ಮನೋರಮಾ ವಿಎಂಆರ್ ಸಮೀಕ್ಷೆ: ವಿಜಯನ್ ಸರ್ಕಾರ ಅಸ್ತಿತ್ವಕ್ಕೆ!

ತಿರುವನಂತಪುರಂ, ಮಾರ್ಚ್ 25: ಕೇರಳ ಜೊತೆಗೆ ತಮಿಳುನಾಡು, ಅಸ್ಸಾಂ, ಪುದುಚೇರಿ , ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗುತ್ತಿವೆ. ಕೇರಳ ಚುನಾವಣೆಯಲ್ಲಿ ಎಲ್‌ಡಿಎಫ್ ಮತ್ತೊಮ್ಮೆ ಗೆಲುವು ಸಾಧಿಸುವ ಸಾಧ್ಯತೆಯಿದೆ ಎಂದು ಮನೋರಮಾ ನ್ಯೂಸ್ ವಿಎಂಆರ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಎಬಿಪಿಯ ಎರಡು ಸಮೀಕ್ಷೆ, ಟೈಮ್ಸ್ ನೌ- ಸಿ -ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆ ಹಾಗೂ ಮನೋರಮಾ ವಿಎಂಆರ್ ನಡೆಸಿದ್ದ ಈ ಹಿಂದಿನ ಸಮೀಕ್ಷೆಗಳು ವರದಿ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಕೇರಳದಲ್ಲಿ ಎಲ್‌ಡಿಎಫ್ ಅಧಿಕಾರಕ್ಕೇರಲಿದ್ದು, ಯುಡಿಎಫ್ ಮತ್ತೊಮ್ಮೆ ಮುಖಭಂಗ ಅನುಭವಿಸಲಿದೆ ಎಂದು ಮನೋರಮಾ ನ್ಯೂಸ್ ಮಾರ್ಚ್ 24ರಂದು ವರದಿ ಮಾಡಿದೆ. ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

 ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್‌ಗೆ ಜಯ

ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್‌ಗೆ ಜಯ

ಮನೋರಮಾ ವಿಎಂಆರ್ ಸಮೀಕ್ಷೆ 2021 ಪ್ರಕಾರ, ಆಡಳಿತಾರೂಢ ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್ (LDF) ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಸರಳ ಬಹುಮತ ಗಳಿಸಲಿದ್ದು 77 ರಿಂದ 82 ಸ್ಥಾನ ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 54 ರಿಂದ 59 ಸ್ಥಾನ ಗಳಿಸಬಹುದು ಹಾಗೂ ಬಿಜೆಪಿ 2-4 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ.

 ಯಾವ ಕ್ಷೇತ್ರಗಳಲ್ಲಿ ಪಿಣರಾಯಿಗೆ ಗೆಲುವು

ಯಾವ ಕ್ಷೇತ್ರಗಳಲ್ಲಿ ಪಿಣರಾಯಿಗೆ ಗೆಲುವು

ಮನೋರಮಾ ಸುದ್ದಿ ವಾಹಿನಿ ಹಾಗೂ ವಿಎಂಆರ್ ಸಂಸ್ಥೆ ನಡೆಸಿದ ಸಮೀಕ್ಷೆಯಂತೆ, ಅಟ್ಟಿಂಗಳ್, ಚಿರಯಿಂಕೀಳ್, ನೆಡುಮಂಗಡ್, ವಾಮನಪುರಂ ಕ್ಷೇತ್ರಗಳಲ್ಲಿ ಎಲ್‌ಡಿಎಫ್‌ ಮೇಲುಗೈ ಸಾಧಿಸಲಿದೆ. ಕಳಾಕೂಟಂನಲ್ಲೂ ಪಿಣರಾಯಿ ಬಣಕ್ಕೆ ಬಲ ಸಿಕ್ಕಿದೆ. ಇನ್ನು ಕುತೂಹಲ ಕೆರಳಿಸಿರುವ ನೇಮಂ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ವರದಿ ಬಂದಿದೆ. ಇಲ್ಲಿ ಯುಡಿಎಫ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಆದರೆ, ಕೆ ಮುರಳೀಧರನ್ ಸ್ಪರ್ಧೆಗೆ ಇಳಿಯುವುದಕ್ಕೂ ಮುನ್ನ ಈ ಸಮೀಕ್ಷೆ ನಡೆಸಲಾಗಿದೆ. ಈಗ ಪರಿಸ್ಥಿತಿ ಬದಲಾಗುವ ಸಾಧ್ಯತೆ ಹೆಚ್ಚಿದೆ.

 ಯುಡಿಎಫ್‌ಗೆ ನಾಲ್ಕೈದು ಸಮೀಕ್ಷೆಗಳಲ್ಲೂ ಹಿನ್ನಡೆ

ಯುಡಿಎಫ್‌ಗೆ ನಾಲ್ಕೈದು ಸಮೀಕ್ಷೆಗಳಲ್ಲೂ ಹಿನ್ನಡೆ

ಯುಡಿಎಫ್ ಪರ ನಾಲ್ಕೈದು ಸಮೀಕ್ಷೆಗಳಲ್ಲೂ ಹಿನ್ನಡೆ ಸ್ಥಳೀಯ ಮಾಧ್ಯಮ ಸಂಸ್ಥೆಗಳು ನೀಡಿರುವ ಮೂರು ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಎಲ್ ಡಿ ಎಫ್ 72 ರಿಂದ 78 ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎನ್ನಲಾಗಿದೆ. ಯುಡಿಎಫ್ 65 ಹಾಗೂ ಬಿಜೆಪಿ 3 ರಿಂದ 7 ಸ್ಥಾನ ಗಳಿಸುವ ನಿರೀಕ್ಷೆಯಿದೆ. ಎರಡನೇ ಸಮೀಕ್ಷೆಯಲ್ಲಿ ಎಲ್ ಡಿ ಎಫ್ 68 ರಿಂದ 78 ಸ್ಥಾನ, ಯುಡಿಎಫ್ 62 ರಿಂದ 72 ಸ್ಥಾನ ಹಾಗೂ ಬಿಜೆಪಿ 2 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ವರದಿ ಬಂದಿದೆ. ಇದಲ್ಲದೆ ಎಬಿಪಿ ಸಿ ವೋಟರ್ ಹಾಗೂ ಟೈಮ್ಸ್ ನೌ ಸಿ ವೋಟರ್ ಈ ಹಿಂದಿನ ಸಮೀಕ್ಷೆಯನ್ನು ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.

 ವಿಧಾನಸಭೆಯ ಬಲಾಬಲ

ವಿಧಾನಸಭೆಯ ಬಲಾಬಲ

140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ. 2016ರ ಚುನಾವಣೆಯಲ್ಲಿ ಎಲ್ ಡಿ ಎಫ್ 91, ಯುಡಿಎಫ್ 47, ಕಾಂಗ್ರೆಸ್ 1, ಇತರೆ 1 ಎಂದು ಫಲಿತಾಂಶ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+