Meta Glasses: ₹50,000 ಕನ್ನಡಕದ ಬೆಲೆ ಕೇಳಿ ಶಾಕ್ ಆದ ಅಮ್ಮ; ಮಗನ ವಿಡಿಯೋಗೆ ನೆಟ್ಟಿಗರು ಫಿದಾ
ಸಾಮಾನ್ಯವಾಗಿ ಕನ್ನಡಕದ ಬೆಲೆ ಎಷ್ಟಿರಬಹುದು? ಕೆಲವರಿಗೆ ಸಾವಿರ ರೂಪಾಯಿಗಳು, ದುಬಾರಿ ಬ್ರ್ಯಾಂಡ್‌ಗಳಾದರೆ ಕೆಲವು ಸಾವಿರ ರೂಪಾಯಿ ಎಂದು ಊಹಿಸುವುದು ಸಹಜ. ಆದರೆ ₹50,000 ಬೆಲೆಯ ಸ್ಮಾರ್ಟ್ ಗ್ಲಾಸ್ ಬಗ್ಗೆ ಮಗನೊಬ್ಬ ತನ್ನ ತಾಯಿಗೆ ಹೇಳಿದಾಗ ಆಕೆ ನೀಡಿದ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ಬಿಕಾಸ್ ಮೀನಾ ಎಂಬುವರು ಹಂಚಿಕೊಂಡಿರುವ ವಿಡಿಯೋದಲ್ಲಿ, ತಮ್ಮ ತಾಯಿಯೊಂದಿಗೆ ನಡೆಸಿದ ಮೋಜಿನ ಸಂಭಾಷಣೆಯನ್ನು ದಾಖಲಿಸಿದ್ದಾರೆ. ಮಗ ಧರಿಸಿದ್ದ Meta ಗ್ಲಾಸ್‌ಗಳ ಬೆಲೆ ಎಷ್ಟು ಎಂದು ತಾಯಿ ಊಹಿಸುವುದರಿಂದ ಆರಂಭವಾಗುವ ಮಾತುಕತೆ, ಕೊನೆಗೆ ₹50 ಸಾವಿರ ಬೆಲೆ ಬಹಿರಂಗವಾದಾಗ ತಾಯಿಯ ಅಚ್ಚರಿಯ ಪ್ರತಿಕ್ರಿಯೆಯೂ ಇನ್ನಷ್ಟು ತಮಾಷೆಯಾಗಿದೆ.

₹200ರಿಂದ ಶುರುವಾದ ಬೆಲೆಯ ಊಹೆ
ಹೌದು, ಈ ವಿಡಿಯೋದಲ್ಲಿ ಬಿಕಾಸ್ ಮೀನಾ ತಮ್ಮ ತಾಯಿಯನ್ನು ಕೇಳುತ್ತಾರೆ, ಈ ಕನ್ನಡಕ ಎಷ್ಟು ಇರಬಹುದು ಹೇಳಿ? ಅದಕ್ಕೆ ತಾಯಿ ಹೆಚ್ಚು ಯೋಚಿಸದೆ, ಸುಮಾರು ₹200-₹250 ಇರಬಹುದು ಎಂದು ಹೇಳುತ್ತಾರೆ. ಆದರೆ ಮಗ ಇನ್ನಷ್ಟು ಹೆಚ್ಚಿಸಿ ಹೇಳುವಂತೆ ಕೇಳಿದಾಗ, ಅವರು ಕ್ರಮೇಣ ₹1,500, ₹2,000, ₹2,500 ಹಾಗೂ ಕೊನೆಗೆ ₹3,000 ಎಂದು ಊಹಿಸುತ್ತಾರೆ.
ಆದರೆ ಮಗ ಮಾತ್ರ ಇನ್ನೂ ಹೆಚ್ಚಿನ ಮೊತ್ತವನ್ನು ಊಹಿಸುವಂತೆ ತಾಯಿಯನ್ನು ಪ್ರೇರೇಪಿಸುತ್ತಾನೆ. ಕನ್ನಡಕಕ್ಕೆ ಇಷ್ಟೊಂದು ಹಣ ಖರ್ಚು ಮಾಡುವುದು ತಾಯಿಗೆ ಈಗಾಗಲೇ ದುಬಾರಿ ಎನಿಸಿರುತ್ತದೆ. ಈ ವೇಳೆ ಅವರು, ಚಪ್ಪಲಿಯೇ ₹250 ಆಗಿರುತ್ತದೆ, ಇಷ್ಟೊಂದು ದುಬಾರಿ ವಸ್ತುಗಳನ್ನು ಬಳಸಬೇಡ ಎಂಬರ್ಥದಲ್ಲಿ ತಮಾಷೆಯಾಗಿ ಹೇಳುತ್ತಾರೆ.
'ಹಾರ್ಟ್ ಅಟ್ಯಾಕ್ ಆಗಲ್ಲ ಅಲ್ವಾ?' ಎಂದ ಮಗ
ತಾಯಿಗೆ ನಿಜವಾದ ಬೆಲೆ ಹೇಳುವ ಮುನ್ನ ಬಿಕಾಸ್ ಹಲವು ಬಾರಿ ಅವರ ಪ್ರತಿಕ್ರಿಯೆಯನ್ನು ಪರೀಕ್ಷಿಸುತ್ತಾರೆ. "ಬೆಲೆ ಹೇಳಿದರೆ ನಿಮಗೆ ಹಾರ್ಟ್ ಅಟ್ಯಾಕ್ ಆಗಲ್ಲ ತಾನೆ?" ಎಂದು ಮಗ ಕೇಳುತ್ತಾನೆ. ಅದಕ್ಕೆ ತಾಯಿ, ಯಾವುದೇ ಸಮಸ್ಯೆಯಿಲ್ಲ, ಹೇಳು ಎಷ್ಟು ಎಂದು ಕೇಳುತ್ತಾರೆ. ತಾನು ಹೃದಯ ಸಂಬಂಧಿ ಸಮಸ್ಯೆ ಹೊಂದಿದ್ದೇನೆಯೇ ಎಂದು ಮಗ ಕೇಳಿದಾಗ, "ನಮಗೆ ಹಾರ್ಟ್ ಸಮಸ್ಯೆ ಇಲ್ಲ..." ಎಂದು ತಾಯಿ ಉತ್ತರಿಸುತ್ತಾರೆ. ಆ ಬಳಿಕ ಮಗ ಹೇಳುವ ಒಂದೇ ಒಂದು ಮಾತು ತಾಯಿಯನ್ನು ಅಚ್ಚರಿಗೊಳಿಸುತ್ತದೆ.
₹50 ಸಾವಿರ ಎಂದಾಗ ತಾಯಿಗೆ ಶಾಕ್!
ಕೊನೆಗೂ ಬಿಕಾಸ್ ಮೀನಾ ಕನ್ನಡಕದ ನಿಜವಾದ ಬೆಲೆಯನ್ನು ಬಹಿರಂಗಪಡಿಸುತ್ತಾರೆ. ₹50,000 ಎಂದು ಹೇಳುತ್ತಿದ್ದಂತೆ ತಾಯಿ ಕೆಲ ಕ್ಷಣ ಅಚ್ಚರಿಗೊಳಗಾಗಿ, ನಂಬಲಾಗದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. "ಹುಂಬಾಯ್! ಓ ದೇವರೇ!" ಎಂದು ಅಚ್ಚರಿ ವ್ಯಕ್ತಪಡಿಸುವ ಅವರು, ನಿಜವಾಗಿಯೂ ₹50,000 ಆಗಿದೆಯೇ ಎಂದು ಮತ್ತೊಮ್ಮೆ ಮಗನನ್ನು ಕೇಳುತ್ತಾರೆ.
ಮಗನೂ ತಾಯಿಯ ಪ್ರತಿಕ್ರಿಯೆಯನ್ನು ನೋಡಿ ನಗುತ್ತಾನೆ. ನಿಮ್ಮನ್ನು ರೆಕಾರ್ಡ್ ಮಾಡಲಾಗುತ್ತಿದೆ ಎಂದಾಗ ಮತ್ತೊಂದು ಕಾಮಿಡಿ. ಇಲ್ಲಿಗೆ ವಿಡಿಯೋ ಮುಗಿಯುವುದಿಲ್ಲ. ಬಿಕಾಸ್ ತಮ್ಮ ತಾಯಿಗೆ, ನಿಮ್ಮನ್ನು ಈಗ ರೆಕಾರ್ಡ್ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ.
ಮೊದಲಿಗೆ ಗೊಂದಲಕ್ಕೊಳಗಾದ ತಾಯಿ ಬಳಿಕ ಕನ್ನಡಕವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅದರಲ್ಲಿರುವ ರೆಕಾರ್ಡಿಂಗ್ ಸೂಚಕ ಬೆಳಕನ್ನು ಗಮನಿಸಿದ ಬಳಿಕ, ಕನ್ನಡಕದ ವಿಶೇಷತೆಯ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ.
ಕನ್ನಡಕ ಧರಿಸಿದಾಗ ಮಗ ಕಣ್ಣು ಮಿಟುಕಿಸುವುದನ್ನೂ ಗಮನಿಸುವ ಅವರು, ಕನ್ನಡಕದಲ್ಲಿರುವ ಬೆಳಕಿನ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಈ ಸಹಜ ಮಾತುಗಳೇ ವಿಡಿಯೋವನ್ನು ಇನ್ನಷ್ಟು ಹಾಸ್ಯಮಯವಾಗಿಸಿವೆ.
'Cuttu mummy' ಎಂದು ವಿಡಿಯೋ ಹಂಚಿಕೆ
ಬಿಕಾಸ್ ಮೀನಾ ಈ ವಿಡಿಯೋವನ್ನು "Cuttu mummy" ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಮೇಲೆ "Mummy ko meta glasses ka price bata diya" ಎಂಬ ಬರಹವನ್ನೂ ಹಾಕಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ತಾಯಿಯ ಸಹಜ ಅಭಿವ್ಯಕ್ತಿಗಳನ್ನು ಮೆಚ್ಚಿಕೊಂಡಿದ್ದಾರೆ. ಕೆಲವರು ಭಾರತೀಯ ತಾಯಂದಿರ ಸಹಜ ಹಾಸ್ಯಪ್ರಜ್ಞೆಯನ್ನು ಹೊಗಳಿದರೆ, ಇನ್ನೂ ಕೆಲವರು ತಾಯಿಯ ಮುಖಭಾವಗಳೇ ಇಡೀ ವಿಡಿಯೋದ ಹೈಲೈಟ್ ಎಂದು ಹೇಳಿದ್ದಾರೆ. ₹50,000 ಬೆಲೆಯ Meta ಗ್ಲಾಸ್‌ಗಿಂತಲೂ ಅದನ್ನು ಕೇಳಿದ ತಾಯಿಯ ಮುಗ್ಧ ಹಾಗೂ ಅಚ್ಚರಿಯ ಪ್ರತಿಕ್ರಿಯೆಯೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.


Click it and Unblock the Notifications
