ಸಿಂಹವನ್ನು ಎತ್ತಿಕೊಂಡ ಮಹಿಳೆ: ವೈರಲ್ ವಿಡಿಯೋ
ಮಾಧ್ಯಮಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ವೈರಲ್ ವಿಡಿಯೊಗಳು ಸಾಮಾನ್ಯವಾಗಿ ಎರಡು ಅಂಶಗಳನ್ನು ಹೊಂದಿರುತ್ತವೆ. ಒಂದು ಮುದ್ದಾದ ಅಂಶ ಮತ್ತೊಂದು ನಂಬಲು ಕಷ್ಟವಾದ ಆಘಾತಕಾರಿ ಅಂಶ. ಚಿಕ್ಕ ಮಕ್ಕಳು, ನಾಯಿಗಳು ಮತ್ತು ಬೆಕ್ಕುಗಳ ಮುದ್ದಾದ ವಿಡಿಯೊಗಳು ಆಗಾಗ್ಗೆ ವೈರಲ್ ಆಗುತ್ತವೆ. ಇವು ನೋಡುಗರ ಮನಸಿಗೆ ಹಿತ ನೀಡುತ್ತವೆ. ಆದರೆ ಕೆಲವೊಮ್ಮೆ ಕ್ರೂರ ಪ್ರಾಣಿಗಳ ವಿಡಿಯೊಗಳು ಸಹ ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ನಂಬಲು ಅಸಾಧ್ಯವಾಗಿರುತ್ತವೆ. ಇಂತಹ ನಂಬಲು ಅಸಾಧ್ಯವಾದಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸಾಮಾನ್ಯವಾಗಿ ನಾವು ಸಾಕು ನಾಯಿ ಬೆಕ್ಕು ಇನ್ನಿತರ ಆಕ್ರಮಣಕಾರಿಯಲ್ಲದ ಪ್ರಾಣಿಗಳನ್ನು ಎತ್ತಿಕೊಳ್ಳುತ್ತೇವೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಮುದ್ದಾದ ಪ್ರಾಣಿಗಳನ್ನು ಹತ್ತರ ಕರೆದುಕೊಳ್ಳುತ್ತಾರೆ. ಆದರೆ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬಳು ನಾಯಿ ಅಥವಾ ಬೆಕ್ಕನ್ನು ಹೊತ್ತುಕೊಂಡಿಲ್ಲ. ಬದಲಿಗೆ ಆಕೆ ತನ್ನ ಮಡಿಲಲ್ಲಿ ಕ್ರೂರ ಸಿಂಹವನ್ನು ಹೊತ್ತುಕೊಂಡಿದ್ದಾಳೆ. 10 ಸೆಕೆಂಡ್‌ನ ಈ ಕ್ಲಿಪ್‌ನಲ್ಲಿ ಮಹಿಳೆ ಸಿಂಹವನ್ನು ತನ್ನ ಮಡಿಲಲ್ಲಿ ಹಿಡಿದುಕೊಂಡು ಎಲ್ಲೋ ಕರೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಸಿಂಹವು ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಸಿಂಹವನ್ನು ಎತ್ತಿಕೊಂಡ ಮಹಿಳೆ
ಈ ವಿಡಿಯೋ ನೋಡಿದವರೆಲ್ಲಾ ಶಾಕ್ ಆಗುತ್ತಿದ್ದಾರೆ. ಮಹಿಳೆ ಈ ರೀತಿ ಭಯಾನಕ ಬೇಟೆಗಾರ ಸಿಂಹವನ್ನು ಹಿಡಿದಿರುವುದನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಅವಳನ್ನು ವಂಡರ್ ವುಮನ್ ಎಂದು ಕರೆಯುತ್ತಿದ್ದಾರೆ. ಘೋರ ಸಿಂಹವನ್ನು ಮಹಿಳೆ ಸರಾಗವಾಗಿ ಎತ್ತುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಸಿಂಹವು ಮಹಿಳೆಯ ಮಡಿಲಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನೂ ಸಹ ಕಾಣಬಹುದು. ಮಹಿಳೆ ಸಿಂಹವನ್ನು ಎಲ್ಲೋ ಕರೆದುಕೊಂಡು ಹೋಗುತ್ತಿರುವಂತೆ ತೋರುತ್ತಿದೆ.

ಕುವೈತ್‌ನ ವಿಡಿಯೊ
ವೈರಲ್ ಆಗುತ್ತಿರುವ ಈ ವಿಡಿಯೋ ಕುವೈತ್‌ನಿಂದ ಬಂದಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಸಿಂಹದ ಮಾಲೀಕ ಎಂದು ತಿಳಿದುಬಂದಿದೆ. ಮಧ್ಯಪ್ರಾಚ್ಯ ಮಾನಿಟರ್ ಪ್ರಕಾರ, ಸಿಂಹವು ಕುವೈತ್ ನಗರದ ವಸತಿ ಪಟ್ಟಣಕ್ಕೆ ಬಂದಿದ್ದರಿಂದ ಈ ರೀತಿ ವರ್ತಿಸಿದೆ ಎಂದು ತಿಳಿದು ಬಂದಿದೆ.











Click it and Unblock the Notifications