Manipur India TV- Exit Poll 2022: ಬಿಜೆಪಿಗೆ ಸರಳ ಬಹುಮತ
ಕೊರೊನಾ ಸಾಂಕ್ರಾಮಿಕದ ನಡುವೆ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಪ್ರಕ್ರಿಯೆ ಮಾರ್ಚ್ 7ರಂದು ಮುಕ್ತಾಯ ಕಂಡಿದೆ. ಐದು ರಾಜ್ಯಗಳ ಪೈಕಿ ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಸಲಾಯಿತು. ಮೊದಲ ಹಂತದಲ್ಲಿ ಶೇ 78.03ರಷ್ಟು ಶೇಕಡಾವಾರು ಮತದಾನ ಹಾಗೂ ಎರಡನೇ ಹಂತದಲ್ಲಿ 78.03ರಷ್ಟು ಶೇಕಡಾವಾರು ಮತದಾನ ದಾಖಲಾಗಿದೆ.
ಮಾರ್ಚ್ 7ರಂದು ಸಂಜೆ ವೇಳೆ ಅನೇಕ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಟಿಸುತ್ತಿವೆ. ಇಲ್ಲಿ ಇಂಡಿಯಾ ಟಿವಿ ಗ್ರೌಂಡ್ ಜೀರೋ ರಿಸರ್ಚ್ ಸಂಸ್ಥೆ ನೀಡಿರುವ ವರದಿ ವಿವರವಿದೆ. ಸಮೀಕ್ಷೆ ಫಲಿತಾಂಶದಂತೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದ್ದು, ಸರಳ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ.
ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಸಲಾಗಿದೆ. ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಮತದಾನ ನಡೆಸಲಾಗಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
2017 ರಲ್ಲಿ ಮಣಿಪುರದಲ್ಲಿ ಬಿಜೆಪಿಗೆ ಜಯ
2017 ರಲ್ಲಿ ಮಣಿಪುರದಲ್ಲಿ 60 ಸ್ಥಾನ (31 ಮ್ಯಾಜಿಕ್ ನಂಬರ್) ಗಳ ಪೈಕಿ ಬಿಜೆಪಿಯು ಒಟ್ಟು 21 ವಿಧಾನಸಭೆ ಸ್ಥಾನಗಳೊಂದಿಗೆ ಸರ್ಕಾರವನ್ನು ನಡೆಸುತ್ತಿದೆ. ಈಗ 40 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿಯನ್ನು ಮಣಿಪುರ ಬಿಜೆಪಿಯು ಹೊಂದಿದೆ.
ಕಳೆದ ಚುನಾವಣೆಯಲ್ಲಿ 28 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಬಿಜೆಪಿ ಎನ್‌ಪಿಪಿ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚನೆ ಮಾಡಿದೆ. ಪ್ರಸ್ತುತ ಮಣಿಪುರ ಸರ್ಕಾರದ ಅವಧಿಯು ಮಾರ್ಚ್ 20, 2017 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 19, 2022 ರಂದು ಕೊನೆಗೊಳ್ಳಲಿದೆ.

2022ರ ಇಂಡಿಯಾ ಟಿವಿ ಗ್ರೌಂಡ್ ಜೀರೋ ರಿಸರ್ಚ್ ಎಕ್ಸಿಟ್ ಪೋಲ್:
ಪಕ್ಷ- ಸ್ಥಾನಗಳು
ಬಿಜೆಪಿ: 26-31
ಕಾಂಗ್ರೆಸ್: 12-17
ಎನ್‌ಪಿಪಿ: 6-10
ಎನ್‌ಪಿಎಫ್: 2-6
ಇತರೆ: 3-6
60 ಸ್ಥಾನಗಳ ಪೈಕಿ ಬಿಜೆಪಿಗೆ ಹೆಚ್ಚು ಸ್ಥಾನ ಸುಮಾರು 26 ರಿಂದ 31 ದಾಟಲಿದೆ. ಈ ಮೂಲಕ ಮತ್ತೊಮ್ಮೆ ಅಧಿಕಾರ ಗದ್ದುಗೇರಲಿದೆ. ಮ್ಯಾಜಿಕ್ ನಂಬರ್ 31 ದಾಟಲಿದ್ದು, ಇತರೆ ಪಕ್ಷಗಳ ನೆರವು ಅಗತ್ಯ ಎಂದು ಸಮೀಕ್ಷೆ ಹೇಳಿದೆ.
ಇಂಡಿಯಾ ಟಿವಿ ಗ್ರೌಂಡ್ ಜೀರೋ ರಿಸರ್ಚ್ ಶೇಕಡಾವಾರು ಫಲಿತಾಂಶ:
ಪಕ್ಷ- 2022 %ಫಲಿತಾಂಶ (2017 %ಫಲಿತಾಂಶ) (+/- 5% margin of error)
ಬಿಜೆಪಿ: 38% (2017ರಲ್ಲಿ36.3%)
ಕಾಂಗ್ರೆಸ್: 28% (35.5%)
ಎನ್‌ಪಿಪಿ: 11% (5.1%)
ಎನ್‌ಪಿಎಫ್: 9%
ಇತರೆ: 14% (-)
ಚುನಾವಣಾಪೂರ್ವ ಸಮೀಕ್ಷೆಗಳು
Zee News-DesignBoxed ಪ್ರಕಾರ, ಬಿಜೆಪಿ 33-37 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 13-17 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, NPF 4-6 ಸ್ಥಾನಗಳನ್ನು ಮತ್ತು NPP ಕೇವಲ 2-4 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿತ್ತು.
**
ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಪ್ರಕಾರ ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಪ್ರಕಾರ, ಬಿಜೆಪಿಗೆ 31 ರಿಂದ 37 ಸ್ಥಾನಗಳು ಸಿಗುತ್ತವೆ. ಆಡಳಿತ ಪಕ್ಷಕ್ಕೆ ಕಠಿಣ ಪೈಪೋಟಿ ನೀಡದ ಕಾಂಗ್ರೆಸ್ 13-19 ಸ್ಥಾನಗಳನ್ನು ಪಡೆಯಬಹುದು. ಇದರ ಹೊರತಾಗಿ ಎನ್‌ಪಿಪಿ ಪಕ್ಷವು 3 ರಿಂದ 9 ಸ್ಥಾನ, ಎನ್‌ಪಿಎಫ್ ಪಕ್ಷವು 1 ರಿಂದ 5 ಸ್ಥಾನ, ಇತರರು 0 ರಿಂದ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಮಣಿಪುರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.
***
ಮಣಿಪುರ ಚುನಾವಣೆಯಲ್ಲಿ ಶೇ.33 ರಷ್ಟು ಮತಗಳನ್ನು ಪಡೆಯುವ ಮೂಲಕ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಅಭ್ಯರ್ಥಿಗೆ ಅತ್ಯಂತ ಜನಪ್ರಿಯ ಆಯ್ಕೆ ಎಂದು ಜನತೆ ಭವಿಷ್ಯ ನುಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಒಕ್ರಾಮ್ ಇಬೋಬಿ ಸಿಂಗ್ ಅವರು ಶೇ 19 ರಷ್ಟು ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದಿದ್ದರೆ, ಮತ್ತೊಬ್ಬ ಕಾಂಗ್ರೆಸ್ ನಾಯಕ ಎನ್ ಲೋಕೇನ್ ಸಿಂಗ್ ಅವರು ಶೇ 12 ರೊಂದಿಗೆ ಮೂರನೇ ಆಯ್ಕೆಯಾಗಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications