Exit Poll Results 2019 News18-Ipsos: ಮಹಾರಾಷ್ಟ್ರದಲ್ಲಿ ಬಿಜೆಪಿ ಜಯಭೇರಿ
ನವದೆಹಲಿ, ಅಕ್ಟೋಬರ್ 21: ಸೋಮವಾರ ನಡೆದ ಮಹಾರಾಷ್ಟ್ರ ವಿಧಾನಭೆಯ ಚುನಾವಣೆಯ ಬಳಿಕ ಮತದಾನೋತ್ತರ ಸಮೀಕ್ಷೆಯ ಫಲಿತಾಂಶಗಳು ಹೊರಬೀಳುತ್ತಿದ್ದು, ಪ್ರಮುಖ ಖಾಸಗಿ ಸುದ್ದಿವಾಹಿನಿ ನ್ಯೂಸ್ 18 ಇಪ್ಸೋಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂಬುದನ್ನು ತಿಳಿಸಿದೆ.
ನ್ಯೂಸ್ 18-ಇಪ್ಸೋಸ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಲಿದೆ. ಇದರೊಂದಿಗೆ ಆಡಳಿತಾರೂಢ ಬಿಜೆಪಿ ಪುನಃ ಅಧಿಕಾರಕ್ಕೆ ಬರಲಿದೆ.
288 ಕ್ಷೇತ್ರಗಳಲ್ಲಿ ಬಿಜೆಪಿ 141 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಶಿವಸೇನಾ 102 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದು, ಮಿತ್ರಪಕ್ಷಗಳು ಸೇರಿ 243 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಕಾಂಗ್ರೆಸ್ 17 ಹಾಗೂ ಅದರ ಮಿತ್ರಪಕ್ಷ ಎನ್‌ಸಿಪಿ 22 ಕ್ಷೇತ್ರಗಳಲ್ಲಿ ಜಯಗಳಿಸಲಿವೆ. ಎರಡು ಕ್ಷೇತ್ರಗಳಲ್ಲಿ ಇತರೆ ಮಿತ್ರ ಪಕ್ಷಗಳು ಜಯಗಳಿಸಲಿವೆ.

2014ರ ಚುನಾವಣೆಯಲ್ಲಿ ಬಿಜೆಪಿ 122 ಸ್ಥಾನಗಳನ್ನು ಪಡೆದಿತ್ತು. ಶಿವಸೇನಾ 63 ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 42, ಎನ್‌ಸಿಪಿ 41 ಮತ್ತು ಇತರೆ ಪಕ್ಷಗಳು ಉಳಿದ ಒಂಬತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು.












Click it and Unblock the Notifications