'ಓ ಸಾಕಿ ಸಾಕಿ' ಹಾಡಿಗೆ ನಾಚಿ ನುಲಿದು ನೃತ್ಯ ಮಾಡಿದ ನೇಪಾಳಿ ಅಂಕಲ್: ನೋರಾ ಫತೇಹಿ ಮೆಚ್ಚುಗೆ- ವಿಡಿಯೋ ವೈರಲ್
ಬಾಲಿವುಡ್‌ನ ಐಟಂ ಸಾಂಗ್‌ನ ಖ್ಯಾತ ನೃತ್ಯಗಾರ್ತಿ ನೋರಾ ಫತೇಹಿ ಅಭಿನಯದ 'ಓ ಸಾಕಿ ಸಾಕಿ' ಹಾಡಿಗೆ ನೇಪಾಳಿ ಅಂಕಲ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 'ಓ ಸಾಕಿ ಸಾಕಿ'ಗೆ ವ್ಯಕ್ತಿಯೊಬ್ಬರು ಕುಣಿದು ಕುಪ್ಪಳಿಸುವ ಈ ವಿಡಿಯೋ ಜಗತ್ತಿನಾದ್ಯಂತ ಲಕ್ಷಾಂತರ ವೀಕ್ಷಕರ ಗಮನ ಸೆಳೆದಿದೆ.
ಇಂಟರ್ನೆಟ್ ಬಿರುಗಾಳಿ ಎಬ್ಬಿಸಿದ ಈ ವಿಡಿಯೋಕ್ಕೆ ಖ್ಯಾತ ನಟಿ ನೋರಾ ಫತೇಹಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಡಿಯೊವನ್ನು ಆರಂಭದಲ್ಲಿ ಎವೆರಿಥಿಂಗ್ ಎಬೌಟ್ ನೇಪಾಳ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇದು 31 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಕ್ಲಿಪ್‌ನಲ್ಲಿ ವ್ಯಕ್ತಿ ತರಬೇತಿ ಪಡೆದ ನೃತ್ಯಗಾರನಾಗಿ ಕಾಣಿಸದಿದ್ದರೂ, ವ್ಯಕ್ತಿ ಶಕ್ತಿ ಮತ್ತು ಉತ್ಸಾಹದಿಂದ ನೃತ್ಯ ಮಾಡುವುದನ್ನು ಕಾಣಬಹುದು. ಹಾಡಿನ ಮೂಲ ಪ್ರದರ್ಶಕಿ ನೋರಾ ಫತೇಹಿ, ವ್ಯಕ್ತಿಯ ಅಭಿನಯವನ್ನು ಗಮನಿಸಿದರು ಮತ್ತು ಹೃದಯದ ಎಮೋಜಿಗಳೊಂದಿಗೆ ತಮ್ಮ ಮೆಚ್ಚುಗೆಯನ್ನು ಹಂಚಿಕೊಂಡಿದ್ದಾರೆ.

ನೆಟ್ಟಿಗರ ಕಾಮೆಂಟ್ ಏನು?
ವಿಡಿಯೊವನ್ನು ವೀಕ್ಷಿಸಿದ ನಂತರ ನೆಟ್ಟಿಗರೂ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಅನೇಕ ವೀಕ್ಷಕರು "ಅಂಕಲ್ ರಾಕ್ಸ್" ನಂತಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಪ್ರಭಾವಶಾಲಿ ನೃತ್ಯದ ಚಲನೆಯನ್ನು ಶ್ಲಾಘಿಸಿದ್ದಾರೆ. "Uncle ji slayyy" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ "He slayed" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಬ್ಬರು, "ಅಂಕಲ್ ಎಲ್ಲರನ್ನು ಆಘಾತಕ್ಕೊಳಗಾಗಿದ್ದಾರೆ" ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು "ಅಂಕಲ್ ಸಾಬೀತುಪಡಿಸುತ್ತಾರೆ .....ಉತ್ತಮ ನೃತ್ಯ ಮಾಡಲು ಸಣ್ಣ ಉಡುಪುಗಳು ಕಡ್ಡಾಯವಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ. "ಓ ಸಾಕಿ ಸಾಕಿ" ಹಾಡು ಬಾಲಿವುಡ್ ಚಲನಚಿತ್ರ ಬಟ್ಲಾ ಹೌಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ನೇಪಾಳಿ ಅಂಕಲ್ ಓ ಸಾಕಿ ಸಾಕಿಗೆ ನೃತ್ಯ ಮಾಡುವ ವೈರಲ್ ವಿಡಿಯೊವನ್ನು ಇಲ್ಲಿ ವೀಕ್ಷಿಸಿ:
ಈ ಹಿಂದೆ ಹೀಗೊಂದು ವಿಡಿಯೋ ವೈರಲ್
ರಿಸೆಪ್ಶನ್ ಸಂದರ್ಭದಲ್ಲಿ ವಧು ಅದ್ಭುತವಾಗಿ ನೃತ್ಯ ಮಾಡುವುದು ಈಗೀಗ ಹೊಸದೇನೂ ಅಲ್ಲ. ಆದರೆ, ಒಮ್ಮೊಮ್ಮೆ ಇಂತಹ ಖುಷಿಯ ಕ್ಷಣದಲ್ಲಿ ಹೆತ್ತವರು ಕೂಡಾ ಮಗಳಿಗೆ ಜತೆಯಾಗುತ್ತಾರೆ. ಇದು ಕೂಡಾ ಅಂತಹದ್ದೇ ದೃಶ್ಯ. ಇಲ್ಲೊಬ್ಬರು ತಂದೆ ತನ್ನ ಪುತ್ರಿಯೊಂದಿಗೆ ಭರ್ಜರಿ ಹೆಜ್ಜೆ ಇಟ್ಟಿದ್ದಾರೆ. ಈ ತಂದೆ ಮಗಳ ಜಬರ್‌ದಸ್ತ್ ನೃತ್ಯ ಎಲ್ಲರನ್ನೂ ಬಹುವಾಗಿ ಸೆಳೆದಿದೆ. ಈ ಉಲ್ಲಾಸಪೂರ್ಣ ನೃತ್ಯ ಎಲ್ಲರಲ್ಲೂ ಮಂದಹಾಸ ಮೂಡಿಸಿದೆ.

ವಿಶೇಷವಾಗಿ ತಂದೆ ಕುಶಾನ್ ನೋರಾ ಫತೇಹಿ ಅವರ ಓ ಸಾಕಿ ಸಾಕಿ' ಹಿಂದಿ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದರು. ಇವರ ಉತ್ಸಾಹ, ತಂದೆ ಮಗಳ ನೃತ್ಯ ಸಮನ್ವಯತೆ ಎಲ್ಲರಿಗೂ ಬಲು ಇಷ್ಟವಾಗಿದೆ. ತಂದೆ-ಮಗಳ ನಮ್ಮ ನೃತ್ಯದಲ್ಲಿ ನನ್ನ ತಂದೆಯನ್ನು ಬಾಲಿವುಡ್ ಐಟಂ ಸಾಂಗ್‌ಗೆ ನೃತ್ಯ ಮಾಡುವಂತೆ ಮಾಡಿದ್ದೇನೆ' ಎಂಬ ಟೆಕ್ಸ್ಟ್ ಕೂಡಾ ಈ ವಿಡಿಯೋದಲ್ಲಿ ಕಾಣಿಸುತ್ತದೆ.
ಈ ನೃತ್ಯ ಅತಿಥಿಗಳನ್ನು ಚಪ್ಪಾಳೆ ತಟ್ಟಿ ಇವರಿಬ್ಬರನ್ನು ಇನ್ನಷ್ಟು ಹುರಿದುಂಬಿಸುವಂತೆ ಮಾಡಿತ್ತು. ತಂದೆ ಮಗಳು ತಮ್ಮ ಈ ನೃತ್ಯದ ಕ್ಷಣವನ್ನು ಎಷ್ಟು ಆನಂದಿಸುತ್ತಿದ್ದರು ಎಂಬುದು ಅವರಲ್ಲಿ ಅರಳಿರುವ ಆ ನಗು ಮತ್ತು ಅವರ ಖುಷಿಯ ಮುಖಭಾವದಿಂದಲೇ ಸ್ಪಷ್ಟ.












Click it and Unblock the Notifications