Swish Human Ads: ಬೆಂಗಳೂರಲ್ಲಿ ಸ್ವಿಶ್ 'ಮಾನವ ಜಾಹೀರಾತು' ವೈರಲ್: ಭಾರೀ ಆಕ್ರೋಶ

ಬೆಂಗಳೂರು, ಡಿಸೆಂಬರ್ 09: ಆಹಾರ, ಬಟ್ಟೆ ಇನ್ನಿತರ ವ್ಯಾಪಾರಿಗಳು ಉದ್ಯಮಿಗಳು, ಕಂಪನಿಗಳು ವಿಶಿಷ್ಟ ರೀತಿಯಲ್ಲಿ ಜಾಹೀರಾತು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ ಇಲ್ಲೊಂದು ಆಹಾರ ವಿತರಣೆ Swish ಸ್ಮಾರ್ಟ್ ಆಫ್ ನ (ಕಂಪನಿ) ಮಾನವ ಜಾಹೀರಾತು ಹಿಡಿದು ರಸ್ತೆಯಲ್ಲಿ ಹೊರಟಿರುವ ಫೋಟೋವೊಂದು ವೈರಲ್ ಆಗಿದೆ. ಇದರಲ್ಲಿ ಬಿಲ್ ಬೋರ್ಡ್ ಫುಡ್ ಆಫರ್ ಸಹ ಇದೆ. ಇದಕ್ಕೆ ಆನ್‌ಲೈನ್‌ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಆಹಾರ ವಿತರಣಾ ಅಪ್ಲಿಕೇಶನ್ ಜಾಹೀರಾತು ಇದಾಗಿದೆ. ಮಾನವ ಜಾಹೀರಾತು ಫಲಕ ಎಂದು ಕರೆಯಲ್ಪಡುವ ಈ ಮಾರ್ಕೆಟಿಂಗ್ ತಂತ್ರವನ್ನು ನೆಟ್ಟಿಗರು ವಿರೋಧಿಸಿದ್ದಾರೆ. ಈ ಫೋಟೋ ಅನ್ನು ಉದ್ಯಮಿ @roshanonline ಎಂಬುವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ಹಂಚಿಕೊಂಡಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ವಿವ್ಸ್ ಪಡೆದಿರುವ ಈ ಫೋಟೋಗೆ ಖಂಡನೆ ವ್ಯಕ್ತವಾಗುತ್ತಿದೆ.

Netizens Outage on Bengaluru Over Swish Food Controversial Human Ads

Swish ಸ್ಮಾರ್ಟ್ ಅಪ್ಲಿಕೇಷನ್ ಮಾರ್ಕೆಟಿಂಗ್ ವಿಧಾನವು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ. ಸ್ವತಃ ಉದ್ಯಮಿಯಾದರೂ ರೋಶನ್ ಅವರು ಈ ಮಾನವ ಜಾಹೀರಾತು ವಿಧಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ವ್ಯಂಗ್ಯ ಮಾಡಿ ಶಿರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ. ಇದು ಮಾನವನ ಆರ್ಥಿಕ ಅಗತ್ಯತೆ, ನಿರುದ್ಯೋಗ ಸ್ಥಿತಿಗತಿಯ ಮೇಲೆ ಪ್ರಭಾವನ್ನು ಬೀರುವಂತಿದೆ.

ಜಾಹೀರಾತು ಖಂಡಿಸಿದ ನೆಟ್ಟಿಗರು ಹೇಳಿದ್ದೇನು?

ಈ ಜಾಹೀರಾತು ಬಗ್ಗೆ ವ್ಯಂಗ್ಯವಾಗಿ ಬರೆಯುವ ಮೂಲಕ ಕಿಡಿ ಕಾರಿರುವ ರೋಶನ್ ಅವರು, ''ವಿಸಿ: ನಿಮಗೆ ಎಷ್ಟು ಹಣ ಬೇಕು? ಸ್ಟಾರ್ಟ್‌ ಆಫ್: 5 ಮಿಲಿಯನ್ ಡಾಲರ್, ವಿಸಿ: ನಿಮ್ಮ ಗ್ರಾಹಕರ ಆಕರ್ಷಿಸುವ ಯೋಜನೆ ಏನು? ಉತ್ತರ: ಮಾನವ ಜಾಹೀರಾತುಗಳು ಎಂದಾಕ್ಷಣ ವಿಸಿ ಹಣ ನೀಡಿದೆ'' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮಾನವ ಜಾಹೀರಾತನ್ನು ಖಂಡಿಸಿದರು.

ಈ ವಿವದಾತ್ಮಕ ಮಾನವ ಜಾಹೀರಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ. ಪ್ರತಿಯೊಬ್ಬರು ನಿರುದ್ಯೋಗ, ಉದ್ಯೋಗದ ಅಗತ್ಯತೆ, ಉದ್ಯಮದ ತಂತ್ರಗಾರಿಕೆ ವಿಧಾನದ ಬಗ್ಗೆ ಆಳವಾಗಿ ಚಿಂತಿಸುಂತೆ ಮಾಡಿದೆ. ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ.

ಸ್ವಿಶ್ ಜಾಹೀರಾತುಗಳು ನಗರದಲ್ಲಿ ಅನೇಕ ಕಡೆಗಳಲ್ಲಿ ಇವೆ. ಇಂತಹ ಜಾಹೀರಾತುಗಳು ಅತೀವ್ರ ದುಃಖ ಉಂಟು ಮಾಡುತ್ತವೆ. ಪುರಷರು ಬೆನ್ನಿನ ಮೇಲೆ ಭಾರವಾದ ಜಾಹೀರಾತು ಫಲಕ ಹೊತ್ತಿದ್ದು, ಒಂದು ಏರಿಯಾದಿಂದ ಬೇರೆಡೆಗೆ ತೆರಳುತ್ತಾರೆ. ಅವರ ಕಷ್ಟ ದೇವರಿಗೆ ಗೊತ್ತು ಎಂದಿದ್ದಾರೆ.

ಇದು ಬಂಡವಾಳಶಾಹಿತಾಗಿದ್ದು, ಸಂಪನ್ಮೂಲದ ಗರಿಷ್ಠ ಬಳಕೆಯನ್ನು ಪ್ರತಿಪಾದಿಸುತ್ತದೆ. ಭಾರತವು ಅಗ್ಗದ ಕಾಮಿರ್ಕರನ್ನು, ಅವರು ವಿವಿಧ ರೀತಿಯಲ್ಲಿ ಶೋಷಣೆಗೆ ಒಳಗಾಗಲು ಸಿದ್ಧವಾಗಿರುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಇದೊಂದು ಕೆಟ್ಟ ರೀತಿಯ ಜಾಹೀರಾತು ಎಂದು ಇನ್ನೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+