New Year 2025: ಹೊಸ ಭರವಸೆಯೊಂದಿಗೆ ಹೊಸವರ್ಷವನ್ನು ಸ್ವಾಗತಿಸೋಣ
ಹೊಸ ನಿರೀಕ್ಷೆಯೊಂದಿಗೆ ನೂತನ ವರ್ಷಾರಂಭಕ್ಕೆ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ. ಹಾಗೆಯೇ ಸಡಗರ ಸಂಭ್ರಮದಿಂದ ಹೊಸವರ್ಷವನ್ನು ಸ್ವಾಗತಿಸಲು ತಮ್ಮದೇ ಆದ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಇದರ ಜೊತೆಯಲ್ಲಿ ಹೊಸ ವರ್ಷದಲ್ಲಿ ಏನಾದರೊಂದು ಮಾಡಲೇ ಬೇಕೆಂಬ ಸಂಕಲ್ಪದೊಂದಿಗೆ ಹೆಜ್ಜೆಯಿಡುವ ದೃಢ ನಿರ್ಧಾರವನ್ನು ನಾವೆಲ್ಲರೂ ಮಾಡಬೇಕಾಗಿದೆ.
ಹಾಗೆನೋಡಿದರೆ ಹೊಸವರ್ಷ ಎನ್ನುವುದು ಪ್ರಕೃತಿ ನಿಯಮ. ರಾತ್ರಿ ಕಳೆದು ಹಗಲು ಬಂದೇ ಬರುತ್ತದೆ ಅದರಂತೆ ಹೊಸ ವರ್ಷವೂ ಕೂಡ. ಆದರೆ ನಾವು ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಕ್ಕೆ ಹೆಜ್ಜೆಯಿಡುವ ಮುನ್ನ ಹೊಸವರ್ಷದಲ್ಲಿ ಏನೆಲ್ಲ ಮಾಡಬಹುದು ಮತ್ತು ಮಾಡಬೇಕು ಎಂಬುದರ ಕುರಿತಂತೆ ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಮುನ್ನಡೆದರೆ ಪ್ರತಿ ವರ್ಷವೂ ನಮ್ಮ ಬದುಕಿಗೆ ವಿಶೇಷವೇ ಆಗಿರಲಿದೆ.

ಎಲ್ಲ ವರ್ಷಗಳಲ್ಲಿಯೂ ಸಾವು ನೋವು ಇದ್ದದ್ದೇ ಆದರೆ ಅದರಾಚೆಗೆ ನಮ್ಮ ಬದುಕಿನಲ್ಲಿ ಕೆಲವು ಇಸವಿಯ ವರ್ಷಗಳು ನೆನಪು ಮಾಡಿಕೊಳ್ಳುವಂತಿರುತ್ತವೆ. ಮತ್ತೆ ಅವು ನಮ್ಮ ಸಾಧನೆಗೆ ಸಾಕ್ಷಿಯಾಗಿ ಉಳಿದು ಬಿಟ್ಟಿರುತ್ತವೆ. ಅಂತಹದೊಂದು ನೆನಪಿನಲ್ಲಿ ಉಳಿಯುವ ಕೆಲಸವನ್ನು ನಾವು ಮಾಡಿಯೇ ತೀರುತ್ತೇವೆ ಎಂಬ ನಿರ್ಧಾರವನ್ನು ವರ್ಷದ ಆರಂಭದಲ್ಲಿ ಮಾಡಿಕೊಂಡು ಮುನ್ನಡೆದರೆ ನಮ್ಮ ಬದುಕಿಗೆ ಅರ್ಥ ಸಿಗಲಿದೆ.
ಹೊಸ ಭರವಸೆಯೊಂದಿಗೆ ಮನ್ನಡೆಯೋಣ
ನಾವು ಅನುಭವಿಸಿದ ಸಂಕಷ್ಟಗಳು ಕೋವಿಡ್ ಗಿಂತ ಭೀಕರವಾಗಿರಲು ಸಾಧ್ಯವಿಲ್ಲ. ಅಂತಹ ಸಂಕಷ್ಟವನ್ನೇ ಸಾಮೂಹಿಕವಾಗಿ ಎದುರಿಸಿ ಬಂದವರು ನಾವು. ಹೀಗಿರುವಾಗ ನಮ್ಮೊಳಗಿನ ಕಷ್ಟಗಳನ್ನು ಪರಿಹರಿಸಿಕೊಳ್ಳುವ ದೃಢ ಸಂಕಲ್ಪವನ್ನು ಹೊಸವರ್ಷದಲ್ಲಿ ಮಾಡಿಕೊಳ್ಳಬೇಕಿದೆ. ನೆನಪಿರಲಿ ನಾವಿಡುವ ಎಚ್ಚರಿಕೆಯ ಹೆಜ್ಜೆಗಳಷ್ಟೇ ನಾವು ಎಡವದಂತೆ ನೋಡಿಕೊಳ್ಳುತ್ತದೆ. ಹೀಗಿದ್ದ ಮೇಲೆ ಎಡವದಂತೆ ಹೆಜ್ಜೆಹಾಕುವುದು ಜಾಣತನವಾಗುತ್ತದೆ. ನಿಜ ಹೇಳಬೇಕೆಂದರೆ ನಾವು, ನೀವು ಎಲ್ಲರೂ ಹೊಸ ವರ್ಷ ಬಂದಾಗಲೆಲ್ಲ ಹೊಸತರ ನಿರೀಕ್ಷೆಯಲ್ಲಿ ಹಳೆಯ ವರ್ಷಕ್ಕೆ ವಿದಾಯ ಹೇಳಿ ಮುನ್ನಡೆಯುತ್ತೇವೆ.
ಕಳೆದು ಹೋದ ವರ್ಷದ ಅಷ್ಟು ಸಂಕಷ್ಟಗಳನ್ನು ನೆನಪು ಮಾಡುತ್ತಾ ಹೊಸ ವರ್ಷದಲ್ಲಿ ಎಲ್ಲವೂ ಸುಖಕರವಾಗಿರಲಿ ಎಂಬ ಪ್ರಾರ್ಥನೆ ಯೊಂದಿಗೆ ಹಲವು ನಿರೀಕ್ಷೆಯಲ್ಲಿ ಮುನ್ನಡೆಯುತ್ತಾ ಬಂದಿದ್ದೇವೆ. ನಾವೆಲ್ಲರೂ ಭರವಸೆಯ ಜೀವಿಗಳು ಇವತ್ತು ದಕ್ಕದೆ ಹೋಗಿದ್ದು ನಾಳೆ ದಕ್ಕಬಹುದು ಎಂದು ಬಯಸುವವರು ನಾವು. ಇಂತಹ ಭರವಸೆಯಲ್ಲಿಯೇ ನಾವೆಲ್ಲರೂ ಬದುಕುತ್ತಿದ್ದೇವೆ. ಭರವಸೆಗಳೆಲ್ಲವೂ ಈಡೇರದೆ ಇರಬಹುದು ಆದರೆ ಬದುಕಿಗೆ ಭರವಸೆಗಳು ಬೇಕಾಗುತ್ತದೆ. ಆ ಭರವಸೆ ಇಲ್ಲದೆ ಹೋದರೆ ಬದುಕು ಶೂನ್ಯವಾಗಿ ಬಿಡುತ್ತದೆ. ಹೊಸವರ್ಷದಲ್ಲಿ ಬೆಟ್ಟದಂತಹ ಕನಸುಗಳನ್ನು ಹೊತ್ತು ಅವು ಈಡೇರದೆ ತಲೆ ಚಚ್ಚಿಕೊಳ್ಳುವುದಕ್ಕಿಂತ ಚಿಕ್ಕ, ಚಿಕ್ಕ ನನಸಾಗುವ ಕನಸನ್ನೇ ಕಾಣುತ್ತಾ ಅವುಗಳನ್ನು ನನಸು ಮಾಡುತ್ತಾ ಖುಷಿಪಡೋಣ.

ಹೊಸ ಮನುಷ್ಯರಾಗುವ ಸಂಕಲ್ಪ ಇರಲಿ
ಸಾಮಾನ್ಯವಾಗಿ ಹೊಸ ವರ್ಷದಲ್ಲಿ ಹೊಸದಾದ ಯೋಜನೆಗಳನ್ನು ಹಾಕಿ ಕೊಂಡು ಕಾರ್ಯರೂಪಕ್ಕೆ ತರಲು ಪ್ರಯತ್ನ ಪಡುತ್ತೇವೆ. ಹೊಸ ವರ್ಷದ ಕನಸುಗಳು ಕೂಡ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಹೊಸವರ್ಷವನ್ನು ನಾವು ಕೇವಲ ಹೊಸ ವಸ್ತುಗಳ ಖರೀದಿಗೆ ಮಾತ್ರ ಸೀಮಿತ ಮಾಡಿಕೊಳ್ಳದೆ ನಾವು ನಮಗಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೂಡ ಅಗತ್ಯವೇ... ಹೊಸ ವರ್ಷದಿಂದ ನಾನು ಹೊಸ ಮನುಷ್ಯನಾಗುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬರುವುದು ಕೂಡ ಬಹುಮುಖ್ಯವಾಗುತ್ತದೆ.
ಮದ್ಯಪಾನ, ಧೂಮಪಾನ ಸೇರಿದಂತೆ ಹಲವು ದುಶ್ಚಟಗಳನ್ನು ಹೊಂದಿದವರು ಅದಕ್ಕೆ ಇತಿಶ್ರೀ ಹೇಳುತ್ತೇನೆ ಎಂಬ ಸಂಕಲ್ಪ ಮಾಡಬೇಕು. ಆ ಮೂಲಕ ಹಳೆಯ ವರ್ಷದಲ್ಲಿ ಕಳೆದುಕೊಂಡಿದ್ದನ್ನು ಹೊಸವರ್ಷದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಹೊಸ ಮನುಷ್ಯರಾಗಿ ಮಾರ್ಪಾಡಾಗಲು ಸಾಧ್ಯವಾಗಲಿದೆ. ಇದು ನಮ್ಮದೇ ಕುಟುಂಬಕ್ಕೆ ಕೊಡುವ ಕೊಡುಗೆಯೂ ಆಗಬಹುದು. ಜತೆಗೆ ಹೊಸ ಬದುಕಿಗೆ ತೆರೆದುಕೊಳ್ಳಲು ಸಹಾಯ ಆಗಬಹುದು. ನಾವು ಹೊಸ ವರ್ಷವನ್ನು ಆಚರಿಸುವ ರೀತಿ, ನೀತಿಗಳನ್ನು ಗಮನಿಸಿದರೆ ಹೊಸವರ್ಷದಲ್ಲಿ ಹೊಸ ಮನುಷ್ಯರಾಗಿ ಮಾರ್ಪಾಡಾಗಲು ಸಾಧ್ಯನಾ? ಎಂಬ ಪ್ರಶ್ನೆಯೂ ಮೂಡದಿರದು.
ನಮ್ಮ ಆಲೋಚನೆ ವಿಭಿನ್ನ, ವಿಶಿಷ್ಟವಾಗಿರಲಿ
ಏಕೆಂದರೆ ವರ್ಷದ ಆರಂಭವನ್ನೇ ನಾವು ಮೋಜು ಮಸ್ತಿಯೊಂದಿಗೆ ಆರಂಭಿಸುತ್ತಿದ್ದೇವೆ. ಕಂಠಮಟ್ಟ ಕುಡಿದು ತಿಂದು ಎಲ್ಲೆಂದರಲ್ಲಿ ಉರುಳಾಡುವುದೇ ವರ್ಷಾಚರಣೆ ಎಂಬ ಮಟ್ಟಕ್ಕೆ ಬಂದು ನಿಂತಿದ್ದೇವೆ. ಹೊಸ ವರ್ಷದ ಸ್ವಾಗತವನ್ನು ಈ ರೀತಿಯಾಗಿ ಮಾಡಿದ ಮೇಲೆ ಒಂದೊಳ್ಳೆಯ ಸಂಕಲ್ಪವನ್ನು ಮಾಡುವುದಾದರೂ ಹೇಗೆ? ಪಾಶ್ಚಿಮಾತ್ಯರ ಸಂಸ್ಕೃತಿಗೆ ಮಾರುಹೋಗುತ್ತಿರುವ ನಾವು ಹೊಸವರ್ಷವನ್ನು ಗುಂಡು ತುಂಡಿನೊಂದಿಗೆ ಆಚರಿಸುತ್ತಿದ್ದೇವೆ. ಹೊಸವರ್ಷ ಆಚರಣೆ ಎಂದರೆ ಮಜಾ ಉಡಾಯಿಸುವುದು ಎಂಬಂತೆ ಬಿಂಬಿತವಾಗತೊಡಗಿದೆ.

ನಗರ ಪ್ರದೇಶಗಳು ಮಾತ್ರವಲ್ಲದೆ, ಹಳ್ಳಿಗಳಲ್ಲಿಯೂ ಅಂತಹದ್ದೇ ಮನೋಭಾವನೆ ಬೆಳೆಯತೊಡಗಿದೆ. ಹೀಗಾಗಿ ಆಚರಣೆ ಕೂಡ ಎಲ್ಲೋ ಒಂದು ಕಡೆ ಹಳಿ ತಪ್ಪುತ್ತಿದೆ ಎಂಬುದನ್ನು ಒಪ್ಪಿಕೊಳ್ಳಬೇಕಿದೆ. ಆದರೆ ಅದೆಲ್ಲವನ್ನೂ ಮೀರಿ ನಮಗೂ ಯೋಚನಾಶಕ್ತಿಯಿದೆ. ಒಳಿತು ಕೆಟ್ಟದರ ಬಗ್ಗೆ ಅರಿತುಕೊಳ್ಳುವಷ್ಟು ವಿವೇಚನೆಯಿದೆ. ಹೀಗಿರುವಾಗ ಎಲ್ಲರಂತೆ ನಾವೇಕೆ ಆಲೋಚಿಸಬೇಕು? ನಮ್ಮ ಆಲೋಚನೆ ವಿಭಿನ್ನ ಮತ್ತು ವಿಶಿಷ್ಟವಾಗಿರಲಿ... ಮತ್ತು ಅದು ವರ್ಷಪೂರ್ತಿ ಒಳಿತನ್ನೇ ಮಾಡುವಂತಿರಲಿ ಏನಂತೀರಾ?
Photo credit:This is an AI generated aticle image through WISE
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications