National Mango Day 2022: ಇದರ ಇತಿಹಾಸ, ಮಹತ್ವ, ಕುತೂಹಲಕಾರಿ ಸಂಗತಿ
ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವಿನ ಹಣ್ಣಿನ ರುಚಿ ಸವಿಯದವರು ಯಾರಿದ್ದಾರೆ ಹೇಳಿ..! ಅಗಣಿತ ಪೌಷ್ಟಿಕಾಂಶಗಳುಳ್ಳ ಮಾವಿನ ಹಣ್ಣು ಭಾರತ ಮಾತ್ರವಲ್ಲ ವಿಶ್ವಾದ್ಯಂತ ಜನರ ನೆಚ್ಚಿನ ಹಣ್ಣುಗಳಲ್ಲೊಂದಾಗಿದೆ. ಇಂದು (ಜುಲೈ 22) ರಾಷ್ಟ್ರೀಯ ಮಾವು ದಿನವಾಗಿ ಆಚರಿಸಲಾಗುತ್ತಿದೆ.
ಈಗ ಮಾವಿನ ಋತುವೂ ಹೌದು. ನಮ್ಮ ಆರೋಗ್ಯ ಮತ್ತು ಬಾಯಿರುಚಿಗೆ ರಸಗವಳವಾಗಿರುವ ಮಾವಿನ ಹಣ್ಣಿಗೆ ಗೌರವ ಸೂಚಿಸಲು ನ್ಯಾಷನಲ್ ಮ್ಯಾಂಗೋ ಡೇ ಆಚರಣೆ ಇದೆ. ಪ್ರತೀ ವರ್ಷ ಇದೇ ದಿನದಂದು ವಿಶ್ವಾದ್ಯಂತ ಮಾವು ದಿನಾಚರಣೆ ಮಾಡಲಾಗುತ್ತದೆ.
ಮಾವಿನ ಹಣ್ಣು ಸೂಪರ್ ಫುಡ್ ಎನಿಸಿದೆ. ಹಾಗೆಯೇ ಮಾವಿನಹಣ್ಣನ್ನು ಸೇವಿಸುವುದೇ ಹೆಚ್ಚು. ನಗರಗಳಲ್ಲಿ ಮಾವಿನ ಹಣ್ಣಿನ ಜ್ಯೂಸ್ ಬಹಳ ಜನಪ್ರಿಯ. ಸೀಸನ್‌ನಲ್ಲಿ ಸಿಗುವ ಮಾವಿನ ರುಚಿಗೆ ಮಾವಿನ ಹಣ್ಣು ಮಾತ್ರವೇ ಸಾಟಿ. ಮಾವಿನ ಹಣ್ಣಲ್ಲದಿದ್ದರೆ ಮಾವಿನ ಕಾಯಿಯನ್ನೂ ಬಹಳ ಮಂದಿ ಇಷ್ಟಪಡುತ್ತಾರೆ. ಮಾವಿನ ಕಾಯಿಗೆ ಉಪ್ಪು ಖಾರ ಹಚ್ಚಿ ತಿಂದರೆ ಅದರ ರುಚಿ ಪರಮಾನಂದ.
ಎಲ್ಲಾ ರೀತಿಯಲ್ಲೂ ಜನರ ಪಾಲಿಗೆ ಅಚ್ಚುಮೆಚ್ಚಾಗಿರುವ ಈ ಮಾವಿನ ಹಣ್ಣಿನ ಇತಿಹಾಸ, ಇದರ ಪೌಷ್ಟಿಕಾಂಶಗಳ್ಯಾವುವು ಇತ್ಯಾದಿ ಕೆಲ ಉಪಯುಕ್ತ ಮತ್ತು ಆಸಕ್ತಿಕರ ಮಾಹಿತಿ ಇಲ್ಲಿದೆ.

ಐದು ಸಾವಿರ ವರ್ಷ ಇತಿಹಾಸ
ಮಾವು ಕ್ರಿಸ್ತ ಪೂರ್ವ 3 ಸಾವಿರ ವರ್ಷದ ಹಿಂದಿನಿಂದಲೂ ಭಾರತೀಯ ಉಪಖಂಡದಲ್ಲಿ ಬೆಳೆಯಲಾಗುತ್ತಿದೆ. ಇದರ ಮೂಲ ಈಶಾನ್ಯ ಭಾರತ, ಬಾಂಗ್ಲಾದೇಶ ಮತ್ತು ಮಯನ್ಮಾರ್ ಇರಬಹುದು ಎಂದು ಭಾವಿಸಲಾಗಿದೆ.
ಮಾವಿನ ಹಣ್ಣಿಗೆ ಇಂಗ್ಲೀಷ್‌ನಲ್ಲಿ ಮ್ಯಾಂಗೋ ಎಂದು ಹೆಸರು ಬರಲು ಪೋರ್ಚುಗೀಸರು ಕಾರಣ. ಭಾರತದಲ್ಲಿ ಬೆಳೆಯಲಾಗುತ್ತಿದ್ದ ಮಾವಿನ ಹಣ್ಣು ಕ್ರಿ.ಶ. 3-4ನೇ ಶತಮಾನದ ಸುಮಾರಿನಲ್ಲಿ ಅರಬ್, ಆಫ್ರಿಕಾ, ದಕ್ಷಿಣ ಅಮೆರಿಕ ಮೊದಲಾದ ದೇಶಗಳಿಗೆ ಹರಡಿತು.
ಪೋರ್ಚುಗೀಸರು ಐರೋಪ್ಯ ಪ್ರದೇಶಗಳಲ್ಲಿ ಮಾವಿನ ಹಣ್ಣನ್ನು ಪರಿಚಯಿಸಿದರು. ತಮಿಳಿನಲ್ಲಿ ಮಾವಿನ ಹಣ್ಣಿಗೆ ಮಾಂಗಾಯಿ ಎಂದು ಕರೆಯಲಾಗುತ್ತಿತ್ತು. ಪೋರ್ಚುಗೀಸರು ಮ್ಯಾಂಗಾ ಎಂದು ಕರೆದರು. ಇಂಗ್ಲೀಷ್‌ನಲ್ಲಿ ಅದು ಮ್ಯಾಂಗೋ ಆಗಿ ರೂಪಾಂತರಗೊಂಡಿತು.

ಭಾರತದಲ್ಲಿ ಅತಿಹೆಚ್ಚು ಮಾವು
ಮಾವು ಈಗ ವಿಶ್ವಾದ್ಯಂತ ಜನಪ್ರಿಯ ಹಣ್ಣಾಗಿದೆ. ಅತಿ ಹೆಚ್ಚು ಮಾವು ಬೆಳೆಯುವ ದೇಶ ಭಾರತ. ಇಲ್ಲಿ ಪ್ರತೀ ವರ್ಷ 2 ಕೋಟಿ ಟನ್ ಮಾವು ಬೆಳೆಯಲಾಗುತ್ತದೆ. ಹಾಗೆಯೇ, ಚೀನಾ ಮತ್ತು ಥಾಯ್ಲೆಂಡ್ ದೇಶಗಳಲ್ಲೂ ಹೆಚ್ಚು ಮಾವು ಬೆಳೆಯುತ್ತಾರೆ.
ಭಾರತ, ಪಾಕಿಸ್ತಾನ, ಫಿಲಿಪ್ಪೈನ್ಸ್ ದೇಶಗಳಲ್ಲಿ ಮಾವು ರಾಷ್ಟ್ರೀಯ ಹಣ್ಣಾಗಿದೆ. ಬಾಂಗ್ಲಾದೇಶದಲ್ಲಿ ಮಾವಿನ ಮರ ರಾಷ್ಟ್ರೀಯ ಮರವಾಗಿ ಪರಿಗಣಿತವಾಗಿದೆ.

ವಿವಿಧ ರೀತಿಯ ಮಾವು;
ಆಲ್ಫೋನ್ಸೋ, ಬಾದಾಮಿ, ರಸಪೂರಿ, ಮಲ್ಲಿಗೆ, ಮಲ್ಲಿಕಾ, ಬಾಳಿಯಾ, ಹಿಮಸಾಗರ್, ಫಾಜಿಯಾ, ಗೇಲ್ಚಿಯಾ, ಮಾಲ್ಡಾ, ರುಚಿಕಾ, ನಿಗಾರಿನ್ ಖೇರಿಯಾ, ಧಮನ್, ಧೂಮ್, ಶಮಸಿ ಇತ್ಯಾದಿ ನಾನಾ ರೀತಿಯ ಮಾವಿನ ಹಣ್ಣುಗಳ ತಳಿ ಲಭ್ಯ ಇದೆ.
ಕೃಷಿಕರಿಗೂ ಮಾವಿನ ಹಣ್ಣು ಲಾಭದಾಯಕ ಬೆಳೆ ಎನಿಸಿದೆ. ಮಾವಿನ ತೋಟ ಇದ್ದವರಿಗೆ ಅದೇ ಪ್ರಮುಖ ಆದಾಯ ಮೂಲ.

ಮಾವಿನ ಪೌಷ್ಟಿಕಾಂಶ
ಮಾವನ್ನು ಹಣ್ಣುಗಳ ರಾಜ ಎನ್ನುವುದು ಸುಮ್ಮನೆ ಅಲ್ಲ. ಅಗಣಿತ ಪೌಷ್ಟಿಕಾಂಶಗಳ ಕಣಜ ಅದು. ಸೂಪರ್ ಫುಡ್ ಎಂದೂ ಅದನ್ನು ಕರೆಯುವುದುಂಟು. ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿರುವ ೨೦ ವಿವಿಧ ರೀತಿಯ ವಿಟಾಮಿನ್ ಮತ್ತು ಮಿನರಲ್‌ಗಳು ಇರುತ್ತವೆ.
ಮುಕ್ಕಾಲು ಕಪ್ ಮಾವಿನ ಹಣ್ಣಿನಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಅರ್ಧದಷ್ಟು ವಿಟಾಮಿನ್ ಸಿ ಸಿಗುತ್ತದೆ. ವಿಟಮಿನ್ ಎ, ವಿಟಮಿನ್ ಬಿ೬ ಕೂಡ ಯಥೇಚ್ಛವಾಗಿ ಮಾವಿನಲ್ಲಿ ಲಭ್ಯ ಇದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications