ಮಾಗಡಿ ರೋಡಲ್ಲಿ ಡಿಫರೆಂಟಾಗಿ ಟೀ ಕುಡಿದ ರೀಲ್ ಸ್ಟಾರ್, ಆಮೇಲೆ ಏನಾಯ್ತು?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಅನ್ನೋ ಭರದಲ್ಲಿ ಏನೇನೋ ಹುಚ್ಚಾಟ ಮೆರೆಯೋರು ಕಡಿಮೆಯೇನಿಲ್ಲ. ದಿನ ಬೆಳಗಾದ್ರೆ ಒಂದಿಲ್ಲೊಂದು ಪ್ರಯೋಗ ಮಾಡಿ ಜನರ ಗಮನ ಸೆಳೆಯೋಣ ಅಂತ ಹುಚ್ಚುತನ ಪ್ರದರ್ಶಿಸುತ್ತಾರೆ. ಇದೇ ರೀತಿ ಬೆಂಗಳೂರಿನಲ್ಲೊಬ್ಬ ರೀಲ್ಸ್ ಮಾಡಲು ದೊಡ್ಡ ಅವಾಂತರವನ್ನೇ ಮಾಡಿಕೊಂಡಿದ್ದಾನೆ. ಇಷ್ಟಕ್ಕೂ ಇವನು ಮಾಡಿರೋ ರೀಲ್ ಅಂತಿತ್ತದ್ದೇನಲ್ಲ. ಜಸ್ಟ್ ಟೀ ಕುಡಿಯೋ ರೀಲ್, ಇದರಲ್ಲೇನು ವಿಶೇಷ ಅಂತ ಕೇಳಿದ್ರೆ ಅಲ್ಲೇ ಇರೋದು ಟ್ವಿಸ್ಟು. ಈತ ಯಾವುದೋ ಟೀ ಅಂಗಡಿನೋ, ರೋಡ್ ಪಕ್ಕಾನೋ ಟೀ ಕುಡಿದಿಲ್ಲ. ಗಾಡಿಗಳು ಓಡಾಡೋ ನಡುರಸ್ತೆಯಲ್ಲೇ ಸ್ಟೈಲಾಗಿ ಚೇರ್ ಹಾಕ್ಕೊಂಡು ಟೀ ಕುಡಿದಿದ್ದಾನೆ. ಆದರೆ ಆಮೇಲೆ ನಡೆದಿರೋ ಕಥೆ ಕೇಳಿದ್ರೆ ನೀವೂ ಶಾಕ್ ಆಗ್ತೀರ.
ಬೆಂಗಳೂರಿನ ಜನನಿಬಿಡ ರಸ್ತೆಯಲ್ಲಿ ಯುವಕನೊಬ್ಬ ಫೇಮಸ್ ಆಗಬೇಕು ಅಂತಾ ರೀಲ್ ಶೂಟ್ ಮಾಡಲು ನಿರ್ಧರಿಸಿದ್ದಾನೆ. ರಸ್ತೆಯ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತು ವಾಹನಗಳು ಅವನ ಹಿಂದೆ ಹೋಗುತ್ತಿದ್ದಾಗಲೇ ಟೀ ಕುಡಿದಿದ್ದಾನೆ. ಇದೇನೋ ಚನ್ನಾಗೇ ಇದೆ ಅಂತಾ ಜನ ಈ ವಿಡಿಯೋ ನೋಡಿ ವೈರಲ್ ಕೂಡ ಆಗಿತ್ತು. ಈ ವೈರಲ್ ರೀಲ್ ಬೆಂಗಳೂರು ಪೊಲೀಸರ ಗಮನಕ್ಕೂ ಬಂದು ಟೀ ಕುಡಿಯುವ ಬಗ್ಗೆ ಹೆಚ್ಚು ಮಾಹಿತಿ ಪಡೆಯೋಣ ಅಂತ ರೀಲ್ ಸ್ಟಾರ್‌ನ ಕೊನೆಗೂ ಪತ್ತೆ ಹಚ್ಚಿದ್ದಾರೆ.

ಬಳಿಕ ಪೊಲೀಸರು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ್ದಕ್ಕಾಗಿ ಮತ್ತು ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಸಾರ್ವಜನಿಕ ರಸ್ತೆಗಳಲ್ಲಿ ಈ ಸಾಹಸಗಳನ್ನು ಮಾಡಿದ್ದಕ್ಕಾಗಿ ಆ ವ್ಯಕ್ತಿಯನ್ನು ಕೊನೆಗೂ ಬಂಧಿಸಿದ್ದಾರೆ. ಆರೋಪಿಯು ಮಾಗಡಿ ರಸ್ತೆಯ ಮಧ್ಯೆ ಕುರ್ಚಿಯ ಮೇಲೆ ಕುಳಿತು ಚಹಾ ಕುಡಿಯುತ್ತಿರುವುದು ಕಂಡುಬಂದಿದೆ. ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಆಗಿದ್ದ ಈ ವೀಡಿಯೊ ಸಾರ್ವಜನಿಕರ ಗಮನ ಸೆಳೆದ ಕಾರಣ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆತನನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಟ್ರಾಫಿಕ್ ಲೈನ್‌ನಲ್ಲಿ ಚಹಾ ತೆಗೆದುಕೊಳ್ಳುವುದರಿಂದ ನಿಮಗೆ ಖ್ಯಾತಿಯಲ್ಲ, ಭಾರಿ ದಂಡ ಬರುತ್ತದೆ, ಎಚ್ಚರದಿಂದಿರಿ, ಬೆಂಗಳೂರು ನಗರ ಪೊಲೀಸ್ ನಿಮ್ಮನ್ನು ಗಮನಿಸುತ್ತಿದೆ ಎಂದು ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಆ ವ್ಯಕ್ತಿ ಸ್ಟಂಟ್ ಮಾಡುತ್ತಿರುವ ವೀಡಿಯೊವನ್ನು ಮತ್ತು ಅವನನ್ನು ಬಂಧಿಸಿರುವ ಬಿಫೋರ್ ಆಫ್ಟರ್ ವಿಡಿಯೋ ಕೂಡ ಹಂಚಿಕೊಂಡಿದೆ.
ಈ ಅಜಾಗರೂಕ ವರ್ತನೆ ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿಗೆ ಆಘಾತಕಾರಿ ಸಂದರ್ಭಗಳಲ್ಲಿ ರೀಲ್‌ಗಳನ್ನು ಮಾಡುವ ಪ್ರಯತ್ನದಲ್ಲಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ರೀಲ್ ಮಾಡಲು ಪ್ರಯತ್ನಿಸುತ್ತಿದ್ದಾಗ ಗಂಗಾ ನದಿಯಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋದ ಘಟನೆ ವರದಿಯಾಗಿತ್ತು. ಮತ್ತೊಂದು ಘಟನೆಯಲ್ಲಿ ರೈಲು ಅವನ ಮೇಲೆ ಹಾದು ಹೋಗುತ್ತಿರುವಾಗ ರೀಲ್ ಅನ್ನು ವ್ಯಕ್ತಿಯೊಬ್ಬ ರೆಕಾರ್ಡ್ ಮಾಡಿದ್ದು, ಆತನನ್ನು ಕೂಡ ಬಂಧಿಸಲಾಗಿತ್ತು. ಈ ರೀತಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಹುಚ್ಚಾಟ ಮೆರೆದರೆ ಏನಾಗುತ್ತೆ ಎಂದು ಪೊಲೀಸರು ತಿಳಿಸಿಕೊಟ್ಟಿದ್ದಾರೆ.












Click it and Unblock the Notifications