National Cousins Day: ಕಸಿನ್ ಸ್ನೇಹಿತನೂ ಹೌದು, ಸೋದರನೂ ಹೌದು
ಜುಲೈ 24, ನ್ಯಾಷನಲ್ ಕಸಿನ್ಸ್ ಡೇ ಆಚರಿಸಲಾಗುತ್ತದೆ. ಕಸಿನ್ ಎಂದರೆ ಕನ್ನಡದಲ್ಲಿ ನಿರ್ದಿಷ್ಟ ಪದ ಇಲ್ಲ. ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು, ಸೋದರ ಮಾವ, ಸೋದರತ್ತೆಯ ಮಕ್ಕಳು ಇವರೆಲ್ಲರೂ ನಮಗೆ ಕಸಿನ್‌ಗಳಾಗುತ್ತಾರೆ.
ಬಹುಶಃ ನಮ್ಮ ಜೀವನದಲ್ಲಿ ನಾವು ಬಹಳ ಸರಾಗವಾಗಿ ಬೆರೆಯುವುದು ಎಂದರೆ ಅದು ಕಸಿನ್ಸ್ ಜೊತೆಯೇ ಹೆಚ್ಚು. ಚಿಕ್ಕಂದಿನಿಂದಲೂ ನಮ್ಮ ಒಡನಾಡಿಗಳಾಗಿರುವ ಕಸಿನ್ಸ್ ನಮ್ಮ ಪಾಲಿಗೆ ಸ್ನೇಹಿತರೂ ಹೌದು, ಸೋದರರೂ ಹೌದು. ಅಂತೆಯೇ ಅವರು ನಮ್ಮ ಜೀವನದ ಪ್ರಮುಖ ಭಾಗಗಳಾಗಿ ಯಾವಾಗಲೂ ಇರುತ್ತಾರೆ.
ನಮ್ಮ ಆಟ, ಪಾಠ, ತುಂಟಾಟ, ಸಂಕಟ, ಜೊತೆಯಾಟ ಎಲ್ಲವೂ ಕಸಿನ್ಸ್ ಜೊತೆ ಜೋಡಿತವಾಗಿರುತ್ತದೆ. ಹೀಗಾಗಿ, ನಿಮ್ಮ ಜೀವನದಲ್ಲಿ ಯಾರು ಅತ್ಯಂತ ಮಹತ್ವದ ವ್ಯಕ್ತಿ ಎಂದರೆ ನಿಮ್ಮ ಯಾರಾದರೊಬ್ಬ ಕಸಿನ್ ಹೆಸರು ಬಂದೇ ಬರುತ್ತದೆ.
ಬಾಲ್ಯದಿಂದ ಹಿಡಿದು ವೃದ್ಧಾಪ್ಯದವರೆಗೂ ನಮ್ಮ ಒಡನಾಟದಲ್ಲಿರುವ ಕಸಿನ್ಸ್ ಅಥವಾ ಸೋದರಸಂಬಂಧಿಗಳ ಬಗ್ಗೆ ಮಾತನಾಡುವುದಕ್ಕೆ ನಿಮಗೆ ಬಹಳಷ್ಟು ವಿಚಾರಗಳಿರಬಹುದು. ಅದಕ್ಕಾಗಿ ಜುಲೈ 24ರ ದಿನವನ್ನು ವಿನಿಯೋಗಿಸಿ.

ನ್ಯಾಷನಲ್ ಕಸಿನ್ಸ್ ಡೇ ಇತಿಹಾಸ
ಜುಲೈ 24ರಂದು ನ್ಯಾಷನಲ್ ಕಸಿನ್ಸ್ ಡೇ ಎಂಬುದು ಇದೆಯಾದರೂ ಅದು ಅಧಿಕೃತ ರಜೆ ದಿನವಲ್ಲ. ಇದರ ಇತಿಹಾಸ, ಇದು ಯಾವಾಗ ಆರಂಭವಾಯಿತು ಎಂಬುದೂ ಗೊತ್ತಿಲ್ಲ. ಆದರೆ, ಕಸಿನ್ಸ್ ಎಂಬ ಸಂಬಂಧಿಗಳು ಯಾರದ್ದೇ ಜೀವನದಲ್ಲಾದರೂ ಎಷ್ಟು ಮಹತ್ವ ಹೊಂದಿರುತ್ತಾರೆ ಎಂಬ ಅಂಶವನ್ನು ಗಮನಿಸಿ ಯಾರೋ ಪುಣ್ಯಾತ್ಮರು ಈ ದಿನದ ಆಚರಣೆಗೆ ಚಾಲನೆ ಕೊಟ್ಟಿದ್ದಾರೆ.

ಕಸಿನ್ಸ್ ಬಗ್ಗೆ ಒಂದು ವ್ಯಾಖ್ಯಾನ
"ಕಸಿನ್ಸ್ ನಮ್ಮ ಪಾಲಿಗೆ ರೆಡಿ ಮೇಡ್ ಸ್ನೇಹಿತರು. ಅವರೊಂದಿಗೆ ನೀವು ನಕ್ಕು ನಲಿದಿರುತ್ತೀರಿ. ಸಣ್ಣ ವಯಸ್ಸಿನಿಂದಲೂ ಅವರೊಂದಿಗೆ ಕಳೆದ ಒಳ್ಳೆಯ ಘಳಿಗೆಗಳು ನಿಮ್ಮ ಸ್ಮರಣೆಯಲ್ಲಿರುತ್ತವೆ. ಅವರೊಂದಿಗೆ ಜಗಳವಾಡಿರುತ್ತೀರಾದರೂ ಪರಸ್ಪರ ಪ್ರೀತಿ ಹೆಚ್ಚೇ ಇರುತ್ತದೆ. ಸೋದರ, ಸೋದರಿ ಮತ್ತು ಸ್ನೇಹಿತರಿಗಿಂತ ಅವರು ಒಂದು ಕೈ ಹೆಚ್ಚು. ಯಾಕೆಂದರೆ ಈ ಮೂರು ಮಂದಿಯನ್ನು ಸೇರಿಸಿದ ಸಂಬಂಧ ಅವರೊಂದಿಗಿರುತ್ತದೆ."

ಕಸಿನ್ಸ್ ಯಾಕೆ ಮುಖ್ಯ?
ನಮ್ಮ ಒಡಹುಟ್ಟಿದ ಸೋದರ ಅಥವಾ ಸೋದರಿ ಜೊತೆ ನಮ್ಮದು ಭ್ರಾತೃತ್ವದ ಪ್ರೀತಿ ಮಾತ್ರ. ನಮ್ಮೆಲ್ಲಾ ರಹಸ್ಯ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಸಿನ್‌ಗಳಾದರೆ, ಅದರಲ್ಲೂ ನಮ್ಮ ಸಮವಯಸ್ಕ ಸಂಬಂಧಿಗಳಾಗಿದ್ದರಂತೂ ಎಲ್ಲಾ ವಿಚಾರಗಳನ್ನೂ ಹಂಚಿಕೊಳ್ಳುತ್ತೇವೆ. ಸ್ನೇಹಿತರಿಗಿಂತ ಮಿಗಿಲಾಗಿರುತ್ತೀರಿ.
ಕಸಿನ್ಸ್ ನಡುವಿನ ಪ್ರೀತಿ ಸಹಜವಾದುದು, ನಿಷ್ಕಲ್ಮಷವಾದುದು. ಯಾವುದಾದರೂ ನೆಂಟರಿಷ್ಟ ಸಭೆ ಸಮಾರಂಭಗಳಿಗೆ ಹೋದರೆ ಅಲ್ಲಿ ಕಸಿನ್‌ಗಳ ಗುಂಪೇ ಸೇರಿಕೊಂಡು ಮಜಾ ಮಾಡುತ್ತಿರುತ್ತಾರೆ. ನಿಮಗೆ ಕಷ್ಟ ಬಂದೊದಗಿದರೆ ನೀವು ಸಹಾಯ ಯಾಚಿಸುವುದು ಅಥವಾ ನಿಮಗೆ ಸಹಾಯಕ್ಕೆ ಮುಂದಾಗುವುದು ನಿಮ್ಮ ಕಸಿನ್‌ಗಳೇ. ಹಾಗಾಗಿ, ಈ ಸಮೀಪ ಬಂಧುಗಳು ನಮ್ಮ ಜೀವನದ ಬಹಳ ಮುಖ್ಯ ಭಾಗವಾಗಿ ಕೊನೆಯವರೆಗೂ ಇರುತ್ತಾರೆ.

ಕಸಿನ್ಸ್ ಡೇ ಆಚರಿಸಿ
ಕಸಿನ್ಸ್ ಜೊತೆ ಸೇರಿ ಸೆಲಬ್ರೇಟ್ ಮಾಡುವುದು ಬಹಳ ಸುಲಭ. ನೀವೆಲ್ಲರೂ ಒಟ್ಟು ಸೇರಿದರೆ ಸಹಜವಾಗಿ ತಾನಾಗೇ ಸೆಲಬ್ರೇಷನ್ ರೀತಿಯ ವಾತಾವರಣ ನಿರ್ಮಾಣವಾಗುತ್ತದೆ.
ನೀವೆಲ್ಲಾ ಕಸಿನ್ಸ್ ಸೇರಿ ಔಟಿಂಗ್ ಹೋಗಬಹುದು, ಸೆಲ್ಫಿ ತೆಗೆದುಕೊಳ್ಳಬಹುದು. ಹೋಟೆಲ್‌ಗೆ ಹೋಗಿ ತಿಂದು ಮಜಾ ಮಾಡಬಹುದು. ನೀವು ದೂರ ದೂರದಲ್ಲಿದ್ದರೆ ಗ್ರೂಪ್ ಕಾಲ್ ಮಾಡಿ ಮಾತನಾಡಬಹುದು. ಅವರ ಮೇಲೆ ನಿಮ್ಮ ಪ್ರೀತಿ ಎಷ್ಟಿದೆ, ನಿಮ್ಮ ಜೀವನಕ್ಕೆ ಅವರೆಷ್ಟು ಮುಖ್ಯ ಎಂಬುದನ್ನು ನೀವು ಹೇಳಿದರೆ ಅದಕ್ಕಿಂತ ಸಂತಸದ ಸಂಗತಿ ಇನ್ನೇನಿರುತ್ತದೆ.
ನೀವು ಸೋದರಸಂಬಂಧಿಗಳ ನಡುವೆ ಬಹಳಷ್ಟು ರೋಚಕ, ರೋಮಾಂಚಕ ಕಥೆಗಳಿರಬಹುದು. ಅವುಗಳನ್ನು ನಿಮ್ಮ ಬ್ಲಾಗ್‌ನಲ್ಲಿ ಬರೆದು ಹಂಚಿಕೊಳ್ಳುವ ಕೆಲಸ ಕೂಡ ಮಾಡಬಹುದು. ಮಾಡಲು ಹಲವು ಇವೆ, ನಿಮ್ಮ ವ್ಯವಧಾನಕ್ಕೆ ತಕ್ಕಂತೆ.
(ಒನ್ಇಂಡಿಯಾ ಸುದ್ದಿ)
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications