೋಟ

ಒಂದು ವರ್ಷಗಳ ಕಾಮಗಾರಿಗಳು ಹಾಗೂ ಮುಂಚಿತ ಯೋಜನೆಗಳ ಬಗ್ಗೆ ಗುಣಮಟ್ಟದ ಮೂಲಸೌಲಭ್ಯಗಳ ಸೃಷ್ಟಿ, ನಿವೇಶನ ಮತ್ತು ಸೇವೆಗಳನ್ನು ಒದಗಿಸುವುದು, ಬಿಡಿಎದ ಪ್ರಮುಖ ಧ್ಯೇಯವಾಗಿದೆ ಎಂದಿರುವ ಬಿಡಿಎ, ಅವಕಾಶ ವಂಚಿತರಿಗೆ ವಸತಿ ಅಗತ್ಯತೆಗಳನ್ನು ಪೂರೈಸುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಧ್ಯೇಯವಾಗಿದೆ. ನಗರ ಯೋಜನೆ, ಇಂಜಿನಿಯರಿಂಗ್, ಹಣಕಾಸು, ವಿಶೇಷ ಕಾರ್ಯಪಡೆ, ಭೂಸ್ವಾದೀನ, ಜಾಗೃತ ದಳ ಮತ್ತು ಕಾನೂನು ವಿಭಾಗಗಳ ನೆರವು ಸೇರಿದಂತೆ ಜನಪರ ಅಭಿವೃದ್ಧಿ ಕಾರ್ಯಗಳನ್ನು ಬೆಂ.ಅ.ಪ್ರಾ ಯಶಸ್ವಿಯಾಗಿ ಕಾರ್ಯಗೊಳಸಿಲಿದೆ .

 ಪೆರಿಫೆರಲ್ ವರ್ತುಲ್ ರಸ್ತೆ ಅಭಿವೃದ್ಧಿ

ಪೆರಿಫೆರಲ್ ವರ್ತುಲ್ ರಸ್ತೆ ಅಭಿವೃದ್ಧಿ

ಪಿಪಿಪಿ-ಡಿಬಿಎಫ್ಒಟಿ ಮಾದರಿಯಲ್ಲಿ ಪಥಗಳ ರಸ್ತೆ ಅಭಿವೃದ್ಧಿಯಾಗಲಿದೆ. ಈಗಾಗಲೇ ಈ ಯೋಜನೆಗೆ ಟೆಂಡರ್ ಕರೆಯಲಾಗಿದೆ.

ಪೆರಿಫೆರಲ್ ರಸ್ತೆಯು ತುಮಕೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಹೊಸ ವಿಮಾನ ನಿಲ್ದಾಣ ರಸ್ತೆ, ಹಳೇ ಮದ್ರಾಸ್ ರಸ್ತೆ ಮತ್ತು ಹೊಸುರು ರಸ್ತೆಯನ್ನು ಸಂಪರ್ಕಿಸುತ್ತದೆ.

ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ನಿವಾರಿಸಲು ಬೆಂಗಳೂರು ಸುತ್ತು ವರ್ತುಲ ಒಂದರ ರಚಣೆಗಾಗಿ ನೈಸ್ ರಸ್ತೆಯೊಡನೆ ಜೋಡಣೆ.

 ಕೆರೆಗಳ ಹೊಳೆತ್ತುವ ಕಾರ್ಯಕ್ರಮ

ಕೆರೆಗಳ ಹೊಳೆತ್ತುವ ಕಾರ್ಯಕ್ರಮ

ಇಆರ್‍‌ಪಿಯು ಬಿಡಿಎ ಚಟುವಟಿಕೆಗಳನ್ನು ಸಮಗ್ರವಾಗಿ ಡಿಜಿಟಲೀಕರಣಗೊಳಿಸುವ ಮಹತ್ತರ ಗುರಿ ಹೊಂದಿದೆ.

ಒತ್ತುವರಿ ಮಾಡಿಕೊಂಡಿರುವ ಮರುಗಳಿಕೆ; ಭೂ ಲೆಕ್ಕಪರಿಶೋಧನೆಯ ವರದಿಯ ಆಧಾರದ ಮೇಲೆ ಸುಮಾರು 1289.82 ಕೋಟಿ ರೂಪಾಯಿ ಮೌಲ್ಯದ 1,89,190 ಚದರ ಮೀಟರುಗಳ ವಿಸ್ತಾರವಾದ ಜಮೀನು, ನಿವೇಶನಗಳನ್ನು ಅನಧಿಕೃತ ಸ್ವಾದೀನದಾರರನ್ನು ತೆರವುಗೊಳಿಸಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಬೆಂಗಳೂರು ನಗರಕ್ಕೆ ಸುಂದರ ಮೆರಗು ಮಾಡಲಾಗುವುದು ಎಂದಿದೆ ಬಿಡಿಎ.

ಹೌದು, ಕರ್ನಾಟಕ ಸರ್ಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶನಗಳ ಅನುಸಾರ 200 ಕೋಟಿ ರೂ. ವೆಚ್ಚದಲ್ಲಿ ಬೆಂಳದೂರು ಮತ್ತು ವರ್ತುಲ ಕೆರೆಗಳ ಹೊಳೆತ್ತುವ ಕಾರ್ಯಕ್ರಮ ಮತ್ತು ಕೆರೆ ಏರಿಗಳ ನಿರ್ವಹಣೆ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಸಲಾಗುತ್ತಿದೆ‌.

 ಪ್ಲಾಟ್‌ಗಳು, ಮನೆಗಳನ್ನು ಶೀಘ್ರದಲೇ ಹಂಚಿಕೆ

ಪ್ಲಾಟ್‌ಗಳು, ಮನೆಗಳನ್ನು ಶೀಘ್ರದಲೇ ಹಂಚಿಕೆ

ಬೆಂಗಳೂರು ನಗರದ ತ್ವರಿತ ಬೆಳವಣಿಗೆ ಮಾಸ್ಟರ್ 2041ರ ಪರಿಷ್ಕರಣೆಯ ಪೂರ್ವಭಾವಿ ಕಾರ್ಯವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೈಗೊಂಡಿದೆ.

ಇನ್ನು ಬಿಡಿಎ 9673 ಪ್ಲಾಟಗಳು, ಮನೆಗಳನ್ನು ನಿರ್ಮಿಸಿದೆ. ಮುಂದಿನ ಒಂದು ವರ್ಷದಲ್ಲಿ 5500 ಪ್ಲಾಟ್‌ಗಳು, ಮನೆಗಳನ್ನು ಪೂರ್ಣಗೊಳಿಸಲು ಯೋಜನೆ ಹಾಕಿಕೊಂಡಿರುವ ಬಿಡಿಎ ಅವುಗಳನ್ನು ಶೀಘ್ರದಲೇ ಸಾರ್ವಜನಿಕರಿಗೆ ಹಂಚಿಕೆಗೆ ಬಿಡುಗಡೆ ಮಾಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+