ಮಾಯಾವತಿಗೆ ಪ್ರಧಾನಿ ಪಟ್ಟ, ಅಖಿಲೇಶ್ ಯಾದವ್ ನಿಲುವೇನು?

ನವದೆಹಲಿ, ಮೇ 07: ಅಕಸ್ಮಾತ್ ಎನ್ ಡಿಎ ಮೈತ್ರಿಕೂಟ ಅಲ್ಪಮತಕ್ಕೆ ಕುಸಿದು, ಮಹಾಘಟಬಂಧನಕ್ಕೆ ಸರ್ಕಾರ ರಚಿಸುವ ಅವಕಾಶ ಸಿಕ್ಕರೆ ಬಿಎಸ್ಪಿ ನಾಯಕಿ ಮಾಯಾವತಿ ಪ್ರಧಾನಿಯಾಗುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಎನ್ ಡಿಟಿವಿಗೆ ಅವರು ನೀಡಿದ ಸಂದರ್ಶನದಲ್ಲಿ ತಾವು ಮಾಯಾವತಿ ಅವರನ್ನು ಬೆಂಬಲಿಸುವುದಾಗಿ ಅವರು ಹೇಳಿದರು. ಉತ್ತರ ಪ್ರದೇಶದವರು ಪ್ರಧಾನಿಯಾಗುತ್ತಾರೆ ಎಂದರೆ ಅದಕ್ಕೆ ನನ್ನ ಬೆಂಬಲವಿದ್ದೇ ಇದೆ. ನನಗೆ ಪ್ರಧಾನಿಯಾಗುವ ಯಾವ ಕನಸೂ ಸದ್ಯಕ್ಕಿಲ್ಲ. ಮಾಯಾವತಿ ಅವರು ಆಗುವುದಾದರೆ ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಅಖಿಲೇಶ್ ಹೇಳಿದ್ದಾರೆ.

"ಎಲ್ಲವೂ ಅಂದುಕೊಂಡಂತೇ ಆದರೆ ನಾನು ಅಂಬೇಡ್ಕರ್ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ" ಎನ್ನುವ ಮೂಲಕ ತಾವು ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸೂಚನೆಯನ್ನು ಮಾಯಾವತಿ ಈಗಾಗಲೇ ನೀಡಿದ್ದಾರೆ.

Mayawati for PM post? What is Akhilesh Yadavs stand?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅಧಿಕಾರದಿಂದ ದೂರ ಇಡುವುದೇ ನಮ್ಮ ಉದ್ದೇಶ. ಆದ್ದರಿಂದ ನಾವು ಚುನಾವಣೆಯ ನಂತರ ಅಗತ್ಯವಿದ್ದರೆ ಎಲ್ಲರೂ(ವಿಪಕ್ಷಗಳು) ಒಂದಾಗುತ್ತೇವೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+