Home Remedies: ದಿನೇ ದಿನೇ ಹೆಚ್ಚುವ ಒಣ ಕೆಮ್ಮುವಿಗೆ ಇಲ್ಲಿದೆ ಸರಳವಾದ ಮನೆಮದ್ದು
ಸುತ್ತಲಿನ ವಾತಾವರಣ ಕ್ಷಣಾರ್ಧದಲ್ಲಿ ಬದಲಾಗುತ್ತಿರುತ್ತದೆ. ಚಳಿ, ಬಿಸಿಲು, ಮಳೆ ಹೀಗೆ ಒಂದೇ ದಿನದಲ್ಲಿ ಮೂರು ರೀತಿಯ ವಾತಾವರಣ ಕೂಡ ಬರುತ್ತಿದ್ದು, ಇದರಿಂದ ಅನಾರೋಗ್ಯ ಕೂಡ ಜಾಸ್ತಿಯಾಗುತ್ತಿದೆ. ಬದಲಾಗುತ್ತಿರುವ ಹವಮಾನದಿಂದ ಜ್ವರ, ಶೀತ, ಕೆಮ್ಮವಿನಂತಹ ಕಾಯಿಲೆಗಳು ಹೆಚ್ಚಾಗುತ್ತಿದೆ.
ಇನ್ನು ಕೊರೊನಾ ಕೂಡ ಹೆಚ್ಚಾಗುತ್ತಿದೆ ಜನರಲ್ಲಿ ಸಾಂಕ್ರಾಮಿಕ ರೋಗದ ಭಯ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಜ್ವರ, ಶೀತ ಕಮ್ಮಿಯಾದರೂ ಸಹ ಕೆಮ್ಮು ಕಡಿಮೆಯಾಗುವುದಿಲ್ಲ. ರಾತ್ರಿ ಹಗಲೆನ್ನದೆ ಕೆಮ್ಮ ಕಾಡುತ್ತಿರುತ್ತದೆ. ಚಿಕ್ಕ ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಈ ಒಣ ಕೆಮ್ಮು ಒಮ್ಮೆಲೆ ಕಾಣಿಸಿಕೊಡರೆ ಕಡಿಮೆಯಾಗುವುದೇ ಇಲ್ಲ. ಹಾಗಾದರೆ ಕಾಡುವ ಒಣ ಕೆಮ್ಮು ಕಡಿಮೆ ಮಾಡಿಕೊಳ್ಳಲು ಕೆಲವು ಸರಳ ಮನೆ ಮದ್ದುಗಳನ್ನು ಇಲ್ಲಿ ನೀಡಲಾಗಿದೆ.

1. ಶುಂಠಿ ಚಹಾ
ಶುಂಠಿ ಚಹಾದ ಸುವಾಸನೆ ಬರುತ್ತಿದ್ದಂತೆ ಮನಸ್ಸು ಆಹ್ಲಾದಕರವಾಗುತ್ತದೆ. ಶುಂಠಿ ಚಹಾದಲ್ಲಿ ಮನಸ್ಸಿಗೆ ರಿಫ್ರೆಶ್ ನೀಡುವ ಗುಣಲಕ್ಷಣಗಳಿರುತ್ತದೆ. ಶುಂಠಿ ಟೀ ತನ್ನ ಘಮಗುಡುವ ಪರಿಮಳದೊಂದಿಗೆ ಕುಡಿಯಲು ನಾಲಿಗೆಗೆ ರುಚಿ ಕೊಡುತ್ತದೆ. ಇನ್ನು ಆರೋಗ್ಯದ ವಿಷಯಕ್ಕೆ ಸಂಬಂಧ ಪಟ್ಟರಂತೂ, ಇದರ ಉಪಯೋಗ ಹಲವಿದೆ. ಬಿಸಿ ಬಿಸಿ ಶುಠಿ ಚಹಾವನ್ನು ಸೇವಿಸಿದರೆ ಗಂಟಲಿನ ಕಿರಿಕಿರಿ ಕಡಿಮೆಯಾಗುತ್ತದೆ. ಇದು ಗಂಟಲಿನ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಶುಂಠಿಯಲ್ಲಿನ ರೋಗ ನಿರೋಧಕ ಶಕ್ತಿಯು ಕೆಮ್ಮನ್ನು ಉಂಟುಮಾಡುವ ಸೋಂಕುಗಳ ವಿರುದ್ಧ ಹೋರಾಡಲು ದೇಹದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

2. ಅರಿಶಿನ ಹಾಲು
ಅರಿಶಿನ ಹಾಲು ಆರೋಗ್ಯಕರವಾದ ಹಾಗೂ ಹಿತವಾದ ಬೆಚ್ಚಗಿನ ಪಾನೀಯವಾಗಿದ್ದು ಒಣ ಕೆಮ್ಮುವಿನ ಲಕ್ಷಣಗಳನ್ನು ಕಡಿಮೆ ಮಾಡಲು ಇದನ್ನು ಕುಡಿಯಲಾಗುತ್ತದೆ. ಬಿಸಿ ಹಾಲಿಗೆ ಅರಿಶಿನ ಹಾಕಿ ಕುಡಿಯುವುದರಿಂದ ಗಂಟಲು ಕಿರಿಕಿರಿ ಕಡಿಮೆಯಾಗುತ್ತದೆ. ಅರಿಶಿನದ ರುಚಿ ಇಷ್ಟವಾಗದೇ ಇರುವವರು ಹಾಲಿಗೆ ಅರಿಶಿನದ ಜೊತೆಗೆ ಜೇನುತುಪ್ಪ ಹಾಗೂ ಇತರ ಸಿಹಿ ಸಿರಪ್‌ಗಳನ್ನು ಬಳಸಬಹುದು. ಅರಿಶಿನ ಹಾಲು ಕೆಮ್ಮು ಕಡಿಮೆ ಮಾಡುವುದರೆ ಜೊತೆಗೆ ದೇಹದ ಉಷ್ಣತೆಯನ್ನು ಸರಿದೂಗಿಸುತ್ತದೆ.
3. ಪುದೀನಾ
ಪುದೀನಾ ಸೊಪ್ಪು ಒಂದು ಗಿಡ ಮೂಲಿಕೆಯಾಗಿದೆ. ಪುದೀನಾ ವಿಶಿಷ್ಟವಾದ ಮಿಂಟಿ ಸುವಾಸನೆ ಸೇವಿಸಲು ಅನುಕೂಲಕರವಾಗಿದ್ದು, ಇದರ ನಿರೋಧಕ ಶಕ್ತಿಯು ಕೆಮ್ಮ ಕಡಿಮೆ ಮಾಡುತ್ತದೆ. ಪುದೀನಾ ಹಾಕಿ ಕುದಿಸಿದ ಬೆಚ್ಚಗಿನ ನೀರು ಅಥವಾ ಪುದೀನಾ ಚಹಾವನ್ನು ಕುಡಿಯುವುದರಿಂದ ಗಂಟಲಿನ ಕಿರಿಕಿರಿ ಹಾಗೂ ಕಫ ಕಡಿಮೆಯಾಗುತ್ತದೆ. ಪುದೀನಾದಲ್ಲಿನ ಆಂಟಿಟಸ್ಸಿವ್ (ಕೆಮ್ಮು ನಿಗ್ರಹಿಸುವ) ಗುಣಲಕ್ಷಣಗಳು ಒಣ ಕೆಮ್ಮು ಕಡಿಮೆ ಮಾಡುತ್ತದೆ. ಜೊತೆಗೆ ಪುದೀನಾ ನೈಸರ್ಗಿಕವಾಗಿ ಉಸಿರಾಟದ ಸಮಸ್ಯೆಯನ್ನು ಕೂಡ ಕಡಿಮೆ ಮಾಡುವ ಗುಣ ಲಕ್ಷಣಗಳನ್ನು ಹೊಂದಿದೆ.

4.ತುಳಸಿ ದಳ
ತುಳಸಿ ಗಿಡದ ಎಲೆಗಳಲ್ಲಿ ಕಂಡುಬರುವ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಇನ್ಫಾಮೇಟರಿ, ಆಂಟಿ ಫಂಗಲ್ ಗುಣಲಕ್ಷಣಗಳು, ಶೀತ ಜ್ವರ ನೆಗಡಿ, ಕೆಮ್ಮಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಪ್ರತಿದಿನ ಒಂದೆರಡು ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಗೆ ಸೇವಿಸುವುದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ತುಳಸಿಯ ಎಲೆಗಳಲ್ಲಿ ಔಷಧೀಯ ಗುಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದರಿಂದ, ಈ ಎಲೆಗಳನ್ನು ಬಳಸಿ ಚಹಾ ಮಾಡಿ ಕುಡಿದರೆ ಕೆಮ್ಮು ಬಹಳ ಬೇಗನೇ ನಿವಾರಣೆಯಾಗುತ್ತದೆ.

5. ಜೇನುತುಪ್ಪ ಮತ್ತು ಶುಂಠಿ
ಒಣ ಕೆಮ್ಮಿನಿಂದ ಪಾರಾಗಲು ಜೇನುತುಪ್ಪ ಮತ್ತು ಶುಂಠಿ ಸೇವಿಸುವುದು ಉತ್ತಮ ಕೆಲವರಿಗೆ ಗಂಟಲಿನ ಭಾಗದಲ್ಲಿ ಸೋಂಕು ಉಂಟಾಗಿರುತ್ತದೆ. ನಿರ್ಲಕ್ಷ್ಯ ಮಾಡಿದರೆ ಉಸಿರಾಟ ವ್ಯವಸ್ಥೆಯಲ್ಲಿ ಸಾಕಷ್ಟು ತೊಂದರೆ ಎದುರಾಗಬಹುದು. ಹೀಗಾಗಿ ಕೆಮ್ಮು ಕಡಿಮೆಯಾಗಲು ಜೇನುತುಪ್ಪ ಮತ್ತು ಶುಂಠಿ ಸೇವಿಸಿ. ಎದೆಯ ಭಾಗದಲ್ಲಿ ಹಾಗೂ ಮೂಗಿನ ಭಾಗದಲ್ಲಿ ಕಟ್ಟಿಕೊಳ್ಳುವ ಕಫವನ್ನು ಶುಂಠಿ ಮತ್ತು ಜೇನು ತುಪ್ಪದ ಮಿಶ್ರಣ ಕರಗಿಸುತ್ತದೆ. ಒಂದು ಲೋಟ ಕುಡಿಯುವ ನೀರಿಗೆ ಸ್ವಲ್ಪ ಶುಂಠಿ ರಸವನ್ನು ಸೇರಿಸಿ ಇಲ್ಲವೆಂದರೆ ಸಣ್ಣದಾಗಿ ತುರಿದ ಶುಂಠಿಯನ್ನು ಹಾಕಿ ಕುದಿಸಿ ಆರಿಸಿ ಬೆಚ್ಚಗಾದ ನಂತರ ಜೇನು ತುಪ್ಪ ಹಾಕಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.
-
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ












Click it and Unblock the Notifications